Team India: 28 ತಿಂಗಳಲ್ಲಿ 77 ಪಂದ್ಯಗಳನ್ನಾಡಿದ ಭಾರತ; ಆದರಿಲ್ಲಿ ಕೆಲವರು ದೇಶಕ್ಕಾಗಿ ಆಡಿದಕ್ಕಿಂತ ಐಪಿಎಲ್​ನಲ್ಲಿ ಆಡಿದ್ದೆ ಹೆಚ್ಚು..!

Team India: ಫೆಬ್ರವರಿ 2020 ರಿಂದ, ಭಾರತವು 22 ಟೆಸ್ಟ್, 18 ODI ಮತ್ತು 37 T20 ಪಂದ್ಯಗಳನ್ನು (ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಒಳಗೊಂಡಂತೆ) ಆಡಿದೆ. ಆದರೆ ಐಪಿಎಲ್​ನಲ್ಲಿ ಎಲ್ಲಾ ಪಂದ್ಯಗಳನ್ನಾಡಿದ ಕ್ರಿಕೆಟಿಗರು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಮಾತ್ರ ಅಲಭ್ಯರಾಗಿದ್ದಾರೆ

TV9 Web
| Updated By: ಪೃಥ್ವಿಶಂಕರ

Updated on: Jul 17, 2022 | 2:46 PM

ಮಾರ್ಚ್ 2020 ರಲ್ಲಿ ಜಗತ್ತಿಗೆ ಕೊರೊನಾ ಎಂಟ್ರಿಕೊಟ್ಟ ಬಳಿಕ ಎಲ್ಲಾ ಸ್ವರೂಪಗಳಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಹೆಚ್ಚು ವಿರಾಮ ತೆಗೆದುಕೊಂಡಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಈ ವಿರಾಮ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಎಂಬುದು ಗಮನಾರ್ಹ. ಆದರೆ, ಯಾವುದೇ ಆಟಗಾರ ಐಪಿಎಲ್‌ನಿಂದ ವಿರಾಮ ತೆಗೆದುಕೊಂಡಿಲ್ಲ. ಇದರ ಫಲವಾಗಿ ಈಗ ಈ ವಿಚಾರವಾಗಿ ಮಾಜಿಗಳು ಕಟು ಟೀಕೆಗಳನ್ನು ಮಾಡುತ್ತಿದ್ದಾರೆ. ಇದು ಇಡೀ ಕ್ರಿಕೆಟ್ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಫೆಬ್ರವರಿ 2020 ರಿಂದ, ಭಾರತವು 22 ಟೆಸ್ಟ್, 18 ODI ಮತ್ತು 37 T20I ಗಳನ್ನು (ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಒಳಗೊಂಡಂತೆ) ಆಡಿದೆ. ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಿದ ಆಟಗಾರರು ನಿಜವಾಗಿ ಕ್ರಿಕೆಟ್ ಆಡುವುದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿಲ್ಲ. ಫೆಬ್ರವರಿ 2020 ರ ನಂತರ ಎಲ್ಲಾ ಸ್ವರೂಪಗಳಲ್ಲಿ ಹಿರಿಯ ಭಾರತೀಯ ಆಟಗಾರರು ಎಷ್ಟು ಪಂದ್ಯಗಳನ್ನು ಆಡಿದ್ದಾರೆ ಎಂಬುದನ್ನು ಈಗ ತಿಳಿಯೋಣ.

