ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಅಂಡರ್ -19 ತಂಡ ಪ್ರಕಟ; ವೈಭವ್​ಗೆ ಅವಕಾಶ

ndia U19 Squad for Australia: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತ ಅಂಡರ್-19 ಪುರುಷರ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಆಯುಷ್ ಮ್ಹಾತ್ರೆ ನಾಯಕತ್ವದಲ್ಲಿ 17 ಆಟಗಾರರ ತಂಡವು ಮೂರು ಏಕದಿನ ಪಂದ್ಯಗಳು ಮತ್ತು ಎರಡು ನಾಲ್ಕು ದಿನಗಳ ಪಂದ್ಯಗಳನ್ನು ಆಡಲಿದೆ. 14 ವರ್ಷದ ವೈಭವ್ ಸೂರ್ಯವಂಶಿ ಸೇರಿದಂತೆ ಹಲವು ಯುವ ಪ್ರತಿಭೆಗಳು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪ್ರವಾಸ ಸೆಪ್ಟೆಂಬರ್ 2025 ರಲ್ಲಿ ಆರಂಭವಾಗಲಿದೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಅಂಡರ್ -19 ತಂಡ ಪ್ರಕಟ; ವೈಭವ್​ಗೆ ಅವಕಾಶ
Ind U19 Team

Updated on: Jul 30, 2025 | 10:34 PM

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ( BCCI ) ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತ ಅಂಡರ್ -19 ಪುರುಷರ ಕ್ರಿಕೆಟ್ ತಂಡವನ್ನು (India U19 cricket team) ಪ್ರಕಟಿಸಿದೆ. ಈ ಪ್ರವಾಸವು ಸೆಪ್ಟೆಂಬರ್ 2025 ರಲ್ಲಿ ನಡೆಯಲಿದ್ದು , ಇದರಲ್ಲಿ ಭಾರತದ ಯುವ ತಂಡವು ಆಸ್ಟ್ರೇಲಿಯಾ ಅಂಡರ್ -19 ತಂಡದ ವಿರುದ್ಧ ಮೂರು ಏಕದಿನ ಪಂದ್ಯಗಳು ಮತ್ತು ಎರಡು ನಾಲ್ಕು ದಿನಗಳ ಪಂದ್ಯಗಳನ್ನು ಆಡಲಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಯುವ ತಂಡವನ್ನು ಮುನ್ನಡೆಸಿದ್ದ ಆಯುಷ್ ಮ್ಹಾತ್ರೆ, ಆಸ್ಟ್ರೇಲಿಯಾ ಪ್ರವಾಸದಲ್ಲೂ ತಂಡವನ್ನು ಮುನ್ನಡೆಸಲಿದ್ದಾರೆ. ಇದರ ಜೊತೆಗೆ ಇಂಗ್ಲೆಂಡ್​ನಲ್ಲಿ ಅಬ್ಬರಿಸಿದ್ದ 14 ವರ್ಷದ ವೈಭವ್ ಸೂರ್ಯವಂಶಿಯನ್ನು (Vaibhav Suryavanshi) ಈ ಪ್ರವಾಸಕ್ಕೂ ಆಯ್ಕೆ ಮಾಡಲಾಗಿದೆ. ಒಟ್ಟಾರೆ ಈ ಪ್ರವಾಸಕ್ಕೆ 17 ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಐವರು ಆಟಗಾರರನ್ನು ಸ್ಟ್ಯಾಂಡ್‌ಬೈ ಆಗಿ ಆಯ್ಕೆ ಮಾಡಲಾಗಿದೆ. ​​​​​​​​​​​​​​​​​​​

