ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಗ್ವಾಲಿಯರ್‌ನಲ್ಲಿ ನಡೆಯಿತು. ಈ ಪಂದ್ಯವನ್ನು ಭಾರತ 7 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 11.5 ಓವರ್‌ಗಳಲ್ಲಿ 128 ರನ್ ಕಲೆ ಹಾಕಿ ಗೆಲುವಿನ ನಗೆಬೀರಿತು. ಟೀಂ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಿತ 39 ರನ್ ಸಿಡಿಸಿದರು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 127 ರನ್‌ಗಳಿಗೆ ಕುಸಿದಿತ್ತು. ಬಾಂಗ್ಲಾದೇಶ ಪರ ಮೆಹದಿ ಹಸನ್ ಮಿರಾಜ್ 35 ರನ್ ಗಳಿಸಿ ಗರಿಷ್ಠ ರನ್ ಕಲೆಹಾಕಿದ್ದರು.
ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಅದ್ಭುತ ಬ್ಯಾಟಿಂಗ್‌ನಿಂದ ಭಾರತ ತಂಡವು ಗ್ವಾಲಿಯರ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಹಾರ್ದಿಕ್ ಪಾಂಡ್ಯ ಮತ್ತು ನಿತೀಶ್ ರೆಡ್ಡಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು. ಭಾರತ ತಂಡದ ಗೆಲುವಿಗೆ 54 ಎಸೆತಗಳಲ್ಲಿ 12 ರನ್‌ಗಳ ಅಗತ್ಯವಿದೆ. ಹಾರ್ದಿಕ್ 25 ರನ್ ಮತ್ತು ನಿತೀಶ್ 15 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
10 ಓವರ್‌ಗಳಲ್ಲಿ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿದೆ. ನಿತೀಶ್ ರೆಡ್ಡಿ 14 ರನ್ ಮತ್ತು ಹಾರ್ದಿಕ್ ಪಾಂಡ್ಯ 16 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಸಂಜು ಸ್ಯಾಮ್ಸನ್ ಅವರನ್ನು ಔಟ್ ಮಾಡುವ ಮೂಲಕ ಮೆಹದಿ ಹಸನ್ ಮಿರಾಜ್ ಭಾರತಕ್ಕೆ ಮೂರನೇ ಹೊಡೆತ ನೀಡಿದರು. ಆರಂಭಿಕ ಬ್ಯಾಟ್ಸ್‌ಮನ್ ಆಗಿ ಬಂದ ಸ್ಯಾಮ್ಸನ್ 19 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರು. ಭಾರತ ಎಂಟು ಓವರ್‌ಗಳ ಅಂತ್ಯಕ್ಕೆ ಮೂರು ವಿಕೆಟ್‌ಗೆ 84 ರನ್ ಗಳಿಸಿದೆ.
65 ರನ್‌ಗಳಿಗೆ ಟೀಂ ಇಂಡಿಯಾ ಎರಡನೇ ವಿಕೆಟ್ ಕಳೆದುಕೊಂಡಿದೆ. ಸೂರ್ಯಕುಮಾರ್ ಯಾದವ್ 14 ಎಸೆತಗಳಲ್ಲಿ 29 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ಮೊದಲ 4 ಓವರ್‌ಗಳಲ್ಲಿ ಟೀಂ ಇಂಡಿಯಾ 1 ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿದೆ. ಸಂಜು ಸ್ಯಾಮ್ಸನ್ 18 ರನ್ ಮತ್ತು ಸೂರ್ಯಕುಮಾರ್ ಯಾದವ್ 9 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಟೀಂ ಇಂಡಿಯಾ 25 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಅಭಿಷೇಕ್ ಶರ್ಮಾ 7 ಎಸೆತಗಳಲ್ಲಿ 16 ರನ್ ಗಳಿಸಿ ರನೌಟ್ ಆದರು.
ಭಾರತ ತಂಡದ ಇನ್ನಿಂಗ್ಸ್ ಆರಂಭವಾಗಿದ್ದು, ಮೊದಲ ಓವರ್‌ನಲ್ಲಿಯೇ ಸಂಜು ಸ್ಯಾಮ್ಸನ್ 2 ಬೌಂಡರಿ ಬಾರಿಸಿದರು.
