Wimbledon 2022: ಸತತ ನಾಲ್ಕನೇ ಬಾರಿಗೆ ಚಾಂಪಿಯನ್; 21 ನೇ ಗ್ರ್ಯಾಂಡ್ ಸ್ಲಾಮ್ ಗೆದ್ದ ನೊವಾಕ್ ಜೊಕೊವಿಕ್..!

Wimbledon 2022: ಸರ್ಬಿಯಾದ ಸೂಪರ್ ಸ್ಟಾರ್ ನೊವಾಕ್ ಜೊಕೊವಿಕ್ ಮತ್ತೊಮ್ಮೆ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ. ಮೊದಲ ಶ್ರೇಯಾಂಕದ ಜೊಕೊವಿಕ್ 4-6, 6-2, 6-4, 7-6 ರಲ್ಲಿ ಆಸ್ಟ್ರೇಲಿಯಾದ ನಿಕ್ ಕೀರಿಯೊಸ್ ಅವರನ್ನು 4 ಸೆಟ್‌ಗಳ ಪಂದ್ಯದಲ್ಲಿ ಸೋಲಿಸಿದರು.

Wimbledon 2022: ಸತತ ನಾಲ್ಕನೇ ಬಾರಿಗೆ ಚಾಂಪಿಯನ್; 21 ನೇ ಗ್ರ್ಯಾಂಡ್ ಸ್ಲಾಮ್ ಗೆದ್ದ ನೊವಾಕ್ ಜೊಕೊವಿಕ್..!
Follow us
TV9 Web
| Updated By: ಪೃಥ್ವಿಶಂಕರ

Updated on:Jul 10, 2022 | 11:24 PM

ಕಡಿಮೆ ಮಾತು, ಹೆಚ್ಚು ಕೆಲಸ. ನೊವಾಕ್ ಜೊಕೊವಿಕ್ (Novak Djokovic) ವಿಷಯದಲ್ಲೂ ಹಾಗೆಯೇ. ಸರ್ಬಿಯಾದ ಸೂಪರ್ ಸ್ಟಾರ್ ನೊವಾಕ್ ಜೊಕೊವಿಕ್ ಮತ್ತೊಮ್ಮೆ ವಿಂಬಲ್ಡನ್ (Wimbledon 2022) ಚಾಂಪಿಯನ್ ಆಗಿದ್ದಾರೆ. ಮೊದಲ ಶ್ರೇಯಾಂಕದ ಜೊಕೊವಿಕ್ 4-6, 6-2, 6-4, 7-6 ರಲ್ಲಿ ಆಸ್ಟ್ರೇಲಿಯಾದ ನಿಕ್ ಕೀರಿಯೊಸ್ ಅವರನ್ನು 4 ಸೆಟ್‌ಗಳ ಪಂದ್ಯದಲ್ಲಿ ಸೋಲಿಸಿದರು. ಇದರೊಂದಿಗೆ ಜೊಕೊವಿಕ್ ವಿಂಬಲ್ಡನ್‌ನಲ್ಲಿ ಏಳನೇ ಬಾರಿಗೆ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದರು. ಈ ಅತಿದೊಡ್ಡ ಗ್ರಾಸ್ ಕೋರ್ಟ್ ಪಂದ್ಯಾವಳಿಯಲ್ಲಿ, ಜೊಕೊವಿಕ್ 2018 ರಿಂದ ಸೋತಿಲ್ಲ. ಆ ಮೂಲಕ ಅವರ ನಾಲ್ಕನೇ ಸತತ ಪ್ರಶಸ್ತಿಯನ್ನು ಗೆದ್ದರು.

ನಿಕ್ ಕಿರ್ಗಿಯೋಸ್ ಮೊದಲ ಸೆಟ್‌ನಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ 6-4 ಅಂತರದಲ್ಲಿ ಗೆಲುವು ಸಾದಿಸಿದರು. ನೊವಾಕ್ ಈ ಹಿಂದೆ ನಿಕ್ ಕಿರ್ಗಿಯೋಸ್ ವಿರುದ್ಧ ಎರಡು ಬಾರಿ ಮಾತ್ರ ಆಡಿದ್ದರು. ಕಿರ್ಗಿಯೋಸ್ ಇತ್ತೀಚೆಗೆ ಹುಲ್ಲು ಅಂಕಣದಲ್ಲಿ ಎರಡು ಪಂದ್ಯಾವಳಿಗಳಲ್ಲಿ ಸೆಮಿಫೈನಲ್ ತಲುಪಿದರು. ಈ ಅಂಕಿಅಂಶಗಳು ಅಥವಾ ಸಂದರ್ಭಗಳಿಂದ ಜೊಕೊವಿಕ್ ಒತ್ತಡಕ್ಕೆ ಒಳಗಾಗಿರಲಿಲ್ಲ. ಎರಡನೇ ಸೆಟ್‌ನಲ್ಲಿ ಲಯಕಂಡುಕೊಂಡ ನೊವಾಕ್ 6-3 ರಿಂದ ಎರಡನೇ ಸೆಟ್‌ ಗೆದ್ದುಕೊಂಡರು. ನಂತರದ ಸೆಟ್ಟನ್ನೂ ನೊವಾಕ್ 6-4ರಲ್ಲಿ ಗೆಂದುಕೊಂಡರು. ನೊವಾಕ್ ನಂತರ ಟೈಬ್ರೇಕರ್‌ನಲ್ಲಿ ನಾಲ್ಕನೇ ಸೆಟ್ ಅನ್ನು 6-7 (6-3) ರಿಂದ ಗೆದ್ದರು. ಮೊದಲ ಸೆಟ್‌ನಲ್ಲಿ ಹಿನ್ನಡೆ ಕಂಡರೂ ಛಲಬಿಡದ ನೊವಾಕ್ ಪ್ರಶಸ್ತಿ ಕಳೆದುಕೊಳ್ಳಲಿಲ್ಲ. ಕೊನೆಯಲ್ಲಿ 4-6, 6-3, 6-4, 6-7 (6-3) ಸೆಟ್‌ಗಳಿಂದ ನೊವಾಕ್ ಜಯಗಳಿಸಿ ಇತಿಹಾಸ ನಿರ್ಮಿಸಿದರು.

ಚಾಂಪಿಯನ್ ಆದ ಬಳಿಕ ಗ್ಯಾಲರಿಯತ್ತ ಓಡಿದ ನೋವಾಕ್, ಗ್ಯಾಲರಿಯಲ್ಲಿ ಕುಳಿತಿದ್ದ ತನ್ನ ಮಡದಿ ಹಾಗೂ ಪೋಷಕರನ್ನು ತಬ್ಬಿಕೊಂಡು ಹರ್ಷ ವ್ಯಕ್ತಪಡಿಸಿದರು, ನಂತರ ಕೋರ್ಟ್​ಗೆ ಬಂದ ನೊವಾಕ್ ದಾಖಲೆಯ ಟ್ರೋಪಿ ಎತ್ತಿಹಿಡಿದು ಸಂಭ್ರಮಿಸಿದರು.

Published On - 10:59 pm, Sun, 10 July 22