IND vs SA: ಭಾರತ vs ಸೌತ್ ಆಫ್ರಿಕಾ: ಏನಿದು ಬಾಕ್ಸಿಂಗ್ ಡೇ ಟೆಸ್ಟ್?
India vs South Africa: ಕ್ರಿಕೆಟ್ ಹೊರತುಪಡಿಸಿ ಇತರ ಕ್ರೀಡೆಗಳಲ್ಲಿ ಬಾಕ್ಸಿಂಗ್ ಡೇ ಪಂದ್ಯಗಳನ್ನು ಆಡಲಾಗುತ್ತದೆ. ಬಾಕ್ಸಿಂಗ್ ಡೇ ಪಂದ್ಯವು 1892 ರಲ್ಲಿ ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಯಿತು. ಅಂದಿನಿಂದ ರಗ್ಬಿ, ಕ್ರಿಕೆಟ್, ಫುಟ್ಬಾಲ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಬಾಕ್ಸಿಂಗ್ ಡೇ ಮ್ಯಾಚ್ಗಳನ್ನು ಆಡಲಾಗಿದೆ. ಇನ್ನು ಕಳೆದ ಕೆಲ ವರ್ಷಗಳಿಂದ ಆಸ್ಟ್ರೇಲಿಯಾ, ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ತಂಡಗಳು ಡಿಸೆಂಬರ್ 26 ರಂದು ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿದೆ. ಹೀಗಾಗಿ ಕ್ರಿಕೆಟ್ನಲ್ಲೂ ಬಾಕ್ಸಿಂಗ್ ಡೇ ಟೆಸ್ಟ್ ಟ್ರೆಂಡ್ ಸೃಷ್ಟಿಯಾಗಿದೆ.

ಭಾರತ (Team India) ಮತ್ತು ಸೌತ್ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯು ಡಿಸೆಂಬರ್ 26 ರಿಂದ ಆರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಸೌತ್ ಆಫ್ರಿಕಾದ ಸೆಂಚುರಿಯನ್ ಮೈದಾನದಲ್ಲಿ ನಡೆಯಲಿದೆ. ಅತ್ತ ಡಿಸೆಂಬರ್ 26 ರಿಂದ ಮೆಲ್ಬೋರ್ನ್‌ನಲ್ಲಿ ಪಾಕಿಸ್ತಾನ್ ಮತ್ತು ಆಸ್ಟ್ರೇಲಿಯಾ ನಡುವಣ 2ನೇ ಟೆಸ್ಟ್ ಪಂದ್ಯ ಶುರುವಾಗಲಿದೆ. ವಿಶೇಷ ಎಂದರೆ ಈ ಎರಡೂ ಪಂದ್ಯಗಳನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯಲಾಗುತ್ತಿದೆ. ಯಾಕಾಗಿ ಈ ಪಂದ್ಯಗಳನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯುತ್ತಾರೆ? ಇದರ ಹಿನ್ನಲೆಯೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಾಕ್ಸಿಂಗ್ ಡೇ ಎಂದರೇನು?
ಕ್ರಿಕೆಟ್ಗೂ ಬಾಕ್ಸಿಂಗ್ ಡೇಗೂ ಯಾವುದೇ ಸಂಬಂಧವಿಲ್ಲ. ಇಲ್ಲಿ ಡಿಸೆಂಬರ್ 26 ರಂದು ಟೆಸ್ಟ್ ಪಂದ್ಯವಾಡುತ್ತಿರುವುದರಿಂದ ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯಲಾಗುತ್ತಿದೆ. ಡಿಸೆಂಬರ್ 25 ರಂದು ರಜೆಯಿಲ್ಲದೆ ಕೆಲಸ ಮಾಡುವ ಜನರಿಗೆ ಬಾಕ್ಸಿಂಗ್ ಡೇ ಸಮರ್ಪಿಸಲಾಗಿದೆ. ಅಂದರೆ ಕ್ರಿಸ್ಮಸ್ ದಿನದಂದು ಕಾರ್ಯನಿರ್ವಹಿಸಿದ ಕೆಲಸಗಾರರಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಉಡುಗೊರೆಗಳನ್ನು ನೀಡುತ್ತಾರೆ. ಈ ಗಿಫ್ಟ್ಗಳನ್ನು ಅವರು ಮರುದಿನ ಓಪನ್ ಮಾಡುವುದರಿಂದ ಡಿಸೆಂಬರ್ 26 ಅನ್ನು ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ. ಅದರಂತೆ ಡಿಸೆಂಬರ್ 26 ರಂದು ನಡೆಯುವ ಪಂದ್ಯಗಳನ್ನು ಬಾಕ್ಸಿಂಗ್ ಡೇ ಮ್ಯಾಚ್ ಅಥವಾ ಟೆಸ್ಟ್ ಎಂದು ಕರೆಯಲಾಗುತ್ತದೆ.
