- Kannada News Photo gallery Cricket photos Duleep Trophy 2022 Battle between these 6 captains know the fate of which team in whose hands
Duleep Trophy 2022: ಈ 6 ನಾಯಕರ ನಡುವಿನ ಕದನ, ಯಾವ ತಂಡದ ಭವಿಷ್ಯ ಯಾರ ಕೈಯಲ್ಲಿದೆ ಗೊತ್ತಾ?
Duleep Trophy 2022-23: ಈ ಬಾರಿಯ ಪಂದ್ಯಾವಳಿಯು ತನ್ನ ಹಳೆಯ ಶೈಲಿಗೆ ಮರಳಿದ್ದು, 6 ವಲಯಗಳನ್ನು ಪ್ರತಿನಿಧಿಸುವ ಟೂರ್ನಿಯಲ್ಲಿ ಈ ಬಾರಿ 6 ತಂಡಗಳು ಆಡುತ್ತಿವೆ. ಪ್ರತಿಯೊಂದು ವಲಯ ತಂಡವು ವಿಭಿನ್ನ ನಾಯಕರನ್ನು ಹೊಂದಿದೆ.
Updated on:Sep 07, 2022 | 10:03 PM

ದುಲೀಪ್ ಟ್ರೋಫಿ 2022-23 ಸೆಪ್ಟೆಂಬರ್ 8 ರಂದು ಅಂದರೆ ಗುರುವಾರದಿಂದ ಆರಂಭವಾಗಲಿದೆ. 2 ವರ್ಷಗಳ ನಂತರ ನಡೆಯುತ್ತಿರುವ ಈ ಟೂರ್ನಿ ಸೆಪ್ಟೆಂಬರ್ 25ರವರೆಗೆ ನಡೆಯಲಿದೆ. ಈ ಬಾರಿಯ ಪಂದ್ಯಾವಳಿಯು ತನ್ನ ಹಳೆಯ ಶೈಲಿಗೆ ಮರಳಿದ್ದು, 6 ವಲಯಗಳನ್ನು ಪ್ರತಿನಿಧಿಸುವ ಟೂರ್ನಿಯಲ್ಲಿ ಈ ಬಾರಿ 6 ತಂಡಗಳು ಆಡುತ್ತಿವೆ. ಪ್ರತಿಯೊಂದು ವಲಯ ತಂಡವು ವಿಭಿನ್ನ ನಾಯಕರನ್ನು ಹೊಂದಿದೆ.

ಪಶ್ಚಿಮ ವಲಯ - ಈ ತಂಡದ ಕಮಾಂಡ್ ಭಾರತೀಯ ಟೆಸ್ಟ್ ತಂಡದ ಮಾಜಿ ಉಪನಾಯಕ ಅಜಿಂಕ್ಯ ರಹಾನೆ ಕೈಯಲ್ಲಿದೆ. ಈ ಟೂರ್ನಿಯ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾಗೆ ಮರಳಲು ರಹಾನೆ ಬಯಸಿದ್ದಾರೆ.

ದಕ್ಷಿಣ ವಲಯ- ಈ ತಂಡದ ಲಗಾಮು ಭಾರತ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹನುಮ ವಿಹಾರಿ ಕೈಯಲ್ಲಿದೆ. ಹನುಮ ಅವರು ಈ ಟೂರ್ನಿಯ ಮೂಲಕ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಬಯಸಿದ್ದಾರೆ.

ಕೇಂದ್ರ ವಲಯ- ಕರಣ್ ಶರ್ಮಾ ಈ ತಂಡದ ನಾಯಕರಾಗಿರುತ್ತಾರೆ. ಕರಣ್ ಭಾರತ ಪರ ಕ್ರಿಕೆಟ್ ಕೂಡ ಆಡಿದ್ದಾರೆ.

ಪೂರ್ವ ವಲಯ- ಈ ತಂಡವನ್ನು ಬಂಗಾಳದ ಕ್ರೀಡಾ ಸಚಿವ ಮತ್ತು ರಣಜಿ ತಂಡದ ಸದಸ್ಯ ಮನೋಜ್ ತಿವಾರಿ ವಹಿಸಲಿದ್ದಾರೆ. ಮನೋಜ್ ತಿವಾರಿ ಅಂತಾರಾಷ್ಟ್ರೀಯ ಪಿಚ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಉತ್ತರ ವಲಯ - ಈ ತಂಡದ ಕಮಾಂಡ್ ಮನ್ ದೀಪ್ ಸಿಂಗ್ ಕೈಯಲ್ಲಿದೆ. ಮಂದೀಪ್ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ.

ಈಶಾನ್ಯ ವಲಯ- ಆಶಿಶ್ ಥಾಪಾ ಅವರು ಈಶಾನ್ಯ ವಲಯದ ಕಮಾಂಡ್ ಆಗಿದ್ದು, ಇವರು ಟೂರ್ನಿಯಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿದ್ದಾರೆ.
Published On - 10:03 pm, Wed, 7 September 22



















