IND vs ENG: ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ; ಏಕದಿನ, ಟಿ20 ಸರಣಿ ವೇಳಾಪಟ್ಟಿ ಹೀಗಿದೆ

|

Updated on: Dec 22, 2024 | 5:22 PM

India vs England Cricket Series 2025: 2025ರ ಜನವರಿಯಲ್ಲಿ ಭಾರತದಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಮತ್ತು ಟಿ20 ಸರಣಿಗೆ ಇಂಗ್ಲೆಂಡ್ ತನ್ನ ತಂಡವನ್ನು ಘೋಷಿಸಿದೆ. ಜೋಸ್ ಬಟ್ಲರ್ ನಾಯಕತ್ವದಲ್ಲಿರುವ ತಂಡದಲ್ಲಿ ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಮತ್ತು ಜೋ ರೂಟ್ ಮುಂತಾದ ಪ್ರಮುಖ ಆಟಗಾರರು ಸೇರಿದ್ದಾರೆ. ಟಿ20 ಸರಣಿಯು ಜನವರಿ 22ರಿಂದ ಆರಂಭವಾಗಿ ಫೆಬ್ರವರಿ 2ರಂದು ಅಂತ್ಯಗೊಳ್ಳಲಿದೆ, ಏಕದಿನ ಸರಣಿಯು ಫೆಬ್ರವರಿ 6ರಿಂದ 12ರವರೆಗೆ ನಡೆಯಲಿದೆ.

IND vs ENG: ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ; ಏಕದಿನ, ಟಿ20 ಸರಣಿ ವೇಳಾಪಟ್ಟಿ ಹೀಗಿದೆ
ಭಾರತ- ಇಂಗ್ಲೆಂಡ್
Follow us on

ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿರುವ ಟೀಂ ಇಂಡಿಯಾ ಆ ಬಳಿಕ ಹೊಸ ವರ್ಷದಲ್ಲಿ ಅಂದರೆ 2025 ರ ಜನವರಿಯಲ್ಲಿ ಇಂಗ್ಲೆಂಡ್‌ ವಿರುದ್ಧ ಏಕದಿನ ಹಾಗೂ ಟಿ20 ಸರಣಿಯನ್ನು ಆಡಲಿದೆ. ಇಂಗ್ಲೆಂಡ್್​ನ ಭಾರತ ಪ್ರವಾಸ ಜನವರಿ 22 ರಿಂದ ಆರಂಭವಾಗಿರುವ ಟಿ20 ಸರಣಿಯೊಂದಿಗೆ ಆರಂಭವಾಗಲಿದ್ದು, ಫೆಬ್ರವರಿ 12 ರಂದು ನಡೆಯಲ್ಲಿರುವ ಕೊನೆಯ ಏಕದಿನ ಪಂದ್ಯದೊಂದಿಗೆ ಅಂತ್ಯಗೊಳ್ಳಲಿದೆ. ಆ ಬಳಿಕ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಹೀಗಾಗಿ ಭಾರತ ಪ್ರವಾಸ ಮತ್ತು ಚಾಂಪಿಯನ್ಸ್ ಟ್ರೋಫಿಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಇದೀಗ ತನ್ನ ತಂಡವನ್ನು ಘೋಷಿಸಿದೆ. ತಂಡದ ನಾಯಕತ್ವವನ್ನು ಜೋಸ್ ಬಟ್ಲರ್‌ಗೆ ಹಸ್ತಾಂತರಿಸಲಾಗಿದ್ದು, ಸ್ಟಾರ್ ಆಟಗಾರರಾದ ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಆದಿಲ್ ರಶೀದ್, ಜೋ ರೂಟ್, ಫಿಲ್ ಸಾಲ್ಟ್ ಮತ್ತು ಮಾರ್ಕ್ ವುಡ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಏಕದಿನ- ಟಿ20 ಸರಣಿ

