AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tim Seifert: ಟಿಮ್ ಸೀಫರ್ಟ್​ ಬಿರುಗಾಳಿ ಬ್ಯಾಟಿಂಗ್: ಖಲಂದರ್ಸ್​ಗೆ ಭರ್ಜರಿ ಜಯ

Zim Afro T10 2023: ಝಿಂಬಾಬ್ವೆ ಕ್ರಿಕೆಟ್ ಬೋರ್ಡ್ ಆಯೋಜಿಸುತ್ತಿರುವ ಝಿಮ್ ಆಫ್ರೊ ಟಿ10 ಲೀಗ್​ನಲ್ಲಿ ನ್ಯೂಝಿಲೆಂಡ್ ವಿಕೆಟ್ ಕೀಪರ್ ಬ್ಯಾಟರ್ ಟಿಮ್ ಸೀಫರ್ಟ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

Tim Seifert: ಟಿಮ್ ಸೀಫರ್ಟ್​ ಬಿರುಗಾಳಿ ಬ್ಯಾಟಿಂಗ್: ಖಲಂದರ್ಸ್​ಗೆ ಭರ್ಜರಿ ಜಯ
Tim Seifert
TV9 Web
| Edited By: |

Updated on: Jul 24, 2023 | 7:06 PM

Share

Zim Afro T10 2023: ಹರಾರೆಯ ಸ್ಪೋರ್ಟ್ಸ್​ ಕ್ಲಬ್ ಮೈದಾನದಲ್ಲಿ ನಡೆದ ಝಿಮ್ ಆಫ್ರೊ ಟಿ10 ಲೀಗ್​ನಲ್ಲಿ ನ್ಯೂಝಿಲೆಂಡ್ ಆಟಗಾರ ಟಿಮ್ ಸೀಫರ್ಟ್ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಡರ್ಬನ್ ಖಲಂದರ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಜಯಿಸಿದ ಬುಲವಾಯೊ ಬ್ರೇವ್ಸ್ ತಂಡದ ನಾಯಕ ಸಿಕಂದರ್ ರಾಝ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಆರಂಭಿಕ ಆಟಗಾರ ಟಿಮ್ ಸೀಫರ್ಟ್ ಅಬ್ಬರದೊಂದಿಗೆ ರಾಝ ಅವರ ನಿರ್ಧಾರ ತಪ್ಪು ಎಂಬುದು ಸಾಬೀತಾಗಿತ್ತು. ಏಕೆಂದರೆ ಮೊದಲ ಓವರ್​ನಿಂದಲೇ ಸಿಕ್ಸ್​ ಸುರಿಮಳೆ ಆರಂಭಿಸಿದ ಸೀಫರ್ಟ್​ ಬುಲವಾಯೊ ಬ್ರೇವ್ಸ್ ಬೌಲರ್​ಗಳ ಬೆವರಿಳಿಸಿದರು.

ಅಷ್ಟೇ ಅಲ್ಲದೆ ಕೇವಲ 14 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳನ್ನು ಸಿಡಿಸಿದ ಸೀಫರ್ಟ್​ 44 ರನ್​ ಬಾರಿಸಿ ಟೈಮಲ್ ಮಿಲ್ಸ್​ಗೆ ವಿಕೆಟ್ ಒಪ್ಪಿಸಿದ್ದರು. ಅಷ್ಟರಲ್ಲಾಗಲೇ ಡರ್ಬನ್ ಖಲಂದರ್ಸ್ ತಂಡದ ಮೊತ್ತ 3.5 ಓವರ್​ಗಳಲ್ಲಿ 60 ಕ್ಕೆ ಬಂದು ನಿಂತಿತ್ತು.

ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಂಡ್ರೆ ಫ್ಲೆಚರ್ 15 ಎಸೆತಗಳಲ್ಲಿ 4 ಫೋರ್​ ಹಾಗೂ 1 ಸಿಕ್ಸ್​ನೊಂದಿಗೆ 34 ರನ್ ಬಾರಿಸಿದರು. ಹಾಗೆಯೇ ಹಝರತುಲ್ಲಾ ಝಝೈ 21 ರನ್​ಗಳ ಕೊಡುಗೆ ನೀಡಿದರು. ಇದರೊಂದಿಗೆ ನಿಗದಿತ 10 ಓವರ್​ಗಳಲ್ಲಿ ಡರ್ಬನ್ ಖಲಂದರ್ಸ್ ತಂಡವು 6 ವಿಕೆಟ್​ ನಷ್ಟಕ್ಕೆ 122 ರನ್ ಪೇರಿಸಿತು.

123 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಬುಲವಾಯೊ ಬ್ರೇವ್ಸ್ ಪರ ಆಷ್ಟನ್ ಟರ್ನರ್ 23 ಎಸೆತಗಳಲ್ಲಿ 32 ರನ್ ಬಾರಿಸಿದರೆ, ಸಿಕಂದರ್ ರಾಝ (11) ಹಾಗೂ ರಿಯಾನ್ ಬರ್ಲ್ 11 ರನ್​ಗಳಿಸಿದರು. ಇತ್ತ ಬ್ರಾಡ್ ಇವಾನ್ಸ್​ 3 ವಿಕೆಟ್ ಕಬಳಿಸಿ ಬುಲವಾಯೊ ಬ್ರೇವ್ಸ್ ತಂಡದ ರನ್​ ಗತಿಯನ್ನು ನಿಯಂತ್ರಿಸಿದರು.

ಅಂತಿಮವಾಗಿ ಬುಲವಾಯೊ ಬ್ರೇವ್ಸ್ 10 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 97 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಡರ್ಬನ್ ಖಲಂದರ್ಸ್ ತಂಡವು 25 ರನ್​ಗಳ ಭರ್ಜರಿ ಜಯ ತನ್ನದಾಗಿಸಿಕೊಂಡಿತು.

ಬುಲವಾಯೊ ಬ್ರೇವ್ಸ್ ಪ್ಲೇಯಿಂಗ್ 11: ಬೆನ್ ಮೆಕ್‌ಡರ್ಮಾಟ್ (ವಿಕೆಟ್ ಕೀಪರ್) , ಕೋಬ್ ಹರ್ಫ್ಟ್ , ಆಷ್ಟನ್ ಟರ್ನರ್ , ಸಿಕಂದರ್ ರಾಝ (ನಾಯಕ) , ರಿಯಾನ್ ಬರ್ಲ್ , ಟಿಮಿಸೆನ್ ಮರುಮಾ , ಬ್ಯೂ ವೆಬ್‌ಸ್ಟರ್ , ಪ್ಯಾಟ್ರಿಕ್ ಡೂಲಿ , ತನಕಾ ಚಿವಂಗಾ , ಟೈಮಲ್ ಮಿಲ್ಸ್ , ಫರಾಜ್ ಅಕ್ರಮ್.

ಇದನ್ನೂ ಓದಿ: Team India: 13 ಸೋಲು…ನಾಕೌಟ್​ನಲ್ಲಿ ಮುಗ್ಗರಿಸುವ ಟೀಮ್ ಇಂಡಿಯಾ

ಡರ್ಬನ್ ಖಲಂದರ್ಸ್​ ಪ್ಲೇಯಿಂಗ್ 11: ಟಿಮ್ ಸೀಫರ್ಟ್ (ವಿಕೆಟ್ ಕೀಪರ್) , ಹಝರತುಲ್ಲಾ ಝಝೈ, ಕ್ರೇಗ್ ಎರ್ವಿನ್ (ನಾಯಕ) , ಆಂಡ್ರೆ ಫ್ಲೆಚರ್ , ನಿಕ್ ವೆಲ್ಚ್ , ಆಸಿಫ್ ಅಲಿ , ಜಾರ್ಜ್ ಲಿಂಡೆ , ಬ್ರಾಡ್ ಇವಾನ್ಸ್ , ಓವನ್ ಮುಜೊಂಡೋ , ಡೇರಿನ್ ಡುಪಾವಿಲ್ಲನ್ , ಮೊಹಮ್ಮದ್ ಅಮೀರ್.

Follow Us
TV9 Web
TV9 Web

TV9 Kannada

Read More
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