
ಖತಾರ್‌ನಲ್ಲಿ ನಡೆಯಲಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟಿ20 ಟೂರ್ನಿಗಾಗಿ ಭಾರತ ಎ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡವನ್ನು ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಮುನ್ನಡೆಸಲಿದ್ದಾರೆ. ಹಾಗೆಯೇ ಉಪನಾಯಕನಾಗಿ ನಮನ್ ಧೀರ್ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಈ ತಂಡದಲ್ಲಿ ಯುವ ಸ್ಫೋಟಕ ದಾಂಡಿಗರಾದ ವೈಭವ್ ಸೂರ್ಯವಂಶಿ ಹಾಗೂ ಪ್ರಿಯಾಂಶ್ ಆರ್ಯ ಕೂಡ ಸ್ಥಾನ ಪಡೆದಿದ್ದಾರೆ. ಕಳೆದ ಸೀಸನ್ ಐಪಿಎಲ್ನಲ್ಲಿ ವೈಭವ್ ಸೂರ್ಯವಂಶಿ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಅತ್ತ ಪ್ರಿಯಾಂಶ್ ಆರ್ಯ ಪಂಜಾಬ್ ಕಿಂಗ್ಸ್ ಪರ ಇನಿಂಗ್ಸ್ ಆರಂಭಿಸಿದ್ದರು. ಇದೀಗ ಈ ಇಬ್ಬರು ಯುವ ದಾಂಡಿಗರು ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಹಾಗೆಯೇ ನೆಹಾಲ್ ವಧೇರಾ, ಸೂರ್ಯಾಂಶ್ ಶೆಡ್ಗೆ, ರಮಣ್ದೀಪ್, ಅಶುತೋಷ್ ಶರ್ಮಾ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಯುವ ಆಲ್ರೌಂಡರ್ ಹರ್ಷ್ ದುಬೆ ಕೂಡ ಕಾಣಿಸಿಕೊಂಡಿದ್ದಾರೆ.
ಇನ್ನು ಬೌಲರ್ಗಳ ಪಟ್ಟಿಯಲ್ಲಿ ಕನ್ನಡಿಗ ವಿಜಯಕುಮಾರ್ ವೈಶಾಕ್, ಯಶ್ ಠಾಕೂರ್, ಸುಯಶ್ ಶರ್ಮಾ ಸ್ಥಾನ ಪಡೆದಿದ್ದಾರೆ. ಅದರಂತೆ ಉದಯೋನ್ಮುಖ ಏಷ್ಯಾಕಪ್ ಟಿ20 ಟೂರ್ನಿಗೆ ಭಾರತ ಎ ತಂಡ ಈ ಕೆಳಗಿನಂತಿದೆ…
ಭಾರತ ಎ ತಂಡ : ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ನೆಹಾಲ್ ವಧೇರಾ, ನಮನ್ ಧೀರ್ (ಉಪನಾಯಕ), ಸೂರ್ಯಾಂಶ್ ಶೆಡ್ಗೆ, ಜಿತೇಶ್ ಶರ್ಮಾ (ನಾಯಕ) ರಮಣದೀಪ್ ಸಿಂಗ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಹರ್ಷ್ ದುಬೆ, ಅಶುತೋಷ್ ಶರ್ಮಾ, ಯಶ್ ಠಾಕೂರ್, ಗುರ್ಜಪ್‌ನೀತ್ ಸಿಂಗ್, ಸುಯಶ್ ಶರ್ಮಾ, ವಿಜಯಕುಮಾರ್ ವೈಶಾಕ್, ಯಧುವೀರ್ ಸಿಂಗ್ ಚರಕ್,
ಮೀಸಲು ಆಟಗಾರರು: ಶೇಖ್ ರಶೀದ್, ಗುರ್ನೂರ್ ಸಿಂಗ್ ಬ್ರಾರ್, ಕುಮಾರ್ ಕುಶಾಗ್ರಾ, ತನುಷ್ ಕೋಟ್ಯಾನ್, ಸಮೀರ್ ರಿಝ್ವಿ.
ಇದನ್ನೂ ಓದಿ: IPL 2026: ಹೆಚ್ಚುವರಿ 10 ಪಂದ್ಯಗಳು… ಐಪಿಎಲ್ನಲ್ಲಿ ಮಹತ್ವದ ಬದಲಾವಣೆ
| ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್- ಭಾರತದ ವೇಳಾಪಟ್ಟಿ | ||||
| ಇಲ್ಲ. | ದಿನ | ದಿನಾಂಕ | ಮುಖಾಮುಖಿ | ಪಂದ್ಯ |
| 1 | ಶುಕ್ರವಾರ | ನವೆಂಬರ್ 14 | ಭಾರತ vs ಯುಎಇ | ಗ್ರೂಪ್ ಬಿ ಲೀಗ್ ಪಂದ್ಯ |
| 2 | ಭಾನುವಾರ | ನವೆಂಬರ್ 16 | ಭಾರತ vs ಪಾಕಿಸ್ತಾನ್ | ಗ್ರೂಪ್ ಬಿ ಲೀಗ್ ಪಂದ್ಯ |
| 3 | ಮಂಗಳವಾರ | ನವೆಂಬರ್ 18 | ಭಾರತ vs ಓಮನ್ | ಗ್ರೂಪ್ ಬಿ ಲೀಗ್ ಪಂದ್ಯ |
| 4 | ಶುಕ್ರವಾರ | ನವೆಂಬರ್ 21 | – | ಸೆಮಿಫೈನಲ್ -1 ಪಂದ್ಯ |
| 5 | ಶುಕ್ರವಾರ | ನವೆಂಬರ್ 21 | – | ಸೆಮಿಫೈನಲ್ – 2 ಪಂದ್ಯ |
| 6 | ಭಾನುವಾರ | ನವೆಂಬರ್ 23 | – | ಫೈನಲ್ |
Published On - 11:29 am, Tue, 4 November 25