ವೈಭವ್ ಸೂರ್ಯವಂಶಿಗೆ ಸ್ಥಾನ

ಮೇಲೆ ಹೇಳಿದಂತೆ ಜೂನಿಯರ್ ಕ್ರಿಕೆಟ್ ಸಮಿತಿಯು ಆಯುಷ್ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಿದ್ದು , ವಿಹಾನ್ ಮಲ್ಹೋತ್ರಾ ಅವರನ್ನು ಉಪನಾಯಕರನ್ನಾಗಿ ನೇಮಿಸಿದೆ. ಅವರಲ್ಲದೆ , 14 ವರ್ಷದ ಸ್ಫೋಟಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಅವರನ್ನು ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಉಳಿದಂತೆ ರಾಹುಲ್ ಕುಮಾರ್, ಅಭಿಗ್ಯಾನ್ ಕುಂಡು , ಆರ್‌ಎಸ್ ಅಂಬರೀಶ್ ಮತ್ತು ಕನಿಷ್ಕ ಚೌಹಾಣ್ ಅವರಂತಹ ಯುವ ಆಟಗಾರರು ಸಹ ಈ ಪ್ರವಾಸದ ಭಾಗವಾಗಲಿದ್ದಾರೆ .​​​​​​​​​​​​​​​​​​​​​​​​

3 ಪಂದ್ಯಗಳ ಏಕದಿನ ಸರಣಿ

ಮೊದಲನೆಯದಾಗಿ ಭಾರತ ಮತ್ತು ಆಸ್ಟ್ರೇಲಿಯಾದ 19 ವರ್ಷದೊಳಗಿನವರ ತಂಡಗಳ ನಡುವೆ 3 ಏಕದಿನ ಪಂದ್ಯಗಳು ನಡೆಯಲಿವೆ . ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 21 ರಂದು ನಡೆಯಲಿದೆ. ನಂತರ ಎರಡನೇ ಪಂದ್ಯ ಸೆಪ್ಟೆಂಬರ್ 24 ರಂದು ಮತ್ತು ಮೂರನೇ ಪಂದ್ಯ ಸೆಪ್ಟೆಂಬರ್ 26 ರಂದು ನಡೆಯಲಿದೆ. ಅಲ್ಲದೆ , ಎರಡೂ ತಂಡಗಳ ನಡುವೆ 2 ಯೂತ್ ಟೆಸ್ಟ್ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 3 ರವರೆಗೆ ನಡೆಯಲಿದೆ. ಇದರ ನಂತರ ಎರಡನೇ ಟೆಸ್ಟ್ ಅಕ್ಟೋಬರ್ 7 ರಿಂದ ಅಕ್ಟೋಬರ್ 10 ರವರೆಗೆ ನಡೆಯಲಿದೆ.​​​​​​​​​​​​​​​​​​​​

14 ವರ್ಷದ ವೈಭವ್ ಸೂರ್ಯವಂಶಿ ಆದಾಯದಲ್ಲಿ 40 ಪಟ್ಟು ಹೆಚ್ಚಳ

ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಅಂಡರ್ -19 ತಂಡ

ಆಯುಷ್ ಮ್ಹಾತ್ರೆ ( ನಾಯಕ ), ವಿಹಾನ್ ಮಲ್ಹೋತ್ರಾ ( ಉಪನಾಯಕ ), ವೈಭವ್ ಸೂರ್ಯವಂಶಿ , ವೇದಾಂತ್ ತ್ರಿವೇದಿ, ರಾಹುಲ್ ಕುಮಾರ್, ಅಭಿಜ್ಞಾನ್ ಕುಂದು ( ವಿಕೆಟ್ ಕೀಪರ್ ), ಹರ್ವಂಶ್ ಸಿಂಗ್ ( ವಿಕೆಟ್ ಕೀಪರ್ ), ಆರ್ ಎಸ್ ಅಂಬರೀಶ್, ಕಾನಿಷ್ಕ್ ಚೌಹಾಣ್, ನಮನ್ ಪುಷ್ಪಕ್, ಹೆನಿಲ್ ಪಟೇಲ್, ಡಿ ದೀಪೇಶ್, ಕಿಶನ್ ಕುಮಾರ್, ಅನ್ಮೋಲ್ಜೀತ್ ಸಿಂಗ್, ಖಿಲಾನ್ ಪಟೇಲ್, ಉಧವ್ ಮೋಹನ್, ಅಮನ್ ಚೌಹಾಣ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