ಭಾರತ ಮತ್ತು ಇಂಗ್ಲೆಂಡ್ ನಡುವೆ 3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಟಿ20 ಸರಣಿಯ ಮೊದಲ ಪಂದ್ಯ ಕೋಲ್ಕತ್ತಾದಲ್ಲಿ ಜನವರಿ 22 ರಂದು ನಡೆಯಲಿದೆ. ಈ ಸರಣಿಯ ಕೊನೆಯ ಪಂದ್ಯ ಫೆಬ್ರವರಿ 2 ರಂದು ಮುಂಬೈನಲ್ಲಿ ನಡೆಯಲಿದೆ. ಇದಾದ ನಂತರ ಫೆಬ್ರವರಿ 6 ರಿಂದ ಫೆಬ್ರವರಿ 12 ರವರೆಗೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಮೊದಲ ಏಕದಿನ ಪಂದ್ಯ ನಾಗ್ಪುರದಲ್ಲಿ, ಎರಡನೇ ಏಕದಿನ ಪಂದ್ಯ ಕಟಕ್‌ನಲ್ಲಿ ಮತ್ತು ಮೂರನೇ ಏಕದಿನ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ. ಆ ಬಳಿಕ ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿ ಕೂಡ ಏಕದಿನ ಮಾದರಿಯಲ್ಲಿ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಸರಣಿಯು ಉಭಯ ತಂಡಗಳಿಗೂ ಉತ್ತಮ ಅಭ್ಯಾಸವಾಗಲಿದೆ.

ಟಿ20 ಸರಣಿ ವೇಳಾಪಟ್ಟಿ

  • ಮೊದಲ ಟಿ20: 22 ಜನವರಿ – ಕೋಲ್ಕತ್ತಾ
  • ಎರಡನೇ ಟಿ20: 25 ಜನವರಿ – ಚೆನ್ನೈ
  • ಮೂರನೇ ಟಿ20: 28 ಜನವರಿ – ರಾಜ್ಕೋಟ್
  • ನಾಲ್ಕನೇ ಟಿ20: 31 ಜನವರಿ – ಪುಣೆ
  • ಐದನೇ ಟಿ20: 2 ಫೆಬ್ರವರಿ – ಮುಂಬೈ

ಏಕದಿನ ಸರಣಿ ವೇಳಾಪಟ್ಟಿ

  • ಮೊದಲ ಏಕದಿನ: 6 ಫೆಬ್ರವರಿ – ನಾಗ್ಪುರ
  • ಎರಡನೇ ಏಕದಿನ: 9 ಫೆಬ್ರವರಿ – ಕಟಕ್
  • ಮೂರನೇ ಏಕದಿನ: 12 ಫೆಬ್ರವರಿ – ಅಹಮದಾಬಾದ್

ಭಾರತ ವಿರುದ್ಧದ ಏಕದಿನ ಸರಣಿಗಾಗಿ ಇಂಗ್ಲೆಂಡ್ ತಂಡ – ಜೋಸ್ ಬಟ್ಲರ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ಜೇಮಿ ಓವರ್ಟನ್, ಜೇಮಿ ಸ್ಮಿತ್, ಲಿಯಾಮ್ ಲಿವಿಂಗ್ಸ್ಟೋನ್, ಆದಿಲ್ ರಶೀದ್, ಜೋ ರೂಟ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.

ಭಾರತ ವಿರುದ್ಧ ಟಿ20 ಸರಣಿಗಾಗಿ ಇಂಗ್ಲೆಂಡ್ ತಂಡ – ಜೋಸ್ ಬಟ್ಲರ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೇಡೆನ್ ಕಾರ್ಸೆ, ಬೆನ್ ಡಕೆಟ್, ಜೇಮಿ ಓವರ್ಟನ್, ಜೇಮಿ ಸ್ಮಿತ್, ಲಿಯಾಮ್ ಲಿವಿಂಗ್ಸ್ಟೋನ್, ಆದಿಲ್ ರಶೀದ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