ಹೊಸ ವರ್ಷದ ಮೊದಲ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ ಶುಭಾರಂಭ ಮಾಡಿದೆ. ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಶಿವಂ ದುಬೆ ಅವರ ಆಲ್‌ರೌಂಡ್ ಪ್ರದರ್ಶನದ ಆಧಾರದ ಮೇಲೆ ಟೀಂ ಇಂಡಿಯಾ ಅಫ್ಘಾನಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಭಾರತೀಯ ಬೌಲರ್‌ಗಳು ಮೊದಲು ಅಫ್ಘಾನಿಸ್ತಾನವನ್ನು ಕೇವಲ 158 ಕ್ಕೆ ಸೀಮಿತಗೊಳಿಸಿದರು. ಆ ನಂತರ ಶಿವಂ ದುಬೆ-ಜಿತೇಶ್ ಶರ್ಮಾ ಅವರ ಬಲವಾದ ಇನ್ನಿಂಗ್ಸ್‌ನಿಂದ 18 ನೇ ಓವರ್‌ನಲ್ಲಿಯೇ ಟೀಂ ಇಂಡಿಯಾ ಗೆಲುವಿನ ದಡ ಸೇರಿತು. ಇದರೊಂದಿಗೆ 14 ತಿಂಗಳ ಬಳಿಕ ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೆ ವಾಪಸಾದ ನಾಯಕ ರೋಹಿತ್ ಶರ್ಮಾ ಗೆಲುವಿನ ರುಚಿ ಸವಿದಿದ್ದಾರೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿ 6 ವಿಕೆಟ್‌ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಇದಕ್ಕುತ್ತರವಾಗಿ ಗುರಿ ಬೆನ್ನಟ್ಟಿದ ಭಾರತ 6 ವಿಕೆಟ್‌ಗಳ ಜಯ ಸಾಧಿಸಿತು.
ಭಾರತ ತಂಡದ ಆಲ್ ರೌಂಡರ್ ಶಿವಂ ದುಬೆ ಅಫ್ಘಾನಿಸ್ತಾನ ವಿರುದ್ಧ 38 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದರು. ಇದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶಿವಂ ದುಬೆ ಅವರ ಎರಡನೇ ಅರ್ಧಶತಕವಾಗಿದೆ.
ಭಾರತಕ್ಕೆ ನಾಲ್ಕನೇ ಹೊಡೆತ ಬಿದ್ದಿದೆ. ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದ ಜಿತೇಶ್ ಶರ್ಮಾ 31 ರನ್ ಗಳಿಸಿ ಕ್ಯಾಚ್ ಔಟ್ ಆದರು.
12 ಓವರ್‌ಗಳ ನಂತರ ಭಾರತ ತಂಡದ ಸ್ಕೋರ್ 3 ವಿಕೆಟ್‌ಗೆ 102 ರನ್ ಆಗಿದೆ. ಶಿವಂ ದುಬೆ 33 ಮತ್ತು ಜಿತೇಶ್ ಶರ್ಮಾ 18 ರನ್‌ಗಳಿಸಿ ಆಡುತ್ತಿದ್ದಾರೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಭಾರತ 11 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 90 ರನ್ ಗಳಿಸಿದೆ. ಪ್ರಸ್ತುತ ಜಿತೇಶ್ ಶರ್ಮಾ 11 ರನ್ ಹಾಗೂ ಶಿವಂ ದುಬೆ 28 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಭಾರತಕ್ಕೆ 54 ಎಸೆತಗಳಲ್ಲಿ 69 ರನ್‌ಗಳ ಅಗತ್ಯವಿದೆ.
10 ಓವರ್‌ಗಳಲ್ಲಿ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿದೆ. ಗೆಲುವಿಗೆ 60 ಎಸೆತಗಳಲ್ಲಿ 76 ರನ್‌ಗಳ ಅಗತ್ಯವಿದೆ. ಶಿವಂ ದುಬೆ 20 ಎಸೆತಗಳಲ್ಲಿ 26 ರನ್ ಹಾಗೂ ಜಿತೇಶ್ ಶರ್ಮಾ 4 ಎಸೆತಗಳಲ್ಲಿ 6 ರನ್ ಗಳಿಸಿ ಆಡುತ್ತಿದ್ದಾರೆ.
ಭಾರತಕ್ಕೆ ಮೂರನೇ ಹೊಡೆತ ಬಿದ್ದಿದೆ. ತಿಲಕ್ ವರ್ಮಾ ಔಟಾಗಿದ್ದಾರೆ. ಒಂಬತ್ತನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಗುಲ್ಬದಿನ್ ನೈಬ್ ಅದ್ಭುತ ಕ್ಯಾಚ್ ಪಡೆದರು.
ತಿಲಕ್ ವರ್ಮಾ- 26 (22b 2×4 1×6
7ನೇ ಓವರ್ನಲ್ಲಿ ಭಾರತ ತನ್ನ ಅರ್ಧಶತಕದ ಗಡಿ ದಾಟಿದೆ. ಈ ಓವರ್ನಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಬಂತು.
ಭಾರತದ ಪವರ್ ಪ್ಲೇ ಅಂತ್ಯಗೊಂಡಿದೆ. ಈ 6 ಓವರ್‌ಗಳಲ್ಲಿ ತಂಡ 2 ವಿಕೆಟ್ ಕಳೆದುಕೊಂಡು ಕೇವಲ 36 ರನ್ ಕಲೆಹಾಕಿದೆ. ಮುಜೀಬ್ ಬೌಲ್ ಮಾಡಿದ 6ನೇ ಓವರ್ ಮೇಡನ್ ಆಯಿತು.
4ನೇ ಓವರ್ನಲ್ಲಿ ಭಾರತದ ಎರಡನೇ ವಿಕೆಟ್ ಪತನವಾಗಿದೆ. ಆರಂಭಿಕ ಗಿಲ್ 12 ಎಸೆತಗಳಲ್ಲಿ 23 ರನ್ ಸಿಡಿಸಿ ಸ್ಟಂಪ್ ಔಟ್ ಆದರು.
ಭಾರತ 28-2
3ನೇ ಓವರ್ನಲ್ಲಿ ಗಿಲ್ 2 ಬೌಂಡರಿ ಬಾರಿಸಿದರು. ಈ ಓವರ್ನಲ್ಲಿ ಒಟ್ಟು 11 ರನ್ ಬಂದವು.
ಭಾರತ 19-1
ಭಾರತಕ್ಕೆ ಮೊದಲ ಓವರ್ನಲ್ಲೇ ಮೊದಲ ಹೊಡೆತ ಬಿದ್ದಿದೆ. ನಾಯಕ ರೋಹಿತ್ ಶರ್ಮಾ ಖಾತೆ ತೆರೆಯದೆ ರನ್ ಔಟ್ ಆಗಿದ್ದಾರೆ.
ಅಫ್ಘಾನಿಸ್ತಾನ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 158 ರನ್ ಕಲೆಹಾಕಿದೆ. ಈ ಮೂಲಕ ಭಾರತಕ್ಕೆ 159 ರನ್ ಟಾರ್ಗೆಟ್ ನೀಡಿದೆ. 20 ಓವರ್ನಲ್ಲಿ 3 ಬೌಂಡರಿ ಕೂಡ ಬಂದವು.
18ನೇ ಓವರ್‌ನ ಕೊನೆಯ ಎಸೆತದಲ್ಲಿ ನಬಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ರಿಂಕುಗೆ ಕ್ಯಾಚಿತ್ತು ನಿರ್ಗಮಿಸಿದರು. ನಬಿ 27 ಎಸೆತಗಳಲ್ಲಿ 42 ರನ್ ಸಿಡಿಸಿದರು.
16 ಓವರ್‌ಗಳಲ್ಲಿ ಅಫ್ಘಾನಿಸ್ತಾನ ಮೂರು ವಿಕೆಟ್ ಕಳೆದುಕೊಂಡು 120 ರನ್ ಗಳಿಸಿದೆ. ಮೊಹಮ್ಮದ್ ನಬಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಅವರು 22 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 39 ರನ್ ಗಳಿಸಿದ್ದಾರೆ.
ಅಫ್ಘಾನಿಸ್ತಾನ ತಂಡದ ನಾಲ್ಕನೇ ವಿಕೆಟ್ ಪತನವಾಗಿದೆ. ಮುಖೇಶ್ ಕುಮಾರ್ ಎಸೆತದಲ್ಲಿ 29 ರನ್ ಗಳಿಸಿದ್ದ ಒಮರ್ಜಾಯ್ ಔಟಾದರು.
ಅಫ್ಘಾನಿಸ್ತಾನ 15 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 105 ರನ್ ಗಳಿಸಿದೆ. ಮೊಹಮ್ಮದ್ ನಬಿ ಮತ್ತು ಒಮರ್ಜಾಯ್ ಜೋಡಿ ಕ್ರೀಸ್‌ನಲ್ಲಿದೆ.
ಅಫ್ಘಾನಿಸ್ತಾನ 12 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿದೆ. ಒಮರ್ಜಾಯ್ 9 ಎಸೆತಗಳಲ್ಲಿ 14 ರನ್ ಗಳಿಸಿ ಆಡುತ್ತಿದ್ದಾರೆ. ನಬಿ 7 ಎಸೆತಗಳಲ್ಲಿ 4 ರನ್ ಗಳಿಸಿ ಆಡುತ್ತಿದ್ದಾರೆ. ಟೀಂ ಇಂಡಿಯಾದ ಬೌಲರ್‌ಗಳು ಮತ್ತೊಮ್ಮೆ ವಿಕೆಟ್‌ಗಳ ಹುಡುಕಾಟದಲ್ಲಿದ್ದಾರೆ.
ಭಾರತ ಕ್ರಿಕೆಟ್ ತಂಡಕ್ಕೆ ಮೂರನೇ ಯಶಸ್ಸು ಸಿಕ್ಕಿದೆ. ರಹಮತ್ ಶಾ ಔಟಾಗಿದ್ದಾರೆ. ಅಕ್ಷರ್ ಪಟೇಲ್ ತಮ್ಮ 2ನೇ ವಿಕೆಟ್ ಕಬಳಿಸಿದ್ದಾರೆ. 10 ಓವರ್‌ಗಳ ನಂತರ ಅಫ್ಘಾನ್ ತಂಡ 3 ವಿಕೆಟ್ ಕಳೆದುಕೊಂಡು 60 ರನ್ ಕಲೆಹಾಕಿದೆ.
ಅಫ್ಘಾನ್ ತಂಡದ 2ನೇ ವಿಕೆಟ್ ಪತನವಾಗಿದೆ ನಾಯಕ ಇಬ್ರಾಹಿಂ ಜರ್ಧಾನ್ ದುಬೆ ಬೌಲಿಂಗ್ನಲ್ಲಿ ರೋಹಿತ್ ಶರ್ಮಾಗೆ ಕ್ಯಾಚಿತ್ತು ಔಟಾದರು.
8ನೇ ಓವರ್‌ನ ಕೊನೆಯ ಎಸೆತದಲ್ಲಿ ಗುರ್ಬಾಝ್ ಸ್ಟಂಪ್ ಔಟ್ ಆದರು. ಅಕ್ಷರ್ ಪಟೇಲ್ ಮೊದಲ ವಿಕೆಟ್ ಪಡೆದರು.
ಅಫ್ಘಾನ್ ತಂಡ 8ನೇ ಓವರ್ನಲ್ಲಿ ತನ್ನ 50 ರನ್ ಪೂರೈಸಿತು. ಗುರ್ಬಾಝ್ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು 50 ರ ಗಡಿ ದಾಟಿಸಿದರು.
ಭಾರತ ತಂಡ ಮೊದಲ ವಿಕೆಟ್‌ಗಾಗಿ ಹುಡುಕಾಟ ನಡೆಸುತ್ತಿದೆ. ಇಬ್ರಾಹಿಂ ಜದ್ರಾನ್ ಮತ್ತು ಗುರ್ವಾಜ್ ಕ್ರೀಸ್‌ನಲ್ಲಿದ್ದಾರೆ. 7ನೇ ಓವರ್ನಲ್ಲಿ ಇಬ್ರಾಹಿಂ 1 ಭರ್ಜರಿ ಸಿಕ್ಸರ್ ಕೂಡ ಬಾರಿಸಿದರು.
ಅಫ್ಘಾನ್ ತಂಡದ ಬ್ಯಾಟಿಂಗ್ ಪವರ್ ಪ್ಲೇ ಮುಗಿದಿದೆ. ಈ 6 ಓವರ್‌ಗಳಲ್ಲಿ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ 33 ರನ್ ಕಲೆಹಾಕಿದೆ. ಸ್ವಲ್ಪ ಮಟ್ಟಿಗೆ ಟೀಂ ಇಂಡಿಯಾ ತನ್ನ ಫೀಲ್ಡಿಂಗ್ನಲ್ಲಿ ಎಡವುತ್ತಿದೆ.
ಅಕ್ಷರ್ ಪಟೇಲ್ ಬೌಲ್ ಮಾಡಿದ ನಾಲ್ಕನೇ ಓವರ್ನಲ್ಲಿ 1 ಬೌಂಡರಿ ಸೇರಿದಂತೆ 7 ರನ್‌ಗಳು ಬಂದವು.
ಅಫ್ಘಾನಿಸ್ತಾನದ ನಿಧಾನಗತಿಯ ಆರಂಭ, ತಂಡಕ್ಕೆ ದೊಡ್ಡ ಹೊಡೆತದ ಅಗತ್ಯವಿದೆ.
ಮುಖೇಶ್ ಕುಮಾರ್ ಬೌಲ್ ಮಾಡಿದ ಎರಡನೇ ಓವರ್‌ನಲ್ಲಿ 1 ಬೌಂಡರಿ ಸೇರಿದಂತೆ 6 ರನ್ ಬಂದವು.
ಮೊದಲ ಓವರ್‌ನಲ್ಲಿ ಅರ್ಷದೀಪ್ ಯಾವುದೇ ರನ್ ನೀಡಲಿಲ್ಲ. ಆರು ಎಸೆತಗಳನ್ನು ಆಡಿದ ರಹಮಾನುಲ್ಲಾ ಗುರ್ಬಾಜ್ ಒಂದು ರನ್ ಗಳಿಸಲು ಸಾಧ್ಯವಾಗಲಿಲ್ಲ.
ಪಂದ್ಯ ಆರಂಭಗೊಂಡಿದ್ದು, ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಇಬ್ರಾಹಿಂ ಜದ್ರಾನ್ ಮತ್ತು ರಹಮಾನುಲ್ಲಾ ಗುರ್ಬಾಜ್ ಕ್ರೀಸ್‌ನಲ್ಲಿದ್ದಾರೆ.
ಇಬ್ರಾಹಿಂ ಜದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ರಹಮತ್ ಶಾ, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ನಜಿಬುಲ್ಲಾ ಝದ್ರಾನ್, ಕರೀಂ ಜನತ್, ಗುಲ್ಬದಿನ್ ನೈಬ್, ಫಜಲ್ಹಕ್ ಫಾರೂಕಿ, ನವೀನ್-ಉಲ್-ಹಕ್ ಮತ್ತು ಮುಜೀಬ್ ಉರ್ ರಹಮಾನ್.
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ತಿಲಕ್ ವರ್ಮಾ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್ ಮತ್ತು ಮುಖೇಶ್ ಕುಮಾರ್.
ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಭಾರತ -ಅಫ್ಘಾನಿಸ್ತಾನ ನಡುವಿನ ಮೊದಲ ಟಿ20 ಪಂದ್ಯದ ಟಾಸ್ ಸಂಜೆ 6:30ಕ್ಕೆ ನಡೆಯಲಿದೆ.
Published On - 6:08 pm, Thu, 11 January 24