Zim Afro T10 League: ಹೊಸ ಲೀಗ್‌ನಲ್ಲಿ ಭಾರತೀಯ ಕ್ರಿಕೆಟಿಗರು..!
Zim Afro T10 League: ಝಿಂಬಾಬ್ವೆ ಕ್ರಿಕೆಟ್ ಬೋರ್ಡ್ ಸಹಯೋಗದೊಂದಿಗೆ ಆಯೋಜಿಸುತ್ತಿರುವ ಝಿಮ್ ಆಫ್ರೋ ಟಿ10 ಲೀಗ್‌ನಲ್ಲಿ ಒಟ್ಟು 5 ಫ್ರಾಂಚೈಸಿಗಳ ತಂಡಗಳು ಕಣಕ್ಕಿಳಿಯಲಿದೆ. ಈ ತಂಡಗಳ ಪಟ್ಟಿ ಈ ಕೆಳಗಿನಂತಿದೆ.
ಐಪಿಎಲ್ನಿಂದ (IPL) ನಿವೃತ್ತಿ ಹೊಂದಿರುವ ಟೀಮ್ ಇಂಡಿಯಾದ ಮಾಜಿ ಆಟಗಾರರು ವಿದೇಶಿ ಲೀಗ್ಗಳತ್ತ ಮುಖ ಮಾಡುತ್ತಿದ್ದಾರೆ. ಈಗಾಗಲೇ ಯೂಸುಫ್ ಪಠಾಣ್, ರಾಬಿನ್ ಉತ್ತಪ್ಪ ಹಾಗೂ ಇರ್ಫಾನ್ ಪಠಾಣ್ ಹಲವು ಲೀಗ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಈ ಬಾರಿಯ ಐಪಿಎಲ್ ಮೂಲಕ ನಿವೃತ್ತಿ ಘೋಷಿಸಿದ್ದ ಅಂಬಾಟಿ ರಾಯುಡು ಇದೀಗ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇದರ ಬೆನ್ನಲ್ಲೇ ಝಿಂಬಾಬ್ವೆಯಲ್ಲಿ ನಡೆಯಲಿರುವ ಹೊಸ ಟಿ10 ಲೀಗ್ಗೂ ಭಾರತೀಯ ಆಟಗಾರರು ಆಯ್ಕೆಯಾಗಿದ್ದಾರೆ. ಅಬುಧಾಬಿ ಟಿ10 ಲೀಗ್ ಆಯೋಜಕರು ಆರಂಭಿಸುತ್ತಿರುವ ಝಿಮ್ ಆಫ್ರೋ T10 ಲೀಗ್‌ನಲ್ಲಿ ಆಡಲು ಟೀಮ್ ಇಂಡಿಯಾದ ಮಾಜಿ ಆಟಗಾರರು ಉತ್ಸುಕರಾಗಿದ್ದಾರೆ.
ಅದರಂತೆ ಇದೀಗ 5 ತಂಡಗಳಲ್ಲಿ ಭಾರತ ತಂಡದ ಮಾಜಿ ವೇಗಿ ಶ್ರೀಶಾಂತ್, ಆಲ್ರೌಂಡರ್ಗಳಾದ ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ ಹೆಸರುಗಳು ಕಾಣಿಸಿಕೊಂಡಿದೆ. ಅಲ್ಲದೆ ಈ ಟೂರ್ನಿಯಲ್ಲಿ ಸ್ಟುವರ್ಟ್ ಬಿನ್ನಿ ಮತ್ತು ಪಾರ್ಥಿವ್ ಪಟೇಲ್ ಕೂಡ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಇದರೊಂದಿಗೆ ಅಬುಧಾಬಿ ಟಿ10 ಲೀಗ್ ಬಳಿಕ ಭಾರತೀಯ ಆಟಗಾರರು ಝಿಮ್ ಆಫ್ರೋ ಟಿ10 ಟೂರ್ನಿಯತ್ತ ಮುಖ ಮಾಡಿರುವುದು ಸ್ಪಷ್ಟ. ಹೀಗಾಗಿ ಮುಂಬರುವ ದಿನಗಳಲ್ಲಿ ಐಪಿಎಲ್ನಲ್ಲಿ ಅವಕಾಶ ವಂಚಿತರಾಗುವ ಆಟಗಾರರು ವಿದೇಶಿ ಲೀಗ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ ಎಂದೇ ಹೇಳಬಹುದು.
ಝಿಮ್ ಆಫ್ರೋ ಲೀಗ್ ತಂಡಗಳು:
ಝಿಂಬಾಬ್ವೆ ಕ್ರಿಕೆಟ್ ಬೋರ್ಡ್ ಸಹಯೋಗದೊಂದಿಗೆ ಆಯೋಜಿಸುತ್ತಿರುವ ಝಿಮ್ ಆಫ್ರೋ ಟಿ10 ಲೀಗ್‌ನಲ್ಲಿ ಒಟ್ಟು 5 ಫ್ರಾಂಚೈಸಿಗಳ ತಂಡಗಳು ಕಣಕ್ಕಿಳಿಯಲಿದೆ. ಈ ತಂಡಗಳ ಪಟ್ಟಿ ಈ ಕೆಳಗಿನಂತಿದೆ.
- 1- ಹರಾರೆ ಹರಿಕೇನ್ಸ್,
- 2- ಬುಲವಾಯೊ ಬ್ರೇವ್ಸ್
- 3- ಕೇಪ್ ಟೌನ್ ಸ್ಯಾಂಪ್ ಆರ್ಮಿ
- 4- ಡರ್ಬನ್ ಕ್ಲಾಂಡರ್ಸ್
- 5- ಜೋಬರ್ಗ್ ಬಫಲೋಸ್