Asia cup 2022: ಲಂಕಾ ವಿರುದ್ಧ ಸೋತರೂ ಏಷ್ಯಾಕಪ್​ನಲ್ಲಿ ಸಚಿನ್-ಅಫ್ರಿದಿ ದಾಖಲೆ ಮುರಿದ ರೋಹಿತ್ ಶರ್ಮಾ..!

Asia cup 2022: ಏಷ್ಯಾಕಪ್​ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಈಗ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಸಚಿನ್ ತೆಂಡೂಲ್ಕರ್ ಅವರ 973 ರನ್‌ಗಳ ದಾಖಲೆಯನ್ನು ರೋಹಿತ್ ಹಿಂದಿಕ್ಕಿದ್ದಾರೆ.

Asia cup 2022: ಲಂಕಾ ವಿರುದ್ಧ ಸೋತರೂ ಏಷ್ಯಾಕಪ್​ನಲ್ಲಿ ಸಚಿನ್-ಅಫ್ರಿದಿ ದಾಖಲೆ ಮುರಿದ ರೋಹಿತ್ ಶರ್ಮಾ..!
Rohit Sharma
Follow us
TV9 Web
| Updated By: ಪೃಥ್ವಿಶಂಕರ

Updated on:Sep 07, 2022 | 7:36 PM

ಏಷ್ಯಾಕಪ್​ನ (Asia Cup 2022) ಸೂಪರ್-4 ಹಂತದ ಮೊದಲೆರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ (Team India) ಸೋತಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ದ 5 ವಿಕೆಟ್​ಗಳಿಂದ ಪರಾಜಯಗೊಂಡಿದ್ದ ಟೀಮ್ ಇಂಡಿಯಾ, 2ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ ಸೋಲನುಭವಿಸಿತು. ಇದರೊಂದಿಗೆ ಏಷ್ಯಾಕಪ್​ ಫೈನಲ್​ಗೇರುವ ಭಾರತ ತಂಡದ ಕನಸು ಬಹುತೇಕ ಕಮರಿದೆ. ಆದರೂ ಟೀಮ್ ಇಂಡಿಯಾ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧದ ಏಷ್ಯಾಕಪ್​ನ ಸೂಪರ್ ಫೋರ್ ಸುತ್ತಿನಲ್ಲಿ ಮೊದಲ 16 ಎಸೆತಗಳಲ್ಲಿ ಟೀಂ ಇಂಡಿಯಾದ ಎರಡು ವಿಕೆಟ್ ಪತನಗೊಂಡ ನಂತರ ಆಕ್ರಮಣಕಾರಿ ಇನ್ನಿಂಗ್ಸ್ ಆಡಿ ಕೇವಲ 41 ಎಸೆತಗಳಲ್ಲಿ 72 ರನ್ ಗಳಿಸಿದರು. ರೋಹಿತ್ ಅವರ ಈ ಇನ್ನಿಂಗ್ಸ್ ಆಧಾರದ ಮೇಲೆ ಭಾರತ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು.

ಹಲವು ದಾಖಲೆಗಳನ್ನು ಮುರಿದ ರೋಹಿತ್

ರೋಹಿತ್, ಸೂರ್ಯಕುಮಾರ್ ಯಾದವ್ ಅವರೊಂದಿಗೆ 97 ರನ್ಗಳ ಜೊತೆಯಾಟವನ್ನು ಹಂಚಿಕೊಂಡರು. ಈ ಇನ್ನಿಂಗ್ಸ್‌ನಲ್ಲಿ ರೋಹಿತ್ 5 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದರು. ಇದರೊಂದಿಗೆ ಏಷ್ಯಾಕಪ್‌ನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಶಾಹಿದ್ ಅಫ್ರಿದಿ ಅವರಂತಹ ದಿಗ್ಗಜರ ದಾಖಲೆಯನ್ನೂ ಭಾರತೀಯ ನಾಯಕ ಮುರಿದರು.

