IND vs SA: ಟೀಮ್ ಇಂಡಿಯಾದಿಂದ ಇಬ್ಬರನ್ನು ಕೈಬಿಡುವ ಸಾಧ್ಯತೆ..!

| Updated By: ಝಾಹಿರ್ ಯೂಸುಫ್

Updated on: Jun 13, 2022 | 6:01 PM

India Playing XI vs SA: ಐಪಿಎಲ್​ನಲ್ಲಿ 27 ವಿಕೆಟ್ ಉರುಳಿಸಿ ಮಿಂಚಿದ್ದ ಚಹಾಲ್, ಸೌತ್ ಆಫ್ರಿಕಾ ವಿರುದ್ದ ಸ್ಪಿನ್ ಮೋಡಿ ಮಾಡುವಲ್ಲಿ ಎಡವುತ್ತಿದ್ದಾರೆ. ಚಹಾಲ್ ದಕ್ಷಿಣ ಆಫ್ರಿಕಾ ಪರ ಮೊದಲ 2 ಟಿ20 ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಪಡೆಯಲು ಶಕ್ತರಾಗಿದ್ದರು. ಇ

IND vs SA: ಟೀಮ್ ಇಂಡಿಯಾದಿಂದ ಇಬ್ಬರನ್ನು ಕೈಬಿಡುವ ಸಾಧ್ಯತೆ..!
Team India
Follow us on

ಭಾರತ-ಸೌತ್ ಆಫ್ರಿಕಾ (India vs South Africa 3rd T20) ನಡುವಣ ಮೂರನೇ ಟಿ20 ಪಂದ್ಯ ಮಂಗಳವಾರ ನಡೆಯಲಿದೆ. ಈ ಪಂದ್ಯವು ಟೀಮ್ ಇಂಡಿಯಾ (Team India) ಪಾಲಿಗೆ ನಿರ್ಣಾಯಕವಾಗಿದ್ದು, ಇದರಲ್ಲಿ ಗೆಲ್ಲುವ ಮೂಲಕ ಸರಣಿಯನ್ನು ಜೀವಂತವಿರಿಸಿಕೊಳ್ಳಬಹುದು. ಒಂದು ವೇಳೆ ಸೋತರೆ 3-0 ಅಂತರದಿಂದ ಸರಣಿ ಸೌತ್ ಆಫ್ರಿಕಾ ವಶವಾಗಲಿದೆ. ಹೀಗಾಗಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಬೇಕಾದ ಅನಿವಾರ್ಯತೆ. ಆದರೆ ಮೊದಲ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ಕಳಪೆ ಪ್ರದರ್ಶನ ನೀಡಿದ್ದ ಆಟಗಾರರನ್ನು ನಿರ್ಣಾಯಕ ಪಂದ್ಯದಿಂದ ಕೈಬಿಡುವುದು ಬಹುತೇಕ ಖಚಿತ ಎನ್ನಬಹುದು. ಅದರಲ್ಲೂ ಟೀಮ್ ಇಂಡಿಯಾ ಬೌಲಿಂಗ್ ವಿಭಾಗವು ಪರಿಣಾಮಕಾರಿಯಾಗಿಲ್ಲ. ತಂಡದ ಸ್ಪಿನ್ ಅಸ್ತ್ರಗಳಾಗಿ ಆಯ್ಕೆಯಾಗಿರುವ ಯುಜ್ವೇಂದ್ರ ಚಹಾಲ್ (Yuzvendra Chahal) ಹಾಗೂ ಅಕ್ಷರ್ ಪಟೇಲ್ (Axar Patel) ದುಬಾರಿಯಾಗಿದ್ದಾರೆ.

ಐಪಿಎಲ್​ನಲ್ಲಿ 27 ವಿಕೆಟ್ ಉರುಳಿಸಿ ಮಿಂಚಿದ್ದ ಚಹಾಲ್, ಸೌತ್ ಆಫ್ರಿಕಾ ವಿರುದ್ದ ಸ್ಪಿನ್ ಮೋಡಿ ಮಾಡುವಲ್ಲಿ ಎಡವುತ್ತಿದ್ದಾರೆ. ಚಹಾಲ್ ದಕ್ಷಿಣ ಆಫ್ರಿಕಾ ಪರ ಮೊದಲ 2 ಟಿ20 ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಪಡೆಯಲು ಶಕ್ತರಾಗಿದ್ದರು. ಇನ್ನು 6 ಓವರ್‌ಗಳಲ್ಲಿ ನೀಡಿದ್ದು ಬರೋಬ್ಬರಿ 75 ರನ್‌ಗಳು. ಅಂದರೆ, ಪ್ರತಿ ಓವರ್‌ನಲ್ಲಿ 12ಕ್ಕೂ ಹೆಚ್ಚು ರನ್ ನೀಡಿದ್ದಾರೆ. ಅದರಲ್ಲೂ ಕಟಕ್‌ನಲ್ಲಿ ನಡೆದ ಎರಡನೇ ಟಿ20ಯಲ್ಲಿ ಚಹಾಲ್ ಅವರ 4 ಓವರ್‌ಗಳಲ್ಲಿ, ಆಫ್ರಿಕನ್ ಬ್ಯಾಟ್ಸ್‌ಮನ್‌ಗಳು 49 ರನ್ ಬಾರಿಸಿದ್ದರು. ಇದಾಗ್ಯೂ ಒಂದೇ ಒಂದು ವಿಕೆಟ್ ಪಡೆದಿರಲಿಲ್ಲ.

