Virat Kohli: ವಿರಾಟ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಬಾಬರ್ ಆಜಂ
TV9kannada Web Team | Edited By: Zahir PY
Updated on: Jul 17, 2022 | 2:54 PM
Babar Azam: ವಿಶೇಷ ಎಂದರೆ ಈ 10 ಸಾವಿರ ರನ್ಗಳೊಂದಿಗೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಬಾಬರ್ ಆಜಂ ಮುರಿದಿದ್ದಾರೆ.
Jul 17, 2022 | 2:54 PM
ಒಂದೆಡೆ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಇದೀಗ ಈ ಫಾರ್ಮ್ ಅನ್ನು ಶ್ರೀಲಂಕಾ ವಿರುದ್ದದ ಟೆಸ್ಟ್ನಲ್ಲೂ ಮುಂದುವರೆಸಿದ್ದಾರೆ. ಲಂಕಾ ವಿರುದ್ದ ಅರ್ಧಶತಕ ಬಾರಿಸಿರುವ ಬಾಬರ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 10 ಸಾವಿರ ರನ್ ಪೂರೈಸಿದ್ದಾರೆ.
1 / 8
ವಿಶೇಷ ಎಂದರೆ ಈ 10 ಸಾವಿರ ರನ್ಗಳೊಂದಿಗೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಮುರಿದಿದ್ದಾರೆ. ಹೌದು, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 10 ಸಾವಿರ ರನ್ ಪೂರೈಸಿದ ಏಷ್ಯನದ ಬ್ಯಾಟ್ಸ್ಮನ್ ಎಂಬ ದಾಖಲೆ ಇದೀಗ ಬಾಬರ್ ಪಾಲಾಗಿದೆ. ಈ ಹಿಂದೆ ಈ ರೆಕಾರ್ಡ್ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು.
2 / 8
ವಿರಾಟ್ ಕೊಹ್ಲಿ 232 ಇನಿಂಗ್ಸ್ಗಳ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 10 ಸಾವಿರ ರನ್ ಪೂರೈಸಿದ್ದರು. ಆದರೀಗ ಬಾಬರ್ ಆಜಂ ಕೇವಲ 228 ಇನಿಂಗ್ಸ್ ಮೂಲಕ ಈ ಸಾಧನೆ ಮಾಡಿದ್ದಾರೆ. ಹಾಗೆಯೇ ಈ ಸಾಧನೆ ಮಾಡಿದ ಏಷ್ಯದ 5ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಹಾಗಿದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 10 ಸಾವಿರ ರನ್ ಪೂರೈಸಿದ ಏಷ್ಯಾದ ಟಾಪ್-5 ಬ್ಯಾಟ್ಸ್ಮನ್ಗಳಾರು ನೋಡೋಣ...
3 / 8
ಬಾಬರ್ ಆಜಂ (ಪಾಕಿಸ್ತಾನ್)- 228 ಇನಿಂಗ್ಸ್
4 / 8
ವಿರಾಟ್ ಕೊಹ್ಲಿ: ಆಡದ ಪಂದ್ಯಗಳು: ಟೆಸ್ಟ್-5, ODI-10, T-20-12: ಪ್ರಸ್ತುತ T20 ವಿಶ್ವಕಪ್ ವರ್ಷ. ಫಿಟ್ನೆಸ್ ಫ್ರೀಕ್ ಆಗಿ ಕೊಹ್ಲಿ ಅವರ ದಾಖಲೆ ಅದ್ಭುತವಾಗಿದೆ. ಅವರು 2020-21ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ 3 ಟೆಸ್ಟ್‌ಗಳಲ್ಲಿ ಪಿತೃತ್ವ ರಜೆ ತೆಗೆದುಕೊಂಡರು. IPL 2021 ರ ಮುಂದೂಡಿಕೆಯಿಂದಾಗಿ ಅವರು ತಿಂಗಳುಗಳ ಕಾಲ ವಿಶ್ರಾಂತಿ ಪಡೆದರು. ಬಳಿಕ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಮೊದಲ ಮೂರು ವಾರಗಳಲ್ಲಿ ವಿಶ್ರಾಂತಿ ಪಡೆದರು. ಇದರ ನಂತರ ಅವರು ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ T20I ಸರಣಿಯನ್ನು ಕಳೆದುಕೊಂಡರು. ಅಲ್ಲದೆ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಗಾಯದ ಕಾರಣದಿಂದಾಗಿ ಕಳೆದುಕೊಂಡರು. ಇದಕ್ಕೂ ಮೊದಲು, ಐಪಿಎಲ್ 2021 ರ ಎರಡನೇ ಲೆಗ್ ಯುಎಇಯಲ್ಲಿ ನಡೆದಿತ್ತು. ಅವರು ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ತವರು T20I ಸರಣಿಯಿಂದ ಮತ್ತು ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ T20I ಸರಣಿಯಿಂದ ಹಿಂದೆ ಸರಿದಿದ್ದರು. ಇದರ ನಂತರ ಕೊಹ್ಲಿ ಐಪಿಎಲ್ 2022 ಸೀಸನ್ ಆಡಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನೂ ವಿರಾಟ್ ಆಡಲಿಲ್ಲ.