IPL 2024: ಐಪಿಎಲ್ ಹರಾಜಿನಲ್ಲಿ 1166 ಆಟಗಾರರು! ಇದರಲ್ಲಿ ಭಾರತೀಯರೆಷ್ಟು? ವಿದೇಶಿಗರೆಷ್ಟು?
IPL 2024 Auction: ಐಪಿಎಲ್ 2024 ರ ಹರಾಜಿಗೆ ಒಟ್ಟು 1166 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ 1,166 ಆಟಗಾರರ ಪೈಕಿ 830 ಭಾರತೀಯ ಆಟಗಾರರಿದ್ದರೆ, 336 ವಿದೇಶಿ ಆಟಗಾರರಿದ್ದಾರೆ. ಈ ಪಟ್ಟಿಯಲ್ಲಿ 212 ಕ್ಯಾಪ್ಡ್, 909 ಅನ್‌ಕ್ಯಾಪ್ಡ್ ಮತ್ತು 45 ಅಸೋಸಿಯೇಟ್ ಆಟಗಾರರು ಸೇರಿದ್ದಾರೆ.
ಐಪಿಎಲ್ 2024 ರ (IPL 2024) ಹರಾಜಿಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಇದೇ ತಿಂಗಳಿನಲ್ಲಿ ಅಂದರೆ ಡಿಸೆಂಬರ್ 19 ರಂದು ನಡೆಯಲ್ಲಿರುವ ಐಪಿಎಲ್ ಮಿನಿ ಹರಾಜಿಗೆ ಬರುತ್ತಿರುವ ಆಟಗಾರರ ಪಟ್ಟಿ ಹೊರಬಿದ್ದಿದೆ. ಅದರಂತೆ ಐಪಿಎಲ್ 2024 ರ ಹರಾಜಿಗೆ (IPL 2024 Auction) ಒಟ್ಟು 1166 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ 1,166 ಆಟಗಾರರ ಪೈಕಿ 830 ಭಾರತೀಯ ಆಟಗಾರರಿದ್ದರೆ, 336 ವಿದೇಶಿ ಆಟಗಾರರಿದ್ದಾರೆ. ಈ ಪಟ್ಟಿಯಲ್ಲಿ 212 ಕ್ಯಾಪ್ಡ್, 909 ಅನ್‌ಕ್ಯಾಪ್ಡ್ ಮತ್ತು 45 ಅಸೋಸಿಯೇಟ್ ಆಟಗಾರರು ಸೇರಿದ್ದಾರೆ.
ಅಚ್ಚರಿಯ ಸಂಗತಿಯೆಂದರೆ ಇಂಗ್ಲೆಂಡ್ ತಂಡದ ಸ್ಟಾರ್ ಬೌಲರ್ ಜೋಫ್ರಾ ಆರ್ಚರ್ ತಮ್ಮ ಹೆಸರನ್ನು ಹರಾಜಿಗೆ ನೋಂದಾಯಿಸಿಲ್ಲ. ಇವರನ್ನು ಹೊರತುಪಡಿಸಿ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಟ್ರಾವಿಸ್ ಹೆಡ್, ಡೇರಿಲ್ ಮಿಚೆಲ್ ಮತ್ತು ರಚಿನ್ ರವೀಂದ್ರ ಅವರಂತಹ ವಿಶ್ವಕಪ್ ಹೀರೋಗಳು ಈ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
‘ಸಾಕಷ್ಟು ಹಣವಿದೆ’: ಐಪಿಎಲ್ ಆಡುವ ಬಯಕೆ ವ್ಯಕ್ತಪಡಿಸಿದ ಮತ್ತೊಬ್ಬ ಪಾಕ್ ಆಟಗಾರ
830 ಭಾರತೀಯರ ಪೈಕಿ 18 ಆಟಗಾರರು
830 ಭಾರತೀಯರ ಪೈಕಿ 18 ಆಟಗಾರರು ಈ ಹಿಂದೆ ಟೀಂ ಇಂಡಿಯಾದಲ್ಲಿ ಆಡಿದ್ದ ವರುಣ್ ಆರೋನ್, ಕೆಎಸ್ ಭರತ್, ಕೇದಾರ್ ಜಾಧವ್, ಸಿದ್ಧಾರ್ಥ್ ಕೌಲ್, ಧವಳ್ ಕುಲಕರ್ಣಿ, ಶಿವಂ ಮಾವಿ, ಶಹಬಾಜ್ ನದೀಮ್, ಕರುಣ್ ನಾಯರ್, ಮನೀಶ್ ಪಾಂಡೆ, ಹರ್ಷಲ್ ಪಟೇಲ್, ಚೇತನ್ ಸಕಾರಿಯಾ, ಮನದೀಪ್ ಸಿಂಗ್, ಬರೀಂದರ್ ಸ್ರಾನ್, ಶಾರ್ದೂಲ್ ಠಾಕೂರ್, ಜಯದೇವ್ ಉಂಡ್ಕಟ್, ಹನುಮ ವಿಹಾರಿ, ಸಂದೀಪ್ ವಾರಿಯರ್ ಮತ್ತು ಉಮೇಶ್ ಯಾದವ್ ಅವರ ಹೆಸರು ಸೇರಿವೆ.
