IND vs PAK: ಮಿಂಚಿದ ಅರುಂಧತಿ, ಶ್ರೇಯಾಂಕ; ಭಾರತಕ್ಕೆ 106 ರನ್ಗಳ ಗೆಲುವಿನ ಗುರಿ ನೀಡಿದ ಪಾಕಿಸ್ತಾನ
Women's T20 World Cup 2024: ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಇಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಹಯುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 105 ರನ್ ಕಲೆಹಾಕಿದೆ.
ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಇಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಹಯುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 105 ರನ್ ಕಲೆಹಾಕಿದೆ. ಇದರೊಂದಿಗೆ ಟೀಂ ಇಂಡಿಯಾಗೆ ಗೆಲ್ಲಲು 106 ರನ್ಗಳ ಟಾರ್ಗೆಟ್ ನೀಡಿದೆ. ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಮಿಂಚಿದ ಅರುಂಧತಿ ರೆಡ್ಡಿ ಪ್ರಮುಖ 3 ವಿಕೆಟ್ ಕಬಳಿಸಿದರೆ, ಕನ್ನಡತಿ ಶ್ರೇಯಾಂಕ ಪಾಟೀಲ್ 2 ವಿಕೆಟ್ ಪಡೆದರು. ಉಳಿದಂತೆ ರೇಣುಕಾ, ದೀಪ್ತಿ, ಆಶಾ ತಲಾ ಒಂದೊಂದು ವಿಕೆಟ್ ಪಡೆದರು.
ಮೊದಲ ಓವರ್ನಲ್ಲೇ ಆಘಾತ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಓವರ್ನಲ್ಲೇ ರೇಣುಕಾ ಸಿಂಗ್, ಗುಲ್ ಫಿರೋಜಾ ಅವರನ್ನು ಶೂನ್ಯಕ್ಕೆ ಪೆವಿಲಿಯನ್ಗಟ್ಟಿದರು. ನಂತರ ಎರಡನೇ ವಿಕೆಟ್ಗೆ 24 ರನ್ಗಳ ಜೊತೆಯಾಟ ಕಂಡುಬಂತು ಈ ವೇಳೆ ದಾಳಿಗಿಳಿದ ದೀಪ್ತಿ, ಸಿದ್ರಾ ಅಮೀನ್ ಅವರನ್ನು 8 ರನ್ಗಳಿಗೆ ಬಲಿ ಪಡೆದರು. ಆ ನಂತರವೂ ನಿಯಮಿತ ಅಂತರದಲ್ಲಿ ಪಾಕ್ ತಂಡದ ವಿಕೆಟ್ಗಳು ಪತನವಾಗುತ್ತಲೇ ಇದ್ದವು.
ಆದರೆ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಮಾಜಿ ನಾಯಕಿ ನಿದಾ ದರ್ ಗರಿಷ್ಠ 28 ರನ್ಗಳ ಇನ್ನಿಂಗ್ಸ್ ಆಡಿದರು. ನಿದಾ ಅವರು ವಿಕೆಟ್ನಲ್ಲಿ ನಿಲ್ಲದೆ ಹೋಗಿದ್ದರೆ, ಪಾಕ್ ತಂಡ ಶತಕದ ಗಡಿಯನ್ನೂ ಸಹ ದಾಟುತ್ತಿರಲಿಲ್ಲ. ನಿದಾಗೆ ಸಾಥ್ ನೀಡಿದ ನಾಯಕಿ ಫಾತಿಮಾ 13 ರನ್ಗಳ ಕಾಣಿಕೆ ನೀಡಿದರೆ, ಕೊನೆಯಲ್ಲಿ ಸೈಯದಾ ಅರೂಬ್ ಶಾ 14 ರನ್ಗಳ ಇನ್ನಿಂಗ್ಸ್ ಆಡಿದರು.
Innings Break!
A fabulous bowling display from #TeamIndia 🙌
🎯 – 1⃣0⃣6⃣
Over to our batters 💪
📸: ICC
Scorecard ▶️ https://t.co/eqdkvWVK4h#T20WorldCup | #INDvPAK | #WomenInBlue pic.twitter.com/fCrNt9ID8n
— BCCI Women (@BCCIWomen) October 6, 2024
ಮಿಂಚಿದ ಅರುಂಧತಿ, ಶ್ರೇಯಾಂಕ
ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಮಿಂಚಿದ ಅರುಂಧತಿ ರೆಡ್ಡಿ 4 ಓವರ್ಗಳಲ್ಲಿ 19 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿದರೆ, ಪಂದ್ಯದುದ್ದಕ್ಕೂ ರನ್ಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಿದ ಕನ್ನಡತಿ ಶ್ರೇಯಾಂಕ ಪಾಟೀಲ್ ತಮ್ಮ ಖೋಟಾದ 4 ಓವರ್ಗಳಲ್ಲಿ ಕೇವಲ 12 ರನ್ ನೀಡಿ 2 ವಿಕೆಟ್ ಕಬಳಿಸಿದರು. ಇದರಲ್ಲಿ 1 ಮೇಡನ್ ಓವರ್ ಕೂಡ ಸೇರಿತ್ತು.
ಉಭಯ ತಂಡಗಳು
ಪಾಕಿಸ್ತಾನ ತಂಡ: ಮುನಿಬಾ ಅಲಿ (ವಿಕೆಟ್ ಕೀಪರ್), ಗುಲ್ ಫಿರೋಜಾ, ಸಿದ್ರಾ ಅಮೀನ್, ಒಮಯಾ ಸೊಹೈಲ್, ನಿದಾ ದಾರ್, ತುಬಾ ಹಸನ್, ಫಾತಿಮಾ ಸನಾ (ನಾಯಕಿ), ಅಲಿಯಾ ರಿಯಾಜ್, ಅರುಬ್ ಶಾ, ನಶ್ರ್ ಸಂಧು, ಸಾದಿಯಾ ಇಕ್ಬಾಲ್.
ಭಾರತ ತಂಡ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ಎಸ್ ಸಜ್ನಾ, ಶ್ರೇಯಾಂಕಾ ಪಾಟೀಲ್, ಆಶಾ ಶೋಭನಾ, ರೇಣುಕಾ ಠಾಕೂರ್ ಸಿಂಗ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:14 pm, Sun, 6 October 24