AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Priyank Panchal: 7 ಭರ್ಜರಿ ಸಿಕ್ಸ್​​ಗಳೊಂದಿಗೆ ಅಬ್ಬರಿಸಿದ ಪ್ರಿಯಾಂಕ್ ಪಾಂಚಾಲ್

Deodhar Trophy 2023: ಪಶ್ಚಿಮ ವಲಯ ತಂಡದ ಪರ ಆರಂಭಿಕರಾದ ಪ್ರಿಯಾಂಕ್ ಪಾಂಚಾಲ್ ಹಾಗೂ ಹಾರ್ವಿಕ್ ದೇಸಾಯಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು.

Priyank Panchal: 7 ಭರ್ಜರಿ ಸಿಕ್ಸ್​​ಗಳೊಂದಿಗೆ ಅಬ್ಬರಿಸಿದ ಪ್ರಿಯಾಂಕ್ ಪಾಂಚಾಲ್
Priyank Panchal
TV9 Web
| Edited By: |

Updated on: Jul 24, 2023 | 8:52 PM

Share

Deodhar Trophy 2023: ಪುದುಚೇರಿಯಲ್ಲಿ ನಡೆದ ದೇವಧರ್ ಟ್ರೋಫಿಯ 3ನೇ ಪಂದ್ಯದಲ್ಲಿ ಪಶ್ಚಿಮ ವಲಯ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ (Priyank Panchal) ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಈಶಾನ್ಯ ವಲಯದ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಪಶ್ಚಿಮ ವಲಯ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಈಶಾನ್ಯ ವಲಯ ತಂಡವು ಪಶ್ಚಿಮ ವಲಯದ ಅನುಭವಿ ಬೌಲರ್​ಗಳ ಮುಂದೆ ರನ್​ಗಳಿಸಲು ಪರದಾಡಿದರು. ಇದಾಗ್ಯೂ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಿಶನ್​ಗಮ್ 30 ರನ್​ಗಳನ್ನು ಕಲೆಹಾಕಿದರು.

ಇನ್ನು 9ನೇ ಕ್ರಮಾಂಕದಲ್ಲಿ ಇಮ್ಲಿವಾಟಿ ಲೆಮಟೂರು 38 ಎಸೆತಗಳಲ್ಲಿ 5 ಫೋರ್ ಹಾಗೂ 1 ಸಿಕ್ಸ್​ನೊಂದಿಗೆ 38 ರನ್ ಬಾರಿಸಿದ್ದು ತಂಡದ ಪರ ಮೂಡಿಬಂದ ಗರಿಷ್ಠ ಸ್ಕೋರ್​. ಇಮ್ಲಿವಾಟಿಯ ಈ ಅಮೂಲ್ಯ ಕೊಡಗೆಯೊಂದಿಗೆ ಈಶಾನ್ಯ ವಲಯ ತಂಡವು 47 ಓವರ್​ಗಳಲ್ಲಿ 207 ರನ್​ಗಳಿಸಿ ಆಲೌಟ್ ಆಯಿತು.

ಪಶ್ಚಿಮ ವಲಯ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಅರ್ಝಾನ್ ನಾಗ್ವಾಸ್ವಾಲ್ಲಾ 31 ರನ್ ನೀಡಿ 3 ವಿಕೆಟ್ ಪಡೆದರೆ, ಶಮ್ಸ್ ಮುಲಾನಿ ಹಾಗೂ ಶಿವಂ ದುಬೆ ತಲಾ 2 ವಿಕೆಟ್ ಕಬಳಿಸಿದರು.

208 ರನ್​ಗಳ ಸುಲಭ ಗುರಿ ಬೆನ್ನತ್ತಿದ ಪಶ್ಚಿಮ ವಲಯ ತಂಡದ ಪರ ಆರಂಭಿಕರಾದ ಪ್ರಿಯಾಂಕ್ ಪಾಂಚಾಲ್ ಹಾಗೂ ಹಾರ್ವಿಕ್ ದೇಸಾಯಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ವಿಕೆಟ್​ಗೆ ಕೇವಲ 21 ಓವರ್​ಗಳಲ್ಲಿ 167 ರನ್ ಪೇರಿಸಿದ ಈ ಜೋಡಿ ತಂಡದ ಗೆಲುವನ್ನು ಖಚಿತಪಡಿಸಿದ್ದರು.

