India vs Bangladesh, 3rd ODI Highlights: ಕಿಶನ್ ದ್ವಿಶತಕ; ಕೊನೆಯ ಏಕದಿನ ಪಂದ್ಯ ಗೆದ್ದ ಭಾರತ

| Updated By: ಪೃಥ್ವಿಶಂಕರ

Updated on: Dec 10, 2022 | 6:55 PM

India vs Bangladesh, 3rd ODI Highlights: ಏಕದಿನ ಸರಣಿಯ ಕೊನೆಯ ಪಂದ್ಯವನ್ನು ಭಾರತ 227 ರನ್‌ಗಳಿಂದ ಗೆದ್ದುಕೊಂಡಿದೆ. 409 ರನ್‌ಗಳ ಗುರಿಗೆ ಉತ್ತರವಾಗಿ ಬಾಂಗ್ಲಾದೇಶವನ್ನು 182 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಯಿತು.

India vs Bangladesh, 3rd ODI Highlights: ಕಿಶನ್ ದ್ವಿಶತಕ; ಕೊನೆಯ ಏಕದಿನ ಪಂದ್ಯ ಗೆದ್ದ ಭಾರತ
ind vs ban

ಬಾಂಗ್ಲಾದೇಶ ಪ್ರವಾಸದಲ್ಲಿ ಮೊದಲೆರಡು ಏಕದಿನ ಪಂದ್ಯಗಳನ್ನು ಸೋಲುವುದರೊಂದಿಗೆ ಸರಣಿ ಕಳೆದುಕೊಂಡಿದ್ದ ಟೀಂ ಇಂಡಿಯಾ ಕೊನೆಯ ಏಕದಿನ ಪಂದ್ಯವನ್ನು 227 ರನ್​ಗಳ ಬೃಹತ್ ಅಂತರದಲ್ಲಿ ಗೆಲ್ಲುವುದರೊಂದಿಗೆ ಏಕದಿನ ಸರಣಿಗೆ ಸಮಾಧಾನಕರ ವಿದಾಯ ಹೇಳಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಮಿಂಚಿದ ಇಶಾನ್ ಕಿಶನ್ ಏಕದಿನ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದಲ್ಲದೆ, ಅದನ್ನು ದ್ವಿಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿ ಕೂಡ ಆದರು. ಹಾಗೆಯೇ ಕಿಶನ್​ಗೆ ಸಖತ್ ಸಾಥ್ ನೀಡಿದ ಕಿಂಗ್ ಕೊಹ್ಲಿ ಕೂಡ ವರ್ಷಗಳ ನಂತರ ಏಕದಿನ ಕ್ರಿಕೆಟ್​ನಲ್ಲಿ ಶತಕ ಸಿಡಿಸಿ ಮಿಂಚಿದರು. ಈ ಇಬ್ಬರ ದಾಖಲೆಯ ಜೊತೆಯಾಟ ನೆರವಿನಿಂದ ಟೀಂ ಇಂಡಿಯಾ 410 ರನ್​ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾ ಪಡೆ ಕೇವಲ 182 ರನ್​ಗಳಿಗೆ ಆಲ್​ಔಟ್ ಆಯಿತು.

LIVE NEWS & UPDATES

The liveblog has ended.
  • 10 Dec 2022 06:48 PM (IST)

    ಗೆದ್ದ ಭಾರತ

    ಏಕದಿನ ಸರಣಿಯ ಕೊನೆಯ ಪಂದ್ಯವನ್ನು ಭಾರತ 227 ರನ್‌ಗಳಿಂದ ಗೆದ್ದುಕೊಂಡಿದೆ. 409 ರನ್‌ಗಳ ಗುರಿಗೆ ಉತ್ತರವಾಗಿ ಬಾಂಗ್ಲಾದೇಶವನ್ನು 182 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಯಿತು. ಭಾರತದ ಪರ ಶಾರ್ದೂಲ್ ಠಾಕೂರ್ ಮೂರು, ಅಕ್ಷರ್ ಪಟೇಲ್, ಉಮ್ರಾನ್ ಮಲಿಕ್ ತಲಾ 2 ವಿಕೆಟ್ ಪಡೆದರು.

  • 10 Dec 2022 06:24 PM (IST)

    ಒಂದೇ ಓವರ್‌ನಲ್ಲಿ ಎರಡು ವಿಕೆಟ್

    ಶಾರ್ದೂಲ್ ಠಾಕೂರ್ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆಯುವ ಮೂಲಕ ಭಾರತವನ್ನು ಗೆಲುವಿನ ಸಮೀಪಕ್ಕೆ ಕೊಂಡೊಯ್ದರು. ಹಸನ್ ಮಿರಾಜ್ ಓವರ್​ನ ಮೊದಲ ಎಸೆತದಲ್ಲಿ ಸಿರಾಜ್ಗೆ ಕ್ಯಾಚಿತ್ತು ನಿರ್ಗಮಿಸಿದರು. ಕಳೆದ ಎರಡು ಪಂದ್ಯಗಳ ಹೀರೋ ಎನಿಸಿಕೊಂಡಿದ್ದ ಹಸನ್ ಕೇವಲ ಮೂರು ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಐದನೇ ಎಸೆತದಲ್ಲಿ ಇಬಾದತ್ ಹುಸೇನ್ ಎಲ್ಬಿಡಬ್ಲ್ಯೂ ಆದರು.

