Asia cup 2023 India vs Bangladesh Highlights: ಗಿಲ್ ಶತಕ ವ್ಯರ್ಥ; ಬಾಂಗ್ಲಾ ತಂಡಕ್ಕೆ 6 ರನ್​ಗಳ ರೋಚಕ ಜಯ

ಪೃಥ್ವಿಶಂಕರ
|

Updated on:Sep 15, 2023 | 11:18 PM

Asia cup 2023 IND vs BAN Match Highlights in Kannada: ಏಷ್ಯಾಕಪ್ 2023ರ ಫೈನಲ್‌ಗೂ ಮುನ್ನ ಭಾರತ ಕ್ರಿಕೆಟ್ ತಂಡ ಮೊದಲ ಬಾರಿಗೆ ಟೂರ್ನಿಯಲ್ಲಿ ಸೋಲನುಭವಿಸಿದೆ. ಸೂಪರ್-4 ಸುತ್ತಿನ ತನ್ನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಂ ಇಂಡಿಯಾ 6 ರನ್‌ಗಳಿಂದ ಸೋತಿದೆ. ಶುಭ್​ಮನ್ ಗಿಲ್ ಅವರ ಶಕ್ತಿಶಾಲಿ ಶತಕಕ್ಕೂ ಟೀಂ ಇಂಡಿಯಾವನ್ನು ಈ ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

Asia cup 2023 India vs Bangladesh Highlights: ಗಿಲ್ ಶತಕ ವ್ಯರ್ಥ; ಬಾಂಗ್ಲಾ ತಂಡಕ್ಕೆ 6 ರನ್​ಗಳ ರೋಚಕ ಜಯ
ಭಾರತ- ಬಾಂಗ್ಲಾದೇಶ

ಏಷ್ಯಾಕಪ್ 2023ರ ಫೈನಲ್‌ಗೂ ಮುನ್ನ ಭಾರತ ಕ್ರಿಕೆಟ್ ತಂಡ ಮೊದಲ ಬಾರಿಗೆ ಟೂರ್ನಿಯಲ್ಲಿ ಸೋಲನುಭವಿಸಿದೆ. ಸೂಪರ್-4 ಸುತ್ತಿನ ತನ್ನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಂ ಇಂಡಿಯಾ 6 ರನ್‌ಗಳಿಂದ ಸೋತಿದೆ. ಶುಭ್​ಮನ್ ಗಿಲ್ ಅವರ ಶಕ್ತಿಶಾಲಿ ಶತಕಕ್ಕೂ ಟೀಂ ಇಂಡಿಯಾವನ್ನು ಈ ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಬದಲಾವಣೆಗಳೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ ಬ್ಯಾಟಿಂಗ್ ಈ ಪಂದ್ಯದಲ್ಲಿ ದಯನೀಯವಾಗಿ ವಿಫಲವಾಗಿದ್ದು, ಬಾಂಗ್ಲಾದೇಶ ನೀಡಿದ 266 ರನ್​ಗಳ ಗುರಿಗೆ ಉತ್ತರವಾಗಿ ಕೇವಲ 259 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಏಷ್ಯಾಕಪ್ (ODI) ಇತಿಹಾಸದಲ್ಲಿ ಬಾಂಗ್ಲಾದೇಶ ಎರಡನೇ ಬಾರಿಗೆ ಭಾರತವನ್ನು ಸೋಲಿಸಿದ ಸಾಧನೆ ಮಾಡಿದೆ. ಇಷ್ಟೇ ಅಲ್ಲ ಏಕದಿನ ರ ್ಯಾಂಕಿಂಗ್​ನಲ್ಲಿ ಮೊದಲ ಸ್ಥಾನ ಪಡೆಯುವ ಅವಕಾಶವೂ ಟೀಂ ಇಂಡಿಯಾದ ಕೈತಪ್ಪಿದೆ.

LIVE NEWS & UPDATES

The liveblog has ended.
  • 15 Sep 2023 11:15 PM (IST)

    ಭಾರತಕ್ಕೆ ಸೋಲು

    ಏಷ್ಯಾಕಪ್‌ನ ಫೈನಲ್‌ಗೂ ಮುನ್ನ ಟೀಂ ಇಂಡಿಯಾ ಹೀನಾಯವಾಗಿ ಸೋಲನುಭವಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಭಾರತವನ್ನು 6 ರನ್‌ಗಳಿಂದ ಸೋಲಿಸಿದೆ.ಬಾಂಗ್ಲಾ ನೀಡಿದ 266 ರನ್‌ಗಳ ಗುರಿಯನ್ನು ಭಾರತಕ್ಕೆ ಸಾಧಿಸಲು ಸಾಧ್ಯವಾಗಲಿಲ್ಲ ಮತ್ತು ಇಡೀ ತಂಡ 259 ರನ್‌ಗಳಿಗೆ ಆಲೌಟ್ ಆಯಿತು.

  • 15 Sep 2023 11:01 PM (IST)

    6 ಎಸೆತಗಳಲ್ಲಿ 12 ರನ್ ಬೇಕು

    ಟೀಂ ಇಂಡಿಯಾ ಗೆಲುವಿಗೆ 12 ರನ್‌ಗಳ ಅಗತ್ಯವಿದ್ದು, ಇನ್ನು 6 ಎಸೆತಗಳು ಬಾಕಿ ಉಳಿದಿವೆ. ಈಗ ಕೇವಲ ಒಂದು ವಿಕೆಟ್ ಮಾತ್ರ ಉಳಿದಿರುವುದು ಆತಂಕದ ವಿಚಾರ.

  • 15 Sep 2023 10:50 PM (IST)

    12 ಎಸೆತಗಳಲ್ಲಿ 17 ರನ್ ಬೇಕು

    48ನೇ ಓವರ್​ನಲ್ಲಿ ಅಕ್ಷರ್ 1 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು. ಈ ಓವರ್​ನಲ್ಲಿ 14 ರನ್ ಬಂದವು. ಭಾರತದ ಗೆಲುವಿಗೆ 12 ಎಸೆತಗಳಲ್ಲಿ 17 ರನ್ ಬೇಕು.

  • 15 Sep 2023 10:46 PM (IST)

    18 ಎಸೆತಗಳಲ್ಲಿ 31 ರನ್ ಬೇಕು

    ಭಾರತದ ಗೆಲುವಿಗೆ 18 ಎಸೆತಗಳಲ್ಲಿ 31 ರನ್ ಬೇಕಾಗಿದೆ. ಟೀಂ ಇಂಡಿಯಾದ ಕೈಯಲ್ಲಿ ಇನ್ನು 3 ವಿಕೆಟ್ ಉಳಿದಿದೆ.

  • 15 Sep 2023 10:23 PM (IST)

    ಗಿಲ್ ಔಟ್

    ಭಾರತದ 7ನೇ ವಿಕೆಟ್ ಪತನವಾಗಿದೆ. 121 ರನ್ ಸಿಡಿಸಿದ್ದ ಗಿಲ್, ಸಿಕ್ಸರ್ ಬಾರಿಸುವ ಯತ್ನದಲ್ಲಿ ಲಾಂಗ್ ಆನ್​ನಲ್ಲಿ ಕ್ಯಾಚಿತ್ತು ಔಟಾಗಿದ್ದಾರೆ.

  • 15 Sep 2023 10:21 PM (IST)

    ಭಾರತಕ್ಕೆ 64 ರನ್ ಬೇಕು

    ಭಾರತದ ಗೆಲುವಿಗೆ 42 ಎಸೆತಗಳಲ್ಲಿ 64 ರನ್ ಬೇಕಿದೆ. ಗಿಲ್ ಶತಕ ಗಳಿಸಿ ಆಡುತ್ತಿದ್ದರೆ, ಅಕ್ಷರ್ 10 ರನ್ ಬಾರಿಸಿ ಕ್ರೀಸ್​ನಲ್ಲಿದ್ದಾರೆ.

  • 15 Sep 2023 10:00 PM (IST)

    ಗಿಲ್ ಶತಕ ಪೂರ್ಣ

    ಸತತ ವಿಕೆಟ್​ಗಳ ವೈಫಲ್ಯದ ನಡುವೆಯೂ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಗಿಲ್, 118 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದ್ದಾರೆ. ಗಿಲ್ ಅವರ ಈ ಇನ್ನಿಂಗ್ಸ್​ನಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಕೂಡ ಸೇರಿದ್ದವು.

  • 15 Sep 2023 09:55 PM (IST)

    ಜಡೇಜಾ ಔಟ್

    ನಿರ್ಣಾಯಕ ಹಂತದಲ್ಲಿ ಭಾರತದ 6ನೇ ವಿಕೆಟ್ ಪತನವಾಗಿದೆ. ಗಿಲ್​ಗೆ ಸಾಥ್ ನೀಡಬೇಕಿದ್ದ ಜಡೇಜಾ, ಕ್ಲೀನ್ ಬೌಲ್ಡ್ ಆಗಿ 7 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡಿದ್ದಾರೆ.

