T20 World Cup 2022: ಈ ವರ್ಷ ಅತ್ಯಧಿಕ ಟಿ20 ಪಂದ್ಯ ಗೆದ್ದ ತಂಡ ಯಾವುದು ಗೊತ್ತಾ?
T20 World Cup 2022: ಈ ಕುತೂಹಲಕಾರಿ ಪ್ರಶ್ನೆಗೆ ಸಿಗುವ ಉತ್ತರ ವಿಶ್ವ ದಾಖಲೆ. ಈ ವರ್ಷ ಟಿ20 ಕ್ರಿಕೆಟ್ನಲ್ಲಿ ವಿಶ್ವ ದಾಖಲೆಯೊಂದು ನಿರ್ಮಾಣವಾಗಿದೆ.
T20 World Cup 2022: ಟಿ20 ವಿಶ್ವಕಪ್ಗೂ ಮುನ್ನ ತಂಡಗಳ ಬಲಾಬಲದ ಚರ್ಚೆಗಳು ಶುರುವಾಗಿದೆ. ಏಕೆಂದರೆ ಅಕ್ಟೋಬರ್ 16 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್ನಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿದೆ. ಇದರಲ್ಲಿ 8 ತಂಡಗಳು ಈಗಾಗಲೇ ನೇರವಾಗಿ ಸೂಪರ್-12 ಗೆ ಅರ್ಹತೆ ಪಡೆದುಕೊಂಡಿದೆ. ಇನ್ನುಳಿದ 8 ತಂಡಗಳು ಅರ್ಹತಾ ಸುತ್ತಿನಲ್ಲಿ ಆಡಬೇಕಿದೆ. ಈ ಅರ್ಹತಾ ಸುತ್ತಿನಲ್ಲಿ ಟಿ20 ವಿಶ್ವ ಚಾಂಪಿಯನ್ ತಂಡಗಳಾದ ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ತಂಡಗಳೂ ಕೂಡ ಇವೆ. ಹೀಗಾಗಿಯೇ ಈ ವರ್ಷ ಅತ್ಯುತ್ತಮ ಪ್ರದರ್ಶನ ನೀಡಿದ ತಂಡ ಯಾವುದು ಎನ್ನುವ ಕುತೂಹಲ ಎಲ್ಲರಲ್ಲಿದೆ.
ಈ ಕುತೂಹಲಕಾರಿ ಪ್ರಶ್ನೆಗೆ ಸಿಗುವ ಉತ್ತರ ವಿಶ್ವ ದಾಖಲೆ. ಈ ವರ್ಷ ಟಿ20 ಕ್ರಿಕೆಟ್ನಲ್ಲಿ ವಿಶ್ವ ದಾಖಲೆಯೊಂದು ನಿರ್ಮಾಣವಾಗಿದೆ. ಅದು ಕೂಡ ಅತ್ಯಧಿಕ ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಎಂಬುದು ವಿಶೇಷ. ಅಂದರೆ ಟಿ20 ಕ್ರಿಕೆಟ್ನಲ್ಲಿ ಒಂದೇ ವರ್ಷದಲ್ಲಿ ಅತ್ಯಧಿಕ ಪಂದ್ಯ ಗೆದ್ದ ದಾಖಲೆ ಇದೀಗ ಟೀಮ್ ಇಂಡಿಯಾ ಹೆಸರಿನಲ್ಲಿದೆ. ಈ ಹಿಂದೆ ಈ ದಾಖಲೆ ಪಾಕಿಸ್ತಾನ್ ತಂಡದ ಹೆಸರಿನಲ್ಲಿತ್ತು. ಪಾಕ್ ತಂಡವು 2021 ರಲ್ಲಿ ಬರೋಬ್ಬರಿ 20 ಪಂದ್ಯಗಳಲ್ಲಿ ಜಯ ಸಾಧಿಸಿ ಈ ದಾಖಲೆ ಬರೆದಿತ್ತು.
