India vs Australia, 2nd T20I Highlights: ರಣ ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ

TV9 Web
| Updated By: ಪೃಥ್ವಿಶಂಕರ

Updated on:Sep 23, 2022 | 11:08 PM

India vs Australia, 2nd T20I Live Updates: ಇಂದು ನಾಗ್ಪುರದ ವಿದರ್ಭ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎರಡನೇ ಟಿ20 ಪಂದ್ಯ ಆಯೋಜಿಸಲಾಗಿದೆ. ಆದರೆ, ಈ ಪಂದ್ಯ ನಡೆಯುವುದೇ ಅನುಮಾನವಾಗಿದೆ.

India vs Australia, 2nd T20I Highlights: ರಣ ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ
IND vs AUS 3rd T20I

ನಾಗ್ಪುರದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು 4 ವಿಕೆಟ್‌ಗಳಿಂದ ಸೋಲಿಸಿ ಸರಣಿಯಲ್ಲಿ ಅದ್ಭುತ ಪುನರಾಗಮನ ಮಾಡಿ 1-1 ರಲ್ಲಿ ಸಮಬಲ ಸಾಧಿಸಿದೆ. ಆಸ್ಟ್ರೇಲಿಯಾ ವಿರುದ್ಧ ಸತತ 4 ಪಂದ್ಯಗಳಲ್ಲಿ ಸೋತ ನಂತರ ಭಾರತ ತನ್ನ ಮೊದಲ ಗೆಲುವು ದಾಖಲಿಸಿದೆ. ಒದ್ದೆ ಮೈದಾನದಿಂದಾಗಿ ನಾಗ್ಪುರದ ಅಭಿಮಾನಿಗಳು ಪಂದ್ಯ ಆರಂಭಕ್ಕೆ ಎರಡೂವರೆ ಗಂಟೆ ಹೆಚ್ಚುವರಿಯಾಗಿ ಕಾಯಬೇಕಾಯಿತು.ಆದರೆ ಅದರ ನಂತರ ನಡೆದ ಪಂದ್ಯ ಅಭಿಮಾನಿಗಳಿಗೆ ಮನರಂಜನೆಯ ಮಹಾಪೂರವನ್ನೇ ನೀಡಿತು. ಕೇವಲ 8 ಓವರ್‌ಗಳ ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಬಿರುಸಿನ ಬ್ಯಾಟಿಂಗ್‌ನಿಂದ 46 ರನ್ ಗಳಿಸಿ ಟೀಂ ಇಂಡಿಯಾಗೆ ಈ ಅದ್ಭುತ ಜಯ ತಂದುಕೊಟ್ಟರು.

LIVE NEWS & UPDATES

The liveblog has ended.
  • 23 Sep 2022 11:05 PM (IST)

    ಭಾರತಕ್ಕೆ ಗೆಲುವು

    ಕಾರ್ತಿಕ್ ಎಂಟನೇ ಓವರ್​ನ ಎರಡನೇ ಎಸೆತದಲ್ಲಿ ಬೌಂಡರಿ ಬಾರಿಸಿ ಭಾರತಕ್ಕೆ ಜಯ ತಂದುಕೊಟ್ಟರು. ಈ ಪಂದ್ಯವನ್ನು ಭಾರತ ಆರು ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ನಾಯಕ ರೋಹಿತ್ ಔಟಾಗದೆ 46 ರನ್ ಗಳಿಸಿದರೆ, ಕಾರ್ತಿಕ್ ಎರಡು ಎಸೆತಗಳಲ್ಲಿ ಅಜೇಯ 10 ರನ್ ಗಳಿಸಿದರು.

  • 23 Sep 2022 11:05 PM (IST)

    ಕಾರ್ತಿಕ್ ಸಿಕ್ಸರ್

    ಎಂಟನೇ ಓವರ್​ನ ಮೊದಲ ಎಸೆತದಲ್ಲಿ ಕಾರ್ತಿಕ್ ಸಿಕ್ಸರ್ ಬಾರಿಸಿದರು. ಸ್ಯಾಮ್ಸ್ ಈ ಚೆಂಡನ್ನು ಲೆಗ್-ಸ್ಟಂಪ್ ಮೇಲೆ ಎಸೆದರು, ಕಾರ್ತಿಕ್ ಸುಲಭವಾಗಿ ಫೈನ್ ಲೆಗ್ ಕಡೆಗೆ ಆಡಿ ಆರು ರನ್ ಗಳಿಸಿದರು.