  • 15 Sep 2023 09:48 PM (IST)

    ಗಿಲ್ ಬ್ಯಾಕ್ ಟು ಬ್ಯಾಕ್ ಸಿಕ್ಸ್

    36ನೇ ಓವರ್​ನ ಕೊನೆಯ ಎರಡು ಎಸೆತಗಳಲ್ಲಿ ಗಿಲ್ ಸತತ ಎರಡು ಸಿಕ್ಸರ್ ಬಾರಿಸಿದರು. ಇದರೊಂದಿಗೆ ಭಾರತದ 150 ರನ್ ಕೂಡ ಪೂರ್ಣಗೊಂಡಿದೆ.

  • 15 Sep 2023 09:42 PM (IST)

    15 ಓವರ್ ಬಾಕಿ

    ಭಾರತಕ್ಕೆ ಇನ್ನು 15 ಓವರ್ ಉಳಿದಿದ್ದು, ಒಟ್ಟು 90 ಎಸೆತಗಳಲ್ಲಿ ಭಾರತ 117 ರನ್ ಕಲೆಹಾಕಬೇಕಿದೆ. ಗಿಲ್ ಹಾಗೂ ಜಡೇಜಾ ಕ್ರೀಸ್​ನಲ್ಲಿದ್ದಾರೆ.

  • 15 Sep 2023 09:33 PM (IST)

    ಸೂರ್ಯ ಔಟ್, ಭಾರತ 139/5

    ಭಾರತದ 5ನೇ ವಿಕೆಟ್ ಪತನವಾಗಿದೆ. ಭಾರತದ ಇನ್ನಿಂಗ್ಸ್​ಗೆ ಆಸರೆಯಾಗಿದ್ದ ಸೂರ್ಯಕುಮಾರ್ ಯಾದವ್ ಸ್ವಿಪ್ ಶಾಟ್ ಆಡುವ ಯತ್ನದಲ್ಲಿ ಕ್ಲೀನ್ ಬೌಲ್ಡ್ ಆದರು.

  • 15 Sep 2023 09:21 PM (IST)

    30 ಓವರ್ ಅಂತ್ಯ

    ಭಾರತದ ಇನ್ನಿಂಗ್ಸ್​ನ 30 ಓವರ್​ ಮುಗಿದಿದೆ. ಭಾರತ 4 ವಿಕೆಟ್ ಕಳೆದುಕೊಂಡು 126 ರನ್ ಕಲೆಹಾಕಿದೆ. ಈ ಓವರ್​ನಲ್ಲಿ ಸೂರ್ಯ 1 ಬೌಂಡರಿ ಕೂಡ ಹೊಡೆದರು.

  • 15 Sep 2023 08:52 PM (IST)

    ಭಾರತದ 4ನೇ ವಿಕೆಟ್ ಪತನ

    ಭಾರತದ 4ನೇ ವಿಕೆಟ್ ಪತನವಾಗಿದೆ. ಇಶಾನ್ ಕಿಶನ್ ರಿವರ್ಸ್ವೀಪ್ ಹೊಡೆಯುವ ಯತ್ನದಲ್ಲಿ ಎಲ್​ಬಿ ಬಲೆಗೆ ಬಿದ್ದಿದ್ದಾರೆ. ಮೆಹದಿ ಹಸನ್​ಗೆ ಈ ವಿಕೆಟ್ ಸಿಕ್ಕಿದೆ.

    ಭಾರತ 94/4

  • 15 Sep 2023 08:42 PM (IST)

    ಗಿಲ್ ಅರ್ಧಶತಕ ಪೂರ್ಣ

    ಸತತ ವಿಕೆಟ್​ಗಳ ನಡುವೆ ಕಂಗೆಟ್ಟಿರುವ ಭಾರತಕ್ಕೆ ಗಿಲ್ ಇನ್ನಿಂಗ್ಸ್ ಆಸರೆಯಾಗಿದೆ. ಆರಂಭಿಕರಾಗಿ ಕಣಕ್ಕಿಳಿದಿರುವ ಗಿಲ್, 61 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ್ದಾರೆ. 20ನೇ ಓವರ್​ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಗಿಲ್ ತಮ್ಮ ಅರ್ಧಶತಕ ಪೂರೈಸಿದರು.

