IND vs AUS: ರಾಹುಲ್ ಹಿಡಿದ ಅದ್ಭುತ ಕ್ಯಾಚ್ ನೋಡಿ ದಂಗಾದ ಶತಕ ವಂಚಿತ ಖವಾಜ; ವಿಡಿಯೋ ನೋಡಿ
IND vs AUS: ಕೆಎಲ್ ರಾಹುಲ್ ಅವರ ಈ ಅತ್ಯುತ್ತಮ ಕ್ಯಾಚ್‌ನಿಂದಾಗಿ ಉಸ್ಮಾನ್ ಖವಾಜ ಶತಕವಂಚಿತರಾದರು. ದೆಹಲಿಯ ಟರ್ನಿಂಗ್ ಪಿಚ್‌ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ ಉಸ್ಮಾನ್, 12 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 81 ರನ್ಗಳ ಇನಿಂಗ್ಸ್ ಆಡಿದರು.
ಕಳೆದ ಕೆಲವು ತಿಂಗಳುಗಳಿಂದ ಕಳಪೆ ಫಾರ್ಮ್ನಿಂದಾಗಿ ಎಲ್ಲಾ ಟೀಕಕಾರರ ಬಾಯಿಗೆ ತುತ್ತಾಗಿರುವ ಕನ್ನಡಿಗ ಕೆಎಲ್ ರಾಹುಲ್ (KL Rahul) ಇಂದಿನಿಂದ ದೆಹಲಿಯಲ್ಲಿ ಆರಂಭವಾಗಿರುವ ಭಾರತ ಹಾಗೂ ಆಸ್ಟ್ರೇಲಿಯಾ (India Vs Australia) ನಡುವಿನ ಎರಡನೇ ಟೆಸ್ಟ್ನಲ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಹುಲ್ ಹಿಡಿದ ಈ ಅದ್ಭುತ ಡೈವಿಂಗ್ ಕ್ಯಾಚ್‌ನಿಂದಾಗಿ ಶತಕದಂಚಿನಲ್ಲಿದ್ದ ಆಸೀಸ್ ಬ್ಯಾಟರ್ ಉಸ್ಮಾನ್ ಖವಾಜ (Usman Khawaj) ಪೆವಿಲಿಯನ್ಗೆ ಮರಳಬೇಕಾಯಿತು. ವಾಸ್ತವವಾಗಿ, ಜಡೇಜಾ ಎಸೆದ 46 ನೇ ಓವರ್‌ನಲ್ಲಿ ಖವಾಜ ರಿವರ್ಸ್ ಸ್ವೀಪ್ ಆಡುವ ಮೂಲಕ ಬೌಂಡರಿ ಬಾರಿಸಿದರು. ಇದರ ನಂತರ, ಮುಂದಿನ ಎಸೆತದಲ್ಲಿ, ಅವರು ಮತ್ತೆ ಅದೇ ಸ್ಟ್ರೋಕ್ ಅನ್ನು ಹೊಡೆಯಲು ಪ್ರಯತ್ನಿಸಿದರು. ಆದರೆ ಈ ಬಾರಿ ಎಡವಿದ ಖವಾಜ, ಎಕ್ಸ್ಟ್ರಾ ಕವರ್‌ನಲ್ಲಿ ನಿಂತಿದ್ದ ರಾಹುಲ್ ಅವರ ಅದ್ಭುತ ಫೀಲ್ಡಿಂಗ್ ಬಲೆಗೆ ಬಿದ್ದರು. ಅದ್ಭುತ ಚಾಣಾಕ್ಷತನ ತೋರಿದ ಕೆಎಲ್ ರಾಹುಲ್ ಒಂದೇ ಕೈಯಿಂದ ಚೆಂಡನ್ನು ಡೈವ್ ಮಾಡಿ ಹಿಡಿದರು. ರಾಹುಲ್ ಕ್ಯಾಚ್ ನೋಡಿದ ಉಸ್ಮಾನ್ ಖವಾಜಗೂ ಕೂಡ ತಾನು ಔಟಾಗಿರುವುದನ್ನು ನಂಬಲಾಗಲಿಲ್ಲ.
ICYMI – WHAT. A. CATCH ??
WOW. A one-handed stunner from @klrahul to end Usman Khawaja’s enterprising stay!#INDvAUS pic.twitter.com/ODnHQ2BPIK
— BCCI (@BCCI) February 17, 2023
ಶತಕ ವಂಚಿತರಾದ ಖವಾಜ
ಕೆಎಲ್ ರಾಹುಲ್ ಅವರ ಈ ಅತ್ಯುತ್ತಮ ಕ್ಯಾಚ್‌ನಿಂದಾಗಿ ಉಸ್ಮಾನ್ ಖವಾಜ ಶತಕವಂಚಿತರಾದರು. ದೆಹಲಿಯ ಟರ್ನಿಂಗ್ ಪಿಚ್‌ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ ಉಸ್ಮಾನ್, 12 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 81 ರನ್ಗಳ ಇನಿಂಗ್ಸ್ ಆಡಿದರು. ಅಲ್ಲದೆ ಈ ಪಂದ್ಯದಲ್ಲಿ ಖವಾಜ ಅವರ ಸ್ಟ್ರೈಕ್ ರೇಟ್ ಕೂಡ 65ರ ಸಮೀಪದಲ್ಲಿತ್ತು. ಅಲ್ಲದೆ ಉಸ್ಮಾನ್ ಖವಾಜ ಮೂರು ಉತ್ತಮ ಜೊತೆಯಾಟವಾಡಿದ್ದು ಪ್ರಮುಖ ಸಂಗತಿ. ಅವರು ವಾರ್ನರ್ ಜೊತೆ 50, ಲಬುಶೆನ್ ಜೊತೆ 41 ಮತ್ತು ಹ್ಯಾಂಡ್ಸ್ಕಾಂಬ್ ಜೊತೆ 59 ರನ್ ಸೇರಿಸಿದರು.
IND vs AUS: ವಿಶ್ವ ದಾಖಲೆ ಬರೆದ ಜಡೇಜಾ; ಇಮ್ರಾನ್ ಖಾನ್- ಕಪಿಲ್ ದೇವ್ ದಾಖಲೆ ಉಡೀಸ್..!
ದಾಖಲೆ ಬರೆದ ರವೀಂದ್ರ ಜಡೇಜಾ
ಕೆಎಲ್ ರಾಹುಲ್ ಅವರ ಅತ್ಯುತ್ತಮ ಕ್ಯಾಚ್ ಆಧಾರದ ಮೇಲೆ ರವೀಂದ್ರ ಜಡೇಜಾ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆ ಕೂಡ ಮಾಡಿದರು. ಖವಾಜ ವಿಕೆಟ್ ಪಡೆಯುವುದರೊಂದಿಗೆ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ 250 ವಿಕೆಟ್‌ಗಳನ್ನು ಕೂಡ ಪೂರೈಸಿದರು. 62ನೇ ಟೆಸ್ಟ್ ಪಂದ್ಯದಲ್ಲಿ ಜಡೇಜಾ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾದರು. ಟೆಸ್ಟ್ ಕ್ರಿಕೆಟ್‌ನಲ್ಲಿ 2500 ಕ್ಕೂ ಹೆಚ್ಚು ರನ್ ಗಳಿಸಿರುವ ಜಡೇಜಾ ಈ ಸಾಧನೆ ಮಾಡಿದ ಏಷ್ಯಾದ ಅತಿ ವೇಗದ ಆಲ್‌ರೌಂಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:33 pm, Fri, 17 February 23