ಕ್ರಿಕೆಟ್ ಹೊರತುಪಡಿಸಿ ಇತರ ಕ್ರೀಡೆಗಳಲ್ಲಿ ಬಾಕ್ಸಿಂಗ್ ಡೇ ಪಂದ್ಯಗಳನ್ನು ಆಡಲಾಗುತ್ತದೆ. ಬಾಕ್ಸಿಂಗ್ ಡೇ ಪಂದ್ಯವು 1892 ರಲ್ಲಿ ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಯಿತು. ಅಂದಿನಿಂದ ರಗ್ಬಿ, ಕ್ರಿಕೆಟ್, ಫುಟ್ಬಾಲ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಬಾಕ್ಸಿಂಗ್ ಡೇ ಮ್ಯಾಚ್ಗಳನ್ನು ಆಡಲಾಗಿದೆ. ಇನ್ನು ಕಳೆದ ಕೆಲ ವರ್ಷಗಳಿಂದ ಆಸ್ಟ್ರೇಲಿಯಾ, ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ತಂಡಗಳು ಡಿಸೆಂಬರ್ 26 ರಂದು ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿದೆ. ಹೀಗಾಗಿ ಕ್ರಿಕೆಟ್ನಲ್ಲೂ ಬಾಕ್ಸಿಂಗ್ ಡೇ ಟೆಸ್ಟ್ ಟ್ರೆಂಡ್ ಸೃಷ್ಟಿಯಾಗಿದೆ.
ಬಾಕ್ಸಿಂಗ್ ಡೇನಲ್ಲಿ ಮುಗ್ಗರಿಸುವ ಟೀಮ್ ಇಂಡಿಯಾ:
ಬಾಕ್ಸಿಂಗ್ ಡೇ ಪಂದ್ಯಗಳಲ್ಲಿ ಇದುವರೆಗೆ ಭಾರತ ತಂಡ ಗೆಲುವು ಸಾಧಿಸಿರುವುದು ಕೇವಲ 4 ಪಂದ್ಯಗಳಲ್ಲಿ ಮಾತ್ರ. ಟೀಮ್ ಇಂಡಿಯಾ ಇಲ್ಲಿಯವರೆಗೆ 14 ಬಾಕ್ಸಿಂಗ್ ಡೇ ಪಂದ್ಯಗಳನ್ನಾಡಿದೆ. ಇದೀಗ ಸೌತ್ ಆಫ್ರಿಕಾ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ ಆಡಲು ಟೀಮ್ ಇಂಡಿಯಾ ಸಜ್ಜಾಗಿದೆ. ಈ ಬಾರಿಯ ಬಾಕ್ಸಿಂಗ್ ಡೇ ಪಂದ್ಯದಲ್ಲಿ ಭಾರತ ತಂಡವು ಗೆಲುವಿನ ನಗೆ ಬೀರಲಿದೆಯಾ ಕಾದು ನೋಡಬೇಕಿದೆ.
ಇದನ್ನೂ ಓದಿ: ಕೊಹ್ಲಿ-ರೋಹಿತ್ಗಿಂತ ಹೆಚ್ಚು ವೇತನ ಪಡೆದ ಟೀಮ್ ಇಂಡಿಯಾ ಆಟಗಾರ
ಟೀಮ್ ಇಂಡಿಯಾದ ಬಾಕ್ಸಿಂಗ್ ಡೇ ಪಂದ್ಯಗಳ ಫಲಿತಾಂಶ:
- 1985- ಆಸ್ಟ್ರೇಲಿಯಾ vs ಭಾರತ: ಮೆಲ್ಬೋರ್ನ್‌ನಲ್ಲಿ ನಡೆದ ಈ ಪಂದ್ಯವು ಡ್ರಾ ಆಗಿತ್ತು.
- 1987- ಭಾರತ vs ವೆಸ್ಟ್ ಇಂಡೀಸ್: ಕೋಲ್ಕತ್ತಾದಲ್ಲಿ ನಡೆದಿದ್ದ ಈ ಮ್ಯಾಚ್ ಡ್ರಾನಲ್ಲಿ ಅಂತ್ಯ ಕಂಡಿತ್ತು.
