ಕೊಹ್ಲಿ-ರೋಹಿತ್ಗಿಂತ ಹೆಚ್ಚು ವೇತನ ಪಡೆದ ಟೀಮ್ ಇಂಡಿಯಾ ಆಟಗಾರ
Team India: ಈ ಬಾರಿ ಟೀಮ್ ಇಂಡಿಯಾ ಪರ ಅತ್ಯಧಿಕ ಏಕದಿನ ಪಂದ್ಯಗಳನ್ನಾಡಿರುವುದು ಕುಲ್ದೀಪ್ ಯಾದವ್. ಎಡಗೈ ಮಣಿಕಟ್ಟಿನ ಸ್ಪಿನ್ ಮೋಡಿಗಾರ ಕುಲ್ದೀಪ್ ಒಟ್ಟು 30 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವೇಳೆ 49 ವಿಕೆಟ್ಗಳನ್ನು ಕೂಡ ಕಬಳಿಸಿದ್ದಾರೆ.
Updated on: Dec 24, 2023 | 10:02 AM

2023 ವರ್ಷಾಂತ್ಯಕ್ಕೆ ಬಂದು ನಿಂತಿದೆ. ಈ ವರ್ಷ ಟೀಮ್ ಇಂಡಿಯಾ (Team India) ಒಟ್ಟು 35 ಏಕದಿನ ಪಂದ್ಯಗಳನ್ನಾಡಿದೆ. ಈ ವೇಳೆ ಭಾರತ ತಂಡವು 27 ಪಂದ್ಯಗಳಲ್ಲಿ ಜಯ ಸಾಧಿಸಿ ದಾಖಲೆ ಬರೆದಿದೆ. ಈ ವರ್ಷ ಟೀಮ್ ಇಂಡಿಯಾ ಆಡಿದ 8 ದ್ವಿಪಕ್ಷೀಯ ಸರಣಿಗಳಲ್ಲಿ ಈ ಬಾರಿ 7 ಸರಣಿಗಳನ್ನು ಗೆದ್ದುಕೊಂಡಿರುವುದು ವಿಶೇಷ.

ಇನ್ನು ಈ ಬಾರಿ ಟೀಮ್ ಇಂಡಿಯಾ ಪರ ಅತ್ಯಧಿಕ ಏಕದಿನ ಪಂದ್ಯಗಳನ್ನಾಡಿರುವುದು ಕುಲ್ದೀಪ್ ಯಾದವ್. ಎಡಗೈ ಮಣಿಕಟ್ಟಿನ ಸ್ಪಿನ್ ಮೋಡಿಗಾರ ಕುಲ್ದೀಪ್ ಒಟ್ಟು 30 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವೇಳೆ 49 ವಿಕೆಟ್ಗಳನ್ನು ಕೂಡ ಕಬಳಿಸಿದ್ದಾರೆ.

ವಿಶೇಷ ಎಂದರೆ ಈ ಬಾರಿ ಅತ್ಯಧಿಕ ಏಕದಿನ ಪಂದ್ಯಗಳನ್ನಾಡುವ ಮೂಲಕ ಕುಲ್ದೀಪ್ ಯಾದವ್ ಬಿಸಿಸಿಐ ಕಡೆಯಿಂದಲೂ ಅತೀ ಹೆಚ್ಚು ವೇತನ ಪಡೆದಿದ್ದಾರೆ. ಅಂದರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗಿಂತ ಹೆಚ್ಚಿನ ಸಂಭಾವನೆಯನ್ನು ಜೇಬಿಗಿಳಿಸಿಕೊಂಡಿದ್ದಾರೆ.

ಬಿಸಿಸಿಐ ಒಪ್ಪಂದದ ಪ್ರಕಾರ, ಏಕದಿನ ಕ್ರಿಕೆಟ್‌ನಲ್ಲಿ ಪ್ರತಿ ಪಂದ್ಯಕ್ಕೆ 6 ಲಕ್ಷ ರೂ. ನೀಡಲಾಗುತ್ತದೆ. ಅದರಂತೆ ಈ ಬಾರಿ 30 ಪಂದ್ಯಗಳಲ್ಲಿ ಕಣಕ್ಕಿಳಿಯುವ ಮೂಲಕ ಕುಲ್ದೀಪ್ ಯಾದವ್ ಬರೋಬ್ಬರಿ 1.80 ಕೋಟಿ ರೂ. ವೇತನ ಪಡೆದಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಶುಭ್ಮನ್ ಗಿಲ್. ಈ ವರ್ಷ ಟೀಮ್ ಇಂಡಿಯಾ ಪರ 29 ಏಕದಿನ ಪಂದ್ಯಗಳನ್ನಾಡಿರುವ ಗಿಲ್ 1.74 ಕೋಟಿ ರೂ. ತಮ್ಮದಾಗಿಸಿಕೊಂಡಿದ್ದಾರೆ.

ಮತ್ತೊಂದೆಡೆ ಈ ವರ್ಷ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಡಿರುವುದು 27 ಏಕದಿನ ಪಂದ್ಯಗಳನ್ನು ಮಾತ್ರ. ಅದರಂತೆ ಅವರು ಪಡೆದಿರುವ ಒಟ್ಟು ಸಂಭಾವನೆ ಮೊತ್ತ 1.62 ಕೋಟಿ ರೂ.

ಹಾಗೆಯೇ ವಿರಾಟ್ ಕೊಹ್ಲಿ ಕೂಡ ಈ ವರ್ಷ 27 ಮ್ಯಾಚ್ಗಳಲ್ಲಿ ಕಣಕ್ಕಿಳಿದಿದ್ದಾರೆ. ಪ್ರತಿ ಪಂದ್ಯಕ್ಕೆ 6 ಲಕ್ಷ ರೂ.ನಂತೆ 2023 ರಲ್ಲಿ ಕಿಂಗ್ ಕೊಹ್ಲಿ 1.62 ಕೋಟಿ ರೂ. ಪಡೆದಿದ್ದಾರೆ.



















