
ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ (T20 World Cup) ಈಗಿನಿಂದಲೇ ತಯಾರಿ ಆರಂಭಿಸಿರುವ ಟೀಂ ಇಂಡಿಯಾಕ್ಕೆ (Team India) ಆಸ್ಟ್ರೇಲಿಯಾ ಪ್ರವಾಸದಲ್ಲಿ ಸೋಲಿನ ಆಘಾತ ಎದುರಾಗಿದೆ. ಮೆಲ್ಬೋರ್ನ್‌ನಲ್ಲಿ ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೂರ್ಯಕುಮಾರ್ ಪಡೆಯನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕೇವಲ 125 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಟೀಂ ಇಂಡಿಯಾದ ಈ ಸೋಲಿಗೆ ಬ್ಯಾಟಿಂಗ್ ವಿಭಾಗದ ಕಳಪೆ ಪ್ರದರ್ಶನವೇ ಪ್ರಮುಖ ಕಾರಣ ಎನ್ನಬಹುದು. ತಂಡದ ಇಬ್ಬರು ಆಟಗಾರರನ್ನು ಬಿಟ್ಟರೆ ಉಳಿದ 9 ಆಟಗಾರರು ಕೇವಲ ಒಂದಂಕಿಗೆ ವಿಕೆಟ್ ಒಪ್ಪಿಸಿದರು. ಇದು ಆಸ್ಟ್ರೇಲಿಯಾದ ಗೆಲುವಿಗೆ ಸುಲಭ ದಾರಿ ಮಾಡಿಕೊಟ್ಟಿತು.
ಅಕ್ಟೋಬರ್ 31 ರ ಶನಿವಾರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯವು ಎರಡು ವಿಭಿನ್ನ ಬ್ಯಾಟಿಂಗ್ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಒಂದೆಡೆ ಭಾರತೀಯ ಬ್ಯಾಟ್ಸ್‌ಮನ್‌ಗಳು ಮೆಲ್ಬೋರ್ನ್ ಪಿಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪೆವಿಲಿಯನ್ ಪರೇಡ್ ನಡೆಸಿದರೆ, ಇತ್ತ ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಪವರ್‌ಪ್ಲೇನಲ್ಲೇ ತಂಡದ ಗೆಲುವನ್ನು ಖಚಿತಪಡಿಸದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎಂಟನೇ ಓವರ್‌ನಲ್ಲಿ ಕೇವಲ 49 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ಆಸೀಸ್ ಪರ ಮಾರಕ ದಾಳಿ ಮಾಡಿದ ಹೇಜಲ್‌ವುಡ್ ತಮ್ಮ ನಾಲ್ಕು ಓವರ್‌ಗಳ ಸ್ಪೆಲ್ನಲ್ಲಿ ಕೇವಲ 13 ರನ್‌ಗಳನ್ನು ಬಿಟ್ಟುಕೊಟ್ಟು, ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಸೇರಿದಂತೆ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಆದಾಗ್ಯೂ ಭಾರತದ ಪರ ಗಮನಾರ್ಹ ಪ್ರದರ್ಶನ ನೀಡಿದ ಅಭಿಷೇಕ್ ಶರ್ಮಾ ಮತ್ತು ಹರ್ಷಿತ್ ರಾಣಾ 56 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇವರಿಬ್ಬರ ಜೊತೆಯಾಟದಿಂದಾಗಿ ಭಾರತವು 100 ರನ್‌ಗಳ ಗಡಿ ದಾಟಿತು. ಆದಾಗ್ಯೂ ತಂಡದ ಕೆಳ ಕ್ರಮಾಂಕಕ್ಕೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗದೆ 18.4 ಓವರ್‌ಗಳಲ್ಲಿ 125 ರನ್‌ಗಳಿಗೆ ಆಲೌಟ್ ಆಯಿತು.