  • 23 Sep 2022 10:59 PM (IST)

    ಪಾಂಡ್ಯ ಔಟ್

    ಏಳನೇ ಓವರ್‌ನ ಐದನೇ ಎಸೆತದಲ್ಲಿ ಪಾಂಡ್ಯ ಔಟಾದರು. ಕಮ್ಮಿನ್ಸ್ ಬೌಲಿಂಗ್ ಮಾಡಿದ ಆಫ್ ಕಟ್ಟರ್ ಅನ್ನು ಪಾಂಡ್ಯ ಎಳೆದರು ಆದರೆ ಚೆಂಡು ಬ್ಯಾಟ್‌ನ ಮೇಲಿನ ಅಂಚಿಗೆ ತಾಗಿ ಗಾಳಿಯಲ್ಲಿ ಹೋಯಿತು. ಫಿಂಚ್ ಸುಲಭವಾಗಿ ಕ್ಯಾಚ್ ಪಡೆದರು.

  • 23 Sep 2022 10:55 PM (IST)

    ರೋಹಿತ್ ಬೌಂಡರಿ

    ಆರನೇ ಓವರ್​ನ ಮೂರನೇ ಎಸೆತದಲ್ಲಿ ರೋಹಿತ್ ಶಾನ್ ಅಬಾಟ್​ಗೆ ಬೌಂಡರಿ ಬಾರಿಸಿದರು. ಮುಂದಿನ ಎಸೆತದಲ್ಲೂ ರೋಹಿತ್ ಬೌಂಡರಿ ಬಾರಿಸಿದರು.

  • 23 Sep 2022 10:49 PM (IST)

    ಸೂರ್ಯಕುಮಾರ್ ಔಟ್

    ಐದನೇ ಓವರ್‌ನ ಮೂರನೇ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಔಟಾದರು. ಸೂರ್ಯಕುಮಾರ್ ಸ್ವೀಪ್ ಆಡಲು ಯತ್ನಿಸಿದರೂ, ಚೆಂಡು ಅವರ ಕಾಲಿಗೆ ತಾಗಿತು. ಝಂಪಾ ಮನವಿಯನ್ನು ಪುರಸ್ಕರಿಸಿದ ಅಂಪೈರ್ ಔಟ್ ನೀಡಿದರು.

  • 23 Sep 2022 10:47 PM (IST)

    ಕೊಹ್ಲಿ ಔಟ್

    ಕೊಹ್ಲಿ ಔಟ್ ಆಗಿದ್ದಾರೆ. ಐದನೇ ಓವರ್‌ನ ಎರಡನೇ ಎಸೆತದಲ್ಲಿ, ಕೊಹ್ಲಿ ಲೆಗ್ ಸೈಡ್‌ನಲ್ಲಿ ಜಂಪ್ ಬಾಲ್ ಆಡಲು ಪ್ರಯತ್ನಿಸಿದರು ಆದರೆ ಚೆಂಡು ಅವರ ಬ್ಯಾಟ್ ಮತ್ತು ಪ್ಯಾಡ್ ನಡುವೆ ಹೊಗಿ ವಿಕೆಟ್​ಗೆ ಬಿತ್ತು.

  • 23 Sep 2022 10:47 PM (IST)

    ಕೊಹ್ಲಿ ಬೌಂಡರಿ

    ರೋಹಿತ್ ನಂತರ ಕೊಹ್ಲಿ ಕೂಡ ಸಾಮ್ಸ್ ಎಸೆತದಲ್ಲಿ ಬೌಂಡರಿ ಬಾರಿಸಿದರು.

