IND vs WI 2nd Test: ನಡೆಯದ ಐದನೇ ದಿನದಾಟ: ಡ್ರಾನಲ್ಲಿ ಅಂತ್ಯಕಂಡ ದ್ವಿತೀಯ ಟೆಸ್ಟ್: ಭಾರತಕ್ಕೆ ಸರಣಿ ಜಯ

|

Updated on: Jul 25, 2023 | 7:43 AM

India vs West Indies 2nd Test: ಮಳೆ ಐದನೇ ದಿನ ಒಂದೂ ಎಸೆತ ಆಡಲು ಅವಕಾಶ ಮಾಡಿಕೊಡಲಿಲ್ಲ. ಚಹಾ ವಿರಾಮದ ವರೆಗೂ ಕಾದರು. ಆದರೂ ಮಳೆ ನಿಲ್ಲದ ಪರಿಣಾಮ ಅಂತಿಮವಾಗಿ ಭಾರತ-ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್ ಡ್ರಾ ಎಂದು ಘೋಷಿಸಲಾಯಿತು.

IND vs WI 2nd Test: ನಡೆಯದ ಐದನೇ ದಿನದಾಟ: ಡ್ರಾನಲ್ಲಿ ಅಂತ್ಯಕಂಡ ದ್ವಿತೀಯ ಟೆಸ್ಟ್: ಭಾರತಕ್ಕೆ ಸರಣಿ ಜಯ
IND vs WI 2nd Test
Follow us on

ಪೋರ್ಟ್ ಆಫ್ ಸ್ಪೇನ್​ನ ಕ್ವೀನ್ಸ್ ಪಾರ್ಕ್ ಓವಲ್​ನಲ್ಲಿ ನಡೆದ ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವಣ ಅಂತಿಮ ಮತ್ತು ಎರಡನೇ ಟೆಸ್ಟ್ ಪಂದ್ಯ ಡ್ರಾನಲ್ಲಿ (Draw) ಅಂತ್ಯ ಕಂಡಿದೆ. ಸತತವಾಗಿ ಸುರಿದ ಮಳೆಯಿಂದಾಗಿ ಐದನೇ ದಿನದಾಟ ಒಂದೂ ಎಸೆತ ಕಾಣದೆ ಕೊನೆಗೊಂಡಿತು. ಹೀಗಾಗಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 141 ರನ್​ಗಳ ಇನ್ನಿಂಗ್ಸ್​ ಜಯ ಸಾಧಿಸಿದ ಪರಿಣಾಮ 1-0 ಮುನ್ನಡೆ ಪಡೆದುಕೊಂಡು ಟೆಸ್ಟ್ ಸರಣಿಯನ್ನು ತನ್ನದಾಗಿಸಿದೆ.

ನಾಲ್ಕನೇ ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ 2 ವಿಕೆಟ್ ಕಳೆದುಕೊಂಡು 76 ರನ್ ಕಲೆಹಾಕಿತ್ತು. ಐದನೇ ದಿನ ಕೆರಿಬಿಯನ್ನರ ಗೆಲುವಿಗೆ 289 ರನ್​ಗಳ ಅವಶ್ಯಕತೆಯಿದ್ದರೆ, ಭಾರತಕ್ಕೆ ವಿಂಡೀಸ್​ನ 8 ವಿಕೆಟ್​ಗಳು ಬೇಕಾಗಿದ್ದವು. ಹೀಗಾಗಿ ಕೊನೆಯ ದಿನದಾಟದ ಮೇಲೆ ಉಭಯ ತಂಡಗಳ ಕಣ್ಣಿತ್ತು. ಆದರೆ, ಮಳೆ ಐದನೇ ದಿನ ಒಂದೂ ಎಸೆತ ಆಡಲು ಅವಕಾಶ ಮಾಡಿಕೊಡಲಿಲ್ಲ. ಚಹಾ ವಿರಾಮದ ವರೆಗೂ ಕಾದರು. ಆದರೂ ಮಳೆ ನಿಲ್ಲದ ಪರಿಣಾಮ ಅಂತಿಮವಾಗಿ ಡ್ರಾ ಎಂದು ಘೋಷಿಸಲಾಯಿತು.

Tim Seifert: ಟಿಮ್ ಸೀಫರ್ಟ್​ ಬಿರುಗಾಳಿ ಬ್ಯಾಟಿಂಗ್: ಖಲಂದರ್ಸ್​ಗೆ ಭರ್ಜರಿ ಜಯ

ಇದನ್ನೂ ಓದಿ
ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಪರ ಅತೀ ವೇಗದ ಅರ್ಧಶತಕ ಸಿಡಿಸಿದ್ದು ಯಾರು ಗೊತ್ತಾ?
Nicholas Pooran: 6 ಭರ್ಜರಿ ಸಿಕ್ಸ್​: ಪೂರನ್ ಪವರ್​ಗೆ ತತ್ತರಿಸಿದ ಎದುರಾಳಿ ತಂಡ
Glenn Maxwell: ಗ್ಲೆನ್ ಮ್ಯಾಕ್ಸ್​ವೆಲ್ ಪತ್ನಿಗೆ ಹಿಂದೂ ಸಂಪ್ರದಾಯದಂತೆ ಸೀಮಂತ
Priyank Panchal: 7 ಭರ್ಜರಿ ಸಿಕ್ಸ್​​ಗಳೊಂದಿಗೆ ಅಬ್ಬರಿಸಿದ ಪ್ರಿಯಾಂಕ್ ಪಾಂಚಾಲ್