ಈ ಹಂತದಲ್ಲಿ 71 ಎಸೆತಗಳಲ್ಲಿ 14 ಫೋರ್​ಗಳೊಂದಿಗೆ 85 ರನ್ ಬಾರಿಸಿದ್ದ ಹಾರ್ವಿಕ್ ದೇಸಾಯಿ ಕ್ಯಾಚ್ ನೀಡಿ ನಿರ್ಗಮಿಸಿದರು. ಆದರೆ ಮತ್ತೊಂದೆಡೆ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ ಪ್ರಿಯಾಂಕ್ ಪಾಂಚಾಲ್ ಈಶಾನ್ಯ ಬೌಲರ್​ಗಳ ಬೆಂಡೆತ್ತಿದರು.

ಕೇವಲ 69 ಎಸೆತಗಳನ್ನು ಎದುರಿಸಿದ ಪ್ರಿಯಾಂಕ್ ಪಾಂಚಾಲ್ 7 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ಗಳನ್ನು ಬಾರಿಸಿದರು. ಈ ಮೂಲಕ ಅಜೇಯ 99 ರನ್​ ಬಾರಿಸಿ 25.1 ಓವರ್​ಗಳಲ್ಲಿ ತಂಡವನ್ನು 208 ರನ್​ಗಳ ಗುರಿ ಮುಟ್ಟಿಸಿದರು. ಈ ಮೂಲಕ ತನ್ನ ಮೊದಲ ಪಂದ್ಯದಲ್ಲೇ ಪಶ್ಚಿಮ ವಲಯ ತಂಡವು 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಪಶ್ಚಿಮ ವಲಯ ಪ್ಲೇಯಿಂಗ್ 11: ಪ್ರಿಯಾಂಕ್ ಪಾಂಚಾಲ್ (ನಾಯಕ) , ರಾಹುಲ್ ತ್ರಿಪಾಠಿ , ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್) , ಅಂಕಿತ್ ಬಾವ್ನೆ , ಶಿವಂ ದುಬೆ , ಸರ್ಫರಾಝ್ ಖಾನ್ , ಶಮ್ಸ್ ಮುಲಾನಿ , ಪಾರ್ಥ್ ಭುತ್ , ಅರ್ಝಾನ್ ನಾಗವಾಸ್ವಾಲ್ಲಾ , ಅತಿತ್ ಶೇತ್ , ಚಿಂತನ್ ಗಜ.

ಇದನ್ನೂ ಓದಿ: Priyank Panchal: ರೋಹಿತ್ ಶರ್ಮಾ ಸ್ಥಾನಕ್ಕೆ ಆಯ್ಕೆಯಾದ ಪ್ರಿಯಾಂಕ್ ಪಾಂಚಾಲ್ ಯಾರು?

ಈಶಾನ್ಯ ವಲಯ ಪ್ಲೇಯಿಂಗ್ 11: ಅನುಪ್ ಅಹ್ಲಾವತ್ , ನಿಲೇಶ್ ಲಾಮಿಚಾನೆ , ಜೆಹು ಆಂಡರ್ಸನ್ , ಲ್ಯಾಂಗ್ಲೋನ್ಯಾಂಬಾ ಕಿಶನ್​ಗಮ್ (ನಾಯಕ) , ಕಮ್ಶಾ ಯಾಂಗ್ಫೊ (ವಿಕೆಟ್ ಕೀಪರ್) , ರೆಕ್ಸ್ ರಾಜ್​ಕುಮಾರ್ , ಪಾಲ್ಜೋರ್ ತಮಾಂಗ್ , ಲ್ಯಾರಿ ಸಂಗ್ಮಾ , ಇಮ್ಲಿವಾಟಿ ಲೆಮ್ತೂರ್ , ಲೀ ಯೋಂಗ್ ಲೆಪ್ಚಾ , ಕ್ರೈವಿಟ್ಸೊ ಕೆನ್ಸ್.