  • 23 Sep 2022 10:46 PM (IST)

    ರಾಹುಲ್ ಔಟ್

    ಭಾರತಕ್ಕೆ ಮೊದಲ ಹೊಡೆತ ಬಿದ್ದಿದೆ. ರಾಹುಲ್ ಔಟ್ ಆಗಿದ್ದಾರೆ. ಝಂಪಾ ಅವರನ್ನು ಬೌಲ್ಡ್ ಮಾಡಿದರು. ಮೂರನೇ ಓವರ್‌ನ ಐದನೇ ಎಸೆತದಲ್ಲಿ ರಾಹುಲ್ ಝಂಪಾ ಅವರ ಮೇಲೆ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿ, ಕ್ರಾಸ್ ಶಾಟ್ ಹೊಡೆಯಲು ಪ್ರಯತ್ನಿಸಿದರು ಆದರೆ ತಪ್ಪಿ ಬೌಲ್ಡ್ ಆದರು.

  • 23 Sep 2022 10:36 PM (IST)

    ರೋಹಿತ್ 3ನೇ ಸಿಕ್ಸ್

    ಮೂರನೇ ಓವರ್‌ನ ಮೂರನೇ ಎಸೆತದಲ್ಲಿ ರೋಹಿತ್ ಆಡಮ್ ಝಂಪಾ ಮೇಲೆ ಸಿಕ್ಸರ್ ಬಾರಿಸಿದರು. ರೋಹಿತ್ ಚೆಂಡನ್ನು ಕವರ್ಸ್ ಮೇಲೆ ಸಿಕ್ಸರ್​ಗೆ ಹೊಡೆದರು.

  • 23 Sep 2022 10:32 PM (IST)

    ರೋಹಿತ್ ಮತ್ತೊಂದು ಸಿಕ್ಸರ್

    ಎರಡನೇ ಓವರ್‌ನ ಮೂರನೇ ಎಸೆತದಲ್ಲಿ ರೋಹಿತ್ ಕಮಿನ್ಸ್​ಗೆ ಸಿಕ್ಸರ್‌ ಬಾರಿಸಿದರು. ಲೆಗ್ ಸ್ಟಂಪ್ ಮೇಲೆ ಕಮ್ಮಿನ್ಸ್ ಬೌಲ್ ಮಾಡಿದ ಶಾರ್ಟ್ ಬಾಲ್ ಅನ್ನು ರೋಹಿತ್ ಎಳೆದು ಆರು ರನ್‌ಗಳಿಗೆ ಕಳುಹಿಸಿದರು. ಇದು ಈ ಪಂದ್ಯದಲ್ಲಿ ರೋಹಿತ್ ಅವರ ಮೂರನೇ ಸಿಕ್ಸರ್ ಆಗಿದೆ.

  • 23 Sep 2022 10:31 PM (IST)

    ರಾಹುಲ್ ಸಿಕ್ಸ್

    ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ರಾಹುಲ್ ಕೂಡ ಸಿಕ್ಸರ್ ಬಾರಿಸಿದರು. ರಾಹುಲ್ ಮಿಡ್‌ವಿಕೆಟ್ ಕಡೆಗೆ ಆರು ರನ್ ಬಾರಿಸಿದರು.

  • 23 Sep 2022 10:26 PM (IST)

    ರೋಹಿತ್ ಸಿಕ್ಸ್

    ಮೊದಲ ಓವರ್‌ನ ಮೂರನೇ ಎಸೆತದಲ್ಲಿ ರೋಹಿತ್ ಹೇಜಲ್‌ವುಡ್‌ಗೆ ಸಿಕ್ಸರ್ ಬಾರಿಸಿದರು. ಹ್ಯಾಜಲ್‌ವುಡ್‌ನ ಗುಡ್ ಲೆಂಗ್ತ್ ಬಾಲ್ ಅನ್ನು ರೋಹಿತ್ ಲಾಂಗ್ ಆನ್ ಮತ್ತು ಮಿಡ್‌ವಿಕೆಟ್ ನಡುವೆ ಆರು ರನ್‌ಗಳಿಗೆ ಆಡಿದರು. ಮುಂದಿನ ಎಸೆತದಲ್ಲೂ ರೋಹಿತ್ ಡೀಪ್ ಸ್ಕ್ವೇರ್ ಲೆಗ್​ನಲ್ಲಿ ಸಿಕ್ಸರ್ ಬಾರಿಸಿದರು.

