AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Glenn Maxwell: ಗ್ಲೆನ್ ಮ್ಯಾಕ್ಸ್​ವೆಲ್ ಪತ್ನಿಗೆ ಹಿಂದೂ ಸಂಪ್ರದಾಯದಂತೆ ಸೀಮಂತ

Glenn Maxwell - Vini Raman: ಆಸ್ಟ್ರೇಲಿಯಾ ಟೆಸ್ಟ್ ತಂಡದಿಂದ ಹೊರಗುಳಿದಿರುವ ಗ್ಲೆನ್ ಮ್ಯಾಕ್ಸ್​ವೆಲ್ ಆಗಸ್ಟ್​ನಲ್ಲಿ ನಡೆಯಲಿರುವ ಸೌತ್ ಆಫ್ರಿಕಾ ವಿರುದ್ಧದ ಸರಣಿಯ ಮೂಲಕ ತಂಡಕ್ಕೆ ಕಂಬ್ಯಾಕ್ ಮಾಡಲಿದ್ದಾರೆ.

Glenn Maxwell: ಗ್ಲೆನ್ ಮ್ಯಾಕ್ಸ್​ವೆಲ್ ಪತ್ನಿಗೆ ಹಿಂದೂ ಸಂಪ್ರದಾಯದಂತೆ ಸೀಮಂತ
Glenn Maxwell
TV9 Web
| Updated By: ಝಾಹಿರ್ ಯೂಸುಫ್|

Updated on: Jul 24, 2023 | 9:28 PM

Share

ಆಸ್ಟ್ರೇಲಿಯಾ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಶೀಘ್ರದಲ್ಲೇ ತಂದೆಯಾಗಲಿದ್ದಾರೆ. ಈ ಶುಭ ಸುದ್ದಿಯನ್ನು ಅವರ ಪತ್ನಿ ವಿನಿ ರಾಮನ್ (Vini Raman) ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾರ್ಚ್ 27, 2022 ರಲ್ಲಿ ಬಹು ಕಾಲದ ಗೆಳತಿ ವಿನಿ ರಾಮನ್ ಜೊತೆ ಗ್ಲೆನ್ ಮ್ಯಾಕ್ಸ್​ವೆಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಸೀಮಂತ ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡಿರುವ ವಿನಿ ರಾಮನ್, ಕುಟುಂಬಕ್ಕೆ ಹೊಸ ಅತಿಥಿ ಆಗಮಿಸುವ ಸಿಹಿ ಸುದ್ದಿ ನೀಡಿದ್ದಾರೆ.

ವಿನಿ ರಾಮನ್ ತಮಿಳುನಾಡು ಮೂಲದವರಾಗಿದ್ದು, ಹೀಗಾಗಿಯೇ ವಿವಾಹ ಸಮಾರಂಭ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ನೆರವೇರಿತ್ತು. ಇದೀಗ ವರ್ಷಗಳ ಬಳಿಕ ಮ್ಯಾಕ್ಸ್​ವೆಲ್ ದಂಪತಿಗಳ ಕಡೆಯಿಂದ ಸಿಹಿ ಸುದ್ದಿ ಹೊರಬಿದ್ದಿದೆ.

ಅಲ್ಲದೆ ತಮಿಳುನಾಡಿನ ಹಿಂದೂ ಸಂಪ್ರದಾಯದಂತೆ ವಲೈಕಾಪ್ಪು (ಬೇಬಿ ಶವರ್) ನೆರವೇರಿಸಲಾಗಿದ್ದು, ಈ ಸಮಾರಂಭದ ಫೋಟೋಗಳನ್ನು ವಿನಿ ರಾಮನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೂಲಕ ಬೇಬಿ ಮ್ಯಾಕ್ಸ್​ವೆಲ್​ರನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಶೀರ್ವದಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಈ ಫೋಟೋದಲ್ಲಿ ವಿನಿ ರಾಮನ್ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಪತ್ನಿಗೆ ವಿಶೇಷ ಉಡುಗೊರೆ ನೀಡುವ ಮೂಲಕ ಗ್ಲೆನ್ ಮ್ಯಾಕ್ಸ್​ವೆಲ್ ಕೂಡ ಫೋಟೋಗೆ ಪೋಸ್ ನೀಡಿದ್ದಾರೆ.

View this post on Instagram

A post shared by Vini Maxwell (@vini.raman)

ಸೆಪ್ಟೆಂಬರ್​ನಲ್ಲಿ ನಾವು ತಂದೆ-ತಾಯಿಯಾಗುತ್ತಿರುವುದನ್ನು ಘೋಷಿಸಲು ನಾನು ಭಾವಪರವಶನಾಗಿದ್ದೇನೆ ಎಂದು ಪತ್ನಿಗೆ ಗ್ಲೆನ್ ಮ್ಯಾಕ್ಸ್​ವೆಲ್ ಬರೆದಿರುವ ವಿಶೇಷ ಪತ್ರವನ್ನು ಕೂಡ ವಿನಿ ರಾಮನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಆಸ್ಟ್ರೇಲಿಯಾ ಟೆಸ್ಟ್ ತಂಡದಿಂದ ಹೊರಗುಳಿದಿರುವ ಗ್ಲೆನ್ ಮ್ಯಾಕ್ಸ್​ವೆಲ್ ಆಗಸ್ಟ್​ನಲ್ಲಿ ನಡೆಯಲಿರುವ ಸೌತ್ ಆಫ್ರಿಕಾ ವಿರುದ್ಧದ ಸರಣಿಯ ಮೂಲಕ ತಂಡಕ್ಕೆ ಕಂಬ್ಯಾಕ್ ಮಾಡಲಿದ್ದಾರೆ. ಈ ಸರಣಿಯಲ್ಲಿ ಆಸ್ಟ್ರೇಲಿಯಾ 3 ಟಿ20 ಪಂದ್ಯಗಳು ಹಾಗೂ 5 ಏಕದಿನ ಪಂದ್ಯಗಳನ್ನಾಡಲಿದೆ. ಇದಾದ ಬಳಿಕ ಭಾರತದ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಏಕದಿನ ಸರಣಿಯಲ್ಲೂ ಗ್ಲೆನ್ ಮ್ಯಾಕ್ಸ್​ವೆಲ್ ಕಾಣಿಸಿಕೊಳ್ಳುವುದು ಖಚಿತ ಎನ್ನಬಹುದು.