AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ಜೋಹಾನ್ಸ್‌ಬರ್ಗ್‌ ಟೆಸ್ಟ್ ಗೆದ್ದು ಸರಣಿಯನ್ನು 1-1 ರಿಂದ ಸಮಬಲಗೊಳಿಸಿದ ದಕ್ಷಿಣ ಆಫ್ರಿಕಾ

IND vs SA: ಸೆಂಚುರಿಯನ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ನಂತರ ಟೀಮ್ ಇಂಡಿಯಾ ಜೋಹಾನ್ಸ್‌ಬರ್ಗ್‌ನಲ್ಲಿ ಸರಣಿ ಗೆಲ್ಲುವ ದೊಡ್ಡ ಅವಕಾಶವನ್ನು ಕಳೆದುಕೊಂಡಿತು. ಜೋಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಅಮೋಘ ಆಟ ಪ್ರದರ್ಶಿಸಿ ಭಾರತ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು

IND vs SA: ಜೋಹಾನ್ಸ್‌ಬರ್ಗ್‌ ಟೆಸ್ಟ್ ಗೆದ್ದು ಸರಣಿಯನ್ನು 1-1 ರಿಂದ ಸಮಬಲಗೊಳಿಸಿದ ದಕ್ಷಿಣ ಆಫ್ರಿಕಾ
ನಾಯಕ ಎಲ್ಗರ್
TV9 Web
| Edited By: |

Updated on:Jan 06, 2022 | 9:35 PM

Share

ಸೆಂಚುರಿಯನ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ನಂತರ ಟೀಮ್ ಇಂಡಿಯಾ ಜೋಹಾನ್ಸ್‌ಬರ್ಗ್‌ನಲ್ಲಿ ಸರಣಿ ಗೆಲ್ಲುವ ದೊಡ್ಡ ಅವಕಾಶವನ್ನು ಕಳೆದುಕೊಂಡಿತು. ಜೋಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಅಮೋಘ ಆಟ ಪ್ರದರ್ಶಿಸಿ ಭಾರತ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ದಕ್ಷಿಣ ಆಫ್ರಿಕಾದ ಈ ಗೆಲುವಿನೊಂದಿಗೆ ಸರಣಿ 1-1 ಅಂತರದಲ್ಲಿ ಸಮಬಲ ಸಾಧಿಸಿದೆ. ಇದೀಗ ಕೇಪ್‌ಟೌನ್‌ನಲ್ಲಿ ನಡೆಯಲಿರುವ ಮೂರನೇ ಹಾಗೂ ಕೊನೆಯ ಟೆಸ್ಟ್‌ನಲ್ಲಿ ಸರಣಿ ವಿಜೇತರನ್ನು ನಿರ್ಧರಿಸಲಾಗುತ್ತದೆ. ದಕ್ಷಿಣ ಆಫ್ರಿಕಾದ ಗೆಲುವಿನಲ್ಲಿ ನಾಯಕ ಡೀನ್ ಎಲ್ಗರ್ ದೊಡ್ಡ ಕೊಡುಗೆ ನೀಡಿದರು. ಇವರ ಹೊರತಾಗಿ ರೆಸಿ ವಾನ್ ಡೆರ್ ಡಸ್ಸೆ ಕೂಡ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಎಲ್ಗರ್ ಅಜೇಯ 96 ರನ್ ಗಳಿಸಿದರೆ, ಡ್ಯೂಸ್ 40 ರನ್ ಗಳಿಸಿದರು.

ನಾಲ್ಕನೇ ದಿನ ಭಾರತದ ಬೌಲರ್‌ಗಳು ಅತ್ಯಂತ ಕಳಪೆ ಪ್ರದರ್ಶನ ನೀಡಿದರು. ಬೌನ್ಸರ್ ಎಸೆದು ಬುಮ್ರಾ, ಸಿರಾಜ್, ಶಮಿ 3 ಬೌಂಡರಿಗಳನ್ನು ನೀಡಿದರು. ಭಾರತ ತಂಡವು 16 ರನ್ ವೈಡ್​ನಿಂದ ನೀಡಿತು, ಇದು 240 ರನ್‌ಗಳ ಗುರಿಯ ಪ್ರಕಾರ ತುಂಬಾ ಕೆಟ್ಟದಾಗಿದೆ. ಬೌಲರ್ ಸ್ನೇಹಿ ಪಿಚ್‌ನಲ್ಲಿ ಬುಮ್ರಾ 70 ರನ್ ಬಿಟ್ಟುಕೊಟ್ಟರು ಮತ್ತು ಅವರು ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಸಿರಾಜ್ ಸಂಪೂರ್ಣವಾಗಿ ಫಿಟ್ ಆಗಿರಲಿಲ್ಲ, ಇದರಿಂದಾಗಿ ಟೀಂ ಇಂಡಿಯಾ ಸೋಲಬೇಕಾಯಿತು.