  • 15 Sep 2023 08:32 PM (IST)

    ರಾಹುಲ್ ಔಟ್, ಭಾರತ 74/3

    ಭಾರತದ ಮೂರನೇ ವಿಕೆಟ್ ಪತನವಾಗಿದೆ. 19 ರನ್ ಗಳಿಸಿದ್ದ ರಾಹುಲ್, ಮೆಹದಿ ಹಸನ್​ಗೆ ಬಲಿಯಾಗಿದ್ದಾರೆ. ಭಾರತದ ಸ್ಕೋರ್ 3 ವಿಕೆಟ್ ನಷ್ಟಕ್ಕೆ 74, ಗೆಲುವಿಗೆ ಇನ್ನೂ 192 ರನ್ ಅಗತ್ಯವಿದೆ.

  • 15 Sep 2023 08:17 PM (IST)

    ಅರ್ಧಶತಕ ಪೂರೈಸಿದ ಭಾರತ

    ಇನ್ನಿಂಗ್ಸ್​ನ 12ನೇ ಓವರ್​ನಲ್ಲಿ ಭಾರತ ತನ್ನ ಅರ್ಧಶತಕವನ್ನು ಪೂರೈಸಿದೆ, ಶಕೀಬ್ ಬೌಲ್ ಮಾಡಿದ ಈ ಓವರ್​ನ 4ನೇ ಎಸೆತದಲ್ಲಿ ಗಿಲ್, ಕವರ್ ದಿಕ್ಕಿನಲ್ಲಿ ಬೌಂಡರಿ ಕೂಡ ಬಾರಿಸಿದರು.

  • 15 Sep 2023 08:03 PM (IST)

    ಪವರ್ ಪ್ಲೇ ಅಂತ್ಯ

    ಭಾರತದ ಪವರ್​ ಪ್ಲೇ ಮುಗಿದಿದ್ದು, ಇದರಲ್ಲಿ ಭಾರತ 2 ವಿಕೆಟ್ ಕಳೆದುಕೊಂಡು 42 ರನ್ ಕಲೆಹಾಕಿದೆ. ರಾಹುಲ್ ಹಾಗೂ ಗಿಲ್ ಕ್ರೀಸ್​ನಲ್ಲಿದ್ದಾರೆ.

  • 15 Sep 2023 07:53 PM (IST)

    ಗಿಲ್ 2 ಬೌಂಡರಿ, ಭಾರತ 38/2

    8ನೇ ಓವರ್​ನ 3 ಮತ್ತು 5ನೇ ಎಸೆತದಲ್ಲಿ ಗಿಲ್ 2 ಬೌಂಡರಿ ಬಾರಿಸಿದರು. ಮೊದಲ ಬೌಂಡರಿ ಪಾಯಿಂಟ್​ನಲ್ಲಿ ಬಂದರೆ, ಎರಡನೆಯದ್ದು ಶಾರ್ಟ್​ ಥರ್ಡ್​ ಮ್ಯಾನ್​ನಲ್ಲಿ ಬಂತು.

  • 15 Sep 2023 07:39 PM (IST)

    5 ಓವರ್ ಮುಕ್ತಾಯ

    ಭಾರತದ ಇನ್ನಿಂಗ್ಸ್​ನ 5 ಓವರ್​ ಮುಗಿದಿದ್ದು, ಭಾರತ 2 ವಿಕೆಟ್ ಕಳೆದುಕೊಂಡು 23 ರನ್ ಕಲೆಹಾಕಿದೆ. ರಾಹುಲ್ ಹಾಗೂ ಗಿಲ್ ಕ್ರೀಸ್​ನಲ್ಲಿದ್ದಾರೆ.

  • 15 Sep 2023 07:33 PM (IST)

    ತಿಲಕ್ ಔಟ್

    ಬಾಂಗ್ಲಾದೇಶ ಪರ ತಮ್ಮ ಚೊಚ್ಚಲ ಪಂದ್ಯವನ್ನು ಆಡುತ್ತಿರುವ ತಂಜಿಮ್ ಶಾಕಿಬ್, ತಿಲಕ್ ವರ್ಮಾ ಅವರ ವಿಕೆಟ್ ಪಡೆದರು. ತಿಲಕ್ 9 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ಮರಳಿದರು. ಶಾಕಿಬ್​ಗೆ ಇದು 2ನೇ ವಿಕೆಟ್

  • 15 Sep 2023 07:18 PM (IST)

    ರೋಹಿತ್ ಔಟ್

    ಭಾರತದ ಇನ್ನಿಂಗ್ಸ್​ನ ಮೊದಲ ಓವರ್​ನಲ್ಲೇ ನಾಯಕ ರೋಹಿತ್ ಶರ್ಮಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಇದೀಗ ತಿಲಕ್ ವರ್ಮಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.

