India vs England 1st Test | ವಿಚಿತ್ರ ರೀತಿಯಲ್ಲಿ ಔಟ್​ ಆದ ಚೇತೇಶ್ವರ ಪೂಜಾರ; ಇಲ್ಲಿದೆ ವೈರಲ್​ ವಿಡಿಯೋ

ಚೇತೇಶ್ವರ ಪೂಜರ ಅರ್ಧ ಶತಕ ಗಳಿಸುವುದಕ್ಕೂ ಮೊದಲು ತುಂಬಾನೇ ನಿಧಾನ ಗತಿಯಲ್ಲಿ ಆಡುತ್ತಿದ್ದರು. ಅರ್ಧ ಶತಕ ಬಾರಿಸಿದ ನಂತರ ಆಟದ ವೇಗವನ್ನು ಹೆಚ್ಚಿಸಿದರು ಚೇತೇಶ್ವರ.

India vs England 1st Test | ವಿಚಿತ್ರ ರೀತಿಯಲ್ಲಿ ಔಟ್​ ಆದ ಚೇತೇಶ್ವರ ಪೂಜಾರ; ಇಲ್ಲಿದೆ ವೈರಲ್​ ವಿಡಿಯೋ
ಚೇತೇಶ್ವರ ಪೂಜಾರ
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 07, 2021 | 7:50 PM

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 257 ರನ್​ಗಳಿಗೆ 6 ವಿಕೆಟ್​​ ಕಳೆದುಕೊಂಡು ಆಡುತ್ತಿದೆ. ವಾಷಿಂಗ್ಟನ್​​ ಸುಂದರ್​ 33 ರನ್​ ಹಾಗೂ ರವಿಚಂದ್ರನ್​ ಅಶ್ವಿನ್​ 8 ರನ್​​ ಗಳಿಸಿ ಕಣದಲ್ಲಿದ್ದಾರೆ. ಈ ಮಧ್ಯೆ ಚೇತೇಶ್ವರ ಪೂಜಾರ ಔಟ್​ ಆದ ರೀತಿ ಈಗ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಚರ್ಚೆ ಆಗುತ್ತಿದೆ. ಚೇತೇಶ್ವರ ಅವರದ್ದು ಸಂಪೂರ್ಣ ಬ್ಯಾಡ್​​ಲಕ್​ ಎಂದು ಕೆಲವರು ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಎನ್ನುವುದಕ್ಕೆ ಇಲ್ಲಿದೆ ವಿವರ.

ಚೇತೇಶ್ವರ ಪೂಜರ ಅರ್ಧ ಶತಕ ಗಳಿಸುವುದಕ್ಕೂ ಮೊದಲು ತುಂಬಾನೇ ನಿಧಾನ ಗತಿಯಲ್ಲಿ ಆಡುತ್ತಿದ್ದರು. ಅರ್ಧ ಶತಕ ಬಾರಿಸಿದ ನಂತರ ಆಟದ ವೇಗವನ್ನು ಹೆಚ್ಚಿಸಿದರು. 142 ಬಾಲ್​ಗಳಿಗೆ 73 ರನ್​ ಗಳಿಸಿದ್ದರು. ಇಂದು ಚೇತೇಶ್ವರ ಶತಕ ಬಾರಿಸಿಯೇ ಬಾರಿಸುತ್ತಾರೆ ಎಂಬುದು ಅನೇಕರ ನಂಬಿಕೆ ಆಗಿತ್ತು. ಆದರೆ,  143ನೇ ಬಾಲ್​ ಎದುರಿಸಿದ ಚೇತೇಶ್ವರ ಲೆಗ್​ ಸೈಡ್​ಗೆ ಹೊಡೆಯಲು ಹೋದರು. ಅವರು ಹೊಡೆದ ಶಾಟ್​ ಏನೋ ಚೆನ್ನಾಗಿತ್ತು. ಆದರೆ, ಈ ಬಾಲ್​ ಶಾರ್ಟ್​ ಲೆಗ್​ ಫೀಲ್ಡರ್ ಆಲ್ಲಿ ಪೋಪ್ ಹೆಲ್ಮೆಟ್​ಗೆ ತಾಗಿತ್ತು.

ಹೆಲ್ಮೆಟ್​ಗೆ ತಾಗಿದ ಬಾಲ ನೇರವಾಗಿ ಶಾರ್ಟ್​ ಮಿಡ್​ ವಿಕೆಟ್​ನಲ್ಲಿದ್ದ ರೋರಿ ಬರ್ನ್ಸ್ ಕೈ ಸೇರಿತ್ತು. ಬಾಲ್​ ಎಲ್ಲಿಯೂ ನೆಲ ತಾಗದ ಕಾರಣ ಚೇತೇಶ್ವರ ಪೂಜಾರ ಪೆವಿಲಿಯನ್​ ತೆರಳಬೇಕಾಯಿತು. ಈ ವಿಡಿಯೋ ಸದ್ಯ ಟ್ವಿಟರ್​ನಲ್ಲಿ ಹರಿದಾಡಿದೆ. ಐಸಿಸಿ ಕೂಡ ಪೂಜಾರ ವಿಚಿತ್ರವಾಗಿ ಔಟ್​ ಆಗಿದ್ದಾರೆ ಎಂದು ಬರೆದುಕೊಂಡಿದೆ.

 Ind vs Eng, 1st Test, Day 3, LIVE Score: 3ನೇ ದಿನದಾಟ ಮುಕ್ತಾಯ, ಇಂಗ್ಲೆಂಡ್​ ಮೇಲುಗೈ, 6 ವಿಕೆಟ್​ ಕಳೆದುಕೊಂಡ ಭಾರತ

Published On - 7:49 pm, Sun, 7 February 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