ನಾಲ್ಕನೇ ದಿನ ಭಾರತದ ಬೌಲರ್‌ಗಳು ನಿರಾಸೆ ಮೂಡಿಸಿದರು ನಾಲ್ಕನೇ ದಿನ ಮಳೆಯೊಂದಿಗೆ ಆರಂಭವಾಯಿತು. ಜೋಹಾನ್ಸ್‌ಬರ್ಗ್‌ನ ಮಳೆಗೆ ಮೊದಲ ಎರಡು ಸೆಷನ್‌ ಆಟ ಕೊಚ್ಚಿಕೊಂಡು ಹೋಯಿತು. ಆದರೆ ಪಂದ್ಯ ಪ್ರಾರಂಭವಾದಾಗ, ದಕ್ಷಿಣ ಆಫ್ರಿಕಾ ಅದ್ಭುತ ಆಟ ಪ್ರದರ್ಶಿಸಿತು. ಡೀನ್ ಎಲ್ಗರ್ ಬಂಡೆಯಂತೆ ವಿಕೆಟ್ ಮೇಲೆ ನಿಂತರು ಮತ್ತು ಅವರೊಂದಿಗೆ ರೆಸಿ ವ್ಯಾನ್ ಡೆರ್ ಡಸ್ಸೆ ಆಕ್ರಮಣಕಾರಿ ರೀತಿಯಲ್ಲಿ ಬ್ಯಾಟಿಂಗ್ ಮಾಡಿದರು. ಇಬ್ಬರೂ ತಮ್ಮ ಅರ್ಧಶತಕದ ಜೊತೆಯಾಟವನ್ನು ಪೂರ್ಣಗೊಳಿಸಿದರು. ಮೂರನೇ ವಿಕೆಟ್‌ಗೆ 82 ರನ್‌ಗಳನ್ನು ಸೇರಿಸಿದಾಗ, ಟೀಂ ಇಂಡಿಯಾ ಪಂದ್ಯದಿಂದಲೇ ಹೊರಹಾಕಲ್ಪಟ್ಟಿತು. ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಅಮೋಘ ಬ್ಯಾಟಿಂಗ್‌ನಲ್ಲಿ ಅರ್ಧಶತಕ ಗಳಿಸಿದರು. ಎಲ್ಗರ್ 131 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಶಮಿ ವೈಯಕ್ತಿಕ ಸ್ಕೋರ್ 40 ರಲ್ಲಿ ಡ್ಯೂಸ್ ಅನ್ನು ಔಟ್ ಮಾಡಿದರು ಆದರೆ ನಂತರ ಟೆಂಬಾ ಬವುಮಾ ಕೂಡ ಅದ್ಭುತವಾಗಿ ಬ್ಯಾಟ್ ಮಾಡಿದರು. ಎಲ್ಗಾನ್ ಮತ್ತು ಬವುಮಾ 68 ರನ್‌ಗಳ ಅಜೇಯ ಜೊತೆಯಾಟ ನಡೆಸಿ ದಕ್ಷಿಣ ಆಫ್ರಿಕಾಕ್ಕೆ ಜಯ ತಂದುಕೊಟ್ಟರು.

ಭಾರತ ಮೊದಲ ಬಾರಿಗೆ ಜೋಹಾನ್ಸ್‌ಬರ್ಗ್‌ನಲ್ಲಿ ಟೆಸ್ಟ್‌ ಸೋತಿದೆ ಜೋಹಾನ್ಸ್‌ಬರ್ಗ್‌ನಲ್ಲಿ ಸೋಲಿನೊಂದಿಗೆ, ಭಾರತ ಇದೇ ಮೈದಾನದಲ್ಲಿ ಮೊದಲ ಬಾರಿಗೆ ಪಂದ್ಯವನ್ನು ಕಳೆದುಕೊಂಡಿತು. ಭಾರತ ಈ ಮೈದಾನದಲ್ಲಿ 5 ಪಂದ್ಯಗಳಲ್ಲಿ 2 ರಲ್ಲಿ ಗೆದ್ದಿತು ಮತ್ತು 3 ಡ್ರಾ ಆದರೆ ಆರನೇ ಪಂದ್ಯದಲ್ಲಿ ಸೋತಿತು. ಇದು ಭಾರತದ ವಿರುದ್ಧ ದಕ್ಷಿಣ ಆಫ್ರಿಕಾದ ಐತಿಹಾಸಿಕ ಗೆಲುವು. ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ಅತಿ ದೊಡ್ಡ ಟೆಸ್ಟ್ ಗುರಿ ಸಾಧಿಸಿದೆ. ಕೇವಲ ಎರಡು ತಂಡಗಳು ಭಾರತದ ವಿರುದ್ಧ 240 ಕ್ಕಿಂತ ಹೆಚ್ಚಿನ ಗುರಿಯನ್ನು ಸಾಧಿಸಲು ಸಮರ್ಥವಾಗಿವೆ. 1977ರಲ್ಲಿ ಆಸ್ಟ್ರೇಲಿಯಾ ಮತ್ತು 1987ರಲ್ಲಿ ವೆಸ್ಟ್ ಇಂಡೀಸ್ ಈ ಸಾಧನೆ ಮಾಡಿತ್ತು.

Published On - 9:31 pm, Thu, 6 January 22