IND vs AUS: ಆಸ್ಟ್ರೇಲಿಯಾ ಪ್ರವಾಸದಿಂದ ಹೊರಬಿದ್ದ ಕನ್ನಡತಿ ಶ್ರೇಯಾಂಕ ಪಾಟೀಲ್

India A Women’s Tour of Australia 2025: ಭಾರತ ಎ ಮಹಿಳಾ ಕ್ರಿಕೆಟ್ ತಂಡದ ಆಸ್ಟ್ರೇಲಿಯಾ ಪ್ರವಾಸಕ್ಕೆ ಶ್ರೇಯಾಂಕ ಪಾಟೀಲ್ ಮತ್ತು ಪ್ರಿಯಾ ಮಿಶ್ರಾ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಫಿಟ್‌ನೆಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಬದಲಿ ಆಟಗಾರ್ತಿಯಾಗಿ ಯಾಸ್ತಿಕಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯ ಪಂದ್ಯಗಳ ವೇಳಾಪಟ್ಟಿ ಮತ್ತು ನವೀಕರಿಸಿದ ತಂಡದ ವಿವರ ಇಲ್ಲಿದೆ.

IND vs AUS: ಆಸ್ಟ್ರೇಲಿಯಾ ಪ್ರವಾಸದಿಂದ ಹೊರಬಿದ್ದ ಕನ್ನಡತಿ ಶ್ರೇಯಾಂಕ ಪಾಟೀಲ್
Shreyanka Patil

Updated on: Jul 25, 2025 | 5:32 PM

ಕಳೆದ ತಿಂಗಳು ಇಂಗ್ಲೆಂಡ್‌ ಪ್ರವಾಸ ಮಾಡಿದ್ದ ಭಾರತ ವನಿತಾ ಪಡೆ (India Women’s Team), ಆತಿಥೇಯ ತಂಡದ ವಿರುದ್ಧ ಟಿ20 ಹಾಗೂ ಏಕದಿನ ಸರಣಿಯನ್ನು ಆಡಿತ್ತು. ಏಕದಿನ ಸರಣಿಯನ್ನು 3-2 ಅಂತರದಿಂದ ಗೆದ್ದುಕೊಂಡಿದ್ದ ಹರ್ಮನ್ ಪಡೆ, ಏಕದಿನ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡು, ಇಂಗ್ಲೆಂಡ್‌ ವನಿತಾ ತಂಡವನ್ನು ಅವರ ನೆಲದಲ್ಲೇ ಮುಜುಗರಕ್ಕೀಡು ಮಾಡಿತ್ತು. ಇದೀಗ ಭಾರತ ಎ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ (India A Women’s Tour of Australia 2025) ಸನ್ನದ್ಧವಾಗಿದ್ದು, ಪ್ರವಾಸ ಶುರುವಾಗುವ ಮುನ್ನವೇ ತಂಡಕ್ಕೆ ಆಘಾತ ಎದುರಾಗಿದೆ. ಈ ಮೊದಲು ಈ ಸರಣಿಗೆ ತಂಡದಲ್ಲಿ ಆಯ್ಕೆಯಾಗಿದ್ದ ಕನ್ನಡತಿ ಶ್ರೇಯಾಂಕ ಪಾಟೀಲ್ (Shreya Patel) ಹಾಗೂ ಪ್ರಿಯಾ ಮಿಶ್ರಾ ಅವರನ್ನು ಈ ಪ್ರವಾಸದಿಂದ ಹೊರಗಿಡಲಾಗಿದೆ.

