IND vs ENG: ರಿಷಭ್ ಪಂತ್ ಆಟ ನನಗೆ ಆಸ್ಟ್ರೇಲಿಯಾದ ದಂತಕಥೆಯನ್ನು ನೆನಪಿಸುತ್ತದೆ; ಡೇವಿಡ್ ಲಾಯ್ಡ್
Rishabh Pant: ಪಂತ್ ಅಂತರಾಷ್ಟ್ರೀಯ ವೇದಿಕೆಯ ಮೇಲೆ ಕಾಲಿಟ್ಟಾಗಿನಿಂದ, ಅವರನ್ನು ಅನೇಕ ದಂತಕಥೆಗಳಿಗೆ ಹೋಲಿಸಲಾಗಿದೆ. ಅವರಲ್ಲಿ ದೊಡ್ಡ ಹೆಸರು ಮಹೇಂದ್ರ ಸಿಂಗ್ ಧೋನಿ. ಪಂತ್ ಅವರನ್ನು ಧೋನಿಯ ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿದೆ.
ಭಾರತದ ಯುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅಂತರಾಷ್ಟ್ರೀಯ ವೇದಿಕೆಗೆ ಕಾಲಿಟ್ಟಾಗಿನಿಂದಲೂ, ಅವರ ಪ್ರತಿಭೆಯನ್ನು ಅನೇಕ ದಂತಕಥೆಗಳು ಹೊಗಳಿದ್ದಾರೆ. 19 ವರ್ಷದೊಳಗಿನವರ ವಿಶ್ವಕಪ್‌ನೊಂದಿಗೆ ಮಿಂಚಿದ ಈ ತಾರೆ, ಐಪಿಎಲ್‌ನಲ್ಲಿ ಸದ್ದು ಮಾಡಿದ ನಂತರ ಎಲ್ಲರ ಹೃದಯ ಗೆದ್ದಿದ್ದಾರೆ. ಪಂತ್ ಅಂತರಾಷ್ಟ್ರೀಯ ವೇದಿಕೆಯ ಮೇಲೆ ಕಾಲಿಟ್ಟಾಗಿನಿಂದ, ಅವರನ್ನು ಅನೇಕ ದಂತಕಥೆಗಳಿಗೆ ಹೋಲಿಸಲಾಗಿದೆ. ಅವರಲ್ಲಿ ದೊಡ್ಡ ಹೆಸರು ಮಹೇಂದ್ರ ಸಿಂಗ್ ಧೋನಿ. ಪಂತ್ ಅವರನ್ನು ಧೋನಿಯ ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿದೆ. ಆದಾಗ್ಯೂ, ಮಾಜಿ ಇಂಗ್ಲೆಂಡ್ ಆಟಗಾರ, ಪಂತ್ ಅವರನ್ನು ಆಸ್ಟ್ರೇಲಿಯಾದ ಶ್ರೇಷ್ಠ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಡಮ್ ಗಿಲ್‌ಕ್ರಿಸ್ಟ್‌ಗೆ ಹೋಲಿಸಿದ್ದಾರೆ. ಈ ಮಾಜಿ ಅನುಭವಿಯ ಹೆಸರು ಡೇವಿಡ್ ಲಾಯ್ಡ್.
ಡೇವಿಡ್ ಅವರು ಪಂತ್, ಗಿಲ್‌ಕ್ರಿಸ್ಟ್ ಅವರನ್ನು ನೆನಪಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಎರಡನೇ ಟೆಸ್ಟ್ ಪಂದ್ಯದಲ್ಲಿ 58 ಎಸೆತಗಳಲ್ಲಿ ಪಂತ್ 37 ರನ್ ಗಳಿಸಿದರು. ಈ ಸಮಯದಲ್ಲಿ, ಅವರು ಜೇಮ್ಸ್ ಆಂಡರ್ಸನ್ ಮತ್ತು ಓಲ್ಲಿ ರಾಬಿನ್ಸನ್ ಓವರ್ಗಳಲ್ಲಿ ಐದು ಬೌಂಡರಿಗಳನ್ನು ಹೊಡೆದರು.