  • 10 Dec 2022 06:23 PM (IST)

    ಅಫೀಫ್ ಹುಸೇನ್ ಔಟ್

    ಶಾರ್ದೂಲ್ ಠಾಕೂರ್ 28ನೇ ಓವರ್​ನಲ್ಲಿ ಅಫೀಫ್ ಹುಸೇನ್ ಅವರನ್ನು ಔಟ್ ಮಾಡಿದರು. ಓವರ್‌ನ ನಾಲ್ಕನೇ ಎಸೆತದಲ್ಲಿ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿದ ಹುಸೇನ್ ಡೀಪ್ ಪಾಯಿಂಟ್‌ನಲ್ಲಿ ಉಮ್ರಾನ್ ಮಲಿಕ್ ಅವರಿಗೆ ಕ್ಯಾಚ್ ನೀಡಿದರು.

  • 10 Dec 2022 06:15 PM (IST)

    ಮಹಮ್ಮದುಲ್ಲಾ ಔಟ್

    27ನೇ ಓವರ್‌ನಲ್ಲಿ ವಾಷಿಂಗ್ಟನ್ ಸುಂದರ್ ಮಹಮ್ಮದುಲ್ಲಾ ಅವರನ್ನು ಔಟ್ ಮಾಡಿ ತಂಡಕ್ಕೆ ಆರನೇ ಯಶಸ್ಸು ತಂದುಕೊಟ್ಟರು. ಮಹಮ್ಮದುಲ್ಲಾ 26 ಎಸೆತಗಳಲ್ಲಿ 20 ರನ್ ಗಳಿಸಿ ಮರಳಿದರು.

  • 10 Dec 2022 06:00 PM (IST)

    ಹೊಸೈನ್ ಫೋರ್

    ಉಮ್ರಾನ್ 24ನೇ ಓವರ್‌ನಲ್ಲಿ 8 ರನ್ ನೀಡಿದರು. ಹುಸೇನ್ ಓವರ್‌ನ ಎರಡನೇ ಎಸೆತವನ್ನು ಸ್ಕ್ವೇರ್ ಲೆಗ್‌ನಲ್ಲಿ ಬೌಂಡರಿ ಬಾರಿಸಿದರು.

  • 10 Dec 2022 05:57 PM (IST)

    ಶಕೀಬ್ ಅಲ್ ಹಸನ್ ಔಟ್

    ಶಕೀಬ್ ಅಲ್ ಹಸನ್ ಅವರನ್ನು ಔಟ್ ಮಾಡುವ ಮೂಲಕ ಕುಲದೀಪ್ ಯಾದವ್ ತಂಡಕ್ಕೆ 5ನೇ ಯಶಸ್ಸನ್ನು ತಂದುಕೊಟ್ಟಿದ್ದಾರೆ. ಆ ಓವರ್​ನ ಕೊನೆಯ ಎಸೆತ ಶಕೀಬ್ ಬ್ಯಾಟ್​ನ ಅಂಚಿಗೆ ತಾಗಿ ಸ್ಟಂಪ್​ಗೆ ಬಡಿಯಿತು.

  • 10 Dec 2022 05:49 PM (IST)

    ಉಮ್ರಾನ್ ಮಲಿಕ್ ಉತ್ತಮ ಓವರ್

    ಉಮ್ರಾನ್ ಮಲಿಕ್ 22ನೇ ಓವರ್ ಬೌಲ್ ಮಾಡಿ ಕೇವಲ ಒಂದು ರನ್ ನೀಡಿದರು. ಓವರ್‌ನ ಕೊನೆಯ ಎಸೆತವನ್ನು ನೋ ಬಾಲ್‌ಗೆ ಬೌಲ್ ಮಾಡಿದರು ಆದರೆ ಶಕೀಬ್ ಅಲ್ ಹಸನ್​ಗೆ ಫ್ರೀ ಹಿಟ್‌ನಲ್ಲಿ ವಿಶೇಷ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ.

  • 10 Dec 2022 05:40 PM (IST)

    ಯಾಸಿರ್ ಅಲಿ ಔಟ್

    20ನೇ ಓವರ್​ನಲ್ಲಿ ಯಾಸಿರ್ ಅಲಿ ಅವರನ್ನು ಔಟ್ ಮಾಡುವ ಮೂಲಕ ಉಮ್ರಾನ್ ಮಲಿಕ್ ತಂಡಕ್ಕೆ ನಾಲ್ಕನೇ ಯಶಸ್ಸು ತಂದುಕೊಟ್ಟರು.

  • 10 Dec 2022 05:20 PM (IST)

    ಕುಲದೀಪ್ ಮೇಡನ್ ಓವರ್

    17ನೇ ಓವರ್ ಅನ್ನು ಕುಲದೀಪ್ ಯಾದವ್ ಮೇಡನ್ ಓವರ್ ಎಸೆದರು. 18ನೇ ಓವರ್‌ನಲ್ಲಿ ಅಕ್ಷರ್ ಪಟೇಲ್ 8 ರನ್ ನೀಡಿದರು. ಓವರ್‌ನ ಐದನೇ ಎಸೆತದಲ್ಲಿ ಯಾಸಿರ್ ಅಲಿ ಥರ್ಡ್ ಮ್ಯಾನ್‌ನಲ್ಲಿ ಬೌಂಡರಿ ಬಾರಿಸಿದರು.

