Tamim Iqbal Retirement: ಬಾಂಗ್ಲಾಕ್ಕೆ ದೊಡ್ಡ ಆಘಾತ: ಟಿ20 ವಿಶ್ವಕಪ್ ಹತ್ತಿರವಾಗುತ್ತಿದ್ದಂತೆ ಸ್ಟಾರ್ ಬ್ಯಾಟರ್ ನಿವೃತ್ತಿ
TV9kannada Web Team | Edited By: Vinay Bhat
Updated on: Jul 17, 2022 | 10:27 AM
Tamim Iqbal: ಬಾಂಗ್ಲಾದೇಶ ತಂಡ ಹಿರಿಯ ಅನುಭವಿ ಬ್ಯಾಟರ್, ಏಕದಿನ ತಂಡದ ನಾಯಕ ತಮೀಮ್ ಇಕ್ಬಾಲ್ ಅವರು ಅಂತರರಾಷ್ಟ್ರೀಯ ಟಿ20 ಮಾದರಿಯ ಕ್ರಿಕೆಟ್ ಗೆ ರಾಜೀನಾಮೆ ಘೋಷಿಸಿದ್ದಾರೆ.
Jul 17, 2022 | 10:27 AM
ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಆರಂಭಕ್ಕೆ ಇನ್ನೇನು ಕೆಲವೇ ತಿಂಗಳುಗಳಿವೆ. ಈಗಾಗಲೇ ಎಲ್ಲ ತಂಡಗಳು ಈ ಚುಟುಕು ಮಹಾಸಮರಕ್ಕೆ ಭರ್ಜರಿ ತಯಾರಿ ನಡೆಸುತ್ತಿದೆ. ಹೀಗಿರುವಾಗ ಬಾಂಗ್ಲಾದೇಶ ತಂಡಕ್ಕೆ ದೊಡ್ಡ ಆಘಾತ ಉಂಟಾಗಿದೆ. ತಂಡದ ಸ್ಟಾರ್ ಬ್ಯಾಟರ್ ತಮೀಮ್ ಇಕ್ಬಾಲ್ ನಿವೃತ್ತಿ ಘೋಷಿಸಿದ್ದಾರೆ.
1 / 6
ಹೌದು, ಬಾಂಗ್ಲಾದೇಶ ತಂಡ ಹಿರಿಯ ಅನುಭವಿ ಬ್ಯಾಟರ್, ಏಕದಿನ ತಂಡದ ನಾಯಕ ತಮೀಮ್ ಇಕ್ಬಾಲ್ ಅವರು ಅಂತರರಾಷ್ಟ್ರೀಯ ಟಿ20 ಮಾದರಿಯ ಕ್ರಿಕೆಟ್ ಗೆ ರಾಜೀನಾಮೆ ಘೋಷಿಸಿದ್ದಾರೆ.
2 / 6
ಈ ಬಗ್ಗೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿರುವ 33 ವರ್ಷದ ತಮೀಮ್, “ನಾನು ಇಂದಿನಿಂದ ಟಿ20 ಯಿಂದ ನಿವೃತ್ತನಾಗಿದ್ದೇನೆ ಎಂದು ಪರಿಗಣಿಸಿ. ಎಲ್ಲರಿಗೂ ಧನ್ಯವಾದಗಳು”, ಎಂದು ಹೇಳಿದ್ದಾರೆ.
3 / 6
ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ನಾಲ್ಕು ವಿಕೆಟ್ ಗಳಿಂದ ಗೆದ್ದ ನಂತರ ತಮೀಮ್ ತನ್ನ ನಿರ್ಧಾರವನ್ನು ಘೋಷಿಸಿದರು.
4 / 6
ತಮೀಮ್ 2020ರ ಮಾರ್ಚ್ ನಲ್ಲಿ ಕೊನೆಯ ಟಿ20 ಪಂದ್ಯವನ್ನಾಡಿದ್ದರು. ಬಳಿಕ ಗಾಯದ ಸಮಸ್ಯೆ ಮತ್ತು ಇತರ ಕಾರಣಗಳಿಂದ ಅವರು ಟಿ20 ತಂಡದಿಂದ ದೂರ ಉಳಿದಿದ್ದರು. ಕಳೆದ ಟಿ20 ವಿಶ್ವಕಪ್ ನಲ್ಲಿ ಕೂಡ ಇವರು ಕಣಕ್ಕಿಳಿಯಲಿಲ್ಲ.
5 / 6
ಬಾಂಗ್ಲಾ ಪರ 78 ಟಿ20 ಪಂದ್ಯಗಳನ್ನಾಡಿರುವ ತಮೀಮ್ ಇಕ್ಬಾಲ್ 1758 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು ಏಳು ಅರ್ಧಶತಕಗಳನ್ನು ಅವರು ಬಾರಿಸಿದ್ದಾರೆ. ವಿಶೇಷ ಎಂದರೆ ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ಪರ ಶತಕ ಸಿಡಿಸಿದ ಏಕೈಕ ಬ್ಯಾಟರ್ ತಮೀಮ್ ಆಗಿದ್ದಾರೆ.