ಬಾಂಗ್ಲಾದೇಶ 19.4 ಓವರ್‌ಗಳಲ್ಲಿ 127 ರನ್‌ಗಳಿಗೆ ಆಲೌಟ್ ಆಗಿದೆ. ಭಾರತದ ಪರ ವರುಣ್ ಚಕ್ರವರ್ತಿ ಮತ್ತು ಅರ್ಷದೀಪ್ ಸಿಂಗ್ ಅದ್ಭುತ ಬೌಲಿಂಗ್ ಮಾಡಿ ತಲಾ 3 ವಿಕೆಟ್ ಪಡೆದರು. ಉಳಿದಂತೆ ಹಾರ್ದಿಕ್ ಪಾಂಡ್ಯ, ಮಯಾಂಕ್ ಯಾದವ್ ಮತ್ತು ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದರು.
ಹಾರ್ದಿಕ್ ಪಾಂಡ್ಯ, ಶೌರಿಫುಲ್ ಇಸ್ಲಾಂ ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಒಂಬತ್ತನೇ ಯಶಸ್ಸನ್ನು ನೀಡಿದರು. ಖಾತೆ ತೆರೆಯದೆ ಶೌರಿಫುಲ್ ಔಟಾದರು. ಬಾಂಗ್ಲಾದೇಶ 18 ಓವರ್‌ಗಳ ಅಂತ್ಯಕ್ಕೆ 9 ವಿಕೆಟ್‌ಗೆ 117 ರನ್ ಗಳಿಸಿದೆ.
ಬಾಂಗ್ಲಾದೇಶ 116 ರನ್ ಗಳಿಸುವಷ್ಟರಲ್ಲಿ 8ನೇ ವಿಕೆಟ್ ಕಳೆದುಕೊಂಡಿತು. ತಸ್ಕಿನ್ ಅಹ್ಮದ್ ರನ್ ಔಟ್ ಆಗಿದ್ದಾರೆ.
ವರುಣ್ ಚಕ್ರವರ್ತಿ ಈ ಪಂದ್ಯದಲ್ಲಿ ಮೂರನೇ ವಿಕೆಟ್ ಪಡೆದರು. ಈ ಬಾರಿ ವರುಣ್ ಚಕ್ರವರ್ತಿ ರಿಷಾದ್ ಹುಸೇನ್ ಅವರನ್ನು ಬಲಿಪಶು ಮಾಡಿದರು. ಬಾಂಗ್ಲಾದೇಶ 14 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 95 ರನ್ ಗಳಿಸಿದೆ.
ನಾಯಕ ನಜ್ಮುಲ್ ಹುಸೇನ್ ಶಾಂಟೊ ಅವರನ್ನು ಔಟ್ ಮಾಡುವ ಮೂಲಕ ವಾಷಿಂಗ್ಟನ್ ಸುಂದರ್ ಬಾಂಗ್ಲಾದೇಶಕ್ಕೆ ಆರನೇ ಹೊಡೆತ ನೀಡಿದರು. ಶಾಂಟೊ 25 ಎಸೆತಗಳಲ್ಲಿ 27 ರನ್ ಗಳಿಸಿ ಔಟಾದರು. ಬಾಂಗ್ಲಾದೇಶದ ಇನ್ನಿಂಗ್ಸ್ ತತ್ತರಿಸಿದ್ದು, 12 ಓವರ್‌ಗಳ ಅಂತ್ಯಕ್ಕೆ ಆರು ವಿಕೆಟ್‌ಗೆ 75 ರನ್ ಗಳಿಸಿದೆ.
ಜಾಕಿರ್ ಅಲಿಯನ್ನು ಔಟ್ ಮಾಡುವ ಮೂಲಕ ಸ್ಪಿನ್ನರ್ ವರುಣ್ ಚಕ್ರವರ್ತಿ ಬಾಂಗ್ಲಾದೇಶಕ್ಕೆ ಐದನೇ ಹೊಡೆತ ನೀಡಿದರು. ಬಾಂಗ್ಲಾದೇಶ 57 ರನ್ ಗಳಿಸುವಷ್ಟರಲ್ಲಿ ಐದನೇ ವಿಕೆಟ್ ಕಳೆದುಕೊಂಡಿದೆ. ಇದು ಈ ಪಂದ್ಯದಲ್ಲಿ ವರುಣ್ ಅವರ ಎರಡನೇ ವಿಕೆಟ್ ಆಗಿದೆ.
