T20 World Cup 2024: ಮಾಡ್ಯುಲರ್ ಸ್ಟೇಡಿಯಂ ಎಂದರೇನು? ಭಾರತ- ಪಾಕ್ ಪಂದ್ಯ ನಡೆಯುವುದು ಇಲ್ಲೇ

T20 World Cup 2024: ಐಸಿಸಿ ಈ ವರ್ಷದ ಜನವರಿಯಲ್ಲಿ ನ್ಯೂಯಾರ್ಕ್‌ನಲ್ಲಿ 34,000 ಆಸನಗಳ ಮಾಡ್ಯುಲರ್ ಸ್ಟೇಡಿಯಂ ನಿರ್ಮಾಣಕ್ಕೆ ಮುಂದಾಗಿತ್ತು. ಅದರಂತೆ ಇದೀಗ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂ ಹೆಸರಿನಲ್ಲಿ ನೂತನ ತಂತ್ರಜ್ಞಾನದ ಸುಸಜ್ಜೀತ ಕ್ರೀಡಾಂಗಣ ವಿಶ್ವಕಪ್ ಆತಿಥ್ಯಕ್ಕೆ ಸಜ್ಜಾಗಿದೆ. 30 ಮಿಲಿಯನ್ ಡಾಲರ್ ವೆಚ್ಚದಲ್ಲಿ ಮೂರು ತಿಂಗಳಲ್ಲಿ ನಿರ್ಮಾಣವಾಗಿರುವ ಈ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ.

T20 World Cup 2024: ಮಾಡ್ಯುಲರ್ ಸ್ಟೇಡಿಯಂ ಎಂದರೇನು? ಭಾರತ- ಪಾಕ್ ಪಂದ್ಯ ನಡೆಯುವುದು ಇಲ್ಲೇ
ಮಾಡ್ಯುಲರ್ ಸ್ಟೇಡಿಯಂ
Follow us
ಪೃಥ್ವಿಶಂಕರ
|

Updated on: May 31, 2024 | 10:06 PM

ಇಡೀ ವಿಶ್ವ ಕ್ರಿಕೆಟ್ ಎದುರು ನೋಡುತ್ತಿರುವ 9ನೇ ಆವೃತ್ತಿಯ ಟಿ20 ವಿಶ್ವಕಪ್‌ (T20 World Cup 2024) ಆರಂಭಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಜೂನ್ 2 ರಿಂದ ಜೂನ್ 29 ರವರೆಗೆ ನಡೆಯಲಿರುವ ಈ ಟೂರ್ನಿಯ ಪಂದ್ಯಗಳು ಅಮೆರಿಕ ಮತ್ತು ವೆಸ್ಟ್ ಇಂಡೀಸ್ ನೆಲದಲ್ಲಿ ನಡೆಯಲಿವೆ. ಅಮೆರಿಕ ಮೊದಲ ಬಾರಿಗೆ ಕ್ರಿಕೆಟ್‌ಗೆ ಆತಿಥ್ಯ ವಹಿಸುತ್ತಿದೆ. ಹೀಗಾಗಿ ಅಮೆರಿಕದಲ್ಲಿ ಕ್ರಿಕೆಟ್​ಗಂತಲೇ ಕಟ್ಟಿರುವ ಕ್ರೀಡಾಂಗಣಗಳಿಲ್ಲ. ಆದ್ದರಿಂದ ಐಸಿಸಿ (ICC) ನ್ಯೂಯಾರ್ಕ್​ನಲ್ಲಿ ಮಾಡ್ಯುಲರ್ ಕ್ರಿಕೆಟ್ ಸ್ಟೇಡಿಯಂ (Modular Stadium) ಕಟ್ಟಲು ಮುಂದಾಗಿತ್ತು. ಇದೀಗ ಆ ಸ್ಟೇಡಿಯಂ ನಿರ್ಮಾಣ ಪೂರ್ಣಗೊಂಡಿದ್ದು, ಇದೇ ಮೈದಾನದಲ್ಲಿ ಭಾರತ ಹಾಗೂ ಪಾಕಿಸ್ತಾನ (IND vs PAK) ನಡುವಿನ ಹೈವೋಲ್ಟೇಜ್ ಕದನ ನಡೆಯಲಿದೆ. ಹಾಗಿದ್ದರೆ ಈ ಮಾಡ್ಯುಲರ್ ಸ್ಟೇಡಿಯಂ ಎಂದರೇನು? ಇದರಲ್ಲಿನ ವಿಶೇಷತೆಗಳೇನು? ಯಾವ ಸಂದರ್ಭಗಳಲ್ಲಿ ಈ ಕ್ರೀಡಾಂಗಣನ್ನು ನಿರ್ಮಿಸಲಾಗುತ್ತದೆ. ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಐಸಿಸಿ ಈ ವರ್ಷದ ಜನವರಿಯಲ್ಲಿ ನ್ಯೂಯಾರ್ಕ್‌ನಲ್ಲಿ 34,000 ಆಸನಗಳ ಮಾಡ್ಯುಲರ್ ಸ್ಟೇಡಿಯಂ ನಿರ್ಮಾಣಕ್ಕೆ ಮುಂದಾಗಿತ್ತು. ಅದರಂತೆ ಇದೀಗ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂ ಹೆಸರಿನಲ್ಲಿ ನೂತನ ತಂತ್ರಜ್ಞಾನದ ಸುಸಜ್ಜೀತ ಕ್ರೀಡಾಂಗಣ ವಿಶ್ವಕಪ್ ಆತಿಥ್ಯಕ್ಕೆ ಸಜ್ಜಾಗಿದೆ. 30 ಮಿಲಿಯನ್ ಡಾಲರ್ ವೆಚ್ಚದಲ್ಲಿ ಮೂರು ತಿಂಗಳಲ್ಲಿ ನಿರ್ಮಾಣವಾಗಿರುವ ಈ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ.