  • 15 Sep 2023 06:45 PM (IST)

    ಭಾರತಕ್ಕೆ 265 ರನ್ ಟಾರ್ಗೆಟ್

    ಭಾರತಕ್ಕೆ ಗೆಲ್ಲಲು ಬಾಂಗ್ಲಾದೇಶ ತಂಡ 265 ರನ್​ಗಳ ಟಾರ್ಗೆಟ್ ನೀಡಿದೆ. ತಂಡದ ಪರ ನಾಯಕ ಶಕೀಬ್ 80 ರನ್, ತೌಹಿದ್ ಹೃದಯೊಯ್ 54 ರನ್ ಹಾಗೂ ನಸುಮ್ ಅಹ್ಮದ್ 44 ರನ್​ಗಳ ಇನ್ನಿಂಗ್ಸ್ ಆಡಿದರು. ಭಾರತದ ಪರ ಶಾರ್ದೂಲ್ 3 ವಿಕೆಟ್ ಪಡೆದರೆ, ಶಮಿ 2 ಹಾಗೂ ಅಕ್ಷರ್, ಜಡೇಜಾ, ಪ್ರಸಿದ್ಧ್ ತಲಾ ಒಂದೊಂದು ವಿಕೆಟ್ ಪಡೆದರು.

  • 15 Sep 2023 06:43 PM (IST)

    250 ರ ಗಡಿ ದಾಟಿದ ಬಾಂಗ್ಲಾ

    ಆರಂಭದಲ್ಲಿ ಎಡವಿದ್ದ ಬಾಂಗ್ಲಾದೇಶ ಅಂತಿಮವಾಗಿ 250ರ ಗಡಿ ದಾಟಿತು. ಕೊನೆಯಲ್ಲಿ ಮೆಹದಿ ಹಸನ್ ಸ್ವಲ್ಪ ಪ್ರಯತ್ನ ಮಾಡಿ ತಂಡವನ್ನು ಈ ಹಂತಕ್ಕೆ ಕೊಂಡೊಯ್ದರು.

  • 15 Sep 2023 06:32 PM (IST)

    ಪ್ರಸಿದ್ಧ ಕೃಷ್ಣಗೆ ವಿಕೆಟ್

    ಬಾಂಗ್ಲಾದೇಶ ಪರ ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ನಸುಮ್ ಅಹ್ಮದ್ ಅವರನ್ನು ಪ್ರಸಿದ್ಧ್ ಕೃಷ್ಣ ಬಲಿ ಪಡೆದಿದ್ದಾರೆ. 44 ರನ್ ಗಳಿಸಿದ್ದ ನಸುಮ್ ಆರು ರನ್‌ಗಳಿಂದ ತಮ್ಮ ಅರ್ಧಶತಕವನ್ನು ತಪ್ಪಿಸಿಕೊಂಡರು.

  • 15 Sep 2023 06:05 PM (IST)

    200 ರನ್ ಪೂರ್ಣ

    ಬಾಂಗ್ಲಾ ತಂಡದ 200 ರನ್ ಪೂರ್ಣಗೊಂಡಿದೆ. ತಂಡದ 7 ವಿಕೆಟ್​ಗಳು ಪತನವಾಗಿದ್ದು, ತಂಡದ ಪರ ನಸುಮ್ 29 ರನ್ ಸಿಡಿಸಿ ಏಕಾಂಗಿಯಾಗಿ ಹೋರಾಟ ನೀಡುತ್ತಿದ್ದಾರೆ.

  • 15 Sep 2023 05:58 PM (IST)

    ಶಮಿಗೆ ವಿಕೆಟ್

    ಬಾಂಗ್ಲಾ ಪರ 54 ರನ್ ಸಿಡಿಸಿ ಆಡುತ್ತಿದ್ದ ತೌಹಿದ್ ಹೃದಯೊಯ್ ಸಿಕ್ಸರ್ ಬಾರಿಸುವ ಯತ್ನದಲ್ಲಿ ತಿಲಕ್ ವರ್ಮಾ ಅವರಿಗೆ ಕ್ಯಾಚಿತ್ತು ಔಟಾಗಿದ್ದಾರೆ.