ಅವರ ಕೆಲಸ ಅಬ್ಬರಿಸುವುದು ಡೇವಿಡ್, ಪಂತ್ ಅವರ ಕೆಲಸ ಅಬ್ಬರಿಸುವುದು, ಈ ಅರ್ಥದಲ್ಲಿ ಅವರು ಗಿಲ್ ಕ್ರಿಸ್ಟ್ ಅನ್ನು ನೆನಪಿಸುತ್ತಾರೆ ಎಂದು ಹೇಳಿದರು. ಇಂಗ್ಲೆಂಡ್ ಎರಡು ವಿಕೆಟುಗಳನ್ನು ಮುಂಚಿತವಾಗಿ ತೆಗೆದುಕೊಂಡಿತು, ನಂತರ ಪಂತ್ ಬಂದರು. ಆ ಸಮಯದಲ್ಲಿ ದಿನೇಶ್ ಕಾರ್ತಿಕ್ ನನ್ನನ್ನು ಕೇಳಿದರು ನೀವು ಮಾಜಿ ತರಬೇತುದಾರರಾಗಿದ್ದಲ್ಲಿ ನೀವು ಪಂತ್ ಅವರನ್ನು ತಾಳ್ಮೆ ಆಟ ಆಡಲು ಹೇಳುತ್ತೀರಾ? ನಾನು ಇಲ್ಲ ಎಂದು ಹೇಳಿದೆ. ದಾಳಿ ಮಾಡುವುದು ಅವರ ಕೆಲಸ ಎದುರಾಳಿ ತಂಡವು ಯಾವುದೇ ಪರಿಸ್ಥಿತಿಯಲ್ಲಿದ್ದರೂ, ಅವರು ನನಗೆ ಆಡಮ್ ಗಿಲ್‌ಕ್ರಿಸ್ಟ್ ಅನ್ನು ನನೆಪಿಸುತ್ತಾರೆ. ಇದು ಆಕ್ರಮಣಶೀಲತೆಯನ್ನು ಬಿಟ್ಟುಬಿಡುವ ವಿಷಯವಲ್ಲ ಎಂದಿದ್ದಾರೆ.
ಪಂತ್ ಅಂತಹ ಇನ್ನಿಂಗ್ಸ್ ಆಡುತ್ತಾರೆ ಪಂತ್ ಟೆಸ್ಟ್ ನಲ್ಲಿ ಕೊನೆಯ ನಿಮಿಷದಲ್ಲಿ ಬಂದು ತಮ್ಮ ಇನ್ನಿಂಗ್ಸ್ ಆಡುತ್ತಾರೆ. ಲಾರ್ಡ್ಸ್ ಇನ್ನಿಂಗ್ಸ್ ಹೊರತಾಗಿ, ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಇದೇ ರೀತಿಯ ಇನ್ನಿಂಗ್ಸ್ ಆಡಿದರು. ಆ ಪಂದ್ಯದಲ್ಲಿ ಪಂತ್ ಎರಡನೇ ಇನ್ನಿಂಗ್ಸ್‌ನಲ್ಲಿ 88 ಎಸೆತಗಳಲ್ಲಿ 41 ರನ್ ಗಳಿಸಿದರು. ಅವರು ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸುತ್ತಾ ಔಟಾದರು. ಈ ಕಾರಣದಿಂದಾಗಿ ಅವರು ಅನೇಕ ಅನುಭವಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಪಂತ್‌ನ ಈ ಆಕ್ರಮಣಕಾರಿ ಶೈಲಿಯನ್ನು ಇಷ್ಟಪಡುವ ಅನೇಕ ಜನರಿದ್ದಾರೆ. ಅವರಲ್ಲಿ ಡೇವಿಡ್ ಲಾಯ್ಡ್ ಕೂಡ ಇದ್ದಾರೆ.
ಇದನ್ನೂ ಓದಿ:India vs England: ವಿಕೆಟ್ ಹಿಂಬದಿಯಲ್ಲಿ ಪಂತ್ ಪಕ್ಕಾ ರಿವ್ಯೂ: ಫಿದಾ ಆದ ಕೊಹ್ಲಿ ಮಾಡಿದ್ದೇನು ನೋಡಿ