IND vs ENG 1st T20 Live Score: ಭಾರತದ 2ನೇ ವಿಕೆಟ್ ಪತನ
India vs England 1st T20I Live Score in Kannada: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯು ಕೋಲ್ಕತ್ತಾದಿಂದ ಆರಂಭವಾಗುತ್ತಿದೆ. ಮೊದಲ ಟಿ20 ಪಂದ್ಯ ಈಡನ್ ಗಾರ್ಡನ್‌ನಲ್ಲಿ ನಡೆಯಲಿದೆ. ಈ ಮೈದಾನದಲ್ಲಿ ಟೀಂ ಇಂಡಿಯಾದ ದಾಖಲೆ ಅದ್ಭುತವಾಗಿದ್ದು, ಇಂಗ್ಲೆಂಡ್ ವಿರುದ್ಧ ಫೇವರಿಟ್ ಆಗಿದೆ.
LIVE NEWS & UPDATES
-
IND vs ENG 1st T20: ಸಂಜು ಸ್ಫೋಟಕ ಬ್ಯಾಟಿಂಗ್
ಗಸ್ ಅಟ್ಕಿನ್ಸನ್ ಓವರ್‌ನಲ್ಲಿ ಸ್ಯಾಮ್ಸನ್ 22 ರನ್ ಕಲೆಹಾಕಿದ್ದಾರೆ. ಮೊದಲ ಎಸೆತದಲ್ಲಿ ಫೋರ್, ಎರಡನೇ ಎಸೆತದಲ್ಲಿ ಫೋರ್, ನಾಲ್ಕನೇ ಎಸೆತದಲ್ಲಿ ಕವರ್ಸ್ ಏರಿಯಾದಲ್ಲಿ ಸಿಕ್ಸರ್, ಐದನೇ ಮತ್ತು ಆರನೇ ಎಸೆತಗಳಲ್ಲಿಯೂ ಬೌಂಡರಿ ಬಾರಿಸಿದರು.
-
IND vs ENG 1st T20: ಇಂಗ್ಲೆಂಡ್ 132ಕ್ಕೆ ಆಲೌಟ್
ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಕೇವಲ 132 ರನ್‌ಗಳಿಗೆ ಆಲೌಟ್ ಆಗಿದೆ. ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಮಾರ್ಕ್ ವುಡ್ ರನೌಟ್ ಆದರು. ಭಾರತದ ಪರ ವರುಣ್ ಚಕ್ರವರ್ತಿ 3 ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್ ಕೂಡ ಎರಡು ವಿಕೆಟ್ ಉರುಳಿಸಿದರು. ಪಾಂಡ್ಯ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು.
-
IND vs ENG 1st T20: ಬಟ್ಲರ್ ಕೂಡ ಔಟ್
ಅಂತಿಮವಾಗಿ ಜೋಸ್ ಬಟ್ಲರ್ ಕೂಡ ಔಟಾದರು. ವರುಣ್ ಚಕ್ರವರ್ತಿ ಎಸೆತದಲ್ಲಿ ವೈಯಕ್ತಿಕ ಸ್ಕೋರ್ 68 ರಲ್ಲಿ ಔಟಾದರು. ನಿತೀಶ್ ರೆಡ್ಡಿ ಅದ್ಭುತ ಕ್ಯಾಚ್ ಪಡೆದರು. ವರುಣ್ ಚಕ್ರವರ್ತಿ 4 ಓವರ್‌ಗಳಲ್ಲಿ 23 ರನ್ ನೀಡಿ ಮೂರು ವಿಕೆಟ್ ಪಡೆದರು.
IND vs ENG 1st T20: ಇಂಗ್ಲೆಂಡ್ 100 ರನ್ ಪೂರ್ಣ
ಇಂಗ್ಲೆಂಡ್ 15.5 ಓವರ್‌ಗಳಲ್ಲಿ 100 ರನ್ ಪೂರೈಸಿತು. ಆದರೆ ಮುಂದಿನ ಎಸೆತದಲ್ಲಿ ಅಟ್ಕಿನ್ಸನ್ ಔಟಾದರು. ಈ ಆಟಗಾರ ಕೇವಲ 2 ರನ್ ಗಳಿಸಿ ಸ್ಟಂಪ್ ಆದರು. ಅಕ್ಷರ್ ಪಟೇಲ್ಗೆ ಎರಡನೇ ವಿಕೆಟ್
IND vs ENG 1st T20: 6ನೇ ವಿಕೆಟ್ ಪತನ
ಇಂಗ್ಲೆಂಡ್‌ಗೆ ಆರನೇ ಹೊಡೆತ, ಅಕ್ಷರ್ ಪಟೇಲ್ ಎಸೆತದಲ್ಲಿ ನಿತೀಶ್ ರೆಡ್ಡಿಗೆ ಕ್ಯಾಚ್ ನೀಡಿದ ಓವರ್‌ಟನ್ ಕೇವಲ 2 ರನ್ ಗಳಿಸಿ ಔಟಾದರು. ಇಂಗ್ಲೆಂಡ್ನ ಪ್ರಮುಖ 6 ಆಟಗಾರರು 100 ರನ್ಗೂ ಮುನ್ನ ಔಟ್.