  • 23 Sep 2022 10:25 PM (IST)

    ಭಾರತದ ಇನ್ನಿಂಗ್ಸ್ ಆರಂಭ

    ಭಾರತದ ಇನ್ನಿಂಗ್ಸ್ ಆರಂಭವಾಗಿದೆ. ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಜೋಡಿ ಮೈದಾನಕ್ಕಿಳಿದಿದ್ದು, ಅವರ ಮುಂದೆ ಜೋಶ್ ಹ್ಯಾಜಲ್‌ವುಡ್ ಇದ್ದಾರೆ.

  • 23 Sep 2022 10:14 PM (IST)

    90 ರನ್ ಟಾರ್ಗೆಟ್

    ಆಸ್ಟ್ರೇಲಿಯಾದ ಇನ್ನಿಂಗ್ಸ್ ಮುಗಿದಿದ್ದು, ತಂಡ 90 ರನ್ ಗಳಿಸಿದೆ. ಕೊನೆಯ ಎಸೆತದಲ್ಲಿ ಸ್ಟೀವ್ ಸ್ಮಿತ್ ರನೌಟ್ ಆದರು. ವೇಡ್ 43 ರನ್ ಗಳಿಸಿ ಅಜೇಯರಾಗಿ ಉಳಿದರು.

  • 23 Sep 2022 10:14 PM (IST)

    ವೇಡ್ ಸಿಕ್ಸ್

    ಎಂಟನೇ ಓವರ್​ನಲ್ಲಿ ವೇಡ್ ಬರೋಬ್ಬರಿ 3 ಸಿಕ್ಸರ್ ಬಾರಿಸಿದರು. ಹರ್ಷಲ್ ಅವರ ಫುಲ್ ಟಾಸ್​ನಲ್ಲಿ ವೇಡ್ ಸುಲಭವಾಗಿ ಸಿಕ್ಸರ್ ಬಾರಿಸಿದರು. ಮುಂದಿನ ಎಸೆತದಲ್ಲೂ ವೇಡ್ ಸಿಕ್ಸರ್ ಬಾರಿಸಿದರು.

  • 23 Sep 2022 10:11 PM (IST)

    ವೇಡ್ ಅಬ್ಬರ

    ಏಳನೇ ಓವರ್‌ನ ನಾಲ್ಕನೇ ಎಸೆತದಲ್ಲಿ ವೇಡ್ ಬುಮ್ರಾ ಮೇಲೆ ಮತ್ತೊಂದು ಬೌಂಡರಿ ಬಾರಿಸಿದರು. ವೇಡ್ ಈ ಬೌಂಡರಿಯನ್ನು ಪಾಯಿಂಟ್‌ ದಿಕ್ಕಿನಲ್ಲಿ ಬಾರಿಸಿದರು.

  • 23 Sep 2022 10:08 PM (IST)

    ಸ್ಮಿತ್ ಫೋರ್

    ಆರನೇ ಓವರ್​ನ ಎರಡನೇ ಎಸೆತದಲ್ಲಿ ಸ್ಮಿತ್ ಖಾತೆಗೆ ಬೌಂಡರಿ ಸೇರಿತು. ಬುಮ್ರಾ ಅವರ ನಿಧಾನಗತಿಯ ಎಸೆತವನ್ನು ಸ್ಮಿತ, ಥರ್ಡ್‌ಮ್ಯಾನ್‌ ಕಡೆಗೆ ಬೌಂಡರಿ ಬಾರಿಸಿದರು.

  • 23 Sep 2022 10:05 PM (IST)

    ವೇಡ್ ಫೋರ್

    ಮ್ಯಾಥ್ಯೂ ವೇಡ್ ಐದನೇ ಓವರ್​ನ ಮೊದಲ ಎಸೆತದಲ್ಲಿ ಹರ್ಷಲ್ ಪಟೇಲ್​ಗೆ ಬೌಂಡರಿ ಬಾರಿಸಿದರು.

