AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nicholas Pooran: 6 ಭರ್ಜರಿ ಸಿಕ್ಸ್​: ಪೂರನ್ ಪವರ್​ಗೆ ತತ್ತರಿಸಿದ ಎದುರಾಳಿ ತಂಡ

MLC 2023: ವಾಷಿಂಗ್ಟನ್ ಫ್ರೀಡಮ್ ವಿರುದ್ಧದ ಗೆಲುವಿನೊಂದಿಗೆ ಎಂಐ ನ್ಯೂಯಾರ್ಕ್ ತಂಡವು ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ ಪಾಯಿಂಟ್ಸ್ ಟೇಬಲ್​ನಲ್ಲಿ 3ನೇ ಸ್ಥಾನಕ್ಕೇರಿದೆ.

Nicholas Pooran: 6 ಭರ್ಜರಿ ಸಿಕ್ಸ್​: ಪೂರನ್ ಪವರ್​ಗೆ ತತ್ತರಿಸಿದ ಎದುರಾಳಿ ತಂಡ
Nicholas Pooran
TV9 Web
| Updated By: ಝಾಹಿರ್ ಯೂಸುಫ್|

Updated on: Jul 24, 2023 | 10:09 PM

Share

MLC 2023: ಅಮೆರಿಕದಲ್ಲಿ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ 13ನೇ ಪಂದ್ಯದಲ್ಲಿ ನಿಕೋಲಸ್ ಪೂರನ್ ಪವರ್​ಫುಲ್ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ವಾಷಿಂಗ್ಟನ್ ಫ್ರೀಡಮ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಎಂಐ ನ್ಯೂಯಾರ್ಕ್ ತಂಡದ ನಾಯಕ ಕೀರನ್ ಪೊಲಾರ್ಡ್ ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡರು. ಅತ್ತ ಮೊದಲು ಬ್ಯಾಟ್ ಮಾಡಿದ ವಾಷಿಂಗ್ಟನ್ ಫ್ರೀಡಮ್ ತಂಡಕ್ಕೆ ರಶೀದ್ ಖಾನ್ ಆರಂಭಿಕ ಆಘಾತ ನೀಡಿದರು. ಆಂಡ್ರೀಸ್ ಗೌಸ್ (20) ವಿಕೆಟ್ ಪಡೆದು ರಶೀದ್ ಖಾನ್ ಶುಭಾರಂಭ ಮಾಡಿದರೆ, ಇದರ ಬೆನ್ನಲ್ಲೇ ವೀಝ ಎಸೆತದಲ್ಲಿ ಮ್ಯಾಥ್ಯೂ ಶಾರ್ಟ್ (14) ವಿಕೆಟ್ ಒಪ್ಪಿಸಿದ್ದರು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮುಖ್ತಾರ್ ಅಹಮದ್ (18) ಕೂಡ ಬಂದ ವೇಗದಲ್ಲೇ ಹಿಂತಿರುಗಿದರು.

ಈ ಹಂತದಲ್ಲಿ ಜೊತೆಯಾದ ಗ್ಲೆನ್ ಫಿಲಿಪ್ಸ್ ಹಾಗೂ ಮೊಯಿಸಸ್ ಹೆನ್ರಿಕ್ಸ್ ಅತ್ಯುತ್ತಮ ಜೊತೆಯಾಟ ಪ್ರದರ್ಶಿಸಿದರು. 4ನೇ ವಿಕೆಟ್​ಗೆ 77 ರನ್​ಗಳನ್ನು ಕಲೆಹಾಕಿದ ಈ ಜೋಡಿ ತಂಡದ ಮೊತ್ತವನ್ನು 100 ರ ಗಡಿದಾಟಿಸಿದರು.

ಈ ವೇಳೆ ದಾಳಿಗಿಳಿದ ಕೀರನ್ ಪೊಲಾರ್ಡ್ ವಾಷಿಂಗ್ಟನ್ ಫ್ರೀಡಮ್​ಗೆ ಡಬಲ್ ಶಾಕ್ ನೀಡಿದರು. ಮೊದಲು ಹೆನ್ರಿಕ್ಸ್ (32) ವಿಕೆಟ್ ಪಡೆದ ಪೊಲಾರ್ಡ್ ಇದರ ಬೆನ್ನಲ್ಲೇ ಗ್ಲೆನ್ ಫಿಲಿಪ್ಸ್​ (47) ಪೆವಿಲಿಯನ್ ಹಾದಿ ತೋರಿಸಿದರು. ಪರಿಣಾಮ ವಾಷಿಂಗ್ಟನ್ ಫ್ರೀಡಮ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್​ಗಳಿಸಲಷ್ಟೇ ಶಕ್ತರಾದರು.

161 ರನ್​ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಎಂಐ ನ್ಯೂಯಾರ್ಕ್ ತಂಡಕ್ಕೆ ಶಯಾನ್ ಜಹಾಂಗೀರ್ (29) ಹಾಗೂ ಮೊನಾಂಕ್ ಪಟೇಲ್ (44) ಸ್ಪೋಟಕ ಆರಂಭ ಒದಗಿಸಿದ್ದರು. 7 ಓವರ್​ಗಳಲ್ಲಿ 67 ರನ್​ ಕಲೆಹಾಕಿದ ಈ ಜೋಡಿ ಚೇಸಿಂಗ್​ಗೆ ಭದ್ರ ಬುನಾದಿ ಹಾಕಿಕೊಟ್ಟರು.

ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕೋಲಸ್ ಪೂರನ್ ಅಬ್ಬರಕ್ಕೆ ಅತ್ತ ವಾಷಿಂಗ್ಟನ್ ಫ್ರೀಡಮ್ ಕಂಗೆಟ್ಟರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಪೂರನ್ ಎದುರಾಳಿ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದರು.

ಪರಿಣಾಮ ನಿಕೋಲಸ್ ಪೂರನ್ ಬ್ಯಾಟ್​ನಿಂದ ಕೇವಲ 31 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು. ಅಲ್ಲದೆ ಕೇವಲ 33 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ ಅಜೇಯ 62 ರನ್ ಬಾರಿಸಿದರು.

ಇನ್ನೊಂದೆಡೆ ಪೂರನ್​ಗೆ ಉತ್ತಮ ಸಾಥ್ ನೀಡಿದ ಕೀರನ್ ಪೊಲಾರ್ಡ್​ ಕೇವಲ 10 ಎಸೆತಗಳಲ್ಲಿ 21 ರನ್ ಚಚ್ಚಿದರು. ಪರಿಣಾಮ ಎಂಐ ನ್ಯೂಯಾರ್ಕ್ ತಂಡವು 15.3 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 161 ರನ್​ಗಳಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಎಂಐ ನ್ಯೂಯಾರ್ಕ್ ಪ್ಲೇಯಿಂಗ್ 11: ಶಯಾನ್ ಜಹಾಂಗೀರ್ , ಮೊನಾಂಕ್ ಪಟೇಲ್ , ನಿಕೋಲಸ್ ಪೂರನ್ (ವಿಕೆಟ್ ಕೀಪರ್) , ಟಿಮ್ ಡೇವಿಡ್ , ಕೀರಾನ್ ಪೊಲಾರ್ಡ್ (ನಾಯಕ) , ಹಮ್ಮದ್ ಅಜಮ್ , ಡೇವಿಡ್ ವೀಝ , ರಶೀದ್ ಖಾನ್ , ಟ್ರೆಂಟ್ ಬೌಲ್ಟ್ , ಎಹ್ಸಾನ್ ಆದಿಲ್ , ನೊಸ್ತುಶ್ ಕೆಂಜಿಗೆ.

ಇದನ್ನೂ ಓದಿ: R Ashwin: ಅಶ್ವಿನ್ ಈಗ ಭಾರತದ 2ನೇ ಯಶಸ್ವಿ ಬೌಲರ್..!

ವಾಷಿಂಗ್ಟನ್ ಫ್ರೀಡಮ್ ಪ್ಲೇಯಿಂಗ್ 11: ಮ್ಯಾಥ್ಯೂ ಶಾರ್ಟ್ , ಆಂಡ್ರೀಸ್ ಗೌಸ್ (ವಿಕೆಟ್ ಕೀಪರ್) , ಮುಖ್ತಾರ್ ಅಹ್ಮದ್ , ಗ್ಲೆನ್ ಫಿಲಿಪ್ಸ್ , ಮೊಯಿಸೆಸ್ ಹೆನ್ರಿಕ್ಸ್ (ನಾಯಕ) , ಓಬಸ್ ಪಿನಾರ್ , ಅಕೇಲ್ ಹೋಸೇನ್ , ಮಾರ್ಕೊ ಜಾನ್ಸೆನ್ , ಡೇನ್ ಪೀಡ್ , ಅನ್ರಿಚ್ ನಾರ್ಟ್ಜೆ , ಸೌರಭ್ ನೇತ್ರವಲ್ಕರ್.