    ಬಾಂಗ್ಲಾ 193/7

  • 15 Sep 2023 05:41 PM (IST)

    6ನೇ ವಿಕೆಟ್‌ ಪತನ

    ರವೀಂದ್ರ ಜಡೇಜಾ ಇದೀಗ ಬಾಂಗ್ಲಾದೇಶಕ್ಕೆ ಶಾಕ್ ನೀಡಿದ್ದು, ಶಮೀಮ್ ಹುಸೇನ್ ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ ರವೀಂದ್ರ ಜಡೇಜಾ ಏಕದಿನ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಉರುಳಿಸಿದ ಸಾಧನೆ ಮಾಡಿದ್ದಾರೆ.

  • 15 Sep 2023 05:27 PM (IST)

    ಶತಕದ ಸನಿಹದಲ್ಲಿ ಎಡವಿದ ಶಕೀಬ್

    80 ರನ್ ಸಿಡಿಸಿ ತಂಡದ ಪರ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದ ನಾಯಕ ಶಕೀಬ್ ಶಾರ್ದೂಲ್ ಠಾಕೂರ್ ಬೌಲಿಂಗ್​ನಲ್ಲಿ ಬೌಲ್ಡ್ ಆಗಿದ್ದಾರೆ. ಈ ಮೂಲಕ ಬಾಂಗ್ಲಾ ತನ್ನ 5ನೇ ವಿಕೆಟ್ ಕಳೆದುಕೊಂಡಿದೆ. ಅಲ್ಲದೆ ಹೃದಯ್ ಹಾಗೂ ಶಕೀಬ್ ಅವರ ಶತಕದ ಜೊತೆಯಾಟವೂ ಅಂತ್ಯಗೊಂಡಿದೆ.

  • 15 Sep 2023 05:10 PM (IST)

    30 ಓವರ್ ಮುಕ್ತಾಯ

    ಬಾಂಗ್ಲಾ ಇನ್ನಿಂಗ್ಸ್​ನ 30 ಓವರ್​ ಮುಗಿದಿದೆ. ಇಲ್ಲಿ ಬಾಂಗ್ಲಾ 4 ವಿಕೆಟ್ ಕಳೆದುಕೊಂಡು 134 ರನ್ ಕಲೆಹಾಕಿದೆ. ನಾಯಕ ಶಕೀಬ್ ಅರ್ಧಶತಕ ಸಿಡಿಸಿ ಆಡುತ್ತಿದ್ದರೆ, ಹೃದಯೋ 30 ರನ್ ಬಾರಿಸಿ ಕ್ರೀಸ್​ನಲ್ಲಿದ್ದಾರೆ.

  • 15 Sep 2023 04:59 PM (IST)

    ಶಕೀಬ್ ಅರ್ಧಶತಕ

    ಸಂಕಷ್ಟದ ಸ್ಥಿತಿಯಲ್ಲಿ ತಂಡದ ಇನ್ನಿಂಗ್ಸ್ ನಿಭಾಯಿಸುತ್ತಿರುವ ಭಾಂಗ್ಲಾ ನಾಯಕ ಶಕೀಬ್ 26ನೇ ಓವರ್​ನ 4ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿ ತಮ್ಮ ಅರ್ಧಶತಕ ಪೂರೈಸಿದ್ದಾರೆ. ಇದೇ ಓವರ್​ನಲ್ಲಿ ಮತ್ತೊಂದು ಸಿಕ್ಸರ್ ಕೂಡ ಬಂತು.

  • 15 Sep 2023 04:49 PM (IST)

    ಬಾಂಗ್ಲಾದೇಶದ ಶತಕ ಪೂರ್ಣ

    24 ಓವರ್ ಅಂತ್ಯಕ್ಕೆ ಬಾಂಗ್ಲಾ ತನ್ನ ಶತಕ ಪೂರೈಸಿದೆ. 24ನೇ ಓವರ್​ನಲ್ಲಿ ಸ್ಲಿಪ್​ನಲ್ಲಿ ಭಾರತ ಮತ್ತೊಂದು ಕ್ಯಾಚ್ ಕೈಚೆಲ್ಲಿತು. ಹೀಗಾಗಿ ಚೆಂಡು ಬೌಂಡರಿ ದಾಟಿತು. ಈ ಮೂಲಕ ಬಾಂಗ್ಲಾ ಶತಕದ ಗಡಿ ದಾಟಿತು.

