AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs PAK: ಕ್ಯಾಚ್ ಕೈಚೆಲ್ಲಿ ಪಂದ್ಯ ಸೋತರೂ ಬುದ್ಧಿ ಕಲಿಯದ ಟೀಂ ಇಂಡಿಯಾ..! ವಿಡಿಯೋ ನೋಡಿ

Women's T20 World Cup 2024: ತಂಡದ ಹಿರಿಯ ಲೆಗ್ ಸ್ಪಿನ್ನರ್ ಆಶಾ ಶೋಭನಾ ಎರಡು ಸುಲಭ ಕ್ಯಾಚ್​ಗಳನ್ನು ಕೈಚೆಲ್ಲಿದರು. ದುರದೃಷ್ಟಕರ ಸಂಗತಿಯೆಂದರೆ ಅರುಂಧತಿ ರೆಡ್ಡಿ ಎಸೆದ ಎರಡು ಓವರ್​ಗಳಲ್ಲಿ ಆಶಾ ಈ ಎರಡೂ ಕ್ಯಾಚ್​ಗಳನ್ನು ಕೈಬಿಟ್ಟರು. ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲೂ ಟೀಂ ಇಂಡಿಯಾದ ಸೋಲಿಗೆ ಈ ಕಳಪೆ ಫೀಲ್ಡಿಂಗ್ ಪ್ರಮುಖ ಕಾರಣವಾಗಿತ್ತು.

IND vs PAK: ಕ್ಯಾಚ್ ಕೈಚೆಲ್ಲಿ ಪಂದ್ಯ ಸೋತರೂ ಬುದ್ಧಿ ಕಲಿಯದ ಟೀಂ ಇಂಡಿಯಾ..! ವಿಡಿಯೋ ನೋಡಿ
ಆಶಾ ಶೋಭನಾ
ಪೃಥ್ವಿಶಂಕರ
|

Updated on:Oct 06, 2024 | 6:14 PM

Share

ಯುಎಇಯಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾಗೆ ಉತ್ತಮ ಆರಂಭ ಸಿಕ್ಕಿಲ್ಲ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿಯೇ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಆ ಸೋಲಿಗೆ ತಂಡದ ಬ್ಯಾಟ್ಸ್‌ಮನ್‌ಗಳ ಕಳಪೆ ಪ್ರದರ್ಶನವೇ ಪ್ರಮುಖ ಕಾರಣವಾಗಿತ್ತು. ಇದಕ್ಕೆ ಪೂರಕವಾಗಿ ತಂಡದ ಕಳಪೆ ಫೀಲ್ಡಿಂಗ್ ಕೂಡ ಸೋಲಿಗೆ ಸಾಥ್ ನೀಡಿತ್ತು. ಆದರೆ ಆ ಮೊದಲ ಸೋಲಿನ ನಂತರವೂ ಟೀಂ ಇಂಡಿಯಾ ತನ್ನ ತಪ್ಪನ್ನು ತಿದ್ದುಕೊಂಡಿರುವಂತೆ ತೋರುತ್ತಿಲ್ಲ. ಪಾಕಿಸ್ತಾನ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲೂ ಇದೇ ಪರಿಸ್ಥಿತಿ ಕಂಡುಬಂದಿದ್ದು, ಈ ಪಂದ್ಯದಲ್ಲೂ ಟೀಂ ಇಂಡಿಯಾ 2 ಸುಲಭ ಕ್ಯಾಚ್‌ಗಳನ್ನು ಕೈಬಿಟ್ಟಿತು. ಅಚ್ಚರಿಯೆಂದರೆ ಈ ಎರಡೂ ಕ್ಯಾಚ್‌ಗಳನ್ನು ಆಶಾ ಶೋಭನಾ ಕೈಬಿಟ್ಟರು.

ಮೇಲೆ ಹೇಳಿದಂತೆ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿರುವ ಕಾರಣ, ಯಾವುದೇ ಬೆಲೆ ತೆತ್ತಾದರೂ ಪಾಕಿಸ್ತಾನ ವಿರುದ್ಧ ಗೆಲ್ಲುವುದು ಅನಿವಾರ್ಯವಾಗಿದೆ. ಅದರಂತೆ ಪಾಕಿಸ್ತಾನ ವಿರುದ್ಧ ಟಾಸ್ ಸೋತು ಮೊದಲು ಫೀಲ್ಡಿಂಗ್‌ಗೆ ಇಳಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಲಭಿಸಿತು. ನಿಗದಿತ ಅಂತರದಲ್ಲಿ ಭಾರತದ ಬೌಲರ್​ಗಳು ಪಾಕ್ ಬ್ಯಾಟರ್​ಗಳನ್ನು ಪೆವಲಿಯನ್​ಗಟ್ಟುವಲ್ಲಿ ಯಶಸ್ವಿಯಾದರು. ಆದರೆ ಮೊದಲ ಪಂದ್ಯದಂತೆ ಈ ಪಂದ್ಯದಲ್ಲೂ ಟೀಂ ಇಂಡಿಯಾ ತನ್ನ ಕಳಪೆ ಫೀಲ್ಡಿಂಗ್​ಗೆ ಭಾರಿ ಬೆಲೆ ತೆರಬೇಕಾಯಿತು.