T20 World Cup 2024: ಟಿ20 ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ಯಾರೆಲ್ಲಾ ಪ್ರದರ್ಶನ ನೀಡಲಿದ್ದಾರೆ?ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಮಾಡ್ಯುಲರ್ ಸ್ಟೇಡಿಯಂ ಎಂದರೇನು?

ನಸ್ಸೌ ಕೌಂಟಿ ಸ್ಟೇಡಿಯಂ ಮೊದಲ ಮಾಡ್ಯುಲರ್ ಕ್ರಿಕೆಟ್ ಸ್ಟೇಡಿಯಂ ಆಗಿದೆ. ಅಂದರೆ ಅದರ ಪಿಚ್, ಸ್ಟ್ಯಾಂಡ್ ಇತ್ಯಾದಿಗಳನ್ನು ಈ ಪಂದ್ಯಾವಳಿಗಾಗಿ ನಿರ್ಮಿಸಲಾಗಿದೆ. ಮಾಡ್ಯುಲರ್ ಕ್ರೀಡಾಂಗಣಗಳನ್ನು ಅಲ್ಯೂಮಿನಿಯಂ ಮತ್ತು ಉಕ್ಕಿನಿಂದ ನಿರ್ಮಾಣ ಮಾಡಲಾಗಿರುತ್ತದೆ. ಇದರಿಂದ ಕ್ರೀಡಾಂಗಣ ನಿರ್ಮಾಣದಲ್ಲಿ ಸಮಯ ಮತ್ತು ಹಣ ಎರಡೂ ಉಳಿತಾಯವಾಗುತ್ತದೆ. ನಸ್ಸೌ ಕ್ರೀಡಾಂಗಣವು ಬರ್ಮುಡಾ ಹುಲ್ಲಿನ ಹೊದಿಕೆ ಹೊಂದಿದೆ. ಇದನ್ನು ಬೇಸ್‌ಬಾಲ್ ಮತ್ತು ಫುಟ್‌ಬಾಲ್ ಮೈದಾನಗಳಲ್ಲಿ ಬಳಸಲಾಗುತ್ತದೆ. ವಿಶ್ವಕಪ್ ಬಳಿಕ ಈ ಕ್ರೀಡಾಂಗಣ ಮತ್ತೆ ಉದ್ಯಾನವನವಾಗಿ ಪರಿವರ್ತನೆಯಾಗಲಿದೆ. ಅಂದರೆ, ಇದು ತಾತ್ಕಾಲಿಕ ಕ್ರೀಡಾಂಗಣವಾಗಿದ್ದು, ಇದನ್ನು ಕ್ರಿಕೆಟ್ ಹೊರತುಪಡಿಸಿ ಇತರ ಕ್ರೀಡೆಗಳನ್ನು ಆಡಲು ಬಳಸಬಹುದಾಗಿದೆ. ಈ ಹಿಂದೆ, ಕತಾರ್‌ನಲ್ಲಿ ಆಯೋಜಿಸಲಾದ ಫಿಫಾ ವಿಶ್ವಕಪ್ 2022 ರಲ್ಲಿ ಸ್ಟೇಡಿಯಂ 974 ಎಂಬ ಮಾಡ್ಯುಲರ್ ಕ್ರೀಡಾಂಗಣವನ್ನು ನಿರ್ಮಿಸಲಾಗಿತ್ತು.