IND vs ENG 1st T20: ಬೆಥಾಲ್ ಔಟ್
ಹಾರ್ದಿಕ್ ಪಾಂಡ್ಯ ಕೊನೆಗೂ vವಿಕೆಟ್ ಪಡೆದರು. 12ನೇ ಓವರ್‌ನ ಐದನೇ ಎಸೆತದಲ್ಲಿ ಜೇಕಬ್ ಬೆಥಾಲ್ ಔಟಾದರು. ಬೆಥಾಲ್ 14 ಎಸೆತಗಳಲ್ಲಿ 7 ರನ್ ಗಳಿಸಲಷ್ಟೇ ಶಕ್ತರಾದರು. ಇಂಗ್ಲೆಂಡ್ ತಂಡದ ಅರ್ಧದಷ್ಟು ಮಂದಿ ಪೆವಿಲಿಯನ್‌ಗೆ ಮರಳಿದ್ದಾರೆ.
IND vs ENG 1st T20: ಬಟ್ಲರ್ ಅರ್ಧಶತಕ ಪೂರ್ಣ
ಒಂದೆಡೆ ಇಂಗ್ಲೆಂಡ್ ತಂಡದ ಸತತ ವಿಕೆಟ್ ಪತನದ ನಡುವೆಯೂ ನಾಯಕನ ಜವಬ್ದಾರಿಯುತ ಬ್ಯಾಟಿಂಗ್ ಮಾಡುತ್ತಿರುವ ಜೋಸ್ ಬಟ್ಲರ್ 34 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ ಅರ್ಧಶತಕ ಪೂರೈಸಿದ್ದಾರೆ.
ಇಂಗ್ಲೆಂಡ್; 83/4
IND vs ENG 1st T20: ವರುಣ್ಗೆ 2ನೇ ವಿಕೆಟ್, 65/4
ವರುಣ್ ಚಕ್ರವರ್ತಿ ಒಂದೇ ಓವರ್‌ನಲ್ಲಿ 2 ಪ್ರಮುಖ ವಿಕೆಟ್ ಉರುಳಿಸಿದ್ದಾರೆ. 8ನೇ ಓವರ್‌ನ ಮೂರನೇ ಎಸೆತದಲ್ಲಿ ಬ್ರೂಕ್ ವಿಕೆಟ್ ಉರುಳಿಸಿದ್ದ ವರುಣ್, ಅದೇ ಓವರ್‌ನ 5ನೇ ಎಸೆತದಲ್ಲಿ ಅಪಾಯಕಾರಿ ಬ್ಯಾಟ್ಸ್ಮನ್ ಲಿವಿಂಗ್ಸ್ಟನ್ರನ್ನು ಕ್ಲೀನ್ ಬೌಲ್ಡ್ ಮಾಡಿದರು.
IND vs ENG 1st T20: 3ನೇ ವಿಕೆಟ್ ಪತನ
ಇಂಗ್ಲೆಂಡ್ 3ನೇ ವಿಕೆಟ್ ಪತನವಾಗಿದೆ. ವರುಣ್ ಚಕ್ರವರ್ತಿ ಎಸೆದ 8ನೇ ಓವರ್‌ನ ಮೂರನೇ ಎಸೆತವನ್ನು ಡಿಫೆಂಡ್ ಮಾಡಲು ಯತ್ನಿಸಿದ ಬ್ರೂಕ್ ಕ್ಲೀನ್ ಬೌಲ್ಡ್ ಆದರು.
ಇಂಗ್ಲೆಂಡ್; 65/3
IND vs ENG 1st T20: 5 ಓವರ್ ಮುಕ್ತಾಯ
ಇಂಗ್ಲೆಂಡ್ ಇನ್ನಿಂಗ್ಸ್ನ 5 ಓವರ್ಗಳು ಮುಗಿದಿವೆ. ಈ ಅವಧಿಯಲ್ಲಿ ಇಂಗ್ಲೆಂಡ್ ತಂಡ ಆರಂಭಿಕರಿಬ್ಬರನ್ನು ಕಳೆದುಕೊಂಡು 38 ರನ್ ಕಲೆಹಾಕಿದೆ.