  • 15 Sep 2023 04:43 PM (IST)

    ಬಾಂಗ್ಲಾದೇಶ ಸ್ಕೋರ್ 83/4

    ಬಾಂಗ್ಲಾದೇಶ 18 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 71 ರನ್ ಗಳಿಸಿದೆ. ಸದ್ಯ ಶಕೀಬ್ ಅಲ್ ಹಸನ್ 28 ರನ್ ಹಾಗೂ ತೌಹಿದ್ ಹೃದಯ್ ನಾಲ್ಕು ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 15 Sep 2023 04:13 PM (IST)

    ಹಸನ್ ಔಟ್

    ಅಕ್ಷರ್ ಪಟೇಲ್​ಗೆ ಮೊದಲ ವಿಕೆಟ್ ಸಿಕ್ಕಿದೆ. ಬಾಂಗ್ಲಾ ಇನ್ನಿಂಗ್ಸ್​ನ 14ನೇ ಓವರ್ ಬೌಲ್ ಮಾಡಿದ ಅಕ್ಷರ್, ಓವರ್​ನ ಕೊನೆಯ ಎಸೆತದಲ್ಲಿ ಹಸನ್ ವಿಕೆಟ್ ಪಡೆದರು. ಹಸನ್ ಸ್ಲಿಪ್​ನಲ್ಲಿ ಕ್ಯಾಚಿತ್ತು ಔಟಾದರು.

    ಹಸನ್ 13 ರನ್ (28 ಎಸೆತ)

    ಬಾಂಗ್ಲಾ 59/4

  • 15 Sep 2023 04:08 PM (IST)

    ಹಸನ್ ಬೌಂಡರಿ

    ಪ್ರಸಿದ್ಧ್ ಕೃಷ್ಣ ಬೌಲ್ ಮಾಡಿದ 13ನೇ ಓವರ್​ನ 3ನೇ ಎಸೆತವನ್ನು ಮೆಹಿದಿ ಹಸನ್ ಬೌಂಡರಿಗಟ್ಟಿದರು. ಪ್ರಸಿದ್ಧ್ ಬೌಲ ಮಾಡಿದ ಲೆಂಥ್ ಬಾಲನ್ನು ಮಿರಜ್, ಮಿಡ್ ಆಫ್‌ ಕಡೆ ಆಡಿ ಬೌಂಡರಿ ಪಡೆದರು.

    ಬಾಂಗ್ಲಾ 58/3

  • 15 Sep 2023 03:52 PM (IST)

    ಪವರ್ ಪ್ಲೇ ಅಂತ್ಯ

    ಬಾಂಗ್ಲಾ ಇನ್ನಿಂಗ್ಸ್​ನ 10 ಓವರ್​ ಮುಗಿದಿದೆ. ಈ ಬ್ಯಾಟಿಂಗ್ ಪವರ್ ಪ್ಲೇನಲ್ಲಿ ಬಾಂಗ್ಲಾ 3 ವಿಕೆಟ್ ಕಳೆದುಕೊಂಡು 44 ರನ್ ಕಲೆಹಾಕಿದೆ. 10ನೇ ಓವರ್​ನಲ್ಲಿ ತಿಲಕ್​ ಹಾಗೂ ಸೂರ್ಯಕುಮಾರ್ ಯಾದವ್ ಸುಲಭದ ಕ್ಯಾಚ್ ಕೈಚೆಲ್ಲಿದರು.

  • 15 Sep 2023 03:35 PM (IST)

    ಅನಾಮುಲ್ ಹಕ್ ಔಟ್

    ಶಾರ್ದೂಲ್ ಠಾಕೂರ್​ಗೆ 2ನೇ ವಿಕೆಟ್. ಶಾರ್ದೂಲ್ ಠಾಕೂರ್ ಅವರ ಶಾರ್ಟ್​ ಬಾಲನ್ನು ಅನಾಮುಲ್ ಹಕ್ ಅವರು ನೇರವಾಗಿ ಗಾಳಿಯಲ್ಲಿ ಆಡಿದರು. ಕೀಪರ್, ಕೆಎಲ್ ರಾಹುಲ್ ತನ್ನ ಎಡಕ್ಕೆ ಓಡಿ ಸುಲಭ ಕ್ಯಾಚ್ ತೆಗೆದುಕೊಂಡರು.