ಮೇಲೆ ಹೇಳಿದಂತೆ ಕನ್ನಡತಿ ಶ್ರೇಯಂಕಾ ಪಾಟೀಲ್ ಮತ್ತು ಪ್ರಿಯಾ ಮಿಶ್ರಾ ಇಬ್ಬರನ್ನೂ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಆಯ್ಕೆ ಮಾಡುವ ಸಮಯದಲ್ಲೇ ಇವರಿಬ್ಬರ ಲಭ್ಯತೆ ಆಯ್ಕೆ ಫಿಟ್ನೆಸ್ ಮೇಲೆ ಅವಲಂಬಿತವಾಗಿರುತ್ತದೆ ಎಂದು ಬಿಸಿಸಿಐ ತಿಳಿಸಿತ್ತು. ಅದರಂತೆ ಇವರಿಬ್ಬರು ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದರು. ಆದರೆ ಪ್ರವಾಸಕ್ಕೆ ಹೊರಡುವ ಮುನ್ನ ಇವರಿಬ್ಬರ ಫಿಟ್ನೆಸ್ ಪರೀಕ್ಷೆ ಮಾಡಲಾಗಿದ್ದು, ಇವರಿಬ್ಬರು ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಹೀಗಾಗಿ ಇವರಿಬ್ಬರನ್ನು ಪ್ರವಾಸದಿಂದ ಕೈಬಿಡಲಾಗಿದೆ.

ಬದಲಿಯಾಗಿ ಆಯ್ಕೆಯಾಗಿದ್ದು ಯಾರು?

ಬಿಸಿಸಿಐ ಆಯ್ಕೆ ಸಮಿತಿಯು ಯಾಸ್ತಿಕಾ ಭಾಟಿಯಾ ಅವರನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡಿದೆ. ಹಾಗೆಯೇ ಗಾಯಗೊಂಡ ಇಬ್ಬರು ಸ್ಪಿನ್ನರ್‌ಗಳ ಬದಲಿಗೆ ಧರಾ ಗುಜ್ಜರ್ ಮತ್ತು ಪ್ರೇಮಾ ರಾವತ್ ಅವರಿಗೆ ಅವಕಾಶ ನೀಡಲಾಗಿದೆ. ಮುಂಬರುವ ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಯಾಸ್ತಿಕಾ ಭಾಟಿಯಾ ಅವರನ್ನು ಆಯ್ಕೆ ಸಮಿತಿಯು ಗಮನಿಸಲಿದೆ. ಯಾಸ್ತಿಕಾ ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ಪ್ರವಾಸದ ಭಾಗವಾಗಿದ್ದರು. ಆದಾಗ್ಯೂ, ಯಾಸ್ತಿಕಾಗೆ ಒಂದೇ ಒಂದು ಪಂದ್ಯದಲ್ಲಿ ಅವಕಾಶ ಸಿಗಲಿಲ್ಲ.

ಭಾರತ ಎ ಮಹಿಳಾ ತಂಡದ ವೇಳಾಪಟ್ಟಿ

ಆಸ್ಟ್ರೇಲಿಯಾ ಎ ಮಹಿಳಾ ತಂಡ ಮತ್ತು ಭಾರತ ಎ ಮಹಿಳಾ ತಂಡಗಳ ನಡುವಿನ 3 ಪಂದ್ಯಗಳ ಟಿ20 ಸರಣಿ ಆಗಸ್ಟ್ 7 ರಂದು ಆರಂಭವಾಗಲಿದೆ. ಈ ಪಂದ್ಯ ಮೆಕಾಯ್‌ನಲ್ಲಿ ನಡೆಯಲಿದೆ. ಎರಡನೇ ಮತ್ತು ಮೂರನೇ ಪಂದ್ಯಗಳು ಆಗಸ್ಟ್ 9 ಮತ್ತು 10 ರಂದು ಅದೇ ಸ್ಥಳದಲ್ಲಿ ನಡೆಯಲಿವೆ. ಅದರ ನಂತರ, ಏಕದಿನ ಸರಣಿ ಆಗಸ್ಟ್ 13 ರಂದು ಆರಂಭವಾಗಲಿದೆ. ಎರಡನೇ ಪಂದ್ಯ ಆಗಸ್ಟ್ 15 ರಂದು ನಡೆಯಲಿದೆ. ಮೂರನೇ ಮತ್ತು ಅಂತಿಮ ಪಂದ್ಯ ಆಗಸ್ಟ್ 17 ರಂದು ನಡೆಯಲಿದೆ. ಹಾಗೆಯೇ 4 ದಿನಗಳ ಪಂದ್ಯ ಆಗಸ್ಟ್ 21 ರಿಂದ ನಡೆಯಲಿದೆ.

