AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಕಪ್​ಗೂ ಮುನ್ನವೇ ಪಾಕ್ ತಂಡದ ಪ್ಲ್ಯಾನ್ ಉಲ್ಟಾ ಪಲ್ಟಾ

India vs Pakistan: ಭಾರತ ಮತ್ತು ಪಾಕಿಸ್ತಾನ್ ತಂಡಗಳು ದ್ವಿಪಕ್ಷೀಯ ಸರಣಿ ಆಡಿ ದಶಕಗಳೇ ಕಳೆದಿವೆ. 2012 ರಲ್ಲಿ ಕೊನೆಯ ಬಾರಿ ಸರಣಿ ಆಡಿದ್ದ ಉಭಯ ತಂಡಗಳು ಆ ಬಳಿಕ ಐಸಿಸಿ ಮತ್ತು ಏಷ್ಯನ್ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗಿತ್ತು. ಅಲ್ಲದೆ 2016 ರ ಬಳಿಕ ಪಾಕಿಸ್ತಾನ್ ಭಾರತಕ್ಕೆ ಆಗಮಿಸಿಲ್ಲ ಎಂಬುದು ವಿಶೇಷ.

ವಿಶ್ವಕಪ್​ಗೂ ಮುನ್ನವೇ ಪಾಕ್ ತಂಡದ ಪ್ಲ್ಯಾನ್ ಉಲ್ಟಾ ಪಲ್ಟಾ
Pakistan Team
TV9 Web
| Updated By: ಝಾಹಿರ್ ಯೂಸುಫ್|

Updated on:Sep 23, 2023 | 2:32 PM

Share

ಏಕದಿನ ವಿಶ್ವಕಪ್ ಆರಂಭಕ್ಕೂ ಇನ್ನು ದಿನಗಳು ಮಾತ್ರ ಉಳಿದಿವೆ. ಅಕ್ಟೋಬರ್ 5 ರಿಂದ ಶುರುವಾಗಲಿರುವ ಈ ಕ್ರಿಕೆಟ್ ಸಮರಕ್ಕಾಗಿ ಸೆಪ್ಟೆಂಬರ್ ಅಂತ್ಯದೊಳಗೆ ಎಲ್ಲಾ ತಂಡಗಳು ಭಾರತಕ್ಕೆ ಆಗಮಿಸಲಿದೆ. ಆದರೆ ಇದಕ್ಕೂ ಮುನ್ನ ಭರ್ಜರಿ ಪ್ಲ್ಯಾನ್ ರೂಪಿಸಿದ್ದ ಪಾಕಿಸ್ತಾನ್ ತಂಡದ ಯೋಜನೆಗಳು ಈಗ ಉಲ್ಟಾ ಪಲ್ಟಾ ಆಗಿದೆ.  ಏಷ್ಯಾಕಪ್​ನಲ್ಲಿ ಭಾರತದ ವಿರುದ್ಧ ಹೀನಾಯವಾಗಿ ಸೋಲುಂಡಿದ್ದ ಪಾಕಿಸ್ತಾನ್ ತಂಡದ ಚಿತ್ತ ಏಕದಿನ ವಿಶ್ವಕಪ್​ನತ್ತ ನೆಟ್ಟಿದೆ. ಇದೇ ಕಾರಣಕ್ಕಾಗಿ ಭಾರತಕ್ಕೆ ತೆರಳುವ ಮುನ್ನ ಯುಎಇನಲ್ಲಿ ಕ್ಯಾಂಪ್ ನಡೆಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಯೋಜನೆ ರೂಪಿಸಿತ್ತು.

ಏಕದಿನ ವಿಶ್ವಕಪ್​ಗೂ ಮುನ್ನ ದುಬೈನಲ್ಲಿ ಕೆಲ ದಿನಗಳ ಅಭ್ಯಾಸ ಶಿಬಿರ ಏರ್ಪಡಿಸಲು ಪಿಸಿಬಿ ಮುಂದಾಗಿತ್ತು. ಆದರೀಗ ಈ ಯೋಜನೆ ವ್ಯರ್ಥವಾಗಿದೆ. ತಂಡದ ಆಟಗಾರರ ವೀಸಾ ಸಮಸ್ಯೆಯ ಕಾರಣ ಇದೀಗ ಯೋಜನೆಯನ್ನು ಕೈ ಬಿಡಲಾಗಿದೆ.

ಇದಕ್ಕೂ ಮುನ್ನ ದುಬೈನಲ್ಲಿ ಕೆಲ ದಿನಗಳ ಅಭ್ಯಾಸದ ಬಳಿಕ ಏಕದಿನ ವಿಶ್ವಕಪ್​ನ ಅಭ್ಯಾಸ ಪಂದ್ಯಗಳಲ್ಲಿ ಕಣಕ್ಕಿಳಿಯಲು ಪಾಕ್ ತಂಡ ಭರ್ಜರಿ ಪ್ಲ್ಯಾನ್ ರೂಪಿಸಿತ್ತು. ಅದರಂತೆ ಪಾಕಿಸ್ತಾನ ತಂಡ ಮುಂದಿನ ವಾರ ಬೆಳಗ್ಗೆ ಯುಎಇಗೆ ತೆರಳಬೇಕಿತ್ತು. ಅಲ್ಲಿಂದ ನೇರವಾಗಿ ಹೈದರಾಬಾದ್​​ಗೆ ತೆರಳುವ ಯೋಜನೆಯಲ್ಲಿದ್ದರು. ಆದರೀಗ ಪಾಕ್​ ತಂಡ ಈ ಪ್ಲ್ಯಾನ್​ಗಳೆಲ್ಲವೂ ತಲೆಕೆಳಗಾಗಿದೆ.