  • 10 Dec 2022 05:12 PM (IST)

    ಯಾಸಿರ್ ಅಲಿ ಫೋರ್

    15ನೇ ಓವರ್ ಎಸೆದ ಕುಲದೀಪ್ ಯಾದವ್ ಒಂಬತ್ತು ರನ್ ನೀಡಿದರು. ಯಾಸಿರ್ ಅಲಿ ಓವರ್‌ನ ನಾಲ್ಕನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಮುಂದಿನ ಓವರ್‌ನಲ್ಲಿ ಅಕ್ಷರ್ ಪಟೇಲ್ ಕೇವಲ ಎರಡು ರನ್ ಬಿಟ್ಟುಕೊಟ್ಟರು.

  • 10 Dec 2022 05:06 PM (IST)

    ಮುಶ್ಫಿಕರ್ ರೆಹಮಾನ್ ಔಟ್

    12ನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ಮುಶ್ಫಿಕರ್ ಅವರನ್ನು ಬೌಲ್ಡ್ ಮಾಡಿ ಭಾರತಕ್ಕೆ ಮೂರನೇ ಯಶಸ್ಸು ತಂದುಕೊಟ್ಟರು.

  • 10 Dec 2022 04:48 PM (IST)

    ಉಮ್ರಾನ್‌ ದುಬಾರಿ ಓವರ್

    ಒಂಬತ್ತನೇ ಓವರ್‌ನಲ್ಲಿ ಉಮ್ರಾನ್ ಮಲಿಕ್ 11 ರನ್ ನೀಡಿದರು. ಈ ಓವರ್‌ನಲ್ಲಿ ಶಕೀಬ್ ಅಲ್ ಹಸನ್ ಸತತ ಎರಡು ಬೌಂಡರಿಗಳನ್ನು ಬಾರಿಸಿದರು. ಓವರ್‌ನ ನಾಲ್ಕನೇ ಎಸೆತದಲ್ಲಿ ಶಕೀಬ್ ಫ್ಲಿಕ್ ಮಾಡಿ ಬೌಂಡರಿ ಬಾರಿಸಿದರೆ ಮುಂದಿನ ಎಸೆತದಲ್ಲಿ ಮಿಡ್ ವಿಕೆಟ್‌ ಕಡೆ ಫೋರ್ ಹೊಡೆದರು.

  • 10 Dec 2022 04:41 PM (IST)

    ಲಿಟನ್ ದಾಸ್ ಔಟ್

    ಎಂಟನೇ ಓವರ್‌ನಲ್ಲಿ ಸಿರಾಜ್ ಭಾರತಕ್ಕೆ ಎರಡನೇ ಯಶಸ್ಸಿನ ರೂಪದಲ್ಲಿ ಲಿಟ್ಟನ್ ದಾಸ್ ವಿಕೆಟ್ ನೀಡಿದರು. ಎಂಟನೇ ಓವರ್‌ನ ಮೂರನೇ ಎಸೆತದಲ್ಲಿ, ಲಿಟ್ಟನ್ ಮಿಡ್ ಆಫ್‌ನಲ್ಲಿ ಚೆಂಡನ್ನು ಆಡಿ ಶಾರ್ದೂಲ್ ಠಾಕೂರ್ ಅವರಿಗೆ ನೇರವಾಗಿ ಕ್ಯಾಚ್ ನೀಡಿದರು. ಲಿಟ್ಟನ್ 26 ಎಸೆತಗಳಲ್ಲಿ 29 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

  • 10 Dec 2022 04:28 PM (IST)

    ಅನಾಮುಲ್ ಔಟ್

    ಐದನೇ ಓವರ್‌ನಲ್ಲಿ ಐದು ರನ್ ನೀಡಿದ ಅಕ್ಷರ್ ಪಟೇಲ್ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಓವರ್‌ನ ಮೊದಲ ಎಸೆತದಲ್ಲಿ ಅನಾಮುಲ್ ಅವರು ಎಕ್ಸ್‌ಟ್ರಾ ಕವರ್‌ನಲ್ಲಿ ಚೆಂಡನ್ನು ಆಡಿದರು, ಆದರೆ ಮೊಹಮ್ಮದ್ ಸಿರಾಜ್ ಸುಲಭ ಕ್ಯಾಚ್ ಪಡೆದರು.

  • 10 Dec 2022 04:16 PM (IST)

    ಬಾಂಗ್ಲಾದೇಶದ ಬಿರುಗಾಳಿಯ ಆರಂಭ

    ಬಾಂಗ್ಲಾದೇಶ ಮೊದಲ ಮೂರು ಓವರ್‌ಗಳಲ್ಲಿ 12 ರನ್ ಗಳಿಸಿದೆ. ಲಿಟ್ಟನ್ ದಾಸ್ ಎರಡು ಬೌಂಡರಿ ಬಾರಿಸಿ, ಅಬ್ಬರಿಸುವ ಸೂಚನೆ ನೀಡಿದ್ದಾರೆ. 409 ರನ್‌ಗಳ ಗುರಿಯನ್ನು ಸಾಧಿಸಲು ಅವರಿಗೆ ಈ ಬಿರುಸಿನ ಬ್ಯಾಟಿಂಗ್ ಅಗತ್ಯವಿದೆ.