ಮೂರು ನವೀಕೃತ ತಂಡಗಳು

ಭಾರತ ಎ ಟಿ20 ತಂಡ: ರಾಧಾ ಯಾದವ್ (ನಾಯಕಿ), ಮಿನ್ನು ಮಣಿ (ಉಪನಾಯಕಿ), ಶಫಾಲಿ ವರ್ಮಾ, ಡಿ. ವೃಂದಾ, ಸಜನಾ ಸಜೀವನ್, ಉಮಾ ಚೆಟ್ರಿ (ವಿಕೆಟ್ ಕೀಪರ್), ರಾಘ್ವಿ ಬಿಸ್ಟ್, ಪ್ರೇಮಾ ರಾವತ್, ನಂದಿನಿ ಕಶ್ಯಪ್ (ವಿಕೆಟ್ ಕೀಪರ್), ತನುಜಾ ಕನ್ವರ್, ಜೋಶಿತಾ ವಿಜೆ, ಶಬ್ನಮ್ ಶಕೀಲ್, ಸೈಮಾ ಠಾಕೋರ್, ಟಿಟಾಸ್ ಸಾಧು, ಧಾರಾ ಗುಜ್ಜರ್.

ಭಾರತ ಎ ಏಕದಿನ ತಂಡ: ರಾಧಾ ಯಾದವ್ (ನಾಯಕಿ), ಮಿನ್ನು ಮಣಿ (ಉಪನಾಯಕಿ), ಶಫಾಲಿ ವರ್ಮಾ, ತೇಜಲ್ ಹಸಬ್ನಿಸ್, ರಾಘ್ವಿ ಬಿಸ್ತ್, ತನುಶ್ರೀ ಸರ್ಕಾರ್, ಉಮಾ ಚೆಟ್ರಿ (ವಿಕೆಟ್ ಕೀಪರ್), ತನುಜಾ ಕನ್ವರ್, ನಂದಿನಿ ಕಶ್ಯಪ್ (ವಿಕೆಟ್ ಕೀಪರ್), ಧಾರಾ ಗುಜ್ಜರ್, ಜೋಶಿತಾ ವಿಜೆ, ಶಬ್ನಮ್ ಶಕೀಲ್, ಸೈಮಾ ಠಾಕೋರ್, ಟಿಟಾಸ್ ಸಾಧು, ಪ್ರೇಮಾ ರಾವತ್, ಯಾಸ್ತಿಕಾ ಭಾಟಿಯಾ

ಬಹುದಿನಗಳ ಪಂದ್ಯಕ್ಕೆ ಭಾರತ A ತಂಡ: ರಾಧಾ ಯಾದವ್ (ನಾಯಕಿ), ಮಿನ್ನು ಮಣಿ (ಉಪನಾಯಕಿ), ಶಫಾಲಿ ವರ್ಮಾ, ತೇಜಲ್ ಹಸಬ್ನಿಸ್, ರಾಘ್ವಿ ಬಿಸ್ತ್, ತನುಶ್ರೀ ಸರ್ಕಾರ್, ಉಮಾ ಚೆಟ್ರಿ (ವಿಕೆಟ್ ಕೀಪರ್), ತನುಜಾ ಕನ್ವರ್, ನಂದಿನಿ ಕಶ್ಯಪ್ (ವಿಕೆಟ್ ಕೀಪರ್), ಧಾರಾ ಗುಜ್ಜರ್, ಜೋಶಿತಾ ವಿಜೆ, ಶಬ್ನಮ್ ಶಕೀಲ್, ಸೈಮಾ ಠಾಕೋರ್, ಟೈಟಾಸ್ ಸಾಧು, ಪ್ರೇಮಾ ರಾವತ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