ಭಾರತ- ಆಸ್ಟ್ರೇಲಿಯಾ ಎರಡನೇ ಏಕದಿನ ಪಂದ್ಯಕ್ಕೆ ಮಳೆ ಭೀತಿ; ಕ್ರೀಡಾಂಗಣದ ಅಧಿಕಾರಿಗಳು ಹೇಳಿದ್ದೇನು?

India Vs Australia: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಭಾನುವಾರ (ಸೆಪ್ಟೆಂಬರ್ 24) ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಎರಡನೇ ಏಕದಿನ ಪಂದ್ಯ ನಡೆಯಲ್ಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗುವ ಸುದ್ದಿ ಇದ್ದು, ಪಂದ್ಯದ ದಿನ ಇಂದೋರ್‌ನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಭಾರತ- ಆಸ್ಟ್ರೇಲಿಯಾ ಎರಡನೇ ಏಕದಿನ ಪಂದ್ಯಕ್ಕೆ ಮಳೆ ಭೀತಿ; ಕ್ರೀಡಾಂಗಣದ ಅಧಿಕಾರಿಗಳು ಹೇಳಿದ್ದೇನು?
ಭಾರತ- ಆಸ್ಟ್ರೇಲಿಯಾ, ಇಂದೋರ್‌ ಹವಾಮಾನ ವರದಿ
Follow us
ಪೃಥ್ವಿಶಂಕರ
|

Updated on: Sep 23, 2023 | 10:41 AM

ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಂ ಇಂಡಿಯಾ ಗೆಲುವಿನ ಮೂಲಕ ಶುಭಾರಂಭ ಮಾಡಿದೆ. ಇದೀಗ ಈ ಉಭಯ ತಂಡಗಳ ನಡುವೆ ಭಾನುವಾರ (ಸೆಪ್ಟೆಂಬರ್ 24) ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ (Holkar Cricket Stadium, Indore) ಎರಡನೇ ಏಕದಿನ ಪಂದ್ಯ ನಡೆಯಲ್ಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗುವ ಸುದ್ದಿ ಇದ್ದು, ಪಂದ್ಯದ ದಿನ ಇಂದೋರ್‌ನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Weather Forecast) ವರದಿ ಮಾಡಿದೆ. ಆದರೆ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆಯನ್ನು ಎದುರಿಸಲು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ (ಎಂಪಿಸಿಎ) ಸರ್ವಸನ್ನದ್ಧವಾಗಿದೆ ಎಂಬ ಮಾಹಿತಿ ಕೊಂಚ ಸಮಾಧಾನಕಾರ ಸಂಗತಿಯಾಗಿದೆ.

ಈ ಕುರಿತು ಶುಕ್ರವಾರ ಹವಾಮಾನ ಇಲಾಖೆ ಉಪನಿರ್ದೇಶಕ ವಿ.ಪಿ.ಎಸ್.ಚಾಂಡೇಲ್ ಮಾತನಾಡಿ, ‘ಹೋಳ್ಕರ್ ಕ್ರೀಡಾಂಗಣದ ಸುತ್ತಮುತ್ತ ಸೆ.24ರ ಮಧ್ಯರಾತ್ರಿ 12 ಗಂಟೆವರೆಗೆ ಒಣಹವೆ ಇರುತ್ತದೆ. ಆದರೆ, ಮೋಡ ಕವಿದ ವಾತಾವರಣ ಇರುತ್ತದೆ. ಕ್ರೀಡಾಂಗಣದ ಸುತ್ತಮುತ್ತ ಮಧ್ಯಾಹ್ನ 3ರಿಂದ 7 ಗಂಟೆವರೆಗೆ ಸಣ್ಣ ಮಳೆಯಾಗುವ ಸಾಧ್ಯತೆ ಇದೆ’ ಎಂದಿದ್ದಾರೆ.