ಆದರೆ ಈ ವರ್ಷ ಬರೋಬ್ಬರಿ 24 ಪಂದ್ಯಗಳನ್ನು ಗೆದ್ದುಕೊಂಡಿರುವ ಟೀಮ್ ಇಂಡಿಯಾ ಒಂದೇ ವರ್ಷದಲ್ಲಿ ಅತ್ಯಧಿಕ ಟಿ20 ಪಂದ್ಯಗಳನ್ನು ಗೆದ್ದುಕೊಂಡ ತಂಡ ಎನಿಸಿಕೊಂಡಿದೆ. ಹೀಗಾಗಿಯೇ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳ ಪಟ್ಟಿಯಲ್ಲೂ ಭಾರತ ತಂಡವು ಅಗ್ರಸ್ಥಾನದಲ್ಲಿದೆ. ಹಾಗಿದ್ರೆ ಒಂದು ವರ್ಷದಲ್ಲಿ ಅತ್ಯಧಿಕ ಟಿ20 ಪಂದ್ಯ ಗೆದ್ದ ಟಾಪ್-5 ತಂಡಗಳಾವುವು ನೋಡೋಣ…
- – ಭಾರತ: 2022 ರಲ್ಲಿ ಭಾರತ ತಂಡವು 24 ಪಂದ್ಯಗಳನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.
- – ಪಾಕಿಸ್ತಾನ್: 2021 ರಲ್ಲಿ ಪಾಕಿಸ್ತಾನ್ ತಂಡವು 20 ಪಂದ್ಯಗಳನ್ನು ಗೆದ್ದು ದಾಖಲೆ ನಿರ್ಮಿಸಿತ್ತು. ಇದೀಗ ಈ ದಾಖಲೆಯನ್ನು ಟೀಮ್ ಇಂಡಿಯಾ ಮುರಿದಿದೆ.
- – ಪಾಕಿಸ್ತಾನ್: 2018 ರಲ್ಲಿ ಪಾಕಿಸ್ತಾನ್ ತಂಡವು 17 ಪಂದ್ಯಗಳನ್ನು ಗೆದ್ದು ದಾಖಲೆ ಬರೆದಿತ್ತು.
- – ಉಗಾಂಡ: 2021 ರಲ್ಲಿ ಉಗಾಂಡ ತಂಡವು 16 ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ವಿಶೇಷ ದಾಖಲೆ ಬರೆಯಿತು.
- – ಸೌತ್ ಆಫ್ರಿಕಾ: 2021 ರಲ್ಲೇ ಸೌತ್ ಆಫ್ರಿಕಾ ತಂಡವು 15 ಟಿ20 ಪಂದ್ಯಗಳಲ್ಲಿ ಗೆದ್ದು ಈ ಪಟ್ಟಿಯಲ್ಲಿ ಐದನೇ ಸ್ಥಾನ ಅಲಂಕರಿಸಿದೆ.
ಅಂದರೆ ಈ ವರ್ಷ ಟೀಮ್ ಇಂಡಿಯಾ ಆಡಿದ 31 ಟಿ20 ಪಂದ್ಯಗಳಲ್ಲಿ 24 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಅದರಲ್ಲೂ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ಧ ಸರಣಿ ಗೆದ್ದು, ಇದೀಗ ಟೀಮ್ ಇಂಡಿಯಾ ಆಸ್ಟ್ರೇಲಿಯಾಗೆ ತೆರಳಲಿದೆ. ಹೀಗಾಗಿ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
ಟಿ20 ವಿಶ್ವಕಪ್ ಟೀಮ್ ಇಂಡಿಯಾ ವೇಳಾಪಟ್ಟಿ:
- ಅಕ್ಟೋಬರ್-23 : ಭಾರತ vs ಪಾಕಿಸ್ತಾನ – ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ
- ಅಕ್ಟೋಬರ್-27: ಭಾರತ vs ಅರ್ಹತಾ ಸುತ್ತಿನ A ಗ್ರೂಪ್ನ ರನ್ನರ್ ಅಪ್ ತಂಡ – ಸಿಡ್ನಿ ಕ್ರಿಕೆಟ್ ಸ್ಟೇಡಿಯಂ
- ಅಕ್ಟೋಬರ್- 30: ಭಾರತ vs ದಕ್ಷಿಣ ಆಫ್ರಿಕಾ – ಪರ್ತ್ ಸ್ಟೇಡಿಯಂ
- ನವೆಂಬರ್-2: ಭಾರತ vs ಬಾಂಗ್ಲಾದೇಶ -ಅಡಿಲೇಡ್ ಓವಲ್
- ನವೆಂಬರ್-6: ಭಾರತ vs ಅರ್ಹತಾ ಸುತ್ತಿನ B ಗ್ರೂಪ್ನ ವಿನ್ನರ್ ತಂಡ