AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Australia, 2nd ODI: ಭಾರತಕ್ಕೆ ಎರಡು ಸೋಲು.. ಏಕದಿನ ಸರಣಿ ಆಸಿಸ್ ಪಾಲು!

ಆಸ್ಟ್ರೇಲಿಯಾದ ಸಿಡ್ನಿ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಸಿಸ್ ವಿರುದ್ಧ ಭಾರತ 51 ರನ್​ಗಳ ಸೋಲು ಅನುಭವಿಸಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡವು, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ, 2-0 ಅಂತರದಲ್ಲಿ ವಿಜಯ ಸಾಧಿಸಿದೆ.

India vs Australia, 2nd ODI: ಭಾರತಕ್ಕೆ ಎರಡು ಸೋಲು.. ಏಕದಿನ ಸರಣಿ ಆಸಿಸ್ ಪಾಲು!
ಎರಡನೇ ಏಕದಿನ ಪಂದ್ಯದಲ್ಲಿ ಆಸಿಸ್​ಗೆ ಜಯ
TV9 Web
| Edited By: |

Updated on:Apr 06, 2022 | 9:00 PM

Share

ಆಸ್ಟ್ರೇಲಿಯಾದ ಸಿಡ್ನಿ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಸಿಸ್ ವಿರುದ್ಧ ಭಾರತ 51 ರನ್​ಗಳ ಸೋಲು ಅನುಭವಿಸಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡವು, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ, 2-0 ಅಂತರದಲ್ಲಿ ವಿಜಯ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು, 50 ಓವರ್​ಗಳಲ್ಲಿ, 4 ವಿಕೆಟ್ ನಷ್ಟಕ್ಕೆ 389 ರನ್ ಕಲೆಹಾಕಿತ್ತು. ಆಸಿಸ್ ಪರವಾಗಿ ಬ್ಯಾಟಿಂಗ್​ಗೆ ಇಳಿದ ನಾಯಕ ಆರೊನ್ ಫಿಂಚ್(60) ಮತ್ತು ಡೇವಿಡ್ ವಾರ್ನರ್(83) ಉತ್ತಮ ಆರಂಭ ಒದಗಿಸಿಕೊಟ್ಟರು. ಎರಡೂ ಆಟಗಾರರು ಶತಕದ ಜೊತೆಯಾಟವಾಡಿ ಆಸಿಸ್ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು. ನಂತರ ಬಂದ ಸ್ಟೀವನ್ ಸ್ಮಿತ್(104) ಶತಕದ ಆಟ, ಆಸಿಸ್ ಬೃಹತ್ ಮೊತ್ತ ಪೇರಿಸಲು ಸಹಕಾರಿಯಾಯಿತು. ಸ್ಮಿತ್​ಗೆ ಜೊತೆಯಾದ ಮಾರ್ನಸ್(70) ಅರ್ಧಶತಕ ಬಾರಿಸಿದರು. ಗ್ಲೆನ್​ ಮ್ಯಾಕ್ಸ್​ವೆಲ್ ವೇಗದ ಆಟವಾಡಿ (29 ಎಸೆತಗಳಲ್ಲಿ 63 ರನ್) ರನ್ ಗತಿಯನ್ನು ಹೆಚ್ಚಿಸಿದರು.

ಆಸಿಸ್ ಆಟಗಾರರನ್ನು ಕಟ್ಟಿಹಾಕುವಲ್ಲಿ ವಿಫಲರಾದ ಭಾರತೀಯ ಬೌಲರ್​ಗಳು ದುಬಾರಿ ಅನಿಸಿಕೊಂಡರು. ಭಾರತದ ಪರ ರವೀಂದ್ರ ಜಡೇಜಾ ತಕ್ಕಮಟ್ಟಿನ ಪ್ರದರ್ಶನ ತೋರಿದರೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ನವದೀಪ್ ಸೈನಿ, ಎರಡು ವಿಕೆಟ್ ಪಡೆದರಾದರೂ ಹೆಚ್ಚು ರನ್ ಬಿಟ್ಟುಕೊಟ್ಟರು. ಇದರಿಂದ, ತವರಿನ ಅಂಗಳದಲ್ಲಿ ಭರ್ಜರಿ ಆಟವಾಡಿದ ಆಸ್ಟ್ರೇಲಿಯನ್ನರು 389 ರನ್​ಗಳ ಬೃಹತ್ ಮೊತ್ತ ಕಲೆಹಾಕುವಂತಾಯಿತು.