  • 23 Sep 2022 10:04 PM (IST)

    ಫಿಂಚ್ ಔಟ್

    ಐದನೇ ಓವರ್‌ನ ಐದನೇ ಎಸೆತದಲ್ಲಿ ಬುಮ್ರಾ, ಫಿಂಚ್ ಅವರನ್ನು ಬೌಲ್ಡ್ ಮಾಡಿದರು. ಬುಮ್ರಾ ಯಾರ್ಕರ್​ಗೆ ಫಿಂಚ್ ಬಳಿ ಉತ್ತರವಿರಲಿಲ್ಲ.

  • 23 Sep 2022 09:56 PM (IST)

    ಫಿಂಚ್ ಫೋರ್

    ಐದನೇ ಓವರ್‌ನ ಎರಡನೇ ಎಸೆತದಲ್ಲಿ ಫಿಂಚ್ ಬೌಂಡರಿ ಬಾರಿಸಿದರು.

  • 23 Sep 2022 09:55 PM (IST)

    ಪಟೇಲ್ ಅವರಿಂದ ಅದ್ಭುತವಾದ ಓವರ್

    ನಾಲ್ಕನೇ ಓವರ್ ಎಸೆದ ಪಟೇಲ್ ಅದ್ಭುತವಾಗಿ ಬೌಲಿಂಗ್ ಮಾಡಿ ಈ ಓವರ್​ನಲ್ಲಿ ಕೇವಲ ನಾಲ್ಕು ರನ್ ನೀಡಿದರು. ಇದರಲ್ಲಿ ಒಂದು ವಿಕೆಟ್ ಕೂಡ ಪಡೆದರು.

  • 23 Sep 2022 09:49 PM (IST)

    ಟಿಮ್ ಡೇವಿಡ್ ಔಟ್

    ನಾಲ್ಕನೇ ಓವರ್‌ನ ಮೊದಲ ಎಸೆತದಲ್ಲಿ ಟಿಮ್ ಡೇವಿಡ್ ಅವರನ್ನು ಪಟೇಲ್ ಔಟ್ ಮಾಡಿದರು. ಡೇವಿಡ್ ಚೆಂಡನ್ನು ಮೇಲಕ್ಕೆ ಹೊಡೆಯಲು ಪ್ರಯತ್ನಿಸಿದರು ಆದರೆ ಚೆಂಡು ನೇರವಾಗಿ ಸ್ಟಂಪ್‌ಗೆ ಬಡಿಯಿತು.

  • 23 Sep 2022 09:49 PM (IST)

    ಫಿಂಚ್ ಸಿಕ್ಸರ್

    ಮೂರನೇ ಓವರ್‌ನ ಮೂರನೇ ಎಸೆತದಲ್ಲಿ ಚಹಲ್ ಮೇಲೆ ಫಿಂಚ್ ಅದ್ಭುತ ಸಿಕ್ಸರ್ ಬಾರಿಸಿದರು.

  • 23 Sep 2022 09:45 PM (IST)

    ಮ್ಯಾಕ್ಸ್‌ವೆಲ್ ಔಟ್

    ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ಅಕ್ಷರ್ ಪಟೇಲ್ ಮ್ಯಾಕ್ಸ್​ವೆಲ್ ಅವರನ್ನು ಬೌಲ್ಡ್ ಮಾಡಿದರು. ಈ ಮೂಲಕ ಆಸೀಸ್ 2ನೇ ವಿಕೆಟ್ ಕಳೆದುಕೊಂಡಿದೆ

  • 23 Sep 2022 09:44 PM (IST)