ಮಾಡ್ಯುಲರ್ ಕ್ರೀಡಾಂಗಣ ನಿರ್ಮಿಸಲು ಏನು ಕಾರಣ?

ಸಮಯದ ಕೊರತೆ ಮತ್ತು ಪರಿಸರ ಸುಸ್ಥಿರತೆ ಎರಡು ಪ್ರಮುಖ ಕಾರಣಗಳಿಂದ ಈ ಮಾಡ್ಯುಲರ್ ಕ್ರೀಡಾಂಗಣಗಳನ್ನು ನಿರ್ಮಿಸಲಾಗುತ್ತದೆ. ಕಂಪನಿಯು ಆರು ತಿಂಗಳಲ್ಲಿ ಕ್ರೀಡಾಂಗಣವನ್ನು ಸಿದ್ಧಪಡಿಸಬೇಕಿತ್ತು. ಇಷ್ಟು ಕಡಿಮೆ ಸಮಯದಲ್ಲಿ ಮಾಡ್ಯುಲರ್ ಸ್ಟೇಡಿಯಂ ಬಿಟ್ಟರೆ ಬೇರೆ ಆಯ್ಕೆ ಇರಲಿಲ್ಲ. ಮಾಡ್ಯುಲರ್ ಸ್ಟೇಡಿಯಂ ನಿರ್ಮಾಣದಿಂದ ಮೈದಾನದ ಸುತ್ತಲಿನ ಪರಿಸರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಕೂಡ ಬೀರುವುದಿಲ್ಲ.

ಈ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯವನ್ನು ವೀಕ್ಷಿಸಲು ಏಕಕಾಲದಲ್ಲಿ 34,000 ಅಭಿಮಾನಿಗಳು ಆರಾಮವಾಗಿ ಕುಳಿತುಕೊಳ್ಳಬಹುದು. ಈ ಮೈದಾನ, 2011 ರಲ್ಲಿ ಏಕದಿನ ವಿಶ್ವಕಪ್ ಫೈನಲ್‌ಗೆ ಆತಿಥ್ಯ ವಹಿಸಿದ್ದ ಮುಂಬೈನ ವಾಂಖೆಡೆ ಸ್ಟೇಡಿಯಂಗಿಂತ ಗಾತ್ರದಲ್ಲಿ ಇನ್ನೂ ದೊಡ್ಡದಾಗಿದೆ.

ಮೋದಿ ಸ್ಟೇಡಿಯಂ ನಿರ್ಮಿಸಿದ್ದು ಇದೇ ಕಂಪನಿ

ನರೇಂದ್ರ ಮೋದಿ ಸ್ಟೇಡಿಯಂ ನಿರ್ಮಿಸಿದ ಅದೇ ಕಂಪನಿ ನ್ಯೂಯಾರ್ಕ್​ನಲ್ಲಿ ಈ ಮಾಡ್ಯುಲರ್ ಕ್ರಿಕೆಟ್ ಸ್ಟೇಡಿಯಂ ಅನ್ನು ನಿರ್ಮಿಸಿದೆ. ನ್ಯೂಯಾರ್ಕ್‌ನ ಮಾಡ್ಯುಲರ್ ಕ್ರಿಕೆಟ್ ಸ್ಟೇಡಿಯಂ ಅನ್ನು ಪಾಪ್ಯುಲಸ್ ಹೆಸರಿನ ವಿಶ್ವ ದರ್ಜೆಯ ಸ್ಥಳ ವಾಸ್ತುಶಿಲ್ಪ ಸಂಸ್ಥೆ ವಿನ್ಯಾಸಗೊಳಿಸಿದೆ. ಅಹಮದಾಬಾದ್‌ನಲ್ಲಿ ವಿಶ್ವದ ಅತಿದೊಡ್ಡ ಕ್ರಿಕೆಟ್ ನರೇಂದ್ರ ಮೋದಿ ಕ್ರೀಡಾಂಗಣವನ್ನು ವಿನ್ಯಾಸಗೊಳಿಸಿದ್ದು ಕೂಡ ಇದೇ ಸಂಸ್ಥೆ. ಕ್ರಿಕೆಟ್‌ನ ಹೊರತಾಗಿ, ವಿಶ್ವದ ಅತ್ಯಂತ ಐಕಾನಿಕ್ ಸ್ಟೇಡಿಯಂಗಳಲ್ಲಿ ಒಂದಾದ ನ್ಯೂಯಾರ್ಕ್‌ನ ಯಾಂಕೀ ಸ್ಟೇಡಿಯಂ ಅನ್ನು ಸಹ ಪಾಪ್ಯುಲಸ್ ವಿನ್ಯಾಸಗೊಳಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