  • 15 Sep 2023 03:27 PM (IST)

    5 ಓವರ್ ಅಂತ್ಯ

    ಬಾಂಗ್ಲಾ ಇನ್ನಿಂಗ್ಸ್​ನ 5 ಓವರ್​ ಮುಗಿದಿದೆ. ಈ ಐದು ಓವರ್​ಗಳಲ್ಲಿ ಬಾಂಗ್ಲಾ 2 ವಿಕೆಟ್ ಕಳೆದುಕೊಂಡು 24 ರನ್ ಕಲೆಹಾಕಿದೆ. ಐದನೇ ಓವರ್​ನಲ್ಲಿ ನಾಯಕ ಶಕೀಬ್ ಮಿಡ್ ಆಫ್​ ಮೇಲೆ ಬೌಂಡರಿ ಕೂಡ ಬಾರಿಸಿದರು.

  • 15 Sep 2023 03:19 PM (IST)

    2ನೇ ವಿಕೆಟ್ ಪತನ

    ಬಾಂಗ್ಲಾದ ಮತ್ತೊಬ್ಬ ಆರಂಭಿಕ ಹಸನ್ 4ನೇ ಓವರ್​ನ ಮೊದಲ ಎಸೆತದಲ್ಲಿ ಬೌಲ್ಡ್ ಆದರು. ಶಾರ್ದೂಲ್ ಠಾಕೂರ್​ ಈ ವಿಕೆಟ್ ಉರುಳಿಸಿದರು.

    ಬಾಂಗ್ಲಾ 15/2

  • 15 Sep 2023 03:12 PM (IST)

    ಲಿಟನ್ ಔಟ್

    ಶಮಿ ಬೌಲ್ ಮಾಡಿದ ಮೂರನೇ ಓವರ್​ನ ಮೊದಲ ಎಸೆತದಲ್ಲಿ ಆರಂಭಿಕ ಲಿಟನ್ ಕ್ಲೀನ್ ಬೌಲ್ಡ್ ಆಗಿದ್ದಾರೆ. ಲಿಟನ್​ಗೆ ಖಾತೆ ತೆರೆಯಲು ಆಗಲಿಲ್ಲ.

  • 15 Sep 2023 03:11 PM (IST)

    ಹಸನ್ 2 ಬೌಂಡರಿ

    ತಂಝಿದ್ ಹಸನ್ ಎರಡನೇ ಓವರ್‌ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿದರೆ, ನಾಲ್ಕನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಬಾರಿಸಿದರು.

  • 15 Sep 2023 03:09 PM (IST)

    ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ

    ಬಾಂಗ್ಲಾದೇಶ ಬ್ಯಾಟಿಂಗ್ ಆರಂಭಿಸಿದ್ದು, ಹಸನ್ ಮತ್ತು ಲಿಟನ್ ಬ್ಯಾಟಿಂಗ್ ಆರಂಭಿಸಿದ್ದಾರೆ. ಶಮಿ ಬೌಲ್ ಮಾಡಿದ ಮೊದಲ ಓವರ್​ನಲ್ಲಿ ಬೌಂಡರಿ ಸೇರಿದಂತೆ 5 ರನ್ ಬಂತು.

  • 15 Sep 2023 02:58 PM (IST)

    ಬಾಂಗ್ಲಾದೇಶ ತಂಡ

    ಶಕೀಬ್ ಅಲ್ ಹಸನ್ (ನಾಯಕ), ತಂಝೀದ್ ಹಸನ್, ತಮೀಮ್ ಇಕ್ಬಾಲ್, ಅನಾಮುಲ್ ಹಕ್, ತೌಹಿತ್ ಹೃದಯ್, ಶಮೀಮ್ ಹೊಸೈನ್, ಮೆಹದಿ ಹಸನ್ ಮಿರಾಜ್, ಮಹೇದಿ ಹಸನ್, ನಸುಮ್ ಅಹ್ಮದ್, ತಂಝೀಮ್ ಹಸನ್ ಶಕೀಬ್, ಮುಸ್ತಫಿಜುರ್ ರಹಮಾನ್.

  • 15 Sep 2023 02:49 PM (IST)

    ಭಾರತ ತಂಡ

    ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ

  • 15 Sep 2023 02:36 PM (IST)

    ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ

    ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಮೈದಾನಕ್ಕಿಳಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ದುಕೊಂಡಿದೆ.

  • Published On - Sep 15,2023 2:32 PM

    Follow us
    ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
    ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
    ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
    ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
    ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
    ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
    ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
    ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
    ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
    ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
    ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
    ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
    ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
    ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
    ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
    ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
    ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
    ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
    News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
    News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್