IND vs AUS: ನಾಲ್ಕು ಅರ್ಧಶತಕ, ಐದು ವಿಕೆಟ್; ಟೀಂ ಇಂಡಿಯಾದ ಗೆಲುವಿನಲ್ಲಿ ಈ ಐವರೇ ಹೀರೋಗಳು

ಸಕಲ ಸಿದ್ದತೆ ಮಾಡಲಾಗಿದೆ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯವು ಸ್ಥಳೀಯ ಕಾಲಮಾನ ಮಧ್ಯಾಹ್ನ 01:30 ಕ್ಕೆ ಹೋಲ್ಕರ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಎಂಪಿಸಿಎ ಮಾಧ್ಯಮ ವ್ಯವಸ್ಥಾಪಕ ರಾಜೀವ್ ರಿಸೋಡ್ಕರ್ ಪಂದ್ಯದ ತಯಾರಿ ಬಗ್ಗೆ ಮಾತನಾಡಿ, ‘ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯದ ಮೇಲೆ ಮಳೆ ಬಿಳುವ ಸಾಧ್ಯತೆ ಇದ್ದು, ಪಂದ್ಯದ ವೇಳೆ ಮೈದಾನ ಮತ್ತು ಪಿಚ್ ಅನ್ನು ಸುರಕ್ಷಿತವಾಗಿರಿಸಲು ನಾವು ವಿಶೇಷ ವ್ಯವಸ್ಥೆ ಮಾಡಿದ್ದೇವೆ. ಸುಮಾರು 28 ಸಾವಿರ ಪ್ರೇಕ್ಷಕರ ಸಾಮರ್ಥ್ಯವಿರುವ ಹೋಳ್ಕರ್ ಕ್ರೀಡಾಂಗಣದ ಮೈದಾನದಲ್ಲಿ ಒಳಚರಂಡಿ ವ್ಯವಸ್ಥೆ ಸುಧಾರಣೆ ಮಾಡಲಾಗಿದ್ದು, ಮೈದಾನ ಹಾಗೂ ಪಿಚ್ ಅನ್ನು ಮುಚ್ಚಲು ಹೊಸ ಕವರ್​ಗಳನ್ನೂ ಖರೀದಿಸಲಾಗಿದೆ ಎಂದರು.

ಪಂದ್ಯದ ವೇಳೆ ಮಳೆ ಬೀಳುವ ಸಾಧ್ಯತೆಯಿರುವುದರಿಂದ ಹೋಳ್ಕರ್ ಕ್ರೀಡಾಂಗಣದ ಮೈದಾನದಲ್ಲಿ ಸುಮಾರು 120 ಸಿಬ್ಬಂದಿಯನ್ನು ವಿಶೇಷವಾಗಿ ನಿಯೋಜಿಸಲಾಗುವುದು ಎಂದು ರಿಸೋಡ್ಕರ್ ಹೇಳಿದರು. ಈ ವೇಳೆ ಮಾತನಾಡಿದ ಅವರು, ‘ಪಂದ್ಯದ ವೇಳೆ ಮಳೆ ಬಂದರೆ ಈ ಸಿಬ್ಬಂದಿ ತಕ್ಷಣವೇ ಮೈದಾನ ಹಾಗೂ ಪಿಚ್ ಅನ್ನು ಮುಚ್ಚುತ್ತಾರೆ. ಮಳೆ ನಿಂತ ನಂತರ, ಸಾಧ್ಯವಾದಷ್ಟು ಬೇಗ ಈ ಕವರ್ ಅನ್ನು ತೆಗೆದು, ಪಂದ್ಯವನ್ನು ಮರುಪ್ರಾರಂಭಿಸಲು ಪ್ರಯತ್ನಿಸಲಾಗುತ್ತದೆ.

ಕಳೆದ ಮೂರು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಸಣ್ಣ ಮಳೆಯಿಂದಾಗಿ ಹೋಳ್ಕರ್ ಕ್ರೀಡಾಂಗಣದ ಮೈದಾನ ಮತ್ತು ಪಿಚ್ ಅನ್ನು ಕಾಲಕಾಲಕ್ಕೆ ಮುಚ್ಚಲಾಗುತ್ತಿದೆ ಎಂದು ಎಂಪಿಸಿಎ ಅಧಿಕಾರಿಗಳು ತಿಳಿಸಿದ್ದಾರೆ. ಮಳೆ ನಿಂತ ನಂತರ ಬಿಸಿಲು ಬಂದಾಗಲೆಲ್ಲ ಮೈದಾನ ಮತ್ತು ಪಿಚ್ ಒಣಗಲು ಮತ್ತು ಮೈದಾನದಲ್ಲಿ ಹುಲ್ಲು ಹಸಿರಾಗಲು ಈ ಹೊದಿಕೆಯನ್ನು ತೆಗೆಯಲಾಗುತ್ತದೆ, ಎಂದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