ಪಾಕ್ ತಂಡಕ್ಕೆ ವೀಸಾ ವಿಳಂಬ:

ಭಾರತದಲ್ಲಿ ಏಕದಿನ ವಿಶ್ವಕಪ್ ಆಡಲು ಈಗಾಗಲೇ 9 ತಂಡಗಳು ವೀಸಾ ಪಡೆದುಕೊಂಡಿದೆ. ಆದರೆ ಪಾಕಿಸ್ತಾನ್ ತಂಡಕ್ಕೆ ಇನ್ನೂ ಕೂಡ ವೀಸಾ ಪಾಸ್ ಆಗಿಲ್ಲ. ಉಭಯ ದೇಶಗಳ ನಡುವಣ ರಾಜಕೀಯ ಬಿಕ್ಕಿಟ್ಟಿನ ಕಾರಣ ವೀಸಾ ಸಮಸ್ಯೆ ಎದುರಾಗಿದೆ. ಇದಾಗ್ಯೂ ಮುಂದಿನ ಬುಧವಾರದೊಳಗೆ ಪಾಕ್ ತಂಡಕ್ಕೆ ವೀಸಾ ಸಿಗಲಿದೆ ಎಂದು ವರದಿಯಾಗಿದೆ.

ಪಾಕ್ ತಂಡದ ಮುಂದಿನ ನಡೆಯೇನು?

ಪಾಕಿಸ್ತಾನ್ ತಂಡವು ಮುಂದಿನ ಬುಧವಾರ ಲಾಹೋರ್​ನಿಂದ ದುಬೈಗೆ ತೆರಳಲಿದೆ. ಅಲ್ಲಿಂದ ಭಾರತಕ್ಕೆ ಆಗಮಿಸಲಿದ್ದಾರೆ. ಅಂದರೆ ಸೆಪ್ಟೆಂಬರ್ 27 ರಂದು ಪಾಕಿಸ್ತಾನ್ ಆಟಗಾರರು ಹೈದರಾಬಾದ್​ಗೆ ಬಂದಿಳಿಯಲಿದ್ದಾರೆ.

7 ವರ್ಷಗಳ ಬಳಿಕ ಭಾರತಕ್ಕೆ ಪಾಕಿಸ್ತಾನ್:

ಭಾರತ ಮತ್ತು ಪಾಕಿಸ್ತಾನ್ ತಂಡಗಳು ದ್ವಿಪಕ್ಷೀಯ ಸರಣಿ ಆಡಿ ದಶಕಗಳೇ ಕಳೆದಿವೆ. 2012 ರಲ್ಲಿ ಕೊನೆಯ ಬಾರಿ ಸರಣಿ ಆಡಿದ್ದ ಉಭಯ ತಂಡಗಳು ಆ ಬಳಿಕ ಐಸಿಸಿ ಮತ್ತು ಏಷ್ಯನ್ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗಿತ್ತು.

ಅಲ್ಲದೆ 2016 ರ ಬಳಿಕ ಪಾಕಿಸ್ತಾನ್ ಭಾರತಕ್ಕೆ ಆಗಮಿಸಿಲ್ಲ ಎಂಬುದು ವಿಶೇಷ. ಅಂದರೆ 2016 ರ ಟಿ20 ವಿಶ್ವಕಪ್​ ಬಳಿಕ ಭಾರತದಲ್ಲಿ ಯಾವುದೇ ಐಸಿಸಿ ಟೂರ್ನಿ ನಡೆದಿಲ್ಲ. ಇದೀಗ 7 ವರ್ಷಗಳ ಬಳಿಕ ಭಾರತದಲ್ಲಿ ಪಂದ್ಯವಾಡಲು ಬರುತ್ತಿರುವುದು ವಿಶೇಷ.

ಇದನ್ನೂ ಓದಿ: ಸರ್ವಶ್ರೇಷ್ಠ ಸಾಧನೆ: ಮೊಹಮ್ಮದ್ ಸಿರಾಜ್ ಈಗ ವಿಶ್ವದ ನಂಬರ್ 1 ಬೌಲರ್

ಪಾಕಿಸ್ತಾನ್ ವಿಶ್ವಕಪ್ ತಂಡ: ಬಾಬರ್ ಆಝಂ (ನಾಯಕ), ಫಖರ್ ಜಮಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಝ್ವಾನ್, ಇಫ್ತಿಕರ್ ಅಹ್ಮದ್, ಸೌದ್ ಶಕೀಲ್, ಸಲ್ಮಾನ್ ಅಲಿ ಅಘಾ, ಶಾದಾಬ್ ಖಾನ್, ಮೊಹಮ್ಮದ್ ನವಾಝ್, ಉಸಾಮಾ ಮಿರ್, ಶಾಹೀನ್ ಶಾ ಆಫ್ರಿದಿ, ಹಸನ್ ಅಲಿ, ಹಾರಿಸ್ ರೌಫ್, ಮೊಹಮ್ಮದ್ ವಾಸಿಂ

ಮೀಸಲು ಆಟಗಾರರು: ಝಮಾನ್ ಖಾನ್, ಅಬ್ರಾರ್ ಅಹ್ಮದ್, ಮೊಹಮ್ಮದ್ ಹ್ಯಾರಿಸ್.

Published On - 2:31 pm, Sat, 23 September 23

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