  • 10 Dec 2022 03:46 PM (IST)

    409 ರನ್ ಟಾರ್ಗೆಟ್

    ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 409 ರನ್ ಗಳಿಸಿದೆ. ಸರಣಿಯಲ್ಲಿ ಮೊದಲ ಪಂದ್ಯವನ್ನಾಡಿದ ಇಶಾನ್ ಕಿಶನ್ 131 ಎಸೆತಗಳಲ್ಲಿ 210 ರನ್ ಗಳಿಸಿದರೆ, ವಿರಾಟ್ ಕೊಹ್ಲಿ ಮೂರು ವರ್ಷಗಳ ನಂತರ ಏಕದಿನ ಪಂದ್ಯದಲ್ಲೂ ಶತಕ ಬಾರಿಸಿದರು. ಬಾಂಗ್ಲಾದೇಶದ ಪರ ತಸ್ಕಿನ್ ಅಹ್ಮದ್, ಇಬಾದತ್ ಹುಸೇನ್ ಮತ್ತು ಶಕೀಬ್ ಅಲ್ ಹಸನ್ 2-2 ವಿಕೆಟ್ ಪಡೆದರು.

  • 10 Dec 2022 03:21 PM (IST)

    ಸುಂದರ್ ಸಿಕ್ಸರ್

    ತಸ್ಕಿನ್ ಅಹ್ಮದ್ ಅವರ ಓವರ್ನ ನಾಲ್ಕನೇ ಎಸೆತದಲ್ಲಿ ವಾಷಿಂಗ್ಟನ್ ಸುಂದರ್ ಸಿಕ್ಸರ್ ಬಾರಿಸಿದರು. ಸುಂದರ್ ಡೀಪ್ ಸ್ಕ್ವೇರ್ ಲೆಗ್ ಮೇಲೆ ಈ ಸಿಕ್ಸರ್ ಹೊಡೆದರು.

  • 10 Dec 2022 03:19 PM (IST)

    ಅಕ್ಷರ್ ಪಟೇಲ್ ಔಟ್

    ತಸ್ಕಿನ್ ಅಹ್ಮದ್ ಅವರ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಅಕ್ಷರ್ ಪಟೇಲ್, ಮುಂದಿನ ಎಸೆತದಲ್ಲಿ ಬೌಲ್ಡ್ ಆಗಿದ್ದಾರೆ. ಅಕ್ಷರ್ 17 ಎಸೆತಗಳಲ್ಲಿ 20 ರನ್ ಗಳಿಸಿ ತಮ್ಮ ಕೆಲಸ ಮುಗಿಸಿದರು.

  • 10 Dec 2022 03:18 PM (IST)

    400 ರನ್​ಗಳತ್ತ ಭಾರತ

    46ನೇ ಓವರ್‌ನಲ್ಲಿ ಮಹಮ್ಮದುಲ್ಲಾ 11 ರನ್ ನೀಡಿದರು. ಓವರ್‌ನ ಮೊದಲ ಎಸೆತದಲ್ಲಿ ಸುಂದರ್ ಬೌಂಡರಿ ಬಾರಿಸಿದರು. ಇದಲ್ಲದೇ ನಾಲ್ಕನೇ ಎಸೆತದಲ್ಲಿ ಅಕ್ಷರ್ ಪಟೇಲ್ ಕೂಡ ಬೌಂಡರಿ ಬಾರಿಸಿದರು. ಕೊನೆಯ ಓವರ್‌ನಲ್ಲಿ ಭಾರತ ಗರಿಷ್ಠ ರನ್ ಸೇರಿಸಬೇಕಾಗಿದೆ.

  • 10 Dec 2022 03:05 PM (IST)

    ಕೊಹ್ಲಿ ಔಟ್

    42ನೇ ಓವರ್‌ನ ಮೊದಲ ಎಸೆತದಲ್ಲಿ ಕೊಹ್ಲಿ ಔಟಾಗಿದ್ದಾರೆ. ಶಕೀಬ್ ಎಸೆತವನ್ನು ಲಾಂಗ್ ಆಫ್​ನಲ್ಲಿ ಆಡಿದ ಕೊಹ್ಲಿ ಮೆಹದಿ ಹಸನ್​ಗೆ ಕ್ಯಾಚ್ ನೀಡಿದರು. ಕೊಹ್ಲಿ 91 ಎಸೆತಗಳಲ್ಲಿ 113 ರನ್ ಗಳಿಸಿದರು.

  • 10 Dec 2022 02:49 PM (IST)

    ಕೊಹ್ಲಿ ಶತಕ

    ಇಬಾದತ್ ಓವರ್​ನ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಶತಕ ಪೂರೈಸಿದರು. 85 ಎಸೆತಗಳನ್ನು ಎದುರಿಸಿದ ಕೊಹ್ಲಿ ವೃತ್ತಿಜೀವನದ 72ನೇ ಶತಕ ಪೂರೈಸಿದರು. ಇದರೊಂದಿಗೆ ಅತಿ ಹೆಚ್ಚು ಶತಕ ಸಿಡಿಸಿದವರಲ್ಲಿ ರಿಕಿ ಪಾಂಟಿಂಗ್‌ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.