- 1991- ಆಸ್ಟ್ರೇಲಿಯಾ vs ಭಾರತ: ಮೆಲ್ಬೋರ್ನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್‌ಗಳಿಂದ ಜಯ ಸಾಧಿಸಿತ್ತು.
- 1992- ಸೌತ್ ಆಫ್ರಿಕಾ vs ಭಾರತ: ಪೋರ್ಟ್ ಎಲಿಜಬೆತ್ನಲ್ಲಿ ನಡೆದ ಈ ಪಂದ್ಯದಲ್ಲಿ ಸೌತ್ ಆಫ್ರಿಕಾ 9 ವಿಕೆಟ್‌ಗಳಿಂದ ಗೆಲುವು ದಾಖಲಿಸಿತ್ತು.
- 1996- ಸೌತ್ ಆಫ್ರಿಕಾ vs ಭಾರತ: ಡರ್ಬನ್ನಲ್ಲಿ ನಡೆದ ಈ ಪಂದ್ಯದಲ್ಲಿ ಸೌತ್ ಆಫ್ರಿಕಾ 328 ರನ್‌ಗಳ ಜಯ ಸಾಧಿಸಿತ್ತು.
- 1998- ನ್ಯೂಝಿಲೆಂಡ್ vs ಭಾರತ: ವೆಲ್ಲಿಂಗ್ಟನ್ನಲ್ಲಿ ನಡೆದ ಈ ಪಂದ್ಯದಲ್ಲಿ ಕಿವೀಸ್ ಪಡೆ 4 ವಿಕೆಟ್ಗಳ ಗೆಲುವು ದಾಖಲಿಸಿತ್ತು.
- 1999- ಆಸ್ಟ್ರೇಲಿಯಾ vs ಭಾರತ: ಮೆಲ್ಬೋರ್ನ್‌ನಲ್ಲಿ ಜರುಗಿದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 180 ರನ್‌ಗಳ ಜಯ ಸಾಧಿಸಿತ್ತು.
- 2003- ಆಸ್ಟ್ರೇಲಿಯಾ vs ಭಾರತ: ಮೆಲ್ಬೋರ್ನ್‌ನಲ್ಲಿ ನಡೆದ ಈ ಪಂದ್ಯವನ್ನು ಆಸ್ಟ್ರೇಲಿಯಾ 9 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. 2006- ಸೌತ್ ಆಫ್ರಿಕಾ vs ಭಾರತ: ಡರ್ಬನ್ನಲ್ಲಿ ನಡೆದ ಈ ಪಂದ್ಯದಲ್ಲಿ ಸೌತ್ ಆಫ್ರಿಕಾ 174 ರನ್‌ಗಳ ಜಯ ಸಾಧಿಸಿತ್ತು.
- 2007- ಆಸ್ಟ್ರೇಲಿಯಾ vs ಭಾರತ: ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 337 ರನ್‌ಗಳ ಜಯ ಸಾಧಿಸಿತ್ತು.
- 2010- ಸೌತ್ ಆಫ್ರಿಕಾ vs ಭಾರತ: ಈ ಪಂದ್ಯದಲ್ಲಿ ಟೀಮ್ ಇಂಡಿಯಾ 87 ರನ್‌ಗಳ ಜಯ ಸಾಧಿಸಿತ್ತು.
- 2018- ಆಸ್ಟ್ರೇಲಿಯಾ vs ಭಾರತ: ಈ ಪಂದ್ಯದಲ್ಲಿ ಭಾರತ ತಂಡವು 87 ರನ್‌ಗಳ ಜಯ ಸಾಧಿಸಿತ್ತು.
- 2020-ಆಸ್ಟ್ರೇಲಿಯಾ vs ಭಾರತ: ಈ ಪಂದ್ಯದಲ್ಲಿ ಭಾರತ ತಂಡವು 8 ವಿಕೆಟ್ಗಳ ಗೆಲುವು ದಾಖಲಿಸಿತ್ತು.
- 2021- ಸೌತ್ ಆಫ್ರಿಕಾ vs ಭಾರತ: ಈ ಪಂದ್ಯದಲ್ಲಿ ಟೀಮ್ ಇಂಡಿಯಾ 113 ರನ್‌ಗಳ ಜಯ ಸಾಧಿಸಿತ್ತು.