IND vs BAN: ಭಾರತ vs ಬಾಂಗ್ಲಾದೇಶ್ ಮೊದಲ ಟೆಸ್ಟ್: ಮೂರು ಸೆಷನ್, 60 ನಿಮಿಷ ಬ್ರೇಕ್

India vs Bangladesh 1st Test: India vs Bangladesh Test: ಭಾರತ-ಬಾಂಗ್ಲಾದೇಶ್ ನಡುವಣ ಟೆಸ್ಟ್ ಸರಣಿಯು ಸೆಪ್ಟೆಂಬರ್ 19 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ 2 ಟೆಸ್ಟ್ ಪಂದ್ಯಗಳನ್ನಾಡಲಾಗುತ್ತದೆ. ಇಲ್ಲಿ ಮೊದಲ ಟೆಸ್ಟ್ ಪಂದ್ಯವು ಚೆನ್ನೈನಲ್ಲಿ ನಡೆದರೆ, ಎರಡನೇ ಟೆಸ್ಟ್ ಪಂದ್ಯವು ಸೆಪ್ಟೆಂಬರ್ 27 ರಿಂದ ಕಾನ್ಪುರದಲ್ಲಿ ಆರಂಭವಾಗಲಿದೆ.

IND vs BAN: ಭಾರತ vs ಬಾಂಗ್ಲಾದೇಶ್ ಮೊದಲ ಟೆಸ್ಟ್: ಮೂರು ಸೆಷನ್, 60 ನಿಮಿಷ ಬ್ರೇಕ್
India vs Bangladesh
Follow us
ಝಾಹಿರ್ ಯೂಸುಫ್
|

Updated on:Sep 18, 2024 | 8:33 AM

ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಟೆಸ್ಟ್ ಸರಣಿಯು ನಾಳೆಯಿಂದ (ಸೆ.19) ಶುರುವಾಗಲಿದೆ. ಎರಡು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯವು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಜರುಗಲಿದೆ. ಬೆಳಿಗ್ಗೆ 9.30 ರಿಂದ ಶುರುವಾಗಲಿರುವ ಈ ಪಂದ್ಯದ ಮೊದಲ ಸೆಷನ್ ಮುಗಿಯೋದು 11.30 ಕ್ಕೆ. ಭೋಜನಾ ವಿರಾಮದ ಬಳಿಕ 12.10 ರಿಂದ ಎರಡನೇ ಸೆಷನ್ ಆರಂಭವಾಗಲಿದೆ.

ಮಧ್ಯಾಹ್ನ 12.10 ರಿಂದ 2.10ರವರೆಗೆ ದ್ವಿತೀಯ ಸೆಷನ್ ನಡೆಯಲಿದ್ದು, ಆ ಬಳಿಕ 20 ನಿಮಿಷಗಳ ಟ್ರೀ ಬ್ರೇಕ್ ನೀಡಲಾಗುತ್ತದೆ. 2.30 ರಿಂದ ಆರಂಭವಾಗಲಿರುವ ಮೂರನೇ ಸೆಷನ್ 4.30ರವರೆಗೆ ಮುಂದುವರೆಯಲಿದೆ. ಇನ್ನು ಈ ಮೂರು ಸೆಷನ್​ಗಳಲ್ಲಿ ಒಟ್ಟು 90 ಓವರ್​ಗಳನ್ನು ಆಡಲಾಗುತ್ತದೆ. ಅಂದರೆ 7 ಗಂಟೆಗಳ ಮೊದಲ ದಿನದಾಟದಲ್ಲಿ 60 ನಿಮಿಷಗಳ ಬ್ರೇಕ್ ಇರಲಿದೆ.

ಸೆಷನ್ ಟೈಮಿಂಗ್ಸ್​:

  • ಮೊದಲ ಸೆಷನ್ – 9.30am ರಿಂದ 11.30am.
  • ದ್ವಿತೀಯ ಸೆಷನ್  – 12.10pm ರಿಂದ 2.10pm.
  • ತೃತೀಯ ಸೆಷನ್ – 2.30pm ರಿಂದ 4.30pm.

ಯಾರು ಬಲಿಷ್ಠ?

ಭಾರತ ಮತ್ತು ಬಾಂಗ್ಲಾದೇಶ್ ಟೆಸ್ಟ್​​ನಲ್ಲಿ ಕೇವಲ 13 ಪಂದ್ಯಗಳಲ್ಲಿ ಮಾತ್ರ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ 11 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಅತ್ತ ಬಾಂಗ್ಲಾದೇಶ್ ತಂಡವು ಒಮ್ಮೆಯೂ ಭಾರತದ ವಿರುದ್ಧ ಟೆಸ್ಟ್ ಪಂದ್ಯ ಗೆದ್ದಿಲ್ಲ. ಇದಾಗ್ಯೂ 2 ಪಂದ್ಯಗಳಲ್ಲಿ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅಂಕಿ ಅಂಶಗಳ ಪ್ರಕಾರ ಭಾರತ ತಂಡವೇ ಮೇಲುಗೈ ಹೊಂದಿದೆ. ಅದರಲ್ಲೂ ತವರಿನಲ್ಲಿ ಸತತ 17 ಟೆಸ್ಟ್ ಸರಣಿಗಳನ್ನು ಗೆದ್ದಿರುವ ಟೀಮ್ ಇಂಡಿಯಾ ಈ ಬಾರಿ ಸಹ ಸರಣಿ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿದೆ.

ಉಭಯ ತಂಡಗಳು:

ಬಾಂಗ್ಲಾದೇಶ್ ಟೆಸ್ಟ್ ತಂಡ: ನಜ್ಮುಲ್ ಹೊಸೈನ್ ಶಾಂತೊ (ನಾಯಕ), ಮಹಮ್ಮದುಲ್ ಹಸನ್ ಜಾಯ್, ಝಾಕಿರ್ ಹಸನ್, ಶದ್ಮಾನ್ ಇಸ್ಲಾಂ, ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್, ಲಿಟ್ಟನ್ ಕುಮಾರ್ ದಾಸ್, ಮೆಹಿದಿ ಹಸನ್ ಮಿರಾಝ್, ತೈಜುಲ್ ಇಸ್ಲಾಂ, ನಯೀಮ್ ಹಸನ್, ನಹಿದ್ ರಾಣಾ, ಹಸನ್ ಮಹಮ್ಮದ್, ತಸ್ಕಿನ್ ಅಹ್ಮದ್, ಸೈಯದ್ ಖಾಲಿದ್ ಅಹ್ಮದ್, ಜಾಕರ್ ಅಲಿ.

ಇದನ್ನೂ ಓದಿ: IPL 2025: ಈ ಸಲ ಕಪ್ ನಮ್ದೆ… ಇದುವೇ ಕೆಎಲ್ ರಾಹುಲ್ ಇಚ್ಛೆ..!

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಸರ್ಫರಾಝ್ ಖಾನ್, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಜಸ್​ಪ್ರೀತ್ ಬುಮ್ರಾ , ಆಕಾಶ್ ದೀಪ್ ಮತ್ತು ಯಶ್ ದಯಾಳ್.

Published On - 7:32 am, Wed, 18 September 24