Asia cup 2022: ‘ಟೆನ್ಷನ್ ತೆಗೆದುಕೊಳ್ಳಬೇಡಿ, ಭಾರತ- ಪಾಕಿಸ್ತಾನ ಫೈನಲ್ ಆಡಲಿವೆ’; ರೋಹಿತ್ ಶರ್ಮಾ

Asia cup 2022: 'ಅಣ್ಣ, ನೀನು ಟೆನ್ಶನ್ ಮಾಡಿಕೊಳ್ಳಬೇಡ. ಭಾರತ ಮತ್ತು ಪಾಕಿಸ್ತಾನ ನಡುವೆ ಫೈನಲ್ ಪಂದ್ಯ ನಡೆಯಲಿದೆ’ ಎಂದು ಹೇಳಿದರು. ರೋಹಿತ್ ಈ ಮಾತು ಹೇಳುತ್ತಿದ್ದಂತೆ ಅಲ್ಲಿದ್ದ ಪತ್ರಕರ್ತರು ಚಪ್ಪಾಳೆ ತಟ್ಟಿದರು. ರೋಹಿತ್‌ಗೂ ನಗು ತಡೆಯಲಾಗಲಿಲ್ಲ.

Asia cup 2022: ‘ಟೆನ್ಷನ್ ತೆಗೆದುಕೊಳ್ಳಬೇಡಿ, ಭಾರತ- ಪಾಕಿಸ್ತಾನ ಫೈನಲ್ ಆಡಲಿವೆ’; ರೋಹಿತ್ ಶರ್ಮಾ
Follow us
TV9 Web
| Updated By: ಪೃಥ್ವಿಶಂಕರ

Updated on:Sep 07, 2022 | 8:17 PM

ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ (Team India) ಸೋಲು ಕಂಡಿದೆ. ಈ ಸೋಲಿನಿಂದ ಟೀಂ ಇಂಡಿಯಾ ಏಷ್ಯಾಕಪ್‌ನಲ್ಲಿ ಫೈನಲ್‌ಗೆ ತಲುಪುವುದು ಕಷ್ಟಕರವಾಗಿದೆ. ಶ್ರೀಲಂಕಾ ವಿರುದ್ಧದ ಸೋಲಿನಿಂದ ಭಾರತದ ಅಭಿಮಾನಿಗಳು ಕೂಡ ನಿರಾಸೆಗೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ಏಷ್ಯಾಕಪ್ (Asia cup 2022) ಫೈನಲ್ ಪಂದ್ಯ ನಡೆಯಬೇಕೆಂದು ಅಭಿಮಾನಿಗಳು ಬಯಸಿದ್ದರು. ಆದರೆ ಈಗ ಅದು ಆಗುವ ಸಾಧ್ಯತೆ ತೀರ ಕಡಿಮೆ.

ಭಾರತ-ಪಾಕ್ ಫೈನಲ್ ಪಂದ್ಯ ನಡೆಯಲಿದೆಯೇ?

ಶ್ರೀಲಂಕಾ ವಿರುದ್ಧದ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ ಅವರ ಹೇಳಿಕೆಯನ್ನು ಅಭಿಮಾನಿಗಳು ಈಗ ಸಖತ್ ಇಷ್ಟಪಟ್ಟಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ರೋಹಿತ್ ಶರ್ಮಾ ಅವರಿಗೆ, ರೋಹಿತ್ ಭಾಯ್ ಅಭಿಮಾನಿಗಳು ಭಾರತ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯವನ್ನು ನೋಡಲು ಬಯಸಿದ್ದರು. ಹೀಗಾಗಿ ನಾವು ಇಂಡೋ-ಪಾಕ್ ಫೈನಲ್ ಅನ್ನು ನೋಡುತ್ತೇವೆಯೇ? ಎಂಬ ಪ್ರಶ್ನೆ ಕೇಳಿದರು. ಇದಕ್ಕೆ ಹಿಟ್‌ಮ್ಯಾನ್ ತಮಾಷೆಯ ಉತ್ತರವನ್ನು ನೀಡಿದರು.