1 / 7
ರೋಹಿತ್ ಶರ್ಮಾ, ಆಡದ ಪಂದ್ಯಗಳು: ಟೆಸ್ಟ್-10, ODI-12, T20-9: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ನ್ಯೂಜಿಲೆಂಡ್ ವಿರುದ್ಧದ 5 ನೇ ಮತ್ತು ಅಂತಿಮ T20I, 3 ODI ಮತ್ತು 2 ಟೆಸ್ಟ್‌ಗಳನ್ನು ಗಾಯದ ಕಾರಣದಿಂದ ಕಳೆದುಕೊಂಡಿದ್ದಾರೆ. ಅಲ್ಲದೆ ಲಾಕ್‌ಡೌನ್ ನಂತರ ದೊಡ್ಡ ಬ್ರೇಕ್ ಕೂಡ ಸಿಕ್ಕಿತ್ತು. ಬಳಿಕ ರೋಹಿತ್, ಯುಎಇಯಲ್ಲಿ ನಡೆದ ಐಪಿಎಲ್‌ಗೆ ಫಿಟ್ ಆಗಿದ್ದರು. ಆದರೆ ಆಸ್ಟ್ರೇಲಿಯಾದಲ್ಲಿ ನಡೆದ ಮೂರು ODI ಮತ್ತು ಮೂರು T20I ಪಂದ್ಯಗಳ ಸರಣಿಗೂ ಮೊದಲು ಗಾಯಗೊಂಡರು. ಕೋವಿಡ್ ಪ್ರೋಟೋಕಾಲ್‌ನಿಂದಾಗಿ ಅವರು ಮೊದಲ ಎರಡು ಟೆಸ್ಟ್‌ಗಳನ್ನು ಸಹ ಆಡಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್​ನಲ್ಲಿ 4 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್ ಮತ್ತು ಟಿ20 ವಿಶ್ವಕಪ್ ಆಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಎರಡು ಟೆಸ್ಟ್‌ಗಳ ಮೊದಲು ಅವರು ವಿರಾಮ ತೆಗೆದುಕೊಂಡರು. ಗಾಯದ ಕಾರಣ ಅವರು ಡಿಸೆಂಬರ್-ಜನವರಿಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಲಿಲ್ಲ. ತವರಿನಲ್ಲಿ ನಡೆದ ವೆಸ್ಟ್ ಇಂಡೀಸ್-ಶ್ರೀಲಂಕಾ ಸರಣಿಯಲ್ಲಿ ಅವರು ಪುನರಾಗಮನ ಮಾಡಿದರು. ಬಳಿಕ ಸಂಪೂರ್ಣ ಐಪಿಎಲ್ ಆಡಿದ್ದರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆದ ಟಿ20ಯಿಂದ ವಿಶ್ರಾಂತಿ ಪಡೆದಿದ್ದರು. ಕೋವಿಡ್‌ನಿಂದಾಗಿ ಇಂಗ್ಲೆಂಡ್ ವಿರುದ್ಧ ಎಡ್ಜ್‌ಬಾಸ್ಟನ್ ಟೆಸ್ಟ್ ಆಡಲು ಸಾಧ್ಯವಾಗಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ರೋಹಿತ್ ಆಡಿದ್ದಕ್ಕಿಂತ ಹೆಚ್ಚು ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದಾರೆ.

Team India Captain Rohit Sharma has tested positive for COVID-19 following a RAT

2 / 7
Team India: 28 ತಿಂಗಳಲ್ಲಿ 77 ಪಂದ್ಯಗಳನ್ನಾಡಿದ ಭಾರತ; ಆದರಿಲ್ಲಿ ಕೆಲವರು ದೇಶಕ್ಕಾಗಿ ಆಡಿದಕ್ಕಿಂತ ಐಪಿಎಲ್​ನಲ್ಲಿ ಆಡಿದ್ದೆ ಹೆಚ್ಚು..!

