IND vs AUS 5th T20I: ಭಾರತ-ಆಸ್ಟ್ರೇಲಿಯಾ ಐದನೇ ಟಿ20 ಬೆಂಗಳೂರಿನಲ್ಲಿ: ಪಂದ್ಯ ಯಾವಾಗ?, ಇಲ್ಲಿದೆ ಮಾಹಿತಿ
When and Where India vs Australia 5th T20I: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ 20 ರನ್ಗಳ ಜಯ ಸಾಧಿಸುವ ಮೂಲಕ ಭಾರತ ಐದು ಪಂದ್ಯಗಳ ಟಿ20 ಸರಣಿ ಸರಣಿಯಲ್ಲಿ 3-1 ಮುನ್ನಡೆ ಪಡೆದುಕೊಂಡು ಸರಣಿ ವಶಪಡಿಸಿಕೊಂಡಿದೆ. ಇದೀಗ ಕೊನೆಯ ಪಂದ್ಯದ ಮೇಲೂ ಸೂರ್ಯ ಪಡೆ ಕಣ್ಣಿಟ್ಟಿದೆ. ಹಾಗಾದರೆ, ಇಂಡೋ-ಆಸೀಸ್ ಅಂತಿಮ ಐದನೇ ಟಿ20 ಯಾವಾಗ?, ಎಲ್ಲಿ ನಡೆಯಲಿದೆ?.
ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಭಾರತ (India vs Australia) 3-1 ಅಂಕಗಳ ಅಂತರದಿಂದ ವಶಪಡಿಸಿಕೊಂಡಿದೆ. ಶುಕ್ರವಾರ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾ 20 ರನ್ಗಳ ಜಯ ಸಾಧಿಸಿತು. ಇದೀಗ ಭಾರತ ಕೊನೆಯ ಪಂದ್ಯವನ್ನು ಕೂಡ ಗೆಲ್ಲುವ ಪ್ಲಾನ್ನಲ್ಲಿದೆ. ಹಾಗಾದರೆ, ಇಂಡೋ-ಆಸೀಸ್ ಐದನೇ ಟಿ20 ಯಾವಾಗ?, ಎಲ್ಲಿ ನಡೆಯಲಿದೆ. ಇಲ್ಲಿದೆ ಮಾಹಿತಿ.
ಭಾರತ-ಆಸ್ಟ್ರೇಲಿಯಾ ಐದನೇ ಟಿ20 ಪಂದ್ಯ ಯಾವಾಗ?
ಡಿಸೆಂಬರ್ 3 ಭಾನುವಾರದಂದು ಭಾರತ vs ಆಸ್ಟ್ರೇಲಿಯಾ ನಾಲ್ಕನೇ ಟಿ20 ಪಂದ್ಯ ನಡೆಯಲಿದೆ.
ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟಿ20 ಪಂದ್ಯ ಎಲ್ಲಿ ಆಡಲಾಗುತ್ತದೆ?
ಭಾರತ ಮತ್ತು ಆಸ್ಟ್ರೇಲಿಯಾ ನಾಲ್ಕನೇ ಟಿ20 ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.
IPL 2024: ಐಪಿಎಲ್ ಹರಾಜಿನಲ್ಲಿ 1166 ಆಟಗಾರರು! ಇದರಲ್ಲಿ ಭಾರತೀಯರೆಷ್ಟು? ವಿದೇಶಿಗರೆಷ್ಟು?
ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟಿ20 ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?
ಭಾರತ vs ಆಸ್ಟ್ರೇಲಿಯಾ ನಾಲ್ಕನೇ ಟಿ20 ಪಂದ್ಯವನ್ನು JioCinema ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್‌ಸ್ಟ್ರೀಮ್ ಮಾಡಲಾಗುತ್ತದೆ. ಅಭಿಮಾನಿಗಳು Sports18 ನೆಟ್‌ವರ್ಕ್ ಮೂಲಕ ಟಿವಿಯಲ್ಲಿ ವೀಕ್ಷಿಸಬಹುದು.
ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟಿ20 ಪಂದ್ಯ ಎಷ್ಟು ಗಂಟೆಗೆ ಆರಂಭ?
ಭಾರತ ಹಾಗೂ ಆಸ್ಟ್ರೇಲಿಯಾ ನಾಲ್ಕನೇ ಟಿ20 ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ಆರಂಭವಾಗಲಿದೆ.
ಭಾರತ ತಂಡ:
ಸೂರ್ಯಕುಮಾರ್ ಯಾದವ್ (ನಾಯಕ), ಶ್ರೇಯಸ್ ಅಯ್ಯರ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಶ್‌ದೀಪ್ ಸಿಂಗ್ ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಖೇಶ್ ಕುಮಾರ್, ದೀಪಕ್ ಚಹಾರ್.
ಆಸ್ಟ್ರೇಲಿಯಾ ತಂಡ:
ಮ್ಯಾಥ್ಯೂ ವೇಡ್ (ನಾಯಕ), ಜೇಸನ್ ಬೆಹ್ರೆನ್‌ಡಾರ್ಫ್, ಟಿಮ್ ಡೇವಿಡ್, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಕ್ರಿಸ್ ಗ್ರೀನ್, ಆರನ್ ಹಾರ್ಡಿ, ಟ್ರಾವಿಸ್ ಹೆಡ್, ಬೆನ್ ಮೆಕ್‌ಡರ್ಮಾಟ್, ಜೋಶ್ ಫಿಲಿಪ್, ತನ್ವೀರ್ ಸಂಘ, ಮ್ಯಾಟ್ ಶಾರ್ಟ್, ಕೇನ್ ರಿಚರ್ಡ್ಸನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