ಅರ್ಧಶತಕ ಬಾರಿಸಿ ಟೀಂ ಇಂಡಿಯಾದ ಮಾನ ಉಳಿಸಿದ ಅಭಿಷೇಕ್ ಶರ್ಮಾ
ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾದ ಆರಂಭಿಕ ಜೋಡಿಯಾದ ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಮಾರ್ಷ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಐದನೇ ಓವರ್‌ನಲ್ಲಿ ತಂಡವನ್ನು 50 ರನ್‌ಗಳ ಗಡಿ ದಾಟಿಸಿದರು. ಟ್ರಾವಿಸ್ ಹೆಡ್ (28) ಅವರನ್ನು ವರುಣ್ ಚಕ್ರವರ್ತಿ ಔಟ್ ಮಾಡಿದರಾದರೂ, ಮಾರ್ಷ್ (46) ತಮ್ಮ ಆಕ್ರಮಣಕಾರಿಯಾಗಿ ಆಟವನ್ನು ಮುಂದುವರೆಸಿದರು. ಕುಲ್ದೀಪ್ ಯಾದವ್ ಅವರ ಮೊದಲ ಓವರ್‌ನಲ್ಲಿ 20 ರನ್ ಗಳಿಸಿದ ಮಾರ್ಷ್ ಅದೇ ಓವರ್‌ನಲ್ಲಿ ಔಟ್ ಆದರು. ಆದರೆ ಅಷ್ಟರಲ್ಲಾಗಲೇ ಆಸ್ಟ್ರೇಲಿಯಾದ ಗೆಲುವು ಖಚಿತವಾಗಿತ್ತು. ಆದಾಗ್ಯೂ, ಗೆಲುವಿನ ಹತ್ತಿರ ಬಂದ ನಂತರ ಆಸ್ಟ್ರೇಲಿಯಾದ ಇನ್ನಿಂಗ್ಸ್ ಕುಂಟುತ್ತಾ ಹೋಯಿತು. ಜಸ್ಪ್ರೀತ್ ಬುಮ್ರಾ ಸತತ ಎರಡು ವಿಕೆಟ್‌ಗಳನ್ನು ಪಡೆದರಾದರೂ ಆ ಹೊತ್ತಿಗೆ ಟೀಂ ಇಂಡಿಯಾದ ಸೋಲು ಖಚಿತವಾಗಿತ್ತು. ಅಂತಿಮವಾಗಿ ಆಸ್ಟ್ರೇಲಿಯಾ 13.2 ಓವರ್‌ಗಳಲ್ಲಿ ಗುರಿ ತಲುಪಿತು.
ಈ ಸೋಲಿನೊಂದಿಗೆ ಭಾರತ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ 17 ವರ್ಷಗಳ ನಂತರ ಸೋತ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಭಾರತ ಇಲ್ಲಿ ಕೊನೆಯ ಬಾರಿಗೆ ಸೋತಿದ್ದು 17 ವರ್ಷಗಳ ಹಿಂದೆ ಅಂದರೆ 2008 ರಲ್ಲಿ. ಅಂದಿನಿಂದ, ಭಾರತ ತಂಡವು ಈ ಮೈದಾನದಲ್ಲಿ ಸತತ ಗೆಲುವುಗಳನ್ನು ದಾಖಲಿಸಿದ್ದು, ಕೇವಲ ಒಂದು ಪಂದ್ಯ ಮಾತ್ರ ಡ್ರಾದಲ್ಲಿ ಕೊನೆಗೊಂಡಿತು. ಈ ಗೆಲುವಿನೊಂದಿಗೆ, ಆಸ್ಟ್ರೇಲಿಯಾ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು, ಅಂದರೆ ಸರಣಿಯನ್ನು ಗೆಲ್ಲಲು ಟೀಂ ಇಂಡಿಯಾ ಈಗ ಉಳಿದಿರುವ ಮೂರು ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:38 pm, Fri, 31 October 25