ಸಹೋದರ, ಟೆನ್ಷನ್ ತೆಗೆದುಕೊಳ್ಳಬೇಡಿ

‘ಅಣ್ಣ, ನೀನು ಟೆನ್ಶನ್ ಮಾಡಿಕೊಳ್ಳಬೇಡ. ಭಾರತ ಮತ್ತು ಪಾಕಿಸ್ತಾನ ನಡುವೆ ಫೈನಲ್ ಪಂದ್ಯ ನಡೆಯಲಿದೆ’ ಎಂದು ಹೇಳಿದರು. ರೋಹಿತ್ ಈ ಮಾತು ಹೇಳುತ್ತಿದ್ದಂತೆ ಅಲ್ಲಿದ್ದ ಪತ್ರಕರ್ತರು ಚಪ್ಪಾಳೆ ತಟ್ಟಿದರು. ರೋಹಿತ್‌ಗೂ ನಗು ತಡೆಯಲಾಗಲಿಲ್ಲ.

ರೋಹಿತ್ ಬಿರುಸಿನ ಬ್ಯಾಟಿಂಗ್

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ನಾಯಕ ರೋಹಿತ್ ಬಿರುಸಿನ ಬ್ಯಾಟಿಂಗ್ ಮಾಡಿ 41 ಎಸೆತಗಳಲ್ಲಿ 72 ರನ್ ಗಳಿಸಿದರು. ಇವರ ಬ್ಯಾಟಿಂಗ್ ಬಲದಿಂದ ಭಾರತ 8 ವಿಕೆಟ್ ಕಳೆದುಕೊಂಡು 174 ರನ್​ಗಳ ಗುರಿ ನೀಡಿತು. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ಗಳಿಂದ ಸೋತಿತ್ತು.

ಭಾರತದ ಭರವಸೆ ಜೀವಂತ

ಇಂದು ಅಫ್ಘಾನಿಸ್ತಾನ-ಪಾಕಿಸ್ತಾನ ಪಂದ್ಯ ನಡೆಯುತ್ತಿದೆ. ಆ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ? ಟೀಮ್ ಇಂಡಿಯಾದ ಭವಿಷ್ಯದ ಪಯಣ ಇದರ ಮೇಲೆ ನಿಂತಿದೆ. ಪಾಕಿಸ್ತಾನ ತಂಡ ಗೆದ್ದರೆ ಟೀಂ ಇಂಡಿಯಾ ಪಯಣ ಅಂತ್ಯವಾಗಲಿದೆ. ನಾಳೆ ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ಔಪಚಾರಿಕವಾಗಿ ನಡೆಯಲಿದೆ. ಆದರೆ ಅಫ್ಘಾನಿಸ್ತಾನ ತಂಡ ಗೆದ್ದರೆ ಭಾರತದ ಭರವಸೆ ಜೀವಂತವಾಗಿರುತ್ತದೆ.

ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ದ ಪಾಕ್ ಸೋತರೆ, ಮುಂದಿನ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ದ ಶ್ರೀಲಂಕಾ ಗೆಲ್ಲಬೇಕು. ಈಗಾಗಲೇ ಫೈನಲ್​ಗೆ ಸ್ಥಾನ ಖಚಿತಪಡಿಸಿಕೊಂಡಿರುವ ಶ್ರೀಲಂಕಾ ಗೆಲ್ಲುವುದರಿಂದ ಟೀಮ್ ಇಂಡಿಯಾದ ಪಾಯಿಂಟ್ಸ್​ನಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.

ಬದಲಾಗಿ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಟೀಮ್ ಇಂಡಿಯಾ ಒಂದೊಂದು ಪಂದ್ಯ ಗೆದ್ದರೆ ಅಲ್ಲಿ ನೆಟ್​ ರನ್​ ಮುಖ್ಯವಾಗುತ್ತದೆ. ಅದರಂತೆ ಅಫ್ಘಾನಿಸ್ತಾನ ವಿರುದ್ದ ಭರ್ಜರಿ ಜಯ ಸಾಧಿಸಿ, ನೆಟ್ ರನ್​ ರೇಟ್ ಮೂಲಕ ಟೀಮ್ ಇಂಡಿಯಾಗೆ ಫೈನಲ್​ ಪ್ರವೇಶಿಸುವ ಅವಕಾಶ ದೊರೆಯಲಿದೆ.

Published On - 8:17 pm, Wed, 7 September 22