    ಗ್ರೀನ್ ಔಟ್

    ಕ್ಯಾಮರೂನ್ ಗ್ರೀನ್ ಔಟ್ ಆಗಿದ್ದಾರೆ. ಎರಡನೇ ಓವರ್‌ನ ಮೂರನೇ ಎಸೆತದಲ್ಲಿ, ಅವರು ಅಕ್ಷರ್ ಪಟೇಲ್ ಮೇಲೆ ಮಿಡ್ ಆನ್ ಕಡೆಗೆ ಶಾಟ್ ಹೊಡೆದರು ಮತ್ತು ರನ್ ತೆಗೆದುಕೊಳ್ಳಲು ಓಡಿದರು. ಆದರೆ ಅಲ್ಲಿ ನಿಂತಿದ್ದ ಕೊಹ್ಲಿ ನೇರವಾಗಿ ಬೌಲರ್ ಕೈಗೆ ಥ್ರೋ ಎಸೆದರು. ಅಕ್ಷರ್ ರನ್​ ಔಟ್ ಮಾಡುವಲ್ಲಿ ಯಾವುದೇ ತಪ್ಪು ಮಾಡಲಿಲ್ಲ

  • 23 Sep 2022 09:38 PM (IST)

    ಫಿಂಚ್ ಫೋರ್

    ಮೊದಲ ಓವರ್‌ನ ಐದನೇ ಎಸೆತದಲ್ಲಿ ಫಿಂಚ್ ಮತ್ತೊಂದು ಬೌಂಡರಿ ಬಾರಿಸಿದರು. ಮೊದಲ ಓವರ್‌ನಲ್ಲಿ 10 ರನ್.

  • 23 Sep 2022 09:38 PM (IST)

    ಪಂದ್ಯ ಪ್ರಾರಂಭ

    ಸುದೀರ್ಘ ಕಾಯುವಿಕೆಯ ನಂತರ ಪಂದ್ಯ ಆರಂಭವಾಗಿದೆ. ಹಾರ್ದಿಕ್ ಪಾಂಡ್ಯ ಭಾರತದ ಪರ ಬೌಲಿಂಗ್ ಆರಂಭಿಸಿದ್ದಾರೆ. ಎರಡನೇ ಎಸೆತದಲ್ಲಿ ಆರನ್ ಫಿಂಚ್, ಸ್ಕೂಪ್ ಮಾಡಿ ಬೌಂಡರಿ ಹೊಡೆದರು.

  • 23 Sep 2022 09:32 PM (IST)

    ಆಸೀಸ್ ತಂಡ

    ಆರನ್ ಫಿಂಚ್ (ನಾಯಕ), ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಕ್ಯಾಮೆರಾನ್ ಗ್ರೀನ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಆಶ್ಟನ್ ಅಗರ್, ಜೋಶ್ ಹ್ಯಾಜಲ್‌ವುಡ್, ಆಡಮ್ ಝಂಪಾ

  • 23 Sep 2022 09:32 PM (IST)

    ಭಾರತ ತಂಡ

    ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಾಲ್.

  • 23 Sep 2022 09:20 PM (IST)

    ಟಾಸ್ ಗೆದ್ದ ಭಾರತ

    ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್, ಬೌಲಿಂಗ್ ಆಯ್ದುಕೊಂಡಿದ್ದಾರೆ. ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಪಂತ್ ಹಾಗೂ ಬುಮ್ರಾ ತಂಡಕ್ಕೆ ಮರಳಿದ್ದಾರೆ.

  • 23 Sep 2022 08:53 PM (IST)

    9:30ಕ್ಕೆ ಪಂದ್ಯ ಆರಂಭ

    ಪಂದ್ಯ ನಡೆಯಲಿದ್ದು, ಇದನ್ನು ಅಂಪೈರ್‌ಗಳು ಖಚಿತಪಡಿಸಿದ್ದಾರೆ. 9:15ಕ್ಕೆ ಟಾಸ್ ನಡೆಯಲಿದ್ದು, 9:30ಕ್ಕೆ ಪಂದ್ಯ ಆರಂಭವಾಗಲಿದೆ. ಪ್ರತಿ ಇನಿಂಗ್ಸ್‌ನಲ್ಲಿ ಎಂಟು ಓವರ್‌ಗಳ ಪಂದ್ಯವಿರುತ್ತದೆ ಮತ್ತು ಎರಡು ಓವರ್‌ಗಳು ಪವರ್‌ಪ್ಲೇಯಾಗಿರುತ್ತದೆ.

  • 23 Sep 2022 08:31 PM (IST)

    ಮೂರನೇ ಪರಿಶೀಲನೆಯ ನಂತರ ನಿರ್ಧಾರ

    ಎರಡನೇ ಬಾರಿ ತಪಾಸಣೆ ನಡೆಸಿದ ಬಳಿಕವೂ ಮೈದಾನದ ಸ್ಥಿತಿಗತಿ ಬಗ್ಗೆ ಅಂಪೈರ್‌ಗಳು ತೃಪ್ತರಾಗದ ಕಾರಣ ಮೂರನೇ ಬಾರಿ 8:45ಕ್ಕೆ ತಪಾಸಣೆ ನಡೆಸಲು ನಿರ್ಧರಿಸಿದ್ದಾರೆ. ಈ ಪಂದ್ಯ ಪೂರ್ಣ 20 ಓವರ್‌ಗಳದ್ದಾಗಿರುವುದಿಲ್ಲ ಎಂಬುದು ಖಚಿತವಾಗಿದೆ. ಓವರ್ ಕಟ್ ಖಚಿತ. 9:46 ಒಳಗೆ ಒಂದೂ ಚೆಂಡನ್ನು ಎಸೆಯದಿದ್ದರೆ, ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ.

  • 23 Sep 2022 07:49 PM (IST)

    ಓವರ್‌ಗಳನ್ನು ಕಡಿಮೆ ಮಾಡಬಹುದು

    8 ಗಂಟೆಗೆ ಎರಡನೇ ಬಾರಿ ತಪಾಸಣೆ ಮುಗಿಸಿ ಪಂದ್ಯ ಆರಂಭಕ್ಕೆ ಸೂಚನೆ ಸಿಕ್ಕರೆ ಪಂದ್ಯದ ಓವರ್​ಗಳು ಕಡಿಮೆಯಾಗುವ ಸಾಧ್ಯತೆ ಇದೆ. ಇದು ಸಂಪೂರ್ಣವಾಗಿ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಪಂದ್ಯ ಪೂರ್ಣ 20 ಓವರ್‌ಗಳಾಗುವ ಸಾಧ್ಯತೆಯೂ ಇದೆ.

  • 23 Sep 2022 07:04 PM (IST)

    ತಪಾಸಣೆ ನಡೆಯುತ್ತಿದೆ

    ಮೈದಾನದ ಅಂಪೈರ್‌ಗಳು ಪರಿಶೀಲನೆ ನಡೆಸುತ್ತಿದ್ದು, ಗ್ರೌಂಡ್‌ಸ್ಟಾಫ್ ಬೌಂಡರಿ ಲೈನ್‌ನ ಬಳಿ ಒದ್ದೆಯಾದ ಪ್ಯಾಚ್‌ಗಳಿಗೆ ಸ್ವಲ್ಪ ಮರದ ಪುಡಿ ಸಿಂಪಡಿಸುತ್ತಿದ್ದಾರೆ.

  • 23 Sep 2022 06:43 PM (IST)

    ಟಾಸ್ ವಿಳಂಬ

    ಒದ್ದೆಯಾದ ಔಟ್‌ಫೀಲ್ಡ್‌ನಿಂದಾಗಿ ಟಾಸ್ ತಡವಾಗಿದೆ. ಅಂಪೈರ್‌ಗಳು ಸಂಜೆ 7 ಗಂಟೆಗೆ ಮೈದಾನಕ್ಕೆ ಎಂಟ್ರಿಕೊಟ್ಟು ಪರಿಶೀಲನೆ ನಡೆಸಲಿದ್ದಾರೆ.

  • Published On - Sep 23,2022 6:40 PM

    Follow us
    ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
    ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
    ’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
    ’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
    ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
    ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
    ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
    ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
    ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
    ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
    ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
    ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
    ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
    ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
    ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
    ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
    ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
    ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
    ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
    ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್