
ಟೆಸ್ಟ್ ಮಾದರಿಯಲ್ಲೂ ರನ್ ಬರ, ರಣಜಿಯಲ್ಲೂ ರನ್ ಬರ, ಇದೀಗ ಮೊದಲ ಏಕದಿನ ಪಂದ್ಯದಲ್ಲೂ ಕಥೆ ಬದಲಾಗಲಿಲ್ಲ. ಇದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಕಳಪೆ ಫಾರ್ಮ್ನ ಕರುಣಾಜನಕ ಕಥೆ. ಟಿ20 ವಿಶ್ವಕಪ್ ಬಳಿಕ ಬ್ಯಾಟಿಂಗ್ ಮರೆತವರಂತೆ ವರ್ತಿಸುತ್ತಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಯಾವುದು ಅಂದುಕೊಂಡಂತೆ ನಡೆಯುತ್ತಿಲ್ಲ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಇನ್ನಿಲ್ಲದಂತೆ ವೈಫಲ್ಯ ಅನುಭವಿಸಿದ್ದ ರೋಹಿತ್, ರಣಜಿ ಪಂದ್ಯದಲ್ಲೂ ರನ್ ಬರ ಎದುರಿಸಿದ್ದರು. ಹೀಗಾಗಿ ಇಂದಿನಿಂದ ಆರಂಭವಾಗಿರುವ ಏಕದಿನ ಸರಣಿಯಲ್ಲಿ ರೋಹಿತ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಏನೇ ನಿರೀಕ್ಷೆಗಳಿದ್ದರು ತಮ್ಮ ಆಟವನ್ನು ಮಾತ್ರ ಬದಲಿಸುವುದಿಲ್ಲ ಎಂಬಂತೆ ರೋಹಿತ್ ಬ್ಯಾಟ್ ಮಾಡುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲೂ ರೋಹಿತ್ ಬ್ಯಾಟ್ ಒಂದಂಕಿಗೆ ಸುಸ್ತಾಗಿದೆ.
ಇಂದಿನ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ನಾಯಕ ರೋಹಿತ್ ಶರ್ಮಾ ಅವರ ಇನ್ನಿಂಗ್ಸ್ ಕೇವಲ 7 ಎಸೆತಗಳಲ್ಲಿ ಕೊನೆಗೊಂಡಿತು. ಹಿಟ್‌ಮ್ಯಾನ್ ಎಂದೇ ಖ್ಯಾತರಾದ ರೋಹಿತ್ ಕೇವಲ 2 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಮೇಲೆ ಹೇಳಿದಂತೆ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರಿಂದ ಎಲ್ಲರೂ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಿದ್ದರು. ಇದಕ್ಕೆ ಪೂರಕವಾಗಿ ಹಿಟ್‌ಮ್ಯಾನ್ ನಾಗ್ಪುರ ಮೈದಾನದಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದರು. ಆದರೆ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ರೋಹಿತ್ ಶಕೀಬ್ ಮಹಮೂದ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಬೇಸರದಿಂದ ಪೆವಿಲಿಯನ್ತ್ತ ಹೆಜ್ಜೆ ಹಾಕಿದರು.
Rohit Sharma could have easily scored 100 today & easily won match for India, but he wanted to give opportunity to youngsters (Gill & Iyer) to bat in high pressure run match. So, he got out intentionally.
That's selfless Captain for you🫡 😍#RohitSharma pic.twitter.com/xiajGzPytS— ICC Asia Cricket (@ICCAsiaCricket) February 6, 2025
ಕಳೆದ 16 ಅಂತರರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಶರ್ಮಾ ಕೇವಲ ಒಂದು ಅರ್ಧಶತಕ ಮಾತ್ರ ಗಳಿಸಿದ್ದಾರೆ. ಇಷ್ಟೇ ಅಲ್ಲ, ಕಳೆದ 16 ಇನ್ನಿಂಗ್ಸ್‌ಗಳಲ್ಲಿ ಹಿಟ್ಮ್ಯಾನ್ಗೆ 11 ಬಾರಿ ಎರಡಂಕಿ ಗಡಿ ದಾಟಲು ಸಾಧ್ಯವಾಗಿಲ್ಲ. ಇದಲ್ಲದೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಳಲ್ಲಿಯೂ ರೋಹಿತ್ ಬ್ಯಾಟ್ ಮೌನಕ್ಕೆ ಶರಣಾಗಿತ್ತು. ಆದಾಗ್ಯೂ, ತಮ್ಮ ನೆಚ್ಚಿನ ಏಕದಿನ ಸ್ವರೂಪದಲ್ಲಿ ಅವರು ತಮ್ಮ ಕಳೆದುಹೋದ ಫಾರ್ಮ್ ಅನ್ನು ಕಂಡುಕೊಳ್ಳುತ್ತಾರೆ ಎಂದು ಎಲ್ಲರೂ ಕಾದು ಕುಳಿತಿದ್ದರು. ಆದರೆ ಎಂದಿನಂತೆ ರೋಹಿತ್ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ.