ಏಷ್ಯಾಕಪ್‌ನಲ್ಲಿ (Asia Cup 2022) ಉಳಿದಿರುವ ಭರವಸೆಯೊಂದಿಗೆ ಭಾರತ ತಂಡ ಗುರುವಾರ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಸೂಪರ್ 4ರ ಮೊದಲೆರಡು ಪಂದ್ಯಗಳಲ್ಲಿ ಸೋತಿರುವ ಭಾರತ ತಂಡದ ಫೈನಲ್ ತಲುಪುವ ಆಸೆ ಬಹುತೇಕ ಮುಗಿದಿದೆ. ಭಾರತ ಈಗ ಸೂಪರ್ 4 ರಲ್ಲಿ ತನ್ನ ಉಳಿದ ಪಂದ್ಯಗಳಲ್ಲಿ ಅಫ್ಘಾನಿಸ್ತಾನ ಮತ್ತು ನಂತರ ಬಾಂಗ್ಲಾದೇಶವನ್ನು ಎದುರಿಸಬೇಕಾಗಿದೆ. ಭಾರತ ಗುಂಪು ಸುತ್ತಿನಲ್ಲಿ ಪಾಕಿಸ್ತಾನ ಮತ್ತು ಹಾಂಗ್ ಕಾಂಗ್ ತಂಡವನ್ನು ಸೋಲಿಸುವ ಮೂಲಕ ಸೂಪರ್ 4 ಗೆ ಲಗ್ಗೆ ಇಟ್ಟಿತ್ತು. ಮತ್ತೊಂದೆಡೆ, ಅಫ್ಘಾನಿಸ್ತಾನ ತಂಡ ತಮ್ಮ ಗುಂಪಿನಲ್ಲಿ ಎರಡನೇ ಸ್ಥಾನ ಗಳಿಸಿತು.
ಅವೇಶ್ ಖಾನ್ ತಂಡದಿಂದ ಹೊರಬಿದ್ದಿದ್ದಾರೆ
ವೇಗದ ಬೌಲರ್ ಅವೇಶ್ ಖಾನ್ ಜ್ವರ-ಸಂಬಂಧಿತ ಅನಾರೋಗ್ಯದ ಕಾರಣ ಏಷ್ಯಾಕಪ್‌ನ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದು, ಇದನ್ನು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಅವರ ಬದಲಿಗೆ ವೇಗದ ಬೌಲರ್ ದೀಪಕ್ ಚಹಾರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮಂಡಳಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ, ‘ಆವೇಶ್‌ಗೆ ಜ್ವರ ಕಾಣಿಸಿಕೊಂಡಿದ್ದು, ಸೈನಸ್ ಸಮಸ್ಯೆಯಿಂದ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಟೂರ್ನಿಯಲ್ಲಿ ಅವರು ಮುಂದೆ ಆಡಲು ಸಾಧ್ಯವಾಗುವುದಿಲ್ಲ. ದೀಪಕ್ ಚಹಾರ್ ಇಲ್ಲಿದ್ದು, ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದಿದ್ದರು.
ಅಫ್ಘಾನಿಸ್ತಾನವನ್ನು ಭಾರತ ಹಗುರವಾಗಿ ಪರಿಗಣಿಸುವುದಿಲ್ಲ
ಭಾರತ ತಂಡ ಈಗ ಅಫ್ಘಾನಿಸ್ತಾನವನ್ನು ಎದುರಿಸಬೇಕಾಗಿದೆ. ರಶೀದ್ ಖಾನ್, ಮುಜೀಬ್ ಜದ್ರಾನ್, ಮೊಹಮ್ಮದ್ ನಬಿ, ಹಜರತುಲ್ಲಾ ಝಜೈ ಮತ್ತು ರಹಮಾನುಲ್ಲಾ ಗುರ್ಬಾಜ್ ಅವರಂತಹ ಬಲಿಷ್ಠ ಟಿ20 ಆಟಗಾರರನ್ನು ಹೊಂದಿರುವ ಅಫ್ಘಾನಿಸ್ತಾನವನ್ನು ಎದುರಿಸಬೇಕಾಗಿದೆ. ತನ್ನ ಪವರ್ ಹಿಟ್ಟರ್‌ನ ಬಲದಿಂದ 170 ರನ್‌ಗಳ ಗುರಿಯನ್ನು ಸಹ ಸಾಧಿಸಬಲ್ಲ ತಂಡ ಇದಾಗಿದೆ ಮತ್ತು ರಶೀದ್‌ನಂತಹ ಬೌಲರ್ ನೇತೃತ್ವದಲ್ಲಿ ಎದುರಾಳಿ ತಂಡವನ್ನು ಕಡಿಮೆ ಸ್ಕೋರ್‌ಗೆ ಕಟ್ಟಿಹಾಕುವ ಸಾಮಥ್ಯ್ರವನ್ನು ಹೊಂದಿದೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ಯಾವಾಗ ನಡೆಯಲಿದೆ?
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯವು ಗುರುವಾರ, ಸೆಪ್ಟೆಂಬರ್ 7 ರಂದು ನಡೆಯಲಿದೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ಎಲ್ಲಿ ನಡೆಯಲಿದೆ?
ಏಷ್ಯಾ ಕಪ್-2022 ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ಯಾವಾಗ ಪ್ರಾರಂಭವಾಗುತ್ತದೆ?
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ರಾತ್ರಿ 7:30 ಕ್ಕೆ ಆರಂಭವಾಗಲಿದ್ದು, ಟಾಸ್ 7 ಗಂಟೆಗೆ ನಡೆಯಲಿದೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದ ನೇರ ಪ್ರಸಾರ ಎಲ್ಲಿ ನಡೆಯಲಿದೆ?
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನಡೆಯಲಿದೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದ ಲೈವ್ ಸ್ಟ್ರೀಮಿಂಗ್ ಎಲ್ಲಿ ಪ್ರಸಾರವಾಗಲಿದೆ?
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯವು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.
Published On - 6:32 pm, Wed, 7 September 22