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಓಪನರ್​ಗಳಾದ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ರೋಹಿತ್ ಶರ್ಮಾ ಭರ್ಜರಿ ಆರಂಭ ಒದಗಿಸಿದರು. 31.4 ಓವರ್ ವರೆಗೆ ಆಡಿದ ರೋಹಿತ್-ಜೈಸ್ವಾಲ್ ಮೊದಲ ವಿಕೆಟ್​ಗೆ 139 ರನ್​ಗಳ ಕಾಣಿಕೆ ನೀಡಿದರು. ಜೈಸ್ವಾಲ್ 74 ಎಸೆತಗಳಲ್ಲಿ 57 ರನ್ ಸಿಡಿಸಿದರೆ, ರೋಹಿತ್ 143 ಎಸೆತಗಳಲ್ಲಿ 80 ರನ್ ಗಳಿಸಿದರು. ಶುಭ್​ಮನ್ ಗಿಲ್ 10, ರಹಾನೆ 8 ರನ್​ಗಳಿಗೆ ನಿರ್ಗಮಿಸಿದರು. ನಂತರ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಜಡೇಜಾ ಭರ್ಜರಿ ಆಟವಾಡಿದರು.

ಕೊಹ್ಲಿ 206 ಎಸೆತಗಳಲ್ಲಿ 121 ರನ್ ಸಿಡಿಸಿದರೆ, ಜಡೇಜಾ 61 ರನ್ ಬಾರಿಸಿದರು. ಆರ್. ಅಶ್ವಿನ್ 56 ರನ್​ಗಳ ಕೊಡುಗೆ ನೀಡಿದರು. ಭಾರತ 438 ರನ್​ಗಳಿಗೆ ಆಲೌಟ್ ಆಯಿತು. ಬಳಿಕ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿದ ವಿಂಡೀಸ್ ದಿಟ್ಟ ಹೋರಾಟ ನಡೆಸಿತು. ಆದರೆ, ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. 255 ರನ್​ಗಳಿಗೆ ಆಲೌಟ್ ಆಯಿತು. ನಾಯಕ ಬ್ರಾಥ್​ವೈಟ್ 75 ರನ್ ಬಾರಿಸಿದರು. ಭಾರತ ಪರ ಮೊಹಮ್ಮದ್ ಸಿರಾಜ್ 5 ವಿಕೆಟ್ ಕಿತ್ತರು.

183 ರನ್​ಗಳ ಬೃಹತ್ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿದ ಭಾರತ ಸ್ಫೋಟಕ ಬ್ಯಾಟಿಂಗ್ ನಡೆಸಿತು. 12 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತ 100 ರ ಅಂಚಿಗೆ ಬಂದು ನಿಂತಿತು. ರೋಹಿತ್ 44 ಎಸೆತಗಳಲ್ಲಿ 57 ರನ್ ಸಿಡಿಸಿದರೆ, ಯಶಸ್ವಿ ಜೈಸ್ವಾಲ್ 38 ರನ್ ಗಳಿಸಿದರು. ಬಳಿಕ ಶುರುವಾಗಿದ್ದು ಇಶಾನ್ ಕಿಶನ್ ಆಟ. ಟಿ20 ಮಾದರಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಕಿಶನ್ ಕೇವಲ 34 ಎಸೆತಗಳಲ್ಲಿ 4 ಫೋರ್, 2 ಸಿಕ್ಸರ್​ನಿಂದ ಅಜೇಯ 52 ರನ್ ಚಚ್ಚಿದರು.

ಭಾರತ 181 ರನ್​ಗಳಿಗೆ ಡಿಕ್ಲೇರ್ ಘೋಷಿಸುವ ಮೂಲಕ ಎದುರಾಳಿಗೆ ಗೆಲ್ಲಲು 364 ರನ್​ಗಳ ಟಾರ್ಗೆಟ್ ನೀಡಿತು. ಗುರಿ ಬೆನ್ನಟ್ಟಲು ಬಂದ ಕೆರಿಬಿಯನ್ನರು ನಾಲ್ಕನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 76 ರನ್ ಗಳಿಸಿತ್ತು. ಐದನೇ ದಿನ ಆಟ ನಡೆಯದ ಕಾರಣ ಪಂದ್ಯ ಡ್ರಾ ಆಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:41 am, Tue, 25 July 23