ಸುಲಭ ಕ್ಯಾಚ್ ಕೈಚೆಲ್ಲಿದ ಆಶಾ

ತಂಡದ ಹಿರಿಯ ಲೆಗ್ ಸ್ಪಿನ್ನರ್ ಆಶಾ ಶೋಭನಾ ಎರಡು ಸುಲಭ ಕ್ಯಾಚ್​ಗಳನ್ನು ಕೈಚೆಲ್ಲಿದರು. ದುರದೃಷ್ಟಕರ ಸಂಗತಿಯೆಂದರೆ ಅರುಂಧತಿ ರೆಡ್ಡಿ ಎಸೆದ ಎರಡು ಓವರ್​ಗಳಲ್ಲಿ ಆಶಾ ಈ ಎರಡೂ ಕ್ಯಾಚ್​ಗಳನ್ನು ಕೈಬಿಟ್ಟರು. ಅರುಂಧತಿ ಎಸೆದ ಏಳನೇ ಓವರ್‌ನ ಎರಡನೇ ಎಸೆತವನ್ನು ಮುನಿಬಾ ಅಲಿ ಸ್ಕೂಪ್ ಶಾಟ್ ಆಡಿದರು. ಆದರೆ ಶಾರ್ಟ್ ಫೈನಲ್ ಲೆಗ್‌ನಲ್ಲಿ ನಿಂತಿದ್ದ ಆಶಾಗೆ ಈ ನೇರ ಕ್ಯಾಚ್ ಅನ್ನು ಸಹ ಹಿಡಿಯಲು ಸಾಧ್ಯವಾಗಲಿಲ್ಲ. ಆದರೆ, ಅರುಂಧತಿ ಅದೇ ಓವರ್‌ನಲ್ಲಿ ಮುನಿಬಾ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು.

ಎರಡೆರಡು ಕ್ಯಾಚ್ ಕೈಚೆಲ್ಲಿದ ಆಶಾ

ಒಂದು ತಪ್ಪಿನ ನಂತರವೂ ಆಶಾ ಅವರ ಫೀಲ್ಡಿಂಗ್‌ನಲ್ಲಿ ಯಾವುದೇ ಸುಧಾರಣೆ ಕಾಣಲಿಲ್ಲ. 13 ನೇ ಓವರ್‌ ಬೌಲ್ ಮಾಡಲು ಬಂದ ಅರುಂಧತಿ ಅವರ ಓವರ್‌ನಲ್ಲಿ ಮತ್ತೊಮ್ಮೆ ಆಶಾ ಇನ್ನೊಂದು ಕ್ಯಾಚ್ ಕೈಚೆಲ್ಲಿದರು. ಈ ವೇಳೆ ಸ್ಟ್ರೈಕ್​ನಲ್ಲಿದ್ದ ಪಾಕಿಸ್ತಾನದ ಡ್ಯಾಶಿಂಗ್ ನಾಯಕಿ ಫಾತಿಮಾ ಸನಾ ಶಾರ್ಟ್ ಥರ್ಡ್ ಮ್ಯಾನ್‌ ಕಡೆ ಶಾಟ್ ಆಡಿದರು. ಆದರೆ ಅಲ್ಲೇ ಪೋಸ್ಟ್ ಮಾಡಿದ್ದ ಆಶಾಗೆ ಅದೇ ಸರಳ ಕ್ಯಾಚ್ ಅನ್ನು ಮತ್ತೆ ಹಿಡಿಯಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾ ಮತ್ತೆ ಇದರ ಭಾರವನ್ನು ಹೊರಬೇಕಾಯಿತು. ಮುಂದಿನ ಓವರ್‌ನಲ್ಲಿ ಸನಾ, ಆಶಾ ಅವರ ಎಸೆತಗಳಲ್ಲಿ ಸತತ ಎರಡು ಬೌಂಡರಿಗಳನ್ನು ಬಾರಿಸಿದರು. ಆದರೆ, ಆಶಾ ಈ ಓವರ್‌ನ ಕೊನೆಯ ಎಸೆತದಲ್ಲಿ ಅವರ ವಿಕೆಟ್ ಪಡೆಯುವ ಮೂಲಕ ತನಗೆ ಮತ್ತು ತಂಡಕ್ಕೆ ಸಮಾಧಾನ ತಂದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:08 pm, Sun, 6 October 24

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್