ಮಯಾಂಕ್ ಯಾದವ್ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದ ಮೊದಲ ವಿಕೆಟ್ ಪಡೆದರು. ಕೇವಲ 1 ರನ್ ಗಳಿಸಿದ್ದ ಮಹಮ್ಮದುಲ್ಲಾ ಅವರನ್ನು ಮಯಾಂಕ್ ಯಾದವ್ ಔಟ್ ಮಾಡಿದರು.
ಬಾಂಗ್ಲಾದೇಶ 40 ರನ್ ಗಳಿಸುವಷ್ಟರಲ್ಲಿ ಮೂರನೇ ವಿಕೆಟ್ ಕಳೆದುಕೊಂಡಿತು. ತೌಹೀದ್ ಹೃದಯ್ 18 ಎಸೆತಗಳಲ್ಲಿ 12 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ವರುಣ್ ಚಕ್ರವರ್ತಿ ತೌಹೀದ್ ಹೃದಯ್ ಅವರ ವಿಕೆಟ್ ಪಡೆದರು.
ಬಾಂಗ್ಲಾದೇಶ ತಂಡ ಭಾರತದ ವಿರುದ್ಧದ ಪವರ್‌ಪ್ಲೇನಲ್ಲಿ ಎರಡು ವಿಕೆಟ್‌ಗೆ 39 ರನ್ ಗಳಿಸಿದೆ. ಈ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ವೇಗದ ಬೌಲರ್ ಮಯಾಂಕ್ ಯಾದವ್ ತಮ್ಮ ಮೊದಲ ಓವರ್ ಮೇಡನ್ ಬೌಲ್ ಮಾಡಿದರು. ಬಾಂಗ್ಲಾದೇಶ ಪರ ತೌಹೀದ್ ಹಾರ್ಡೊಯ್ ಮತ್ತು ನಜ್ಮುಲ್ ಹೊಸೈನ್ ಶಾಂಟೊ ಕ್ರೀಸ್‌ನಲ್ಲಿದ್ದಾರೆ.
ಅರ್ಷದೀಪ್ ತಮ್ಮ ಖೋಟಾದ ಎರಡನೇ ಓವರ್ನಲ್ಲಿ 2ನೇ ವಿಕೆಟ್ ಉರುಳಿಸಿದ್ದಾರೆ. ಮತ್ತೊಬ್ಬ ಆರಂಭಿಕ ಪರ್ವೇಜ್ ಹೊಸೈನ್ ಎಮನ್ 8 ರನ್ ಬಾರಿಸಿ ಕ್ಲೀನ್ ಬೌಲ್ದ್ ಆದರು.
ಬಾಂಗ್ಲಾದೇಶಕ್ಕೆ ಮೊದಲ ಓವರ್‌ನಲ್ಲಿಯೇ ಮೊದಲ ಹೊಡೆತ ಬಿದ್ದಿದೆ. ಆರಂಭಿಕ ಲಿಟನ್ ದಾಸ್ 4 ರನ್ ಗಳಿಸಿ ಅರ್ಷದೀಪ್ಗೆ ಬಲಿಯಾದರು.
ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಲಿಟ್ಟನ್ ದಾಸ್ (ವಿಕೆಟ್ ಕೀಪರ್), ಪರ್ವೇಜ್ ಹೊಸೈನ್ ಎಮನ್, ತೌಹಿದ್ ಹೃದಯೋಯ್, ಜೇಕರ್ ಅಲಿ, ಮೆಹಿದಿ ಹಸನ್, ರಿಶಾದ್ ಹೊಸೈನ್, ಮಹಮ್ಮದುಲ್ಲಾ, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ.
ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ನಿತೀಶ್ ಕುಮಾರ್ ರೆಡ್ಡಿ, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್.
ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 6:31 pm, Sun, 6 October 24