IND vs ZIM: ಇಂದು ಭಾರತ-ಜಿಂಬಾಬ್ವೆ ದ್ವಿತೀಯ ಏಕದಿನ: ಈ ಆಟಗಾರ ಕಣಕ್ಕಿಳಿಯುವುದು ಅನುಮಾನ

| Updated By: Vinay Bhat

Updated on: Aug 20, 2022 | 7:41 AM

Zimbabwe vs India: ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್​ಗಳ ಅಮೋಘ ಗೆಲುವು ಕಂಡಿದ್ದ ಟೀಮ್ ಇಂಡಿಯಾ (Team India) ಇಂದು ಹರಾರೆ ಸ್ಪೋರ್ಟ್ಸ್ ಕ್ಲಬ್​ನಲ್ಲಿ ಎರಡನೇ ಏಕದಿನ ಆಡಲಿದೆ.

IND vs ZIM: ಇಂದು ಭಾರತ-ಜಿಂಬಾಬ್ವೆ ದ್ವಿತೀಯ ಏಕದಿನ: ಈ ಆಟಗಾರ ಕಣಕ್ಕಿಳಿಯುವುದು ಅನುಮಾನ
IND vs ZIM 2nd ODI
Follow us on

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯನ್ನು ಭರ್ಜರಿಯಾಗಿ ಶುಭಾರಂಭ ಮಾಡಿದ್ದ ಭಾರತ (India vs Zimbabwe) ಕ್ರಿಕೆಟ್ ತಂಡ ಇದೀಗ ದ್ವಿತೀಯ ಪಂದ್ಯಕ್ಕೆ ಸಜ್ಜಾಗುತ್ತಿದೆ. ಮೊದಲ ಪಂದ್ಯದಲ್ಲಿ 10 ವಿಕೆಟ್​ಗಳ ಅಮೋಘ ಗೆಲುವು ಕಂಡಿದ್ದ ಟೀಮ್ ಇಂಡಿಯಾ (Team India) ಇಂದು ಹರಾರೆ ಸ್ಪೋರ್ಟ್ಸ್ ಕ್ಲಬ್​ನಲ್ಲಿ ಎರಡನೇ ಏಕದಿನ ಆಡಲಿದೆ. 1-0 ಮುನ್ನಡೆ ಪಡೆದುಕೊಂಡಿರುವ ಕೆಎಲ್ ರಾಹುಲ್ (KL Rahul) ಪಡೆ ಇಂದಿನ ಪಂದ್ಯಕೂಡ ಗೆದ್ದರೆ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಲಿದೆ. ಅಲ್ಲದೆ ನಾಯಕನಾಗಿ ರಾಹುಲ್​ಗೆ ಇದು ಚೊಚ್ಚಲ ಸರಣಿ ಗೆಲುವಾಗಲಿದೆ. ಆದರೆ, ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಶಿಖರ್ ಧವನ್ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ.

ಮೊದಲ ಏಕದಿನ ಪಂದ್ಯದ ವೇಳೆ ಶಿಖರ್ ಧವನ್ ಅವರ ಎಡಗೈಗೆ ಚೆಂಡು ಬಡಿದು ಗಾಯವಾಗಿತ್ತು. ಅದೊಂದು ವೇಳೆ ಗಂಭೀರವಾಗಿದ್ದರೆ ಈ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ. ಆಗ ಶುಭ್ಮನ್ ಗಿಲ್ ಜೊತೆಗೆ ಕೆಎಲ್ ರಾಹುಲ್ ಅಥವಾ ಸಂಜು ಸ್ಯಾಮ್ಸನ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಧವನ್ ಸ್ಥಾನವನ್ನು ರಾಹುಲ್ ತ್ರಿಪಾಠಿ ತುಂಬಬಹುದು. ಕಳೆದ ಪಂದ್ಯದಲ್ಲಿ ಧವನ್ಗಿಲ್ ಬಿಟ್ಟರೆ ಉಳಿದ ಯಾವ ಬ್ಯಾಟರ್​ಗೂ ಅವಕಾಶ ಸಿಗಲಿಲ್ಲ. ಹೀಗಾಗಿ ಇಂದು ಟಾಸ್ ಗೆದ್ದರೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೂ ಅಚ್ಚರಿಯಿಲ್ಲ.

ಭಾರತದ ಬೌಲಿಂಗ್ ಬಲಿಷ್ಠವಾಗಿದೆ. ದೀರ್ಘ ಕಾಲದ ನಂತರ ಕಣಕ್ಕೆ ಮರಳಿರುವ ಬೌಲರ್ ದೀಪಕ್ ಚಹರ್ ಮೊದಲ ಪಂದ್ಯದಲ್ಲೇ ಮಾರಕ ದಾಳಿ ಸಂಘಟಿಸಿದರು. ಏಳು ಓವರ್‌ ಬೌಲಿಂಗ್ ಮಾಡಿ ಮೂರು ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಕೂಡ ಬಾಚಿಕೊಂಡರು. ಪ್ರಸಿದ್ಧ ಕೃಷ್ಣ ಕೂಡ ಮೂರು ವಿಕೆಟ್ ಕಬಳಿಸಿದ್ದರು. ಕುಲ್ದೀಪ್ಅಕ್ಷರ್ ಸ್ಪಿನ್ ಮೋಡಿ ಕೂಡ ವರ್ಕ್ ಆಗಿತ್ತು.