Follow Us
ಕಬ್ಬಿನ ತೋಟದಲ್ಲಿ 4 ಚಿರತೆ ಮರಿಗಳು
ಕಬ್ಬಿನ ತೋಟದಲ್ಲಿ 4 ಚಿರತೆ ಮರಿಗಳು
ಈದ್ ಮೆರವಣಿಗೆ ವೇಳೆ ಘರ್ಷಣೆ ಸಂಬಂಧ 3 FIR: 8 ಮಂದಿ ಪೊಲೀಸ್ ವಶಕ್ಕೆ
ಈದ್ ಮೆರವಣಿಗೆ ವೇಳೆ ಘರ್ಷಣೆ ಸಂಬಂಧ 3 FIR: 8 ಮಂದಿ ಪೊಲೀಸ್ ವಶಕ್ಕೆ
ಇಂದು ಹಯಗ್ರೀವ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಹಯಗ್ರೀವ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಿಹಾರದಲ್ಲಿ 21 ಜನರಿದ್ದ ದೋಣಿ ಮಗುಚಿ ಇಬ್ಬರು ನಾಪತ್ತೆ; ವಿಡಿಯೋ ಇಲ್ಲಿದೆ
ಬಿಹಾರದಲ್ಲಿ 21 ಜನರಿದ್ದ ದೋಣಿ ಮಗುಚಿ ಇಬ್ಬರು ನಾಪತ್ತೆ; ವಿಡಿಯೋ ಇಲ್ಲಿದೆ
‘ಹೇಗಿದೆ ಟಾಕ್ಸಿಕ್?’ ಕಲೆಕ್ಷನ್, ವಿಮರ್ಶೆ ಇತ್ಯಾದಿ: ವಿಡಿಯೋ ನೋಡಿ
‘ಹೇಗಿದೆ ಟಾಕ್ಸಿಕ್?’ ಕಲೆಕ್ಷನ್, ವಿಮರ್ಶೆ ಇತ್ಯಾದಿ: ವಿಡಿಯೋ ನೋಡಿ
ನೇಪಾಳ-ಟಿಬೆಟ್ ಗಡಿಯಲ್ಲಿ ಪ್ರವಾಹಕ್ಕೆ ಕೊಚ್ಚಿಹೋಯ್ತು ತ್ರಿಶೂಲಿ ನದಿ ಸೇತುವೆ
ನೇಪಾಳ-ಟಿಬೆಟ್ ಗಡಿಯಲ್ಲಿ ಪ್ರವಾಹಕ್ಕೆ ಕೊಚ್ಚಿಹೋಯ್ತು ತ್ರಿಶೂಲಿ ನದಿ ಸೇತುವೆ
ಏಕಾಏಕಿ ಹೊತ್ತಿ ಉರಿದ ಕಾರು: ಕನ್ಯೆ ನೋಡಲು ಹೋಗಿದ್ದವ ಪ್ರಾಣಾಪಾಯದಿಂದ ಪಾರು
ಏಕಾಏಕಿ ಹೊತ್ತಿ ಉರಿದ ಕಾರು: ಕನ್ಯೆ ನೋಡಲು ಹೋಗಿದ್ದವ ಪ್ರಾಣಾಪಾಯದಿಂದ ಪಾರು
6 ಬಾರಿ ಅಂಬಾರಿ ಹೊತ್ತು ನಿವೃತ್ತಿಯಾದ ಅಭಿಮನ್ಯುಗೆ ಮತ್ತೊಂದು ಹೊಣೆಗಾರಿಕೆ?
6 ಬಾರಿ ಅಂಬಾರಿ ಹೊತ್ತು ನಿವೃತ್ತಿಯಾದ ಅಭಿಮನ್ಯುಗೆ ಮತ್ತೊಂದು ಹೊಣೆಗಾರಿಕೆ?
ಸಿಎಂ ಡಿಕೆ ಶಿವಕುಮಾರ್ ದಿಢೀರ್ ಸುದ್ದಿಗೋಷ್ಠಿಯ ನೇರಪ್ರಸಾರ
ಸಿಎಂ ಡಿಕೆ ಶಿವಕುಮಾರ್ ದಿಢೀರ್ ಸುದ್ದಿಗೋಷ್ಠಿಯ ನೇರಪ್ರಸಾರ
‘ಟಾಕ್ಸಿಕ್’ ಅದ್ದೂರಿ ರಿಲೀಸ್; ತುಮಕೂರಿನಲ್ಲೂ ಯಶ್ ಫ್ಯಾನ್ಸ್ ಸಂಭ್ರಮ
‘ಟಾಕ್ಸಿಕ್’ ಅದ್ದೂರಿ ರಿಲೀಸ್; ತುಮಕೂರಿನಲ್ಲೂ ಯಶ್ ಫ್ಯಾನ್ಸ್ ಸಂಭ್ರಮ