ಮತ್ತೊಂದೆಡೆ ಅಕ್ಷರ್ ಪಟೇಲ್ 2 ಪಂದ್ಯಗಳಲ್ಲಿ 5 ಓವರ್​ಗಳಲ್ಲಿ ಮಾಡಿದ್ದಾರೆ. ಆದರೆ ನೀಡಿದ್ದು ಬರೋಬ್ಬರಿ 59 ರನ್. ಮೊದಲ ಪಂದ್ಯದಲ್ಲಿ 4 ಓವರ್​ಗಳಲ್ಲಿ 40 ರನ್ ನೀಡಿ 1 ವಿಕೆಟ್ ಪಡೆದರೆ, 2ನೇ ಪಂದ್ಯದಲ್ಲಿ 1 ಓವರ್​ನಲ್ಲಿ 19 ರನ್​ ಬಿಟ್ಟುಕೊಟ್ಟಿದ್ದರು. ಅಂದರೆ ಇಲ್ಲಿ ಇಬ್ಬರೂ ಸ್ಪಿನ್ನರ್​ಗಳು ಕೈಕೊಟ್ಟಿರುವುದು ಸ್ಪಷ್ಟ. ಹೀಗಾಗಿ ಟೀಮ್ ಇಂಡಿಯಾ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ
KL Rahul: ಗಾಯ ಗಂಭೀರವಲ್ಲ..ಜಿಮ್​ನಲ್ಲಿ ಕಾಣಿಸಿಕೊಂಡ ಕೆಎಲ್ ರಾಹುಲ್..!
Yash Next Movie: ಯಶ್ ಮುಂದಿನ ಚಿತ್ರಕ್ಕೆ ಸೌತ್ ಸುಂದರಿ ನಾಯಕಿ..?
Hardik Pandya: ದಿನೇಶ್ ಕಾರ್ತಿಕ್ ವಿರುದ್ದ ಸೇಡು ತೀರಿಸಿಕೊಂಡ್ರಾ ಹಾರ್ದಿಕ್ ಪಾಂಡ್ಯ?
Dinesh Karthik: ಟೀಮ್ ಇಂಡಿಯಾ ಪರ ಯಾರೂ ಮಾಡದ ದಾಖಲೆ ಬರೆದ ದಿನೇಶ್ ಕಾರ್ತಿಕ್

ಅದರಂತೆ ಅಕ್ಷರ್ ಪಟೇಲ್ ಸ್ಥಾನದಲ್ಲಿ ಆಲ್​ರೌಂಡರ್ ದೀಪಕ್ ಹೂಡಾ ಸ್ಥಾನ ಪಡೆಯಬಹುದು. ಏಕೆಂದರೆ ಹೂಡಾ ಸ್ಪಿನ್ ಬೌಲಿಂಗ್ ಮಾಡಬಲ್ಲರು. ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಲ್ಲ ಆಟಗಾರ. ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಉತ್ತಮ ಫಾರ್ಮ್​ ಪ್ರದರ್ಶಿಸಿರುವ ಕಾರಣ 3ನೇ ಟಿ20 ಪಂದ್ಯದಲ್ಲಿ ಹೂಡಾಗೆ ಅವಕಾಶ ಸಿಗಲಿದೆ.

ಹಾಗೆಯೇ ಚಹಾಲ್ ಎಸೆತದಲ್ಲಿ ಮತ್ತೋರ್ವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್​ಗೆ ಅವಕಾಶ ನೀಡಬಹುದು. ಬಿಷ್ಣೋಯ್ ಕೂಡ ಉತ್ತಮ ಸ್ಪಿನ್ ಬೌಲರ್ ಆಗಿದ್ದು, ಹೀಗಾಗಿ 3ನೇ ಪಂದ್ಯದಲ್ಲಿ ಯುವ ಆಟಗಾರನಿಗೆ ಚಾನ್ಸ್ ಸಾಧ್ಯತೆ ಹೆಚ್ಚು. ಅದರಂತೆ ದಕ್ಷಿಣ ಆಫ್ರಿಕಾ ವಿರುದ್ದದ ಮೂರನೇ ಪಂದ್ಯದಿಂದ ಚಹಾಲ್ ಹಾಗೂ ಅಕ್ಷರ್ ಪಟೇಲ್ ಅವರನ್ನು ಕೈ ಬಿಡುವ ಸಾಧ್ಯತೆಯಿದೆ. ಇದರ ಹೊರತಾಗಿ ಬ್ಯಾಟಿಂಗ್​​ನಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆ ತುಂಬಾ ಕಡಿಮೆ. ಏಕೆಂದರೆ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಪ್ರದರ್ಶಿಸಿತ್ತು. ಹೀಗಾಗಿ ಅದೇ ಬ್ಯಾಟಿಂಗ್​ ಲೈನಪ್​ ಅನ್ನು ಮುಂದುವರೆಸಬಹುದು.

ಟೀಮ್ ಇಂಡಿಯಾ ಟಿ20 ತಂಡ: ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ , ಅವೇಶ್ ಖಾನ್, ಅರ್ಷ್​ದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್.

 

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:00 pm, Mon, 13 June 22