KL Rahul: ಸೂಪರ್​ಮ್ಯಾನ್ ಕ್ಯಾಚ್ ಹಿಡಿದು ಎಲ್ಲರನ್ನು ದಂಗಾಗಿಸಿದ ಕೆಎಲ್ ರಾಹುಲ್

| Updated By: ಝಾಹಿರ್ ಯೂಸುಫ್

Updated on: Dec 07, 2022 | 8:07 PM

KL Rahul Catch Video: ಕೆಲ್ ರಾಹುಲ್ ಹಿಡಿದ ವಂಡರ್​ಫುಲ್ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಕೆಎಲ್​ಆರ್​ ಅವರ ಸೂಪರ್ ಮ್ಯಾನ್​ ಕ್ಯಾಚ್​ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

KL Rahul: ಸೂಪರ್​ಮ್ಯಾನ್ ಕ್ಯಾಚ್ ಹಿಡಿದು ಎಲ್ಲರನ್ನು ದಂಗಾಗಿಸಿದ ಕೆಎಲ್ ರಾಹುಲ್
KL Rahul
Follow us on

India vs Bangladesh 2nd ODI:  ಢಾಕಾದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ವಿಕೆಟ್ ಕೀಪರ್ ಕೆಎಲ್ ರಾಹುಲ್ (KL Rahul) ಅತ್ಯಾದ್ಭುತ ಕ್ಯಾಚ್ ಹಿಡಿದು ಎಲ್ಲರ ಗಮನ ಸೆಳೆದರು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು 71 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಗೂಡಿದ ಮಹಮ್ಮದುಲ್ಲಾ ಹಾಗೂ ಮೆಹದಿ ಹಸನ್ ಮಿರಾಜ್ ಅತ್ಯುತ್ತಮ ಜೊತೆಯಾಟವಾಡಿದರು.

ಈ ಜೋಡಿಯನ್ನು ಬೇರ್ಪಡಿಸಲು ಟೀಮ್ ಇಂಡಿಯಾ ಬೌಲರ್​ಗಳು ಹರಸಾಹಸಪಡಬೇಕಾಯಿತು. ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತು ಆಡಿದ ಈ ಜೋಡಿ ಬರೋಬ್ಬರಿ 146 ರನ್​ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಅಲ್ಲದೆ ಅಂತಿಮ ಓವರ್​ಗಳಲ್ಲಿ ಟೀಮ್ ಇಂಡಿಯಾಗೆ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು.

ಇದನ್ನೂ ಓದಿ
IPL 2023: RCB ಈ ನಾಲ್ವರು ಆಟಗಾರರ ಖರೀದಿಗೆ ಮುಂದಾಗಬಹುದು..!
IPL 2023: ಈ ಬಾರಿಯ ಐಪಿಎಲ್​ನಿಂದ 5 ಆಟಗಾರರು ಔಟ್..!
IPL 2023 Mini Auction: ಐಪಿಎಲ್ ಮಿನಿ ಹರಾಜು ಲೀಸ್ಟ್ ಔಟ್: ಯಾವ ದೇಶದಿಂದ ಎಷ್ಟು ಆಟಗಾರರು?
New Record: ಅತ್ಯಧಿಕ ಟೆಸ್ಟ್ ಶತಕ: ಕೊಹ್ಲಿ, ರೂಟ್​ರನ್ನು ಹಿಂದಿಕ್ಕಿದ ಸ್ಟೀವ್ ಸ್ಮಿತ್

ಈ ಹಂತದಲ್ಲಿ ಟೀಮ್ ಇಂಡಿಯಾದ ಹಂಗಾಮಿ ನಾಯಕ ಕೆಎಲ್ ರಾಹುಲ್ ಬೌಲಿಂಗ್​ನಲ್ಲಿ ಬದಲಾವಣೆ ತಂದರು. ಅದರಂತೆ ಚೆಂಡನ್ನು ಉಮ್ರಾನ್ ಮಲಿಕ್​ಗೆ ನೀಡಿದರು. 47ನೇ ಓವರ್​ನ ಮೊದಲ ಎಸೆತವನ್ನು ಒಳ ನುಗ್ಗುವಂತೆ ಎಸೆದರು. ಅತ್ತ ಸ್ಟ್ರೈಕ್​ನಲ್ಲಿದ್ದ ಮಹಮ್ಮದುಲ್ಲಾ ಅವರ ಬ್ಯಾಟ್ ಸವರಿ ಚೆಂಡು ಸ್ಲಿಪ್​ನತ್ತ ಚಿಮ್ಮಿತ್ತು. ಈ ವೇಳೆ ಸರಿಯಾಗಿ ಚೆಂಡನ್ನು ಗುರುತಿಸಿದ ಕೆಎಲ್ ರಾಹುಲ್ ಒಂದೇ ಕೈಯಲ್ಲಿ ಅದ್ಭುತವಾಗಿ ಕ್ಯಾಚ್ ಹಿಡಿದರು.

ಇದೀಗ ಕೆಲ್ ರಾಹುಲ್ ಹಿಡಿದ ವಂಡರ್​ಫುಲ್ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಕೆಎಲ್​ಆರ್​ ಅವರ ಸೂಪರ್ ಮ್ಯಾನ್​ ಕ್ಯಾಚ್​ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಕೆಟ್​ ಕಳೆದುಕೊಂಡ ಹೊರತಾಗಿಯೂ ಅಂತಿಮವಾಗಿ ಬಾಂಗ್ಲಾದೇಶ್ ತಂಡವು ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 271 ರನ್​ ಕಲೆಹಾಕಿತು.

ಕ್ಯಾಚ್ ಕೈಬಿಟ್ಟಿದ್ದ ಕೆಎಲ್​ ರಾಹುಲ್:

ಬಾಂಗ್ಲಾದೇಶ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೆಹದಿ ಹಸನ್ ಮಿರಾಜ್ ಅವರು ನೀಡಿದ ಸುಲಭ ಕ್ಯಾಚ್ ಅನ್ನು ಕೆಎಲ್ ರಾಹುಲ್ ಕೈಚೆಲ್ಲಿದ್ದರು. ಹೀಗೆ ಸಿಕ್ಕ ಜೀವದಾನವನ್ನು ಬಳಸಿಕೊಂಡ ಮಿರಾಜ್ ಬಾಂಗ್ಲಾದೇಶ್ ತಂಡಕ್ಕೆ 1 ವಿಕೆಟ್​ಗಳ ರೋಚಕ ಜಯ ತಂದುಕೊಟ್ಟಿದ್ದರು.

 

 

Published On - 8:03 pm, Wed, 7 December 22