India Playing 11 vs Eng, 1st ODI: ಮೊದಲ ಏಕದಿನ ಕದನಕ್ಕೆ ಭಾರತ ರೆಡಿ; ತಂಡದ ಸಂಭಾವ್ಯ XI ಹೀಗಿದೆ

| Updated By: ಪೃಥ್ವಿಶಂಕರ

Updated on: Jul 11, 2022 | 6:03 PM

India Playing 11 vs Eng, 1st ODI: ಏಕದಿನ ಮಾದರಿಯಲ್ಲಿ ಟೀಂ ಇಂಡಿಯಾದ ಆರಂಭಿಕ ಜೋಡಿ ಬದಲಾಗಲಿದೆ. ಫೆಬ್ರವರಿ ನಂತರ ಮೊದಲ ಬಾರಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಆಡಲು ಹೋಗುವ ರೋಹಿತ್ ಶರ್ಮಾ ಜೊತೆ ಶಿಖರ್ ಧವನ್ ಓಪನಿಂಗ್ ಮಾಡಲಿದ್ದಾರೆ.

India Playing 11 vs Eng, 1st ODI: ಮೊದಲ ಏಕದಿನ ಕದನಕ್ಕೆ ಭಾರತ ರೆಡಿ; ತಂಡದ ಸಂಭಾವ್ಯ XI ಹೀಗಿದೆ
ಟೀಂ ಇಂಡಿಯಾ
Follow us on

T20 ಸರಣಿಯಲ್ಲಿ ಭಾರತ, ಇಂಗ್ಲೆಂಡ್ ತಂಡವನ್ನು ಮಣಿಸಿ ಸರಣಿ ತನ್ನದಾಗಿಸಿಕೊಂಡಿತು. ತಂಡ 2-1 ಅಂತರದಲ್ಲಿ ಸರಣಿ ಗೆದ್ದುಕೊಂಡಿದ್ದು, ಇದೀಗ ಏಕದಿನ ಸರಣಿಯ ಸರದಿ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಮಂಗಳವಾರ ಓವಲ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡುವುದು ಟೀಂ ಇಂಡಿಯಾ ಗುರಿಯಾಗಿದೆ. ಸದ್ಯಕ್ಕೆ ಟೀಂ ಇಂಡಿಯಾ (Team India)ದ ಗಮನವು ಟಿ20 ವಿಶ್ವಕಪ್ ಮೇಲಿರುವುದು ನಿಜ, ಆದರೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೂ ಹೆಚ್ಚಿನ ಮಹತ್ವವಿದೆ. ತವರಿನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಗೆಲುವಿನ ಓಟವನ್ನು ಕಾಯ್ದುಕೊಳ್ಳಲು ತಂಡ ಬಯಸುತ್ತದೆ. ಈಗ ಪ್ರಶ್ನೆ ಏನೆಂದರೆ, ಗೆಲುವಿನ ಓಟವನ್ನು ಕಾಯ್ದುಕೊಳ್ಳಲು ರೋಹಿತ್ ಶರ್ಮಾ (Rohit Sharma) ಯಾವ ತಂಡವನ್ನು ಕಣಕ್ಕಿಳಿಸುತ್ತಾರೆ?

ಆರಂಭಿಕ ಜೋಡಿ ಬದಲಾಗುತ್ತದೆ

ಏಕದಿನ ಮಾದರಿಯಲ್ಲಿ ಟೀಂ ಇಂಡಿಯಾದ ಆರಂಭಿಕ ಜೋಡಿ ಬದಲಾಗಲಿದೆ. ಫೆಬ್ರವರಿ ನಂತರ ಮೊದಲ ಬಾರಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಆಡಲು ಹೋಗುವ ರೋಹಿತ್ ಶರ್ಮಾ ಜೊತೆ ಶಿಖರ್ ಧವನ್ ಓಪನಿಂಗ್ ಮಾಡಲಿದ್ದಾರೆ. ಈಗ ಶಿಖರ್ ಧವನ್ ಏಕದಿನ ತಂಡಕ್ಕೆ ಮಾತ್ರ ಆಯ್ಕೆಯಾಗಿದ್ದಾರೆ. ಅದಕ್ಕಾಗಿಯೇ ಅವರು ಬಹಳ ಸಮಯದ ನಂತರ ಟೀಮ್ ಇಂಡಿಯಾದ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ . ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ನಾಯಕರೂ ಆಗಿರುವ ಕಾರಣ ಧವನ್ ಮೇಲೆ ಎಲ್ಲರೂ ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ
ಚಿನ್ನ ಸೇರಿದಂತೆ 3 ಪದಕ! ಫಿನ್​ಲ್ಯಾಂಡ್​ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ 94 ವರ್ಷದ ಅಜ್ಜಿ
IND vs ENG: ಸೂರ್ಯ ಮುಳುಗದ ನಾಡಿನಲ್ಲಿ ದಾಖಲೆಗಳ ಮಳೆ ಸುರಿಸಿದ ಸೂರ್ಯ..!
Wimbledon 2022: ಸತತ ನಾಲ್ಕನೇ ಬಾರಿಗೆ ಚಾಂಪಿಯನ್; 21 ನೇ ಗ್ರ್ಯಾಂಡ್ ಸ್ಲಾಮ್ ಗೆದ್ದ ನೊವಾಕ್ ಜೊಕೊವಿಕ್..!

ವಿರಾಟ್ ಕೊಹ್ಲಿ ಮೇಲೆ ಕಣ್ಣು

ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಈಗ ದೊಡ್ಡ ಸಮಸ್ಯೆಯಾಗಿದೆ. ಟಿ20 ಸರಣಿಯ ಎರಡೂ ಪಂದ್ಯಗಳಲ್ಲಿ ಫ್ಲಾಪ್ ಆಗಿದ್ದ ವಿರಾಟ್ ತಮ್ಮ ನೆಚ್ಚಿನ ಸ್ವರೂಪದಲ್ಲಿ ಫಾರ್ಮ್​ಗೆ ಮರಳಲು ಪ್ರಯತ್ನಿಸಲಿದ್ದಾರೆ. ವಿರಾಟ್ ಕೊಹ್ಲಿ ಅವರ ಏಕದಿನ ದಾಖಲೆ ಅದ್ಭುತವಾಗಿದ್ದು, ಅವರ ಬ್ಯಾಟ್ ಇಂಗ್ಲೆಂಡ್ ವಿರುದ್ಧವೂ ರನ್ ಸಿಡಿಸಿದೆ. ಇದಲ್ಲದೇ ಸೂರ್ಯಕುಮಾರ್ ಯಾದವ್ ಮೇಲೆ ಮತ್ತೊಮ್ಮೆ ಕಣ್ಣು ನೆಟ್ಟಿದೆ. ನಾಟಿಂಗ್ ಹ್ಯಾಮ್ ಟಿ20ಯಲ್ಲಿ ಶತಕ ಸಿಡಿಸಿದ್ದ ಸೂರ್ಯ, ಏಕದಿನ ಸರಣಿಯಲ್ಲೂ ಅದ್ಭುತ ಪ್ರದರ್ಶನ ನೀಡುವ ನಿರೀಕ್ಷೆ ಇದೆ. ಇದಲ್ಲದೇ ಹಾರ್ದಿಕ್ ಪಾಂಡ್ಯ ಏಕದಿನ ತಂಡಕ್ಕೆ ಮರಳಲಿದ್ದು, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಕೂಡ ಆಡುವ XI ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಟೀಮ್ ಇಂಡಿಯಾದ ಸಂಭಾವ್ಯ ಆಟಗಾರರ XI – ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ / ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಹಾಲ್.