ವಿರಾಟ್ ಕೊಹ್ಲಿ: ಆಡದ ಪಂದ್ಯಗಳು: ಟೆಸ್ಟ್-5, ODI-10, T-20-12: ಪ್ರಸ್ತುತ T20 ವಿಶ್ವಕಪ್ ವರ್ಷ. ಫಿಟ್ನೆಸ್ ಫ್ರೀಕ್ ಆಗಿ ಕೊಹ್ಲಿ ಅವರ ದಾಖಲೆ ಅದ್ಭುತವಾಗಿದೆ. ಅವರು 2020-21ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ 3 ಟೆಸ್ಟ್‌ಗಳಲ್ಲಿ ಪಿತೃತ್ವ ರಜೆ ತೆಗೆದುಕೊಂಡರು. IPL 2021 ರ ಮುಂದೂಡಿಕೆಯಿಂದಾಗಿ ಅವರು ತಿಂಗಳುಗಳ ಕಾಲ ವಿಶ್ರಾಂತಿ ಪಡೆದರು. ಬಳಿಕ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಮೊದಲ ಮೂರು ವಾರಗಳಲ್ಲಿ ವಿಶ್ರಾಂತಿ ಪಡೆದರು. ಇದರ ನಂತರ ಅವರು ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ T20I ಸರಣಿಯನ್ನು ಕಳೆದುಕೊಂಡರು. ಅಲ್ಲದೆ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಗಾಯದ ಕಾರಣದಿಂದಾಗಿ ಕಳೆದುಕೊಂಡರು. ಇದಕ್ಕೂ ಮೊದಲು, ಐಪಿಎಲ್ 2021 ರ ಎರಡನೇ ಲೆಗ್ ಯುಎಇಯಲ್ಲಿ ನಡೆದಿತ್ತು. ಅವರು ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ತವರು T20I ಸರಣಿಯಿಂದ ಮತ್ತು ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ T20I ಸರಣಿಯಿಂದ ಹಿಂದೆ ಸರಿದಿದ್ದರು. ಇದರ ನಂತರ ಕೊಹ್ಲಿ ಐಪಿಎಲ್ 2022 ಸೀಸನ್ ಆಡಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನೂ ವಿರಾಟ್ ಆಡಲಿಲ್ಲ.

3 / 7
Team India: 28 ತಿಂಗಳಲ್ಲಿ 77 ಪಂದ್ಯಗಳನ್ನಾಡಿದ ಭಾರತ; ಆದರಿಲ್ಲಿ ಕೆಲವರು ದೇಶಕ್ಕಾಗಿ ಆಡಿದಕ್ಕಿಂತ ಐಪಿಎಲ್​ನಲ್ಲಿ ಆಡಿದ್ದೆ ಹೆಚ್ಚು..!

ಕೆಎಲ್ ರಾಹುಲ್: ಆಡದ ಪಂದ್ಯಗಳು: ಟೆಸ್ಟ್-15, ಏಕದಿನ-2, ಟಿ-20-13: 2020ರಲ್ಲಿ ನ್ಯೂಜಿಲೆಂಡ್ ಪ್ರವಾಸದ ವೇಳೆ ಒಟ್ಟು 5 ಟಿ20, 3 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ, ಅವರು 2 ಟೆಸ್ಟ್‌ಗಳನ್ನು ತಪ್ಪಿಸಿಕೊಂಡರು. ಬಳಿಕ ಆಸ್ಟ್ರೇಲಿಯಾದಲ್ಲಿ 3 ODI ಮತ್ತು 3 T20 ಪಂದ್ಯಗಳನ್ನು ಆಡಿದ್ದಾರೆ. ಆದರೆ, ಗಾಯಗೊಂಡು 2 ಟೆಸ್ಟ್ ಆಡಲಿಲ್ಲ. ಆ ಬಳಿಕ ಇಂಗ್ಲೆಂಡ್ ವಿರುದ್ಧ ತವರಿನ ಟೆಸ್ಟ್ ಆಡಿರಲಿಲ್ಲ. ಆದರೆ 5 ಟಿ20 ಪಂದ್ಯಗಳಲ್ಲಿ 4 ಮತ್ತು 3 ODIಗಳನ್ನು ಆಡಿದ್ದಾರೆ. ನಂತರ ಇಂಗ್ಲೆಂಡ್ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರ ನಂತರ, ಅವರು ಐಪಿಎಲ್ ಮತ್ತು ಟಿ 20 ವಿಶ್ವಕಪ್‌ನ ಎರಡನೇ ಹಂತದಲ್ಲಿ ಕಣಕ್ಕೆ ಇಳಿದರು. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರು T20Iಗಳಲ್ಲಿ ಎರಡನ್ನು ಆಡಿದ್ದರು. ಆದರೆ, ಎರಡು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಗಾಯಗೊಂಡಿದ್ದರು. ನಂತರ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಫಿಟ್ ಆಗಿದ್ದರು. ಬಳಿಕ ಎರಡನೇ ಟೆಸ್ಟ್ ಮತ್ತು ಮೂರು ODIಗಳಲ್ಲಿ ತಂಡವನ್ನು ಮುನ್ನಡೆಸಿದರು. ವೆಸ್ಟ್ ಇಂಡೀಸ್ ವಿರುದ್ಧದ ಮೂರು ODIಗಳಲ್ಲಿ ಒಂದನ್ನು ಆಡಿ, ನಂತರ ಸರಣಿಯನ್ನು ಹೊರನಡೆದರು. ಶ್ರೀಲಂಕಾ ವಿರುದ್ಧ ಯಾವುದೇ ಸ್ವರೂಪವನ್ನು ಆಡಿಲ್ಲ. ಆದರೆ, ಐಪಿಎಲ್ 2022 ನಲ್ಲಿ ಕಣಕ್ಕಿಳಿದಿದ್ದರು. ಇದರ ನಂತರ ಜೂನ್‌ನಲ್ಲಿ ದಕ್ಷಿಣ ಆಫ್ರಿಕಾ ಸರಣಿಯ ಒಂದು ದಿನದ ಮೊದಲು ಗಾಯವಾಗಿತ್ತು. ಹೀಗಾಗಿ ಆ ಸರಣಿಯಲ್ಲು ಕಣಕ್ಕಿಳಿಯಲಿಲ್ಲ.