ಇದನ್ನೂ ಓದಿ
Image
‘ಮೆಗಾ ಬ್ಲಾಕ್‌ಬಸ್ಟರ್’; ಕನ್ನಡತಿ ರಶ್ಮಿಕಾ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ರೋಹಿತ್- ಗಂಗೂಲಿ..! ಪೋಸ್ಟರ್ ನೋಡಿ
Image
Asia Cup 2022: ಟೀಂ ಇಂಡಿಯಾ ನಾಯಕನಾಗಿ ರೋಹಿತ್​ಗೆ ಹೆಚ್ಚು ದಿನ ಉಳಿಗಾಲವಿಲ್ಲ; ಪಾಕ್ ಕ್ರಿಕೆಟಿಗನ ವಿಶ್ಲೇಷಣೆ
Image
SL vs BAN: ರಣ ರೋಚಕ ಪಂದ್ಯದಲ್ಲಿ ಬಾಂಗ್ಲಾ ಮಣಿಸಿ ಸೂಪರ್- 4 ಹಂತಕ್ಕೆ ಎಂಟ್ರಿಕೊಟ್ಟ ಶ್ರೀಲಂಕಾ

– ಏಷ್ಯಾಕಪ್ (ODI ಮತ್ತು T20) ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಈಗ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಸಚಿನ್ ತೆಂಡೂಲ್ಕರ್ ಅವರ 973 ರನ್‌ಗಳ ದಾಖಲೆಯನ್ನು ರೋಹಿತ್ ಹಿಂದಿಕ್ಕಿದ್ದಾರೆ. ಇದೀಗ ಅವರು 1016 ರನ್ ಗಳಿಸಿದ್ದಾರೆ. ಈ ಮೂಲಕ 1000 ರನ್ ಗಳಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

– ರೋಹಿತ್ ಶರ್ಮಾ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮಾದರಿಯಲ್ಲಿ ಇದು ಅವರ 28ನೇ ಅರ್ಧಶತಕವಾಗಿದೆ. ಅದೇ ವೇಳೆ ರೋಹಿತ್, ವಿರಾಟ್ ಕೊಹ್ಲಿಯನ್ನು ಸರಿಗಟ್ಟಿದರು. ಇವರಿಬ್ಬರೂ ಈಗ 32 ಬಾರಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಐವತ್ತು ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್ ಗಳಿಸಿದ್ದಾರೆ.

– ರೋಹಿತ್ ಏಷ್ಯಾಕಪ್ (ODI ಮತ್ತು T20) ನಲ್ಲಿ ಒಂಬತ್ತನೇ ಬಾರಿಗೆ ಐವತ್ತು ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದರು. ಈ ಮೂಲಕ ಶ್ರೇಷ್ಠ ಬ್ಯಾಟ್ಸ್​ಮನ್ ಸಚಿನ್ ತೆಂಡೂಲ್ಕರ್ ಅವರನ್ನು ಸರಿಗಟ್ಟಿದರು.

– ಅಷ್ಟೇ ಅಲ್ಲ, ರೋಹಿತ್ ಶರ್ಮಾ ತಮ್ಮ 4 ಸಿಕ್ಸರ್‌ಗಳೊಂದಿಗೆ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ಮಾಡಿದರು. ಜೊತೆಗೆ ಶಾಹಿದ್ ಅಫ್ರಿದಿ ಅವರ 26 ಸಿಕ್ಸರ್‌ಗಳ ದಾಖಲೆಯನ್ನು ಹಿಂದಿಕ್ಕಿದರು. ರೋಹಿತ್ ಒಟ್ಟು ಏಷ್ಯಾಕಪ್​ನಲ್ಲಿ 29 ಸಿಕ್ಸರ್ ಬಾರಿಸಿದ್ದಾರೆ.

– ಮತ್ತೊಂದೆಡೆ, ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೊನೆಯ ಓವರ್‌ಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಹಾರ್ದಿಕ್ ಪಾಂಡ್ಯ ಪಾತ್ರರಾಗಿದ್ದಾರೆ. ಹಾರ್ದಿಕ್ ಅವರ ಹೆಸರಿಗೆ 35 ಸಿಕ್ಸರ್‌ಗಳು ದಾಖಲಾಗಿದ್ದು, ಇದರೊಂದಿಗೆ ಅವರು ಎಂಎಸ್ ಧೋನಿ (34) ಅವರನ್ನು ಹಿಂದಿಕ್ಕಿದರು.

Published On - 7:28 pm, Wed, 7 September 22