  • 10 Dec 2022 02:45 PM (IST)

    ಶ್ರೇಯಸ್ ಅಯ್ಯರ್ ಔಟ್

    39ನೇ ಓವರ್‌ನ ಮೊದಲ ಎಸೆತದಲ್ಲಿ ಶ್ರೇಯಸ್ ಅಯ್ಯರ್ ಔಟಾದರು.ಲಿಟ್ಟನ್ ದಾಸ್​ಗೆ ಕ್ಯಾಚ್ ನೀಡುವ ಮೂಲಕ ಅಯ್ಯರ್ ತಮ್ಮ ಇನ್ನಿಂಗ್ಸ್ ಮುಗಿಸಿದರು.

  • 10 Dec 2022 02:44 PM (IST)

    210 ರನ್ ಗಳಿಸಿ ಕಿಶನ್ ಔಟ್

    ತಸ್ಕಿನ್ ಅಹ್ಮದ್ ಅವರ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ಕಿಶನ್, ನಾಲ್ಕನೇ ಎಸೆತದಲ್ಲಿ ಮತ್ತೊಮ್ಮೆ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು. ಆದರೆ, ಮುಂದಿನ ಎಸೆತದಲ್ಲಿಯೇ ಲಿಟ್ಟನ್ ದಾಸ್ ಲಾಂಗ್ ಆಫ್​ನಲ್ಲಿ ಕ್ಯಾಚ್ ಹಿಡಿಯುವದರೊಂದಿಗೆ ಕಿಶನ್​ ಇನ್ನಿಂಗ್ಸ್​ಗೆ ಅಂತ್ಯ ಹಾಡಿದರು. ಕಿಶನ್ 131 ಎಸೆತಗಳಲ್ಲಿ 24 ಬೌಂಡರಿ ಮತ್ತು 10 ಸಿಕ್ಸರ್‌ ಸಹಿತ 210 ರನ್ ಗಳಿಸಿದರು.

  • 10 Dec 2022 02:17 PM (IST)

    ದ್ವಿಶತಕ ಸಿಡಿಸಿದ ಕಿಶನ್

    ಕೇವಲ 126 ಎಸೆತಗಳಲ್ಲಿ 24 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ ಇಶಾನ್ ಕಿಶನ್ ದಾಖಲೆಯ ದ್ವಿಶತಕ ಸಿಡಿಸಿದ್ದಾರೆ.

  • 10 Dec 2022 02:02 PM (IST)

    ಇಶಾನ್-ಕೊಹ್ಲಿ 250 ರನ್ ಜೊತೆಯಾಟ

    ತಸ್ಕಿನ್ ಅಹ್ಮದ್ ಅವರ ಓವರ್‌ನ ಎರಡನೇ ಎಸೆತದಲ್ಲಿ ಕೊಹ್ಲಿ ಕವರ್‌ನಲ್ಲಿ ಬೌಂಡರಿ ಬಾರಿಸಿದರು. ಮೂರನೇ ಎಸೆತದಲ್ಲಿ ಮತ್ತೊಮ್ಮೆ ಮಿಡ್-ಆಫ್‌ನಲ್ಲಿ ಬೌಂಡರಿ ಬಾರಿಸಿದರು. ಇಶಾನ್ ಮತ್ತು ಕೊಹ್ಲಿ ನಡುವೆ 250 ರನ್‌ಗಳ ಜೊತೆಯಾಟವಿದೆ.

  • 10 Dec 2022 01:52 PM (IST)

    ಒಂದೇ ಓವರ್‌ನಲ್ಲಿ 17 ರನ್

    ಮೆಹಿದಿ ಹಸನ್ ಮಿರಾಜ್ ಅವರ ಓವರ್‌ನಲ್ಲಿ ಇಶಾನ್ ಅವರ ಬ್ಯಾಟ್‌ನಿಂದ 1 ಸಿಕ್ಸರ್, 2 ಬೌಂಡರಿ ಹೊರಬಂದವು. ಓವರ್‌ನ ಎರಡನೇ ಎಸೆತದಲ್ಲಿ ಇಶಾನ್ ಸ್ಲಾಗ್ ಸ್ವೀಪ್‌ ಮಾಡಿ ಸಿಕ್ಸರ್ ಬಾರಿಸಿದರು. ನಂತರ ಕೊನೆಯ ಎರಡು ಎಸೆತಗಳಲ್ಲಿ ಸತತ ಎರಡು ಬೌಂಡರಿಗಳನ್ನು ಬಾರಿಸಿದರು. ಈ ಓವರ್‌ನಲ್ಲಿ 17 ರನ್‌ಗಳು ಬಂದವು

  • 10 Dec 2022 01:45 PM (IST)

    ಇಶಾನ್ 150 ರನ್‌ಗಳು ಪೂರ್ಣ

    ಇಶಾನ್ ಕಿಶನ್ 28ನೇ ಓವರ್‌ನಲ್ಲಿ 150 ರನ್ ಪೂರೈಸಿದರು. ಓವರ್‌ನ ಮೂರನೇ ಎಸೆತವನ್ನು ಸ್ವೀಪ್ ಮಾಡಿ ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನಲ್ಲಿ ಸಿಕ್ಸರ್ ಬಾರಿಸಿದರು. 103 ಎಸೆತಗಳಲ್ಲಿ 150 ರನ್ ಪೂರೈಸಿದ್ದು, ತಮ್ಮ ಇನ್ನಿಂಗ್ಸ್​ನಲ್ಲಿ 17 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