390 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಭಾರತ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತಕ್ಕೆ ಆರಂಭಿಕ ಆಘಾತ ಉಂಟಾಯಿತು. ಓಪನರ್​ಗಳಾಗಿ ಕಣಕ್ಕಿಳಿದ ಶಿಖರ್ ಧವನ್ ಮತ್ತು ಮಯಾಂಕ್ ಅಗರ್​ವಾಲ್, ಭಾರತವು 60 ರನ್​ ಗಳಿಸುವಷ್ಟರಲ್ಲಿ ವಿಕೆಟ್ ಒಪ್ಪಿಸಿ ನಡೆದರು. ಗೆಲುವಿನ ಭರವಸೆ ನೀಡಿದ ನಾಯಕ ಕೊಹ್ಲಿ, ಕೆ.ಎಲ್.ರಾಹುಲ್ ಆಟ ಕೊನೆಯವರೆಗೂ ಉಳಿಯಲಿಲ್ಲ. ಕೊಹ್ಲಿ 89 ರನ್​ ಗಳಿಸಿ ಕ್ಯಾಚ್ ಒಪ್ಪಿಸಿದರೆ, ರಾಹುಲ್ 76 ರನ್​ಗೆ ಔಟಾದರು. ಈ ನಡುವೆ ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜ, ಹಾರ್ದಿಕ್ ಪಾಂಡ್ಯ ಮತ್ತು ನವದೀಪ್ ಸೈನಿ ತಲಾ ಎರಡಂಕಿ ಕೂಡಿಸಿದರು. ಈ ಆಟವು ಗುರಿ ಬೆನ್ನತ್ತಲು ಸಹಕಾರಿಯಾಯಿತು ಹೊರತು ಪಂದ್ಯ ಗೆಲ್ಲುವ ಸೂಚನೆ ನೀಡಲಿಲ್ಲ. ಕೊನೆಗೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯೇ ಉಡುಗೊರೆಯಾಯಿತು.

ನಾಯಕನ ಆಟವಾಡಿದ ಕೊಹ್ಲಿ 89 ರನ್​ಗಳಿಸಿ ಔಟ್ ಸೋಲು-ಗೆಲುವಿನ ಭೀತಿಯಲ್ಲಿದ್ದ ಪಂದ್ಯವನ್ನು ಕೊಹ್ಲಿ ಮೇಲೆತ್ತುವ ಪ್ರಯತ್ನ ಮಾಡಿದ್ದರು. ನಾಯಕ ವಿರಾಟ್ ಕ್ರೀಸ್ ಕಚ್ಚಿ ನಿಂತು ತಂಡವನ್ನು ಗುರಿತಲುಪಿಸುವ ಹೊಣೆ ಹೊತ್ತಿದ್ದರು. ಅರ್ಧಶತಕದ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದ್ದರು. ಆದರೆ, 89 ರನ್​ ಗಳಿಸಿದ್ದ ಕೊಹ್ಲಿ ಹೇಜಲ್​ವುಡ್​ಗೆ ವಿಕೆಟ್ ಒಪ್ಪಿಸುವ ಮೂಲಕ ಭಾರತದ ಗೆಲುವಿನ ಕನಸನ್ನು ಕಮರಿಸಿದರು.

ರಾಹುಲ್ ಹೋರಾಟ ವ್ಯರ್ಥ ಮತ್ತೊಂದೆಡೆ, ಉತ್ತಮ ಆಟವಾಡುತ್ತಿದ್ದ ರಾಹುಲ್ ಕೊಹ್ಲಿ ಬೆನ್ನಲ್ಲೇ ಔಟಾದರು. ಆಸಿಸ್ ಪರ ಕಮಿನ್ಸ್ 5 ವಿಕೆಟ್ ಪಡೆದು ಮಿಂಚಿದರೆ, ಹೆನ್ರಿಕ್ವೆಸ್, ಝಂಪಾ, ಹೇಜಲ್​ವುಡ್ ತಲಾ ಒಂದು ವಿಕೆಟ್ ಪಡೆದರು. ಆಸ್ಟ್ರೇಲಿಯಾ ತೋರಿದ ಆಲ್​ರೌಂಡ್ ಪ್ರದರ್ಶನವು, ತಂಡ ಸರಣಿ ಗೆಲ್ಲಲು ಸಹಕಾರಿಯಾಯಿತು.

Published On - 5:33 pm, Sun, 29 November 20