IND vs AUS: ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ವೇಳಾಪಟ್ಟಿ ಪ್ರಕಟ

| Updated By: ಝಾಹಿರ್ ಯೂಸುಫ್

Updated on: Mar 26, 2024 | 4:55 PM

India vs Australia Test Series 2024-25: ಆಸ್ಟ್ರೇಲಿಯಾದ ಲೆಜೆಂಡ್ ಅಲನ್ ಬಾರ್ಡರ್ ಹಾಗೂ ಭಾರತದ ದಂತಕಥೆ ಸುನಿಲ್ ಗವಾಸ್ಕರ್ ಹೆಸರಿನಲ್ಲಿ ಆಯೋಜಿಸಲಾಗುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸಿರೀಸ್​ನಲ್ಲಿ ಇದುವರೆಗೆ 16 ಸರಣಿಗಳನ್ನು ಆಡಲಾಗಿದೆ. ಈ ವೇಳೆ ಭಾರತ ತಂಡವು 10 ಬಾರಿ ಸರಣಿ ಗೆದ್ದರೆ, ಆಸ್ಟ್ರೇಲಿಯಾ 5 ಸಲ ಟ್ರೋಫಿ ಎತ್ತಿ ಹಿಡಿದಿದೆ.

IND vs AUS: ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ವೇಳಾಪಟ್ಟಿ ಪ್ರಕಟ
IND vs AUS
Follow us on

ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ವೇಳಾಪಟ್ಟಿ ಪ್ರಕಟವಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು 5 ಪಂದ್ಯಗಳನ್ನಾಡಲಾಗುತ್ತದೆ. ಈ ಹಿಂದೆ BGT ಸರಣಿಯಲ್ಲಿ 3 ಹಾಗೂ 4 ಪಂದ್ಯಗಳನ್ನಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಭಾರತ ವಿರುದ್ಧ 5 ಪಂದ್ಯಗಳ ಟೆಸ್ಟ್​ ಸರಣಿಯನ್ನು ಆಯೋಜಿಸುತ್ತಿರುವುದು ವಿಶೇಷ.

ಈ ಸರಣಿಯ ಮೊದಲ ಪಂದ್ಯವು ನವೆಂಬರ್ 22 ರಿಂದ ಶುರುವಾಗಲಿದೆ. ಪರ್ತ್​ನಲ್ಲಿ ಮೊದಲ ಪಂದ್ಯ ನಡೆದರೆ, 2ನೇ ಪಂದ್ಯಕ್ಕೆ ಅಡಿಲೇಡ್ ಆತಿಥ್ಯವಹಿಸಲಿದೆ. ವಿಶೇಷ ಎಂದರೆ ಈ ಸರಣಿಯ 2ನೇ ಪಂದ್ಯವು ಡೇ ನೈಟ್ ಪಂದ್ಯವಾಗಿದೆ. ಈ ಅಹರ್ನಿಶಿ ಪಂದ್ಯವನ್ನು ಪಿಂಕ್ ಬಾಲ್​ನಲ್ಲಿ ಆಡಲಾಗುತ್ತದೆ.

ಇನ್ನು ಮೂರನೇ ಪಂದ್ಯಕ್ಕೆ ಗಾಬ್ಬಾ ಮೈದಾನ ಆತಿಥ್ಯವಹಿಸಿದರೆ, ನಾಲ್ಕನೇ ಪಂದ್ಯವು ಮೆಲ್ಬೋರ್ನ್​ನಲ್ಲಿ ನಡೆಯಲಿದೆ. ಅಂದರೆ ನಾಲ್ಕನೇ ಪಂದ್ಯವು ಬಾಕ್ಸಿಂಗ್ ಟೆಸ್ಟ್​. ಕ್ರಿಸ್​ಮಸ್ ಹಬ್ಬದ ಮರುದಿನ ನಡೆಯುವ ಪಂದ್ಯವನ್ನು ಬಾಕ್ಸಿಂಗ್ ಟೆಸ್ಟ್ ಎಂದು ಕರೆಯಲಾಗುತ್ತದೆ. ಇನ್ನು ಅಂತಿಮ ಟೆಸ್ಟ್ ಪಂದ್ಯವು ಸಿಡ್ನಿಯಲ್ಲಿ ಜನವರಿ 3, 2025 ರಿಂದ ಶುರುವಾಗಲಿದೆ.

ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ ಸ್ಥಳ
ಮೊದಲ ಟೆಸ್ಟ್ ನವೆಂಬರ್ 22 ರಿಂದ 26, 2024 ಪರ್ತ್​ ಸ್ಟೇಡಿಯಂ, ಪರ್ತ್​
ಎರಡನೇ ಟೆಸ್ಟ್​ (ಪಿಂಕ್ ಬಾಲ್) ಡಿಸೆಂಬರ್ 6 ರಿಂದ 10, 2024 ಅಡಿಲೇಡ್ ಓವಲ್ ಸ್ಟೇಡಿಯಂ, ಅಡಿಲೇಡ್
ಮೂರನೇ ಟೆಸ್ಟ್​​ ಡಿಸೆಂಬರ್ 14 ರಿಂದ 18, 2024 ದಿ ಗಬ್ಬಾ ಸ್ಟೇಡಿಯಂ, ಬ್ರಿಸ್ಬೇನ್
ನಾಲ್ಕನೇ ಟೆಸ್ಟ್​ (ಬಾಕ್ಸಿಂಗ್ ಡೇ) ಡಿಸೆಂಬರ್ 26 ರಿಂದ 30, 2024 ಎಂಸಿಜಿ ಸ್ಟೇಡಿಯಂ, ಮೆಲ್ಬೋರ್ನ್​
ಐದನೇ ಟೆಸ್ಟ್​ ಜನವರಿ 3 ರಿಂದ 7, 2025 ಸಿಡ್ನಿ ಕ್ರಿಕೆಟ್ ಸ್ಟೇಡಿಯಂ, ಸಿಡ್ನಿ

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ:

1996-97 ರಿಂದ ಶುರುವಾದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸಿರೀಸ್​ನಲ್ಲಿ ಇದುವರೆಗೆ 16 ಸರಣಿಗಳನ್ನು ಆಡಲಾಗಿದೆ. ಈ ವೇಳೆ ಭಾರತ ತಂಡವು 10 ಬಾರಿ ಸರಣಿ ಗೆದ್ದರೆ, ಆಸ್ಟ್ರೇಲಿಯಾ 5 ಸಲ ಟ್ರೋಫಿ ಎತ್ತಿ ಹಿಡಿದಿದೆ. ಇನ್ನು ಒಂದು ಸರಣಿಯು ಡ್ರಾನಲ್ಲಿ ಅಂತ್ಯ ಕಂಡಿತ್ತು.

ಇದನ್ನೂ ಓದಿ: Virat Kohli: ಕಿಂಗ್ ಕೊಹ್ಲಿ ಹೆಸರಿಗೆ ಮತ್ತೊಂದು ಭರ್ಜರಿ ದಾಖಲೆ ಸೇರ್ಪಡೆ

ವಿಶೇಷ ಎಂದರೆ 2016 ರಿಂದ ಆಸ್ಟ್ರೇಲಿಯಾ ತಂಡವು ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕೆ ಸೋಲುಣಿಸಿಲ್ಲ. ಅಂದರೆ ಕಳೆದ ನಾಲ್ಕು ಸರಣಿಗಳಲ್ಲೂ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಅದರಲ್ಲೂ 2020-21 ರ ಸರಣಿಯಲ್ಲಿ ಅಮೋಘ ಗೆಲುವು ದಾಖಲಿಸುವ ಮೂಲಕ ಭಾರತದ ಯುವ ಪಡೆದ ಹೊಸ ಇತಿಹಾಸ ಬರೆದಿತ್ತು. ಇದಾದ ಬಳಿಕ 2022-23 ರಲ್ಲಿ ಭಾರತದಲ್ಲಿ ಸರಣಿ ಆಡಿದ್ದ ಆಸೀಸ್ ಪಡೆಯನ್ನು 2-1 ಅಂತರದಿಂದ ಮಣಿಸಿತ್ತು. ಆದರೆ ಈ ಬಾರಿ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿರುವುದರಿಂದ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

 

Published On - 4:54 pm, Tue, 26 March 24