ಇವರಲ್ಲಿ ಹರ್ಷಲ್ ಪಟೇಲ್, ಕೇದಾರ್ ಜಾಧವ್, ಶಾರ್ದೂಲ್ ಠಾಕೂರ್ ಮತ್ತು ಉಮೇಶ್ ಯಾದವ್ ಅವರ ಮೂಲ ಬೆಲೆಯನ್ನು ಗರಿಷ್ಠ ರೂ. 2 ಕೋಟಿಗೆ ಇಡಲಾಗಿದೆ. ಉಳಿದಂತೆ 14 ಆಟಗಾರರ ಮೂಲ ಬೆಲೆಯನ್ನು ರೂ.50 ಲಕ್ಷಕ್ಕೆ ಇರಿಸಲಾಗಿದೆ.
ವಿದೇಶಿ ಆಟಗಾರರ ಪಟ್ಟಿ ನೋಡುವುದಾದರೆ
- ರೆಹಾನ್ ಅಹ್ಮದ್ (50 ಲಕ್ಷ)
- ಗಸ್ ಅಟ್ಕಿನ್ಸನ್ (1 ಕೋಟಿ)
- ಟಾಮ್ ಬೆಂಟನ್ (2 ಕೋಟಿ)
- ಸ್ಯಾಮ್ ಬಿಲ್ಲಿಂಗ್ಸ್ (1 ಕೋಟಿ)
- ಹ್ಯಾರಿ ಬ್ರೂಕ್ (2 ಕೋಟಿ)
- ಟಾಮ್ ಕರನ್ (1.5 ಕೋಟಿ ರೂ.)
- ಬೆನ್ ಡಕೆಟ್ (ರೂ. 2 ಕೋಟಿ)
- ಜಾರ್ಜ್ ಗಾರ್ಟನ್ (ರೂ. 50 ಲಕ್ಷ)
- ರಿಚರ್ಡ್ ಗ್ಲೀಸನ್ (ರೂ. 50 ಲಕ್ಷ),
- ಸ್ಯಾಮ್ಯುಯೆಲ್ ಹಾನ್ (50 ಲಕ್ಷ ರೂ. )
- ಕ್ರಿಸ್ ಜೋರ್ಡಾನ್ (ರೂ. 1.5 ಕೋಟಿ)
- ಡೇವಿಡ್ ಮಲಾನ್ (ರೂ. 1.5 ಕೋಟಿ)
- ಟೈಮಲ್ ಮಿಲ್ಸ್ (ರೂ. 1.5 ಕೋಟಿ)
- ಜೇಮಿ ಓವರ್‌ಟನ್ (ರೂ. 2 ಕೋಟಿ)
- ಒಲಿ ಪೋಪ್ (ರೂ. 50 ಲಕ್ಷ)
- ಆದಿಲ್ ರಶೀದ್ (2 ಕೋಟಿ)
- ಫಿಲಿಪ್ ಸಾಲ್ಟ್ (ರೂ. 1.5 ಕೋಟಿ)
- ಜಾರ್ಜ್ ಸ್ಕ್ರಿಮ್‌ಶಾ (50 ಲಕ್ಷ)
- ಆಲಿ ಸ್ಟೋನ್ (ರೂ. 75 ಲಕ್ಷ)
- ಡೇವಿಡ್ ವಿಲ್ಲಿ (ರೂ. 2 ಕೋಟಿ)
- ಕ್ರಿಸ್ ವೋಕ್ಸ್ (ರೂ. 2 ಕೋಟಿ)
- ಲ್ಯೂಕ್ ವುಡ್ (ರೂ. 50 ಲಕ್ಷ)
- ಮಾರ್ಕ್ ಅದೈರ್ (50 ಲಕ್ಷ ರೂ)
ಫ್ರಾಂಚೈಸಿಗಳಿಗೆ ಸೂಚನೆ
ಇದಲ್ಲದೆ ಸದ್ಯ ಹರಾಜು ಪಟ್ಟಿಯಲ್ಲಿ ಸೇರಿಸದ ಹಾಗೂ ತಂಡಗಳಿಗೆ ಅವಶ್ಯಕವಿರುವ ಆಟಗಾರರ ಪಟ್ಟಿಯನ್ನು ಮಂಡಳಿಗೆ ನೀಡುವಂತೆ ಬಿಸಿಸಿಐ, ಫ್ರಾಂಚೈಸಿಗಳಿಗೆ ಕೇಳಿದೆ. ವಿನಂತಿಸಿದ ಆಟಗಾರರು ಅರ್ಹತೆ ಮತ್ತು ಆಸಕ್ತಿ ಹೊಂದಿದ್ದರೆ ಸ್ವಯಂಚಾಲಿತವಾಗಿ ಹರಾಜಿನಲ್ಲಿ ಸೇರಿಸಲಾಗುತ್ತದೆ. ಈ ಹರಾಜಿನಲ್ಲಿ ಕೇವಲ 77 ಸ್ಲಾಟ್‌ಗಳನ್ನು ಮಾತ್ರ ಭರ್ತಿ ಮಾಡಬೇಕಾಗಿದ್ದು, ಅದರಲ್ಲಿ ಗರಿಷ್ಠ 30 ವಿದೇಶಿ ಆಟಗಾರರನ್ನು ಮಾತ್ರ ಖರೀದಿಸಬಹುದಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