4 / 7
Jasprit Bumrah

Danish Kaneria said Bumrah should have returned in T20 World Cup

5 / 7
Team India: 28 ತಿಂಗಳಲ್ಲಿ 77 ಪಂದ್ಯಗಳನ್ನಾಡಿದ ಭಾರತ; ಆದರಿಲ್ಲಿ ಕೆಲವರು ದೇಶಕ್ಕಾಗಿ ಆಡಿದಕ್ಕಿಂತ ಐಪಿಎಲ್​ನಲ್ಲಿ ಆಡಿದ್ದೆ ಹೆಚ್ಚು..!

ರಿಷಬ್ ಪಂತ್: ಆಡದ ಪಂದ್ಯಗಳು: ಟೆಸ್ಟ್ -2, ODI-7, T-20-15: ಕಳೆದ ಕೆಲವು ತಿಂಗಳುಗಳಲ್ಲಿ ಪಂತ್ ಎಲ್ಲಾ ಸ್ವರೂಪದ ಆಟಗಾರರಾಗಿದ್ದಾರೆ. ವೈಟ್ ಬಾಲ್ ಕ್ರಿಕೆಟ್‌ನಲ್ಲಿ, KL ರಾಹುಲ್ ಅವರ ಬದಲಿಗೆ ವಿಕೆಟ್ ಕೀಪಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಳಿಕ 2021-22ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಎರಡು ಟೆಸ್ಟ್‌ಗಳನ್ನು ತಪ್ಪಿಸಿಕೊಂಡರು. ಅದರ ನಂತರ, ಪಂತ್ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯನ್ನು ಆಡಲಿಲ್ಲ.

6 / 7
Team India: 28 ತಿಂಗಳಲ್ಲಿ 77 ಪಂದ್ಯಗಳನ್ನಾಡಿದ ಭಾರತ; ಆದರಿಲ್ಲಿ ಕೆಲವರು ದೇಶಕ್ಕಾಗಿ ಆಡಿದಕ್ಕಿಂತ ಐಪಿಎಲ್​ನಲ್ಲಿ ಆಡಿದ್ದೆ ಹೆಚ್ಚು..!

ರವೀಂದ್ರ ಜಡೇಜಾ: ಆಡದ ಪಂದ್ಯಗಳು : ಟೆಸ್ಟ್-11, ODI-9, T-20-21: ಕಳೆದ ಕೆಲವು ವರ್ಷಗಳಿಂದ, ಜಡೇಜಾ ಅವರು ಆಡಿದ್ದಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಗಾಯದ ಕಾರಣದಿಂದ ಕಳೆದುಕೊಂಡಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು ಆಸ್ಟ್ರೇಲಿಯ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದರು. ಆ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಗಾಯದಿಂದಾಗಿ ಅವರನ್ನು 2021-22ರ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗಿಡಲಾಯಿತು. ಒಟ್ಟು 41 ಪಂದ್ಯಗಳಲ್ಲಿ ಜಡೇಜಾ ಆಡಿಲ್ಲ.

7 / 7
Follow us
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