ಭಾರತ ಮತ್ತು ಇಂಗ್ಲೆಂಡ್ (India and England) ನಡುವಿನ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಇಂದು ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದ ಟಾಸ್ ಮುಗಿದಿದ್ದು, ಭಾರತ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಬೌಲಿಂಗ್ ನಿರ್ಧಾರದೊಂದಿಗೆ ಭಾರತದ ಪ್ಲೇಯಿಂಗ್ ಇಲೆವೆನ್‌ನಲ್ಲಿಯೂ ಬದಲಾವಣೆ ಇದೆ. ಈ ಪಂದ್ಯದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಬದಲಿಗೆ ಸಿರಾಜ್‌ಗೆ ಅವಕಾಶ ಸಿಕ್ಕಿದೆ. ಇಂದಿನ ಪಂದ್ಯ ಭಾರತ ಹಾಗೂ ಇಂಗ್ಲೆಂಡ್ ಎರಡಕ್ಕೂ ಮಹತ್ವದ್ದಾಗಿದೆ. ಏಕೆಂದರೆ, ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿ ವಿಜೇತರಾಗಲಿದೆ.
ಮ್ಯಾಂಚೆಸ್ಟರ್‌ನಲ್ಲಿ ಭಾರತದ ದಾಖಲೆ ಕಳಪೆಯಾಗಿದೆ. ಇದರ ಹೊರತಾಗಿಯೂ ಟೀಂ ಇಂಡಿಯಾ ಇತ್ತೀಚಿನ ದಿನಗಳಲ್ಲಿ ಉತ್ತಮ ಕ್ರಿಕೆಟ್ ಆಡಿರುವ ಕಾರಣ ಭರವಸೆ ಇದೆ. ಭಾರತ ಏಕದಿನ ಸರಣಿಯನ್ನು ವಶಪಡಿಸಿಕೊಳ್ಳಬೇಕಾದರೆ ಹಿಂದಿನ ಅಂಕಿ-ಅಂಶಗಳನ್ನು ಮರೆತು ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ.
ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ, ಇಂಗ್ಲೆಂಡ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ
ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯಕ್ಕಾಗಿ ಟೀಂ ಇಂಡಿಯಾ ತಂಡದಲ್ಲಿ ಬದಲಾವಣೆಯಾಗಿದೆ. ಅದೇ ವೇಳೆ ಇಂಗ್ಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಭಾರತದಿಂದ ಜಸ್ಪ್ರೀತ್ ಬುಮ್ರಾ ಬೆನ್ನುನೋವಿನಿಂದ ಈ ಪಂದ್ಯದಿಂದ ಹಿಂದೆ ಸರಿಯಬೇಕಾಯಿತು. ಹೀಗಿರುವಾಗ ಅವರ ಜಾಗದಲ್ಲಿ ಮೊಹಮ್ಮದ್ ಸಿರಾಜ್‌ಗೆ ಅವಕಾಶ ಸಿಕ್ಕಿದೆ. ಮತ್ತೊಂದೆಡೆ, ಇಂಗ್ಲೆಂಡ್ ತನ್ನ ಗೆಲುವಿನ ಸಂಯೋಜನೆಯೊಂದಿಗೆ ಆಡಲು ನಿರ್ಧರಿಸಿದೆ.
Captain @ImRo45 wins the toss and we will bowl first in the third and final ODI.
Live – https://t.co/qaVcGcMElB #ENGvIND pic.twitter.com/zmJ8FNMRSK
— BCCI (@BCCI) July 17, 2022
A look at our Playing XI for the game.
Live – https://t.co/radUqNrOn1 #ENGvIND pic.twitter.com/TkbzNYfLrw
— BCCI (@BCCI) July 17, 2022
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಟೀಂ ಇಂಡಿಯಾ
ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ
ಇಂಗ್ಲೆಂಡ್ ಪ್ಲೇಯಿಂಗ್ XI
ಜೇಸನ್ ರಾಯ್, ಜಾನಿ ಬೈರ್‌ಸ್ಟೋವ್, ಜೋಸ್ ಬಟ್ಲರ್ (ನಾಯಕ), ಜೋ ರೂಟ್, ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್‌ಸ್ಟನ್, ಮೊಯಿನ್ ಅಲಿ, ಡೇವಿಡ್ ವಿಲ್ಲಿ, ಕ್ರೇಗ್ ಓವರ್‌ಟನ್, ಬ್ರೈಡನ್ ಕಾರ್ಲ್ಸ್, ರೀಸ್ ಟೋಪ್ಲಿ
Published On - 3:20 pm, Sun, 17 July 22