ಇದನ್ನೂ ಓದಿ
ENG vs SA: ಆಂಗ್ಲರ ಸೊಕ್ಕು ಮುರಿದ ಆಫ್ರಿಕಾ; ಲಾರ್ಡ್ಸ್‌ನಲ್ಲಿ ಇನ್ನಿಂಗ್ಸ್ ಸೋಲುಂಡ ಬೆನ್​​ ಸ್ಟೋಕ್ಸ್ ಪಡೆ
IND Vs ZIM 2nd ODI: ಸರಣಿ ಗೆದ್ದು ಇತಿಹಾಸ ಸೃಷ್ಟಿಸುವ ತವಕದಲ್ಲಿ ರಾಹುಲ್ ಪಡೆ; ಪಂದ್ಯ ಆರಂಭ ಎಷ್ಟು ಗಂಟೆಗೆ?
IND vs ENG: ಇಂಗ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ಅನುಭವಿ ಬೌಲರ್​ಗೆ ತಂಡದಲ್ಲಿ ಸ್ಥಾನ
36ನೇ ವಯಸ್ಸಿನಲ್ಲೂ ಎಂಥಾ ಫೀಲ್ಡಿಂಗ್! ಒನ್ ಹ್ಯಾಂಡೆಡ್ ಕ್ಯಾಚ್​ಗೆ ಇಡೀ ಲಾರ್ಡ್ಸ್‌ ಮೈದಾನವೇ ಸ್ಟನ್

ಇತ್ತ ರೆಗಿಸ್ ಚಕಾಬ್ವಾ ನಾಯಕತ್ವದ ಜಿಂಬಾಬ್ವೆ ತಂಡವು ರಾಹುಲ್ ಬಳಗದ ಬ್ಯಾಟರ್‌ಗಳಿಗೆ ಹಾಗೂ ಬೌಲಿಂಗ್ ಪಡೆಯನ್ನು ಎಚ್ಚರಿಕೆಯಿಂದ ಎದುರಿಸಿದರೆ ಮಾತ್ರ ಗೆಲುವಿನ ಕನಸು ಕಾಣಬಹುದು. ಜಿಂಬಾಬ್ವೆ ತಂಡ ಏಕದಿನ ಮತ್ತು ಟಿ20 ಸರಣಿಯಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ್ದು ಮರೆಯುವಂತಿಲ್ಲ. ಸಿಕಂದರ್ ರಾಝಾ ತಂಡಕ್ಕೆ ಆಸರೆಯಾಗಿ, ಇನ್ನೋಸೆಂಟ್ ಕೈಯಾ ಮತ್ತು ರಿಯಾನ್ ಬರ್ಲ್ ಅವರಂತಹವರು ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಿದರೆ ಭಾರತಕ್ಕೆ ಜಯ ಸುಲಭವಿಲ್ಲ.

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿರುವ ಪಿಚ್ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಸಮತೋಲಿತವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ವೇಗಿಗಳು ಹೆಚ್ಚುವರಿ ಬೌನ್ಸ್ ಪಡೆಯುವ ಸಾಧ್ಯತೆಯಿದೆ. ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ ಕೇವಲ 200 ರನ್ ಮತ್ತು 2ನೇ ಬ್ಯಾಟಿಂಗ್​ ಮಾಡುವ ತಂಡಕ್ಕೆ ಪಿಚ್​ ಹೆಚ್ಚು ಸಹಾಯಕವಾಗಿರಲಿದೆ. ಹೀಗಾಗಿ ಟಾಸ್​ ಗೆದ್ದ ತಂಡ ಏನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಭಾರತ ಮತ್ತು ಜಿಂಬಾಬ್ವೆ ನಡುವಿನ ಎರಡನೇ ಏಕದಿನ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12:45ಕ್ಕೆ ಪ್ರಾರಂಭವಾಗಲಿದೆ. ಸೋನಿ ಚಾನೆಲ್​ (Sony Sports Network) ಲೈವ್ ಟೆಲಿಕಾಸ್ಟ್ ಮಾಡಲಿದೆ. ಹಾಗೆಯೇ ಸೋನಿ ಲೈವ್ ಆ್ಯಪ್​ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.

ಭಾರತದ ಸಂಭಾವ್ಯ XI: ಶುಭ್ಮನ್ ಗಿಲ್, ಕೆಎಲ್ ರಾಹುಲ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ಅಕ್ಷರ್ ಪಟೇಲ್, ದೀಪಕ್ ಚಾಹರ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್.