IND vs ENG 1st T20: ಇಂಗ್ಲೆಂಡ್ 2ನೇ ವಿಕೆಟ್ ಪತನ, 17/2
ಅರ್ಷದೀಪ್ಗೆ 2ನೇ ವಿಕೆಟ್ ಸಿಕ್ಕಿದೆ; ಮೂರನೇ ಓವರ್‌ನ ಐದನೇ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ಡಕೆಟ್ ರಿಂಕು ಸಿಂಗ್ ಹಿಡಿದ ಅದ್ಭುತ ಕ್ಯಾಚ್ಗೆ ಪೆವಿಲಿಯನ್ ಸೇರಬೇಕಾಯಿತು.
IND vs ENG 1st T20: ಶೂನ್ಯಕ್ಕೆ ಸಾಲ್ಟ್ ಔಟ್
ಮೊದಲ ಓವರ್‌ನ 3ನೇ ಎಸೆತದಲ್ಲಿ ಫಿಲ್ ಸಾಲ್ಟ್ ಶೂನ್ಯಕ್ಕೆ ಔಟಾಗಿದ್ದಾರೆ.
IND vs ENG 1st T20: ಇಂಗ್ಲೆಂಡ್ ಬ್ಯಾಟಿಂಗ್ ಆರಂಭ
ಇಂಗ್ಲೆಂಡ್ ಬ್ಯಾಟಿಂಗ್ ಆರಂಭವಾಗಿದ್ದು, ಆರಂಭಿಕರಾಗಿ ಸಾಲ್ಟ್ ಹಾಗೂ ಡಕೆಟ್ ಅಖಾಡಕ್ಕಿಳಿದಿದ್ದಾರೆ. ಅರ್ಷದೀಪ್ ಬೌಲಿಂಗ್ ಆರಂಭಿಸಿದ್ದಾರೆ.
IND vs ENG 1st T20: ಇಂಗ್ಲೆಂಡ್ ತಂಡ
ಬೆನ್ ಡಕೆಟ್, ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಜೋಸ್ ಬಟ್ಲರ್ (ನಾಯಕ), ಹ್ಯಾರಿ ಬ್ರೂಕ್ (ಉಪನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಜೇಮೀ ಓವರ್ಟನ್, ಗಸ್ ಅಟ್ಕಿನ್ಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.
IND vs ENG 1st T20: ಭಾರತ ತಂಡ
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.
IND vs ENG 1st T20: ಟಾಸ್ ಗೆದ್ದ ಭಾರತ
ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
IND vs ENG 1st T20: ಇಂಗ್ಲೆಂಡ್ ಆಡುವ ಹನ್ನೊಂದರ ಬಳಗ
ಬೆನ್ ಡಕೆಟ್, ಫಿಲ್ ಸಾಲ್ಟ್, ಜೋಸ್ ಬಟ್ಲರ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್ಸ್ಟನ್, ಜಾಕೋಬ್ ಬ್ಯಾಟ್ಚೆಲರ್, ಜೇಮೀ ಓವರ್ಟನ್, ಗಸ್ ಅಟ್ಕಿನ್ಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್
IND vs ENG 1st T20: ಕೋಲ್ಕತ್ತಾದಲ್ಲಿ ಭಾರತದ ದಾಖಲೆ
ಕೋಲ್ಕತ್ತಾದಲ್ಲಿ ಟೀಂ ಇಂಡಿಯಾದ ದಾಖಲೆ ಅದ್ಭುತವಾಗಿದೆ. ಇಲ್ಲಿ ಆಡಿದ 7 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿದೆ. ಕುತೂಹಲಕಾರಿ ಸಂಗತಿಯೆಂದರೆ, ಈ ನೆಲದಲ್ಲಿ ತಂಡ ಅನುಭವಿಸಿದ ಏಕೈಕ ಸೋಲು ಇಂಗ್ಲೆಂಡ್ ವಿರುದ್ಧ ಮಾತ್ರ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಈಡನ್ ಗಾರ್ಡನ್‌ನಲ್ಲಿ ನಡೆಯುತ್ತಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಕಳೆದ ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಮೊಹಮ್ಮದ್ ಶಮಿ ತಂಡಕ್ಕೆ ಮರಳಿರುವುದರಿಂದ ತಂಡದ ಬೌಲಿಂಗ್ ದಾಳಿ ಮೊದಲಿಗಿಂತ ಬಲಿಷ್ಠವಾಗಿದೆ. ಬ್ಯಾಟಿಂಗ್‌ನಲ್ಲಿ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಮತ್ತೊಂದೆಡೆ, ಇಂಗ್ಲೆಂಡ್ ತಂಡ ಕೂಡ ತುಂಬಾ ಬಲಿಷ್ಠವಾಗಿದ್ದು, ಫಿಲ್ ಸಾಲ್ಟ್, ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್‌ಸ್ಟೋನ್ ಯಾವುದೇ ಬೌಲಿಂಗ್ ದಾಳಿಯನ್ನು ಛಿದ್ರಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ.
Published On - Jan 22,2025 6:12 PM