  • 10 Dec 2022 01:36 PM (IST)

    ಇಶಾನ್ ಸಿಕ್ಸರ್ ಸುರಿಮಳೆ

    ಶಕೀಬ್ ಅಲ್ ಹಸನ್ ಓವರ್‌ನ ಮೊದಲ ಎಸೆತದಲ್ಲಿ ಎಕ್ಸ್​ಟ್ರಾ ಕವರ್​ನಲ್ಲಿ ಫೋರ್ ಹೊಡೆದ ಕಿಶನ್, ಮುಂದಿನ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು. ಓವರ್‌ನ ನಾಲ್ಕನೇ ಎಸೆತದಲ್ಲಿ ಮತ್ತೊಮ್ಮೆ ಅದೇ ಸಿಕ್ಸರ್ ಬಾರಿಸಿದರು.ಗಳಿಸಿದ್ದಾರೆ.

  • 10 Dec 2022 01:29 PM (IST)

    ಇಶಾನ್ ಕಿಶನ್ ಶತಕ

    ಇಶಾನ್ ಕಿಶನ್ 24ನೇ ಓವರ್​ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಶತಕ ಪೂರೈಸಿದರು. ಇಶಾನ್ 85 ಎಸೆತಗಳಲ್ಲಿ 100 ರನ್ ಪೂರೈಸಿದರು. ಇದು ಅವರ ವೃತ್ತಿ ಜೀವನದ ಮೊದಲ ಶತಕವಾಗಿದೆ.

  • 10 Dec 2022 01:20 PM (IST)

    ಗೇರ್ ಬದಲಾಯಿಸಿದ ಕೊಹ್ಲಿ

    22ನೇ ಓವರ್‌ನಲ್ಲಿ ಮೆಹದಿ ಹಸನ್ 8 ರನ್ ನೀಡಿದರು. ಓವರ್‌ನ ಎರಡನೇ ಎಸೆತದಲ್ಲಿ ಕೊಹ್ಲಿ ಡೀಪ್‌ನಲ್ಲಿ ಫೋರ್ ಹೊಡೆದರು. ಇದಾದ ನಂತರ ಶಕೀಬ್ ಅಲ್ ಹಸನ್ ಅವರ ಓವರ್‌ನಲ್ಲಿ ಕೊಹ್ಲಿ ಮತ್ತೊಂದು ಬೌಂಡರಿ ಬಾರಿಸಿದರು. ಕೊಹ್ಲಿ ಕೂಡ ಈಗ ನಿಧಾನವಾಗಿ ಗೇರ್ ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ.

  • 10 Dec 2022 01:14 PM (IST)

    ಕಿಶನ್ ಸ್ವಲ್ಪದರಲ್ಲೇ ಬಚಾವ್

    20ನೇ ಓವರ್‌ನಲ್ಲಿ ಇಶಾನ್ ಕಿಶನ್ ಔಟಾಗುವುದರಿಂದ ಸ್ವಲ್ಪದರಲ್ಲೇ ಪಾರಾದರು. ಶಾಕಿಬ್ ಅದ್ಭುತ ಕ್ಯಾಚ್ ಹಿಡಿಯಲು ಯತ್ನಿಸಿದರಾದರೂ ಸಫಲವಾಗಲಿಲ್ಲ. ಇಶಾನ್ ಕೂಡ ಅದೇ ಓವರ್‌ನಲ್ಲಿ ಎರಡು ಬೌಂಡರಿ ಬಾರಿಸಿದರು

  • 10 Dec 2022 12:58 PM (IST)

    ಭಾರತದ ಶತಕ ಪೂರ್ಣ

    ಇಶಾನ್ ಕಿಶನ್ ಪ್ರತಿ ಓವರ್‌ನಲ್ಲಿ ದೊಡ್ಡ ಹೊಡೆತಗಳನ್ನು ಆಡಲು ಪ್ರಯತ್ನಿಸುತ್ತಿದ್ದಾರೆ. ಹಸನ್ ಅವರ 18ನೇ ಓವರ್ ಐದನೇ ಎಸೆತದಲ್ಲಿ ಇಶಾನ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ ಕಡೆ ಬೌಂಡರಿ ಬಾರಿಸಿದರು.

  • 10 Dec 2022 12:49 PM (IST)

    ಶತಕದತ್ತ ಕಿಶನ್

    11ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಇಶಾನ್ ಮಿಡ್ ವಿಕೆಟ್‌ ಕಡೆ ಬೌಂಡರಿ ಬಾರಿಸಿದರು. ಹಾಗೇ ಕೊನೆಯ ಎಸೆತವನ್ನು ಎಳೆದು ಫೈನ್ ಲೆಗ್‌ನಲ್ಲಿ ಬೌಂಡರಿ ಬಾರಿಸಿದರು.

  • 10 Dec 2022 12:45 PM (IST)

    ಕಿಶನ್ ಎಕ್ಸ್​ಟ್ರಾ ಕವರ್ ಬೌಂಡರಿ

    16ನೇ ಓವರ್​ನ ಕೊನೆಯ ಎಸೆತದಲ್ಲಿ ಇಶಾನ್ ಕಿಶನ್ ಎಕ್ಸ್​ಟ್ರಾ ಕವರ್​ನಲ್ಲಿ ಬೌಂಡರಿ ಬಾರಿಸಿದರು. ಹಸನ್ ಈ ಓವರ್‌ನಲ್ಲಿ ಏಳು ರನ್‌ ನೀಡಿದರು.

