ಲಾರ್ಡ್ಸ್ನಲ್ಲಿ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ರೋಮಾಂಚಕವಾಗುವ ಸಾಧ್ಯತೆಯಿದೆ. ಪಂದ್ಯ ರಸವತ್ತಾಗಿ ನಡೆಯುತ್ತಿದೆ. ಮಂದ ಬೆಳಕಿನಿಂದಾಗಿ ಆಟವು ನಾಲ್ಕನೇ ದಿನದಂದು ಕೊಂಚ ಬೇಗನೆ ಕೊನೆಗೊಂಡಿತು. ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 364 ರನ್ ಗಳಿಸಿದರೆ ಇಂಗ್ಲೆಂಡ್ 391 ರನ್ ಗಳಿಸಿದೆ. ಕೊಹ್ಲಿಸೇನಾ ಪ್ರಸ್ತುತ ಎರಡನೇ ಇನ್ನಿಂಗ್ಸ್ ಆಡುತ್ತಿದ್ದಾರೆ. ನಾಲ್ಕನೇ ದಿನದ ಅಂತ್ಯದ ವೇಳೆಗೆ ತಂಡವು 6 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿತ್ತು. ಐದನೇ ದಿನದಾಟ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಭರವಸೆಯ ಆಟಗಾರ ಪಂತ್ ಬೇಗನೆ ಪೆವಿಲಿಯನ್ ಸೇರಿಕೊಂಡರು. ಇಶಾಂತ್ ಕೂಡ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. ನಂತರ ಶುರುವಾಗಿದ್ದೆ ಶಮಿ- ಬುಮ್ರಾ ಜುಗಲ್ಬಂದಿ
ಶಮಿ- ಬುಮ್ರಾ ಅರ್ಧಶತಕದ ಜೊತೆಯಾಟ
ಸಂಕಷ್ಟಕ್ಕೆ ಸಿಲುಕಿದ ಭಾರತಕ್ಕೆ ಬಯಸದೆ ಬಂದ ಭಾಗ್ಯದಂತೆ ಶಮಿ ಮತ್ತು ಬುಮ್ರಾ ಆಸರೆಯಾಗಿದ್ದಾರೆ. ಈ ಇಬ್ಬರು ಜೊತೆಗೂಡಿ 77 ರನ್ಗಳ ಜೊತೆಯಾಟ ಆಡಿದ್ದಾರೆ. ಅಲ್ಲದೆ ಮೊಯೀನ್ ಅಲಿ ಓವರ್‌ನ ಎರಡನೇ ಎಸೆತದಲ್ಲಿ ಜೋ ರೂಟ್ ಬುಮ್ರಾ ಕ್ಯಾಚ್ ಕೈಬಿಟ್ಟರು. ಇದು ಕೂಡ ಭಾರತಕ್ಕೆ ನೆರವಾಯಿತು. ಜಸ್‌ಪ್ರೀತ್ ಬುಮ್ರಾ ಅದೇ ಓವರ್‌ನ ಮೂರನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡರು ಮತ್ತು ಇದರೊಂದಿಗೆ ಬುಮ್ರಾ ಮತ್ತು ಶಮಿ ಅರ್ಧಶತಕದ ಜೊತೆಯಾಟವು ಪೂರ್ಣಗೊಂಡಿತು.
ಶಮಿ ಎರಡನೇ ಅರ್ಧ ಶತಕ
ಮೊಹೀನ್ ಅಲಿ ಅವರ ಓವರ್‌ನಲ್ಲಿ ಮೊಹಮ್ಮದ್ ಶಮಿ ಅರ್ಧಶತಕ ಪೂರೈಸಿದರು. ಓವರ್ ನ ಮೂರನೇ ಎಸೆತದಲ್ಲಿ ಶಮಿ ಎರಡನೇ ಎಸೆತದಲ್ಲಿ ಮಿಡ್ ವಿಕೆಟ್ ನಲ್ಲಿ ಒಂದು ಬೌಂಡರಿ ಬಾರಿಸಿದರು. ಅದೇ ಸಮಯದಲ್ಲಿ, ಅವರು ತಮ್ಮ ಮುಂದಿನ ಬಾಲ್‌ನಲ್ಲಿ 92 ಮೀಟರ್ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು. ಇದು ಟೆಸ್ಟ್ ಕ್ರಿಕೆಟ್ನಲ್ಲಿ ಶಮಿಗೆ ಎರಡನೇ ಅರ್ಧ ಶತಕವಾಗಿದೆ. ಅವರು 57 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಐದು ಬೌಂಡರಿಗಳೊಂದಿಗೆ 50 ರನ್ ಪೂರೈಸಿದರು.
ಕೊನೆಯ 65 ಓವರ್ ಬಾಕಿ?
ದಿನದಾಟದಂತ್ಯಕ್ಕೆ ಇನ್ನೂ 65 ಓವರ್ ಬಾಕಿ ಇದೆ. ಐಸಿಸಿ ನಿಯಮದಂತೆ ಒಂದು ದಿನಕ್ಕೆ 90 ಓವರ್ಗಳ ಆಟ ಮುಗಿಯಬೇಕು. ಹೀಗಾಗಿ ಇಂದು ಭಾರತ ಈಗಾಗಲೇ 25 ಓವರ್ಗಳ ಆಟವನ್ನು ಪೂರ್ಣಗೊಳಿಸಿದೆ. ಊಟದ ವಿರಾಮದ ನಂತರ ಭಾರತ ಎಷ್ಟು ಓವರ್ಗಳನ್ನು ಆಡುತ್ತದೆ ಎಂಬುದರ ಮೇಲೆ ಇಂಗ್ಲೆಂಡ್ಗೆ ಎಷ್ಟು ಓವರ್ಗಳು ಸಿಗುತ್ತವೆ ಎಂಬುದನ್ನು ಕಾದುನೋಡಬೇಕಾಗಿದೆ.
Published On - 5:50 pm, Mon, 16 August 21