IND vs SA: 3 ಮಾದರಿಗಳ ಸರಣಿಗೆ ಭಾರತ- ದಕ್ಷಿಣ ಆಫ್ರಿಕಾ ತಂಡಗಳು ಪ್ರಕಟ; ಸರಣಿ ಯಾವಾಗ ಆರಂಭ?
IND vs SA: ಭಾರತೀಯ ಮಹಿಳಾ ತಂಡವು ಬಹು ಸ್ವರೂಪದ ಸರಣಿಗಾಗಿ ಸುಮಾರು ಒಂದು ದಶಕದ ನಂತರ ದಕ್ಷಿಣ ಆಫ್ರಿಕಾ ತಂಡಕ್ಕೆ ಆತಿಥ್ಯ ವಹಿಸಲಿದೆ. ಉಭಯ ತಂಡಗಳ ನಡುವಿನ ಸರಣಿಯು ಜೂನ್ 16 ಮತ್ತು ಜುಲೈ 9 ರ ನಡುವೆ ನಡೆಯಲಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಒಂದು ಟೆಸ್ಟ್, ಮೂರು ಏಕಿದನ ಮತ್ತು ಮೂರು ಟಿ20 ಪಂದ್ಯಗಳ ಸರಣಿ ನಡೆಯಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಬಹು ಸ್ವರೂಪದ ಸರಣಿಗೆ ಭಾರತ ಮಹಿಳಾ ತಂಡವನ್ನು (India and South Africa ) ಇಂದು ಪ್ರಕಟಿಸಿದೆ. ಮಹಿಳಾ ಆಯ್ಕೆ ಸಮಿತಿಯು ಹರ್ಮನ್‌ಕೃತ್ ಕೌರ್ (Harmanpreet Kaur) ನಾಯಕತ್ವದಲ್ಲಿ ತಂಡವನ್ನು ಪ್ರಕಟಿಸಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ತಂಡಕ್ಕೆ ಸ್ಮೃತಿ ಮಂಧಾನ (Smriti Mandhana) ಉಪನಾಯಕಿಯಾಗಲಿದ್ದಾರೆ. ಉಳಿದಂತೆ ಕಳೆದ ವರ್ಷ ಜುಲೈನಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಬಾರಿಗೆ ಏಕದಿನ ಪಂದ್ಯ ಆಡಿದ್ದ ಪ್ರಿಯಾ ಪುನಿಯಾಗೆ ತಂಡದಲ್ಲಿ ಅವಕಾಶ ಕೊಡಲಾಗಿದೆ. ಏಕದಿನ ಮಾತ್ರವಲ್ಲದೆ ಪ್ರಿಯಾ ಟೆಸ್ಟ್ ತಂಡಕ್ಕೂ ಆಯ್ಕೆಯಾಗಿದ್ದಾರೆ. ಎಡಗೈ ಸ್ಪಿನ್ನರ್ ಸೈಕಾ ಇಶಾಕ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತ ದಕ್ಷಿಣ ಆಫ್ರಿಕಾ ಕೂಡ ಭಾರತ ಪ್ರವಾಸಕ್ಕೆ ತನ್ನ ಏಕದಿನ ಹಾಗೂ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ಟಿ20 ತಂಡ ಇನ್ನಷ್ಟೇ ಪ್ರಕಟವಾಗಬೇಕಿದೆ.
ಭಾರತೀಯ ಮಹಿಳಾ ತಂಡವು ಬಹು ಸ್ವರೂಪದ ಸರಣಿಗಾಗಿ ಸುಮಾರು ಒಂದು ದಶಕದ ನಂತರ ದಕ್ಷಿಣ ಆಫ್ರಿಕಾ ತಂಡಕ್ಕೆ ಆತಿಥ್ಯ ವಹಿಸಲಿದೆ. ಉಭಯ ತಂಡಗಳ ನಡುವಿನ ಸರಣಿಯು ಜೂನ್ 16 ಮತ್ತು ಜುಲೈ 9 ರ ನಡುವೆ ನಡೆಯಲಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಒಂದು ಟೆಸ್ಟ್, ಮೂರು ಏಕಿದನ ಮತ್ತು ಮೂರು ಟಿ20 ಪಂದ್ಯಗಳ ಸರಣಿ ನಡೆಯಲಿದೆ.
3 ಸರಣಿಗಳಿಗೆ ಭಾರತ ಮಹಿಳಾ ತಂಡ ಇಂತಿದೆ
ಏಕದಿನ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ (ವಿಕೆಟ್‌ಕೀಪರ್), ಉಮಾ ಛೆಟ್ರಿ (ವಿಕೆಟ್‌ಕೀಪರ್), ದಯಾಲನ್ ಹೇಮಲತಾ, ರಾಧಾ ಯಾದವ್, ಆಶಾ ಶೋಭನಾ, ಸೈಕಾ ಇಶಾಕ್, ಪೂಜಾ ವಸ್ತ್ರಾಕರ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ಪ್ರಿಯಾ ಪೂನಿಯಾ.
ಟೆಸ್ಟ್ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಶುಭಾ ಸತೀಶ್, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ (ವಿಕೆಟ್‌ಕೀಪರ್), ಉಮಾ ಛೆಟ್ರಿ (ವಿಕೆಟ್‌ಕೀಪರ್), ದೀಪ್ತಿ ಶರ್ಮಾ, ಸ್ನೇಹ ರಾಣಾ, ಸೈಕಾ ಇಶಾಕ್, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ಮೇಘನಾ ಸಿಂಗ್, ಪ್ರಿಯಾ ಪೂನಿಯಾ.
Harmanpreet Kaur will lead a strong India outfit for the all-format tour at home against South Africa 🗒
Details 👇https://t.co/XuJm1ee3bS
— ICC (@ICC) May 30, 2024
ಟಿ20 ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದಯಾಲನ್ ಹೇಮಲತಾ, ಉಮಾ ಛೆಟ್ರಿ (ವಿಕೆಟ್‌ಕೀಪರ್), ರಿಚಾ ಘೋಷ್ (ವಿಕೆಟ್‌ಕೀಪರ್), ಜೆಮಿಮಾ ರೋಡ್ರಿಗಸ್, ಸಜ್ನಾ ಸಜೀವನ್, ದೀಪ್ತಿ ಶರ್ಮಾ, ಶ್ರೇಯಾಂಕ ಪಾಟೀಲ್, ಅಮಂಜೋತ್ ಕೌರ್, ಆಶಾ ಶೋಭನಾ, ಪೂಜಾ ವಸ್ತ್ರಾಕರ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ.
ದಕ್ಷಿಣ ಆಫ್ರಿಕಾ ತಂಡ ಇಂತಿದೆ…
ಏಕದಿನ ತಂಡ: ಲಾರಾ ವೊಲ್ವಾರ್ಡ್ಟ್ (ನಾಯಕಿ), ಅನ್ನೆಕೆ ಬಾಷ್, ತಜ್ಮಿನ್ ಬ್ರಿಟ್ಸ್, ನಡಿನ್ ಡಿ ಕ್ಲರ್ಕ್, ಆನ್ನೆರಿ ಡೆರ್ಕ್ಸೆನ್, ಮೈಕೆ ಡಿ ರಿಡ್ಡರ್, ಸಿನಾಲೊ ಜಫ್ತಾ, ಮರಿಜಾನೆ ಕೆಪ್, ಅಯಾಬೊಂಗಾ ಖಾಕಾ, ಮಸಾಬಟಾ ಕ್ಲಾಸ್, ಸುನೆ ಲೂಸ್, ಎಲಿಸ್-ಮೇರಿ ಮಾರ್ಜ್, ನೋನ್ಕುಲುಲೆಕೊ ಮ್ಲಾಬಾಕ್, ನೋನ್ಕುಲುಲೆಕೊ ಮ್ಲಾಬಾ, ಶಾಂಗಸ್ಸೆ, ಡೆಲ್ಮಿ ಟಕರ್.
The Proteas have announced their ODI and Test squads for the upcoming tour of India 🗒️
Details 👇https://t.co/8g6Acxv7Ia
— ICC (@ICC) May 31, 2024
ಟೆಸ್ಟ್ ತಂಡ: ಲಾರಾ ವೊಲ್ವಾರ್ಡ್ಟ್ (ನಾಯಕಿ), ಅನ್ನೆಕೆ ಬಾಷ್, ತಜ್ಮಿನ್ ಬ್ರಿಟ್ಸ್, ನಾಡಿನ್ ಡಿ ಕ್ಲರ್ಕ್, ಅನ್ನೆರಿ ಡೆರ್ಕ್ಸೆನ್, ಮೈಕೆ ಡಿ ರಿಡ್ಡರ್, ಸಿನಾಲೊ ಜಾಫ್ತಾ, ಮರಿಜಾನ್ನೆ ಕೆಪ್, ಮಸಾಬಟಾ ಕ್ಲಾಸ್, ಸುನೆ ಲೂಸ್, ಎಲಿಸ್-ಮೇರಿ ಮಾರ್ಜ್, ನೋನ್ಕುಲುಲೆಕೊ ಮ್ಲಾಬಾಕ್, ನೋನ್ಕುಲುಲೆಕೊ ಮ್ಲಾಬಾ, ಶಾಂಗಸ್ಸೆ, ಡೆಲ್ಮಿ ಟಕರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