  • 10 Dec 2022 12:39 PM (IST)

    ಮಿರಾಜ್ ಉತ್ತಮ ಓವರ್

    14ನೇ ಓವರ್‌ನಲ್ಲಿ ಮೆಹದಿ ಮಿರಾಜ್ ಒಂದು ರನ್ ನೀಡಿದರು. ಮುಂದಿನ ಓವರ್‌ನಲ್ಲಿ ಇಶಾನ್ ಕಿಶನ್ ಎಕ್ಸ್​ಟ್ರಾ ಕವರ್‌ನಲ್ಲಿ ಬೌಂಡರಿ ಬಾರಿಸಿದರು. ಈ ಓವರ್‌ನಲ್ಲಿ ತಸ್ಕಿನ್ ಅಹ್ಮದ್ 11 ರನ್ ನೀಡಿದರು.

  • 10 Dec 2022 12:34 PM (IST)

    ಕಿಶನ್ ಅರ್ಧಶತಕ

    13ನೇ ಓವರ್‌ನಲ್ಲಿ ಶಕೀಬ್ ಅಲ್ ಹಸನ್ 6 ರನ್ ನೀಡಿದರು. ಓವರ್‌ನ ಎರಡನೇ ಎಸೆತದಲ್ಲಿ ಇಶಾನ್ ಚೆಂಡನ್ನು ಲಾಂಗ್ ಆನ್ ಕಡೆ ಆಡಿ 50 ರನ್ ಪೂರೈಸಿದರು.

  • 10 Dec 2022 12:31 PM (IST)

    ಕಿಶನ್ ಅಬ್ಬರ

    ಇಬಾದತ್ ಹುಸೇನ್ ಅವರ ಓವರ್‌ನಲ್ಲಿ ಇಶಾನ್ ಕಿಶನ್ ಬಿರುಗಾಳಿ ಬ್ಯಾಟಿಂಗ್ ಮಾಡಿದ್ದಾರೆ. ಓವರ್‌ನ ಎರಡನೇ ಎಸೆತದಲ್ಲಿ ಇಶಾನ್ ಬ್ಯಾಕ್‌ವರ್ಡ್ ಪಾಯಿಂಟ್‌ ಕಡೆ ಬೌಂಡರಿ ಬಾರಿಸಿದರು. ಮುಂದಿನ ಎಸೆತದಲ್ಲಿ, ಅವರು ಫೈನ್ ಲೆಗ್‌ನಲ್ಲಿ ಬೌಂಡರಿ ಬಾರಿಸಿದರು. ಐದನೇ ಎಸೆತದಲ್ಲಿ ಇಶಾನ್ ಸ್ಕ್ವೇರ್ ಲೆಗ್ ಮೇಲೆ ಸಿಕ್ಸರ್ ಹೊಡೆದರು. ಹಾಗೆಯೇ ಓವರ್‌ನ ಅಂತ್ಯವನ್ನು ಸಹ ಬೌಂಡರಿಯೊಂದಿಗೆ ಮಾಡಿದರು.

  • 10 Dec 2022 12:30 PM (IST)

    10 ಓವರ್‌ಗಳಲ್ಲಿ 45 ರನ್

    ಭಾರತದ 10 ಓವರ್‌ಗಳ ಆಟ ಮುಗಿದಿದ್ದು, ತಂಡ ಒಂದು ವಿಕೆಟ್ ಕಳೆದುಕೊಂಡು 45 ರನ್ ಗಳಿಸಿದೆ. ಇಶಾನ್ 40 ಎಸೆತಗಳಲ್ಲಿ 33 ರನ್ ಗಳಿಸಿ ಆಡುತ್ತಿದ್ದರೆ, ವಿರಾಟ್ ಕೊಹ್ಲಿ 12 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿದ್ದಾರೆ.

  • 10 Dec 2022 12:17 PM (IST)

    ಇಶಾನ್ ಫೋರ್

    ಎಂಟನೇ ಓವರ್‌ನಲ್ಲಿ ಇಬಾದತ್ ಹುಸೇನ್ 5 ರನ್ ನೀಡಿದರು. ಓವರ್‌ನ ಐದನೇ ಎಸೆತದಲ್ಲಿ ಇಶಾನ್ ಕಿಶನ್ ಎಳೆದು ಡೀಪ್ ಕಡೆ ಬೌಂಡರಿ ಬಾರಿಸಿದರು. ಕೊಹ್ಲಿ ಮತ್ತು ಇಶಾನ್ ಮಹತ್ವದ ಜೊತೆಯಾಟವನ್ನು ಕಟ್ಟಲು ಪ್ರಯತ್ನಿಸುತ್ತಿದ್ದಾರೆ.

  • 10 Dec 2022 12:16 PM (IST)

    ಕೊಹ್ಲಿಗೆ ಜೀವದಾನ

    ಏಳನೇ ಓವರ್​ನಲ್ಲಿ ಕೊಹ್ಲಿಗೆ ಜೀವದಾನ ಸಿಕ್ಕಿತು. ಮೆಹದಿ ಮಿರಾಜ್ ಅವರ ಚೆಂಡನ್ನು ಶಾರ್ಟ್ ಮಿಡ್‌ವಿಕೆಟ್‌ಗೆ ಕೊಹ್ಲಿ ಫ್ಲಿಕ್ ಮಾಡಿದರು ಆದರೆ ಲಿಟ್ಟನ್ ಕ್ಯಾಚ್ ಪಡೆಯಲು ಸಾಧ್ಯವಾಗಲಿಲ್ಲ. ಅದೇ ಸಮಯದಲ್ಲಿ, ಕೊಹ್ಲಿ ಮುಂದಿನ ಎಸೆತವನ್ನು ಫ್ಲಿಕ್ ಮಾಡಿ ಸ್ಕ್ವೇರ್ ಲೆಗ್‌ನಲ್ಲಿ ಫೋರ್ ಹೊಡೆದರು.

  • 10 Dec 2022 12:08 PM (IST)

    ತಸ್ಕಿನ್ ಅಹ್ಮದ್ ದುಬಾರಿ

    ತಸ್ಕಿನ್ ಅಹ್ಮದ್ ಓವರ್​ನ ಮೊದಲ ಎಸೆತದಲ್ಲಿ ಕಿಶನ್ ಪಾಯಿಂಟ್​ನಲ್ಲಿ ಬಾಂಡರಿ ಬಾರಿಸಿದರು. ಐದನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಬಾರಿಸಿದರು. ಈ ಓವರ್‌ನಲ್ಲಿ ಭಾರತ 12 ರನ್ ಗಳಿಸಿತು.

  • 10 Dec 2022 12:03 PM (IST)

    ಧವನ್ ಔಟ್

    ಶಿಖರ್ ಧವನ್ ಅವರನ್ನು ಔಟ್ ಮಾಡುವ ಮೂಲಕ ಮೆಹದಿ ಹಸನ್ ಟೀಂ ಇಂಡಿಯಾಕ್ಕೆ ಮೊದಲ ಹೊಡೆತ ನೀಡಿದರು. ಧವನ್ ಓವರ್‌ನ ಮೊದಲ ಎಸೆತದಲ್ಲಿ ಡಿಫೆಂಡ್ ಮಾಡಲು ಪ್ರಯತ್ನಿಸಿದರು ಆದರೆ ಚೆಂಡು ಪ್ಯಾಡ್‌ಗೆ ಬಡಿಯಿತು, ಅಂಪೈರ್ ಔಟ್ ನೀಡಿದರು. ಧವನ್ 8 ಎಸೆತಗಳಲ್ಲಿ ಮೂರು ರನ್ ಗಳಿಸಿ ಮರಳಿದರು.

  • 10 Dec 2022 11:53 AM (IST)

    ಇಶಾನ್ ಫೋರ್

    ಎರಡನೇ ಓವರ್‌ನಲ್ಲಿ ತಸ್ಕಿನ್ ಅಹ್ಮದ್ ನಾಲ್ಕು ರನ್ ನೀಡಿದರು. ಮುಸ್ತಫಿಜುರ್ ಮುಂದಿನ ಓವರ್‌ನಲ್ಲಿ 10 ರನ್ ನೀಡಿದರು. ಆ ಓವರ್‌ನ ಮೊದಲ ಎಸೆತ ವೈಡ್ ಆಗಿತ್ತು, ನಂತರ ಇಶಾನ್ ಮುಂದಿನ ಎಸೆತವನ್ನು ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಬೌಂಡರಿ ಬಾರಿಸಿದರು. ಹಾಗೆಯೇ ಓವರ್‌ನ ಎರಡನೇ ಎಸೆತದಲ್ಲಿ ಇಶಾನ್ ಪಾಯಿಂಟ್‌ನಲ್ಲಿ ಬೌಂಡರಿ ಬಾರಿಸಿದರು.

  • 10 Dec 2022 11:47 AM (IST)

    ಭಾರತದ ಬ್ಯಾಟಿಂಗ್ ಆರಂಭ

    ಬಾಂಗ್ಲಾ ಪರ ಮೊದಲ ಓವರ್ ಮಾಡಿದ ಮುಸ್ತಾಫಿಜುರ್ ರೆಹಮಾನ್ ಮೊದಲ ಓವರ್‌ನಲ್ಲಿ ಕೇವಲ ಒಂದು ರನ್ ನೀಡಿದರು. ಇಶಾನ್ ಈ ಸರಣಿಯಲ್ಲಿ ಮೊದಲ ಬಾರಿಗೆ ಆಡುವ ಅವಕಾಶವನ್ನು ಪಡೆದಿದ್ದು, ಅವರು ಧವನ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದಾರೆ.

  • 10 Dec 2022 11:21 AM (IST)

    ಬಾಂಗ್ಲಾದೇಶ ತಂಡ

    ಲಿಟ್ಟನ್ ದಾಸ್, ಅನಾಮುಲ್ ಹಕ್, ಯಾಸಿರ್ ಅಲಿ, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹದಿ ಹಸನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಎಬಾದತ್ ಹೊಸೈನ್

  • 10 Dec 2022 11:20 AM (IST)

    ಭಾರತ ತಂಡ

    ಇಶಾನ್ ಕಿಶನ್, ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್

  • 10 Dec 2022 11:07 AM (IST)

    ಟಾಸ್ ಗೆದ್ದ ಬಾಂಗ್ಲಾದೇಶ

    ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ.

Published On - 11:05 am, Sat